About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಾಮ ಮಂದಿರಕ್ಕೆ ಖಾಸಗಿ ಮಸೂದೆ: ಬಿಜೆಪಿ ಸಂಸದ

ದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕೋರಿ ಸಂಸತ್ತಿನಲ್ಲಿ ಖಾಸಗಿ ಬಿಲ್ ತರುವುದಾಗಿ ಹೇಳಿರುವ ಬಿಜೆಪಿ ಸಂಸದ ರಾಕೇಶ್‌ ಸಿನ್ಹಾ, ಈ ವಿಚಾರವಾಗಿ ವಿಪಕ್ಷಗಳು ಬೆಂಬಲ ಕೊಡಲಿವೆಯೇ ಎಂದು ಪ್ರಶ್ನಿಸಿದ್ದಾರೆ.

 “ರಾಹುಲ್‌ ಗಾಂಧಿ, ಸೀತಾರಾಮ್‌ ಯೆಚುರಿ, ಮಾಯಾವತಿ ಹಾಗು ಲಾಲು ಪ್ರಸಾದ್ ಯಾದವ್‌ ಮಂದಿರದ ಕುರಿತ ಖಸಗಿ ಬಿಲ್‌ಗೆ ಬೆಂಬಲನೀಡುವರೇ? RSS ಹಾಗು BJPಯಿಂದ ಯಾವಾಗಲೂ ಮಂದಿರ ನಿರ್ಮಾಣದ ದಿನಾಂಕವನ್ನು ಕೇಳುತ್ತಲೇ ಇರುವ ಇವರು ಈ ಕೆಲಸ ಮಾಡುವರೇ”

“ರಾಮ ಮಂದಿರದ ವಿಚಾರಕ್ಕೆ ಸುಪ್ರೀಂ ಕೋರ್ಟ್ ಪ್ರಾಶಸ್ತ್ಯ ನೀಡುತ್ತಿಲ್ಲ. ಬದಲಾಗಿ, 377ನೇ ವಿಧಿ, ಜಲ್ಲಿಕಟ್ಟು, ಶಬರಿಮಲೆಯಂಥ ವಿಚಾರಗಳಲ್ಲಿ ಸುಪ್ರೀಂ ಕಾಲ ಕಲೆಯುತ್ತಿದೆ. ಆದರೆ ಹಿಂದೂಗಳಿಗೆ ಮಂದಿರ ನಿರ್ಮಾಣ ಅಗ್ರ ಪ್ರಾಶಸ್ತ್ಯದ ವಿಚಾರ”

                                                             ರಾಕೇಶ್‌ ಸಿನ್ಹಾ, ಸಂಸದ

ಖಾಸಗಿ ಬಿಲ್‌ಗಳು ಮಂಡನೆ ಪಡೆಯುವುದು ಅಪರೂಪದಲ್ಲಿ ಅಪರೂಪ.

ಅಯೋಧ್ಯೆಯ ಜಮೀನಿನ ಮಾಲೀಕತ್ವದ ಕುರಿತ ಮುಂದಿನ ಆಲಿಕೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು ಜನವರಿಗೆ ಮುಂದೂಡಿತ್ತು. ಸುಪ್ರೀಂ ಕೋರ್ಟ್ ತೀರ್ಪು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣಕ್ಕೆ ಶಾಸನಾತ್ಮಕ ಕ್ರಮಗಳನ್ನು ಕೇಂದ್ರ ಸರಕಾರ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್‌ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಒಕ್ಕೊರಲಿನ ದನಿ ಏರಿಸಿದ ಬೆನ್ನಲ್ಲಿ ಸಂಸದರ ಈ ಹೇಳಿಕೆ ಕುತೂಹಲ ಮೂಡಿಸಿದೆ.

ತೀರ್ಪಿಗಾಗಿ ಶಾಶ್ವತವಾಗಿ ಹಿಂದೂಗಳು ಕಾಯಲು ಆಗದು ಎಂದಿರುವ RSS, ಮಂದಿರದ ಕುರಿತಂತೆ ಸಂತ ಸಮಾಜ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನೂ ಬೆಂಬಲಿಸಲು ಸಿದ್ಧ ಎಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close