About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಆಸ್ಟ್ರೇಲಿಯಾಗೆ ಆಗಮಿಸಿದ ರಾಷ್ಟ್ರಪತಿ ಕೋವಿಂದ್‌

ಮೆಲ್ಬರ್ನ್‌: ಆಸ್ಟ್ರೇಲಿಯಾಗೆ ಮೂರು ದಿನಗಳ ಮಟ್ಟದ ಪ್ರವಾಸಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದರು ಸಿಡ್ನಿಗೆ ಆಗಮಿಸಿದ್ದಾರೆ.

ಪತ್ನಿ ಸವಿತಾ ಕೋವಿಂದ್‌ ಜತೆಗೆ ವಿಯೆಟ್ನಾಂನಿಂದ ಆಸ್ಟ್ರೇಲಿಯಾಗೆ ಕೋವಿಂದ್ ಆಗಮಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಕೋವಿಂದ್‌‌ರನ್ನು ಬರಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಆಗಿದ್ದಾರೆ.

ಈ ಸಂದರ್ಭ ಮಹಾತ್ಮಾ ಗಾಂಧಿರ ಪ್ರತಿಮೆಯನ್ನು ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಕೋವಿಂದ್‌ ಅನಾವರಣ ಮಾಡಲಿದ್ದಾರೆ. ಅಲ್ಲದೇ ಭಾರತೀಯ ಸಂಜಾತರು ಹಾಗು ಉದ್ಯಮಿಗಳ ಸಮೂಹವನ್ನು ಉದ್ದೇಶಿಸಿ ಕೋವಿಂದ್ ಮಾತನಾಡಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close