ಅಂತರ್ಜಾಲ ಸುದ್ದಿ ಮಾಧ್ಯಮದ ಮೇಲೆ ನಿಬಂಧನೆ ಹೇರುವುದಿಲ್ಲ: ರಾಥೋರ್

Posted In : ದೇಶ

ದೆಹಲಿ: ’ಅಂತರ್ಜಾಲ ಸುದ್ದಿ ಮಾಧ್ಯಮದ ಮೇಲೆ ಯಾವುದೇ ನಿಬಂಧನೆಯನ್ನು ಹೇರುವುದಿಲ್ಲ’ ಎಂದು  ಕೇಂದ್ರ ಮಾಹಿತಿ ಹಾಗೂ ಪ್ರಸರಣ ಸಚಿವಾಲಯದ ಜವಾಬ್ದಾರಿ ಹೊತ್ತುಕೊಂಡಿರುವ ರಾಜ್ಯವರ್ಧನ್ ಸಿಂಗ್ ರಾಥೋರ್ ತಿಳಿಸಿದರು.

ಸರ್ಕಾರ ವರ್ಸಸ್ ಮೀಡಿಯಾ ಎಂಬ ಚರ್ಚೆಯನ್ನು ನಿರಾಕರಿಸಿ ಮಾತನಾಡಿ, ‘ಸಚಿವಾಲಯವು ಪ್ರಸಾರ ಭಾರತಿಯಂತಹ ಸಾರ್ವಜನಿಕ ಪ್ರಸರಣ ಮಾಧ್ಯಮವಿರಬಹುದು ಅಥವಾ ಖಾಸಗಿ ವಾಹಿನಿಗಳಾಗಿರಬಹುದು ಎಲ್ಲವೂ ಜನರ ಧ್ವನಿಯಾಗುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲಿ ಮಾಧ್ಯಮವೂ ಒಂದು. ಹೀಗಾಗಿ ಅವುಗಳ ಮೇಲೆ ನಿಬಂಧನೆ ಹೇರುವುದಕ್ಕಿಂತ ಅವುಗಳೇ ಸ್ವಯಂ ನಿಬಂಧನೆ ಹಾಕಿಕೊಳ್ಳುವುದು ಉತ್ತಮ ಬೆಳವಣಿಗೆ’ ಎಂದರು.

Leave a Reply

Your email address will not be published. Required fields are marked *

one + 6 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top