About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಾಮ್‌ ಕದಂ ನಾಲಗೆ ಕತ್ತರಿಸಿದರೆ 5ಲಕ್ಷ ಇನಾಮು: ವಿವಾದಕ್ಕೆ ತುಪ್ಪ ಸುರಿದ ‘ಕೈ’ ನಾಯಕ

ಮುಂಬಯಿ: ಇಷ್ಟಪಟ್ಟ ಹುಡುಗಿ ಮದುವೆಗೆ ಒಪ್ಪದಿದ್ದರೆ ಅಂಥವರನ್ನು ಮುಲಾಜಿಲ್ಲದೆ ಅಪಹರಿಸಿ ತಾಳಿ ಕಟ್ಟಿ ಎಂದಿದ್ದ ಬಿಜೆಪಿ ಶಾಸಕನ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ.

ತಾನು ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದರೂ ಬಿಜೆಪಿ ಶಾಸಕ ರಾಮ್‌ ಕದಂ ವಿವಾದ ಮಾತ್ರ ತಣಗಾಗುತ್ತಿಲ್ಲ. ಇದೀಗ ಅವರ ನಾಲಿಗೆ ಕತ್ತರಿಸಿದವರೆ 5 ಲಕ್ಷ ರೂಪಾಯಿ ಇನಾಮು ನೀಡುವುದಾಗಿ ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಸ‌ುಬೋಧ್‌ ಸೌಜಿ ಘೋಷಿಸುವ ಮೂಲಕ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ‘ಕದಂ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇನೆ. ಇದು ಓರ್ವ ಜನಪ್ರತಿನಿಧಿ ನೀಡುವ ಹೇಳಿಕೆಯಾ..? ನಾನು ಕದಂ ನಾಲಿಗೆ ಕತ್ತರಿಸಿ ತಂದವರಿಗೆ 5 ಲಕ್ಷ ರೂಪಾಯಿ ನೀಡುತ್ತೇನೆ’ ಎಂದಿದ್ದಾರೆ.

ಶ್ರೀಕೃಷ್ಣ ಗೋಕುಲಾಷ್ಟಮಿ ಅಂಗವಾಗಿ ನಡೆದ ದಹಿ ಹಂಡಿ ಉತ್ಸವದ ವೇಳೆ ನೆರೆದಿದ್ದ ಮಾತನಾಡಿದ್ದ ರಾಮ್‌ ಕದಂ, ಯುವಕನೊಬ್ಬನಿಗೆ ‘ನೀನು ಪ್ರಪೋಸ್‌ ಮಾಡಿದ ಯುವತಿ ಒಪ್ಪಿಕೊಳ್ಳದಿದ್ದರೆ ನಾನು ಆಕೆಯನ್ನು ಕಿಡ್ನ್ಯಾಪ್‌ ಮಾಡಲು ಸಹಾಯ ಮಾಡುತ್ತೇನೆ. ಯುವ ಜನತೆಯ ಯಾವ ಕೆಲಸಕ್ಕೂ ನಾನು ನೆರವಾಗುತ್ತೇನೆ’ ಎಂದು ನಾಲಗೆ ಹರಿಬಿಟ್ಟಿದ್ದರು.

ರಾಮ್ ಕದಂ ಹೇಳಿಕೆಗೆ ದೇಶಾದ್ಯಂತ ಜನರಿಂದ ಹಾಗೂ ವಿಪಕ್ಷಗಳಿಂದ ಭಾರಿ ಆಕ್ಷೇಪ ಕೇಳಿಬಂದಿತ್ತು. ಇದು ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟಿತ್ತು.

Tags

Related Articles

Leave a Reply

Your email address will not be published. Required fields are marked *

Language
Close