About Us Advertise with us Be a Reporter E-Paper

ಅಂಕಣಗಳು

ಸುಮ್ ಸುಮ್ನೆ ಓಳು ಬಿಡೋ ಸುಂದರಿ!

- ಮೋಹನ್‌ ಕುಮಾರ್‌ ಬಿ.ಎನ್‌‌

ನೀವು ಪ್ರವಾಸಕ್ಕೆ ಹೋಗುತ್ತೀರಾ? ಯಾವ ತಾಣಕ್ಕೆ ಹೋಗಲು ನೀವು ಎಂದು ಯಾರನ್ನಾದರೂ ಕೇಳಿ ನೋಡಿ. ಎಲ್ಲರೂ ಯಾವುದಾದರೊಂದು ಸುಂದರ ತಾಣದ ಹೆಸರನ್ನು ಹೇಳುವುದು ವಾಡಿಕೆ. ಅದರಲ್ಲೂ ಮಹಿಳೆಯರನ್ನು ವಿದೇಶೀ ಪ್ರವಾಸದ ಬಗ್ಗೆ ಕೇಳಿದಾಗ, ಅಮೆರಿಕ, ಯುರೋಪ್, ಸಿಂಗಾಪುರ, ಥೈಲಾಂಡ್‌ಗಳ ಹೆಸರುಗಳನ್ನು ಹೇಳುವುದನ್ನು ಕೇಳಿರುತ್ತೀರಿ. ಆದರೆ ಪಾಕಿಸ್ತಾನಕ್ಕೆ ಪ್ರವಾಸ ಹೋಗಬಯಸುವವರನ್ನು ಎಲ್ಲಾದರೂ ಕೇಳಿದ್ದೀರಾ? ಕೇಳಿರಲಿಕ್ಕಿಲ್ಲ ಬಿಡಿ. ಆದರೆ ಎಲ್ಲೋ ಒಂದು ಬಾರಿ ಕೇಳಿದ ಅನುಭವವಾಗಿರಬಹುದು ಅಲ್ವಾ ? ಹೌದು. ನಮ್ಮ ಕನ್ನಡ ಚಿತ್ರರಂಗದ ಮಾಜಿ ನಟಿ, ಮಾಜಿ ಸಂಸದೆ, ಸದ್ಯಕ್ಕೆ ರಾಜಕಾರಣಿಯಾಗಿರುವ, ದಿವ್ಯಾ ಸ್ಪಂದನ ಅಲಿಯಾಸ್ ರಮ್ಯಾ ಬಾಯಿಂದ ಕೇಳಿರುವ ಮಾತಿದು. ಪತ್ರಕರ್ತರು ಕೇಳಿದ ಪ್ರಶ್ನೆಗೆ, ಪಾಕಿಸ್ತಾನವನ್ನು ಸ್ವರ್ಗಕ್ಕೆ ಹೋಲಿಸಿದಾಕೆ! ಪಾಕಿಸ್ತಾನದಲ್ಲಿ ಎಲ್ಲರೂ ತುಂಬಾ ಚೆನ್ನಾಗಿಯೇ ಇದ್ದಾರೆ ಎಂದೆಲ್ಲಾ ಹೇಳಿದ ಕೀರ್ತಿ ಈಯಮ್ಮನದು.

ಆಕೆಗೆ ಅದ್ಯಾಕೆ ಈ ರೀತಿಯ ಯೋಚನೆಗಳು ಬರುತ್ತದೆಯೋ ತಿಳಿದಿಲ್ಲ. 2008ರ ಮುಂಬಯಿ ಭಯೋತ್ಪಾದನಾ ಕೃತ್ಯದಲ್ಲಿ ಪಾಕಿಸ್ತಾನ ನೇರವಾಗಿ ಭಾಗಿಯಾಗಿ, ನೂರಾರು ಜನರನ್ನು ಬಲಿ ತೆಗೆದುಕೊಂಡರು, ಈಕೆಗೆ ಆ ಪಾಕಿಸ್ತಾನ, ಅಲ್ಲಿನ ಜನರು ಸ್ವರ್ಗದಲ್ಲಿರುವ ಇಂದ್ರನ ಗುಂಪಿನಂತೆ ಇಡೀ ಭಾರತಾದ್ಯಂತ ಈಕೆಯ ಹೇಳಿಕೆಗೆ ಪ್ರತಿಭಟನೆ ವ್ಯಕ್ತವಾಯಿತು. ಆದರೂ ತಾನು ಆಡಿದ ಮಾತಿಗೆ ಕ್ಷಮೆ ಕೇಳಲಿಲ್ಲ. ಕಾಂಗ್ರೆಸ್ ಐಟಿ ಸೆಲ್‌ನ ಮುಖ್ಯಸ್ಥೆಯಾದಾಗಿನಿಂದಲೂ, ಈಕೆ ಹದ್ದು ಮೀರುವ ರೀತಿಯಲ್ಲಿ ವರ್ತಿಸಿದ್ದಾಳೆ. ಯಥಾ ರಾಜ, ತಥಾ ಮಂತ್ರಿಯೆಂಬಂತೆ, ಇವರ ಬಾಸ್ ರಾಹುಲ್ ಗಾಂಧಿಯ ಬಾಯಲ್ಲಿ ಏನಾದರೊಂದು ಅವಾಂತರಗಳು ಕೇಳಿಬರುತ್ತಲೇ ಇರುತ್ತವೆ. ಅದೇ ರೀತಿ ಈ ಮಾರಾಯ್ತಿಯ ಬಾಯಲ್ಲೂ, ಏನಾದರೊಂದು ತಲೆತಿರುಕರಂತೆ ಆಡುವ ಮಾತುಗಳು ಕೇಳಿಬರುತ್ತವೆ.

2013ರಲ್ಲಿ ಈಕೆಯು ಮೊದಲ ಬಾರಿಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು ಸಂಸತ್ ಮೆಟ್ಟಿಲು ಏರಿದಾಕ್ಷಣ, ಇಡೀ ರಾಜ್ಯವೇ ಕೊಂಡಾಡಿತ್ತು. ಇಂದಿಗೂ ನೆನಪಿದೆ, ಈಕೆ ಸಂಸತ್ತಿನಲ್ಲಿ ಒಳ್ಳೆಯ ಗಟ್ಟು ಹೊಡೆದು, ಮಕ್ಕಳು ಟೀಚರಿಗೆ ಪದ್ಯ ಒಪ್ಪಿಸುವ ರೀತಿಯಲ್ಲಿತ್ತು, ಈಕೆಯ ಮಾತು. I have come from a place called mandya, where sugarcane is main produce in india. being one of the largest Producer of sugarcane. have not made much effort on this’ ಅಂತ ಹೇಳಿದ್ದೇ ಹೇಳಿದ್ದು. ಜತೆಗೆ ಅತಿ ಕಿರಿಯ ವಯಸ್ಸಿನ ಲೋಕಸಭಾ ಸದಸ್ಯೆಯೆಂಬ ಬಿರುದು ಬೇರೆ ಈಕೆಯ ತಲೆಯ ಮೇಲೆ ಇತ್ತು. ಇಷ್ಟೇ, ಈ ಭಾಷಣ ಮುಗಿದ ಮೇಲೆ ಯಾವ ಶುಗರ್ ಇಲ್ಲ, ಯಾವ ಕೇನೂ ಇಲ್ಲ.

ಸಾಲಬಾಧೆಯಿಂದ ಇದೇ ಮಂಡ್ಯ ಜಿಲ್ಲೆಯಲ್ಲಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಈಕೆಗೆ ತನ್ನ ಜಿಲ್ಲೆ ನೆನಪಿಗೆ ಬರಲೇ ಇಲ್ಲ. ಜಿಲ್ಲೆಯ ಕಾರ್ಖಾನೆಗಳು ರೈತರಿಗೆ ಹಲವಾರು ತಿಂಗಳುಗಳಿಂದ ಬಾಕಿ ಕಬ್ಬು ಬೆಳೆಯ ಬೆಂಬಲ ಬೆಲೆಯ ಬಾಬ್ತನ್ನು ನೀಡಲು, ಹೋರಾಟ ಮಾಡಲು ಈಕೆ ಬರಲೇ ಇಲ್ಲ. ಕಾವೇರಿ ನೀರಿನ ಹೋರಾಟದಲ್ಲೂ ಈಕೆ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಇಂದಿಗೂ ಕಸದ ಸಮಸ್ಯೆ ಬಗೆಹರಿದಿಲ್ಲ. ಪಾರ್ಕುಗಳಂತೂ ಉದ್ಧಾರ ಮಾಡಲಿಲ್ಲ. ಮಂಡ್ಯ ಜನತೆಗಾಗಿ ಕನಿಷ್ಟ ಕೆಲಸ ಮಾಡದ ಈಕೆ, ಮಾತಿಗೆ ಮಾತ್ರ ಕಡಿಮೆ ಇಲ್ಲ. ಲಂಗು-ಲಗಾಮಿಲ್ಲದ ಆಡುವ ಮಾತಿಗೆ ಕಡಿವಾಣವೇ ಇಲ್ಲದಂತಾಗಿದೆ. ಕಬ್ಬು ಬೆಳೆಗಾರರ ಒಂದು ಸಮಸ್ಯೆಯನ್ನಾದರೂ ಬಗೆಹರಿಸಲಾಗದೆ, ಮಂಡ್ಯದ ಕಬ್ಬು ಉತ್ಪನ್ನದ ಲೋಕಸಭೆಯಲ್ಲಿ ಮಾತನಾಡುತ್ತಾಳೆ.

ಇತ್ತೀಚೆಗೆ ಈಕೆಯ ಮತ್ತೊಂದು ಟ್ವೀಟ್ ತುಂಬಾ ಸದ್ದು ಮಾಡಿತು. ಸರ್ದಾರ್ ಪಟೇಲ್ ಪ್ರತಿಮೆಯ ಬಳಿ ನರೇಂದ್ರ ಮೋದಿಯವರು ನಿಂತಿರುವುದನ್ನು, ಒಂದು ಹಕ್ಕಿಯ ಹಿಕ್ಕೆಗೆ ಹೋಲಿಸಿ ಬರೆದಿದ್ದಳು. ಇದು ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಸಿಕ್ಕ ಸಿಕ್ಕ ಪೊರಕೆ, ದೊಣ್ಣೆ, ಚಂಬುಗಳಿಂದೆಲ್ಲ ಮಂಗಳಾರತಿ ಮಾಡಿಸಿಕೊಂಡಳು. ಅಲ್ಲಾ, ಒಂದು ಹಕ್ಕಿಯ ಹಿಕ್ಕೆಗೆ ಇರುವ ಬೆಲೆಯೂ ಇಲ್ಲದ ಈಕೆಗೆ ದೇಶದ ಒಬ್ಬ ಪ್ರಧಾನಮಂತ್ರಿಯನ್ನು ಹಕ್ಕಿಯ ಹಿಕ್ಕೆಗೆ ಹೋಲಿಸುವ ಹೀನಾ ಮನಸ್ಥಿತಿಗೆ ಏನೆನ್ನೋಣ? ಕಾರಣಕ್ಕಾಗಿ ಈಕೆಯನ್ನು ಮಂಡ್ಯದ ಜನರು 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಂಗಳಾರತಿ ಎತ್ತಿ ಮನೆಗೆ ಕಳಿಸಿದ್ದರು.

ಎಲ್ಲರೂ ಟ್ವಿಟ್ಟರ್ ಹಕ್ಕಿಯಿಂದ ಕೂಹೂ ಎಂದು ಟ್ವೀಟ್ ಮಾಡಿದರೆ, ಈಯಮ್ಮ ಮಾತ್ರ ಟ್ವಿಟ್ಟರ್ ಹಕ್ಕಿಯ ಹಿಂಬದಿಯಿಂದ ಹಿಕ್ಕೆಯನ್ನು ಯಾವಾಗಲೂ ಹಾಕುತ್ತಿರುತ್ತಾಳೆ. ರಮ್ಯಾ ಪ್ರಕಾರ,twitter bird is for droping shit and not for tweet ಅನ್ನುವ ರೀತಿಯಲ್ಲಿ ಕಾಣುತ್ತಿರುತ್ತದೆ. ಬಹುಶಃ ಮೋದಿಯವರನ್ನು ಅತಿ ಹೆಚ್ಚು ಬೈದಷ್ಟು, ಅವರ ಕುರಿತು ಕೀಳಾಗಿ ಮಾಡಿದಷ್ಟು ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದಲ್ಲಿ ತನಗೆ ಉನ್ನತ ಮಟ್ಟದ ಸ್ಥಾನ-ಮಾನ ನೀಡುತ್ತಾರೆ ಎಂದು ಈಕೆ ಭಾವಿಸಿರಬೇಕು. ಏಕೆಂದರೆ ಗಾಂಧಿ ಕುಟುಂಬಕ್ಕೆ ಬಕೆಟ್ ಹಿಡಿದು, ಉನ್ನತ ಸ್ಥಾನಮಾನ, ಸಂಪತ್ತು ಪಡೆದವರ ಪರಂಪರೆ ನೆಹರು ಕಾಲದಿಂದಲೂ, ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡದಾಗೇ ಇದೆ. ಅದಕ್ಕಾಗಿಯೇ ಅವರಂತೆ ಈ ಹಕ್ಕಿಯೂ ಸಹ ಯಾವಾಗಲೂ ವಿವಾದಾತ್ಮಕ ಟ್ವೀಟ್ ಮಾಡುವ ಬದಲು, ಶಿಟ್ ಮಾಡುತ್ತಿರುತ್ತದೆ. ಬಕೆಟ್ ಹಿಡಿಯುವುದಕ್ಕೂ ಒಂದು ಮಿತಿ ಇರಬೇಡವೇ?

ಮಂಡ್ಯ ಜಿಲ್ಲೆಯಲ್ಲಿ ಸರ್ ವಿಶ್ವೇಶ್ವರಯ್ಯನವರ ಒಂದು ಪ್ರತಿಮೆಯನ್ನು ನಿರ್ಮಾಣ ಮಾಡಲಾಗದ, ಅಂತ ಯೋಗ್ಯತೆಯೂ ಇಲ್ಲದ ಈಕೆ 182 ಮೀಟರ್ ಉದ್ದದ ಪ್ರತಿಮೆಯ ಬಗ್ಗೆ ಅಣಕಮಾಡಿ ಮಾತಾಡುತ್ತಾಳೆ. ನಿಮಗೆಲ್ಲ ನೆನಪಿದೆಯೋ ಇಲ್ಲವೋ, ಕಳೆದ ವರ್ಷ ಟ್ವಿಟ್ಟರ್‌ನಲ್ಲಿ ರಾಹುಲ್‌ಗಾಂಧಿಗೆ ಇದ್ದಕ್ಕಿದ್ದಂತೆ ಫಾಲೋವರ್‌ಸ್ಗಳು ಹೆಚ್ಚಾಗಿದ್ದವು. ಆಗ ತನಿಖಾ ಸಂಸ್ಥೆಗಳು ಪ್ರಪಂಚದ ಮೂಲೆ ಮೂಲೆಯಲ್ಲಿ ಡಮ್ಮಿ ಅಕೌಂಟ್‌ಗಳನ್ನು ಶುರುಮಾಡಿ ರಾಹುಲ್‌ಗಾಂಧಿಯ ಫಾಲೋವರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆಯೆಂದು ಹೇಳಿತ್ತು. ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ರಮ್ಯಾ ಎಂಬ ಸಂಗತಿಯೂ ನಂತರ ಬಂತು. ಇದ್ದಕ್ಕಿದ್ದಂತೆ ರಾಹುಲ್‌ಗಾಂಧಿಗೆ ರಷ್ಯಾ, ಸೌದಿ, ಆಫ್ರಿಕದಲ್ಲೆಲ್ಲ ಫಾಲೋವರ್‌ಗಳು ಶುರುವಾಗಿದ್ದವು. ಅವರ ಖಾತೆಗಳನ್ನು ಒಮ್ಮೆ ಹೋಗಿ ನೋಡಿದರೆ ಸಾಕು, ಅದರ ಬಂಡವಾಳಗಳು ಬಯಲಾಗುತ್ತಿದ್ದವು. ಈ ರೀತಿ ಸಿಕ್ಕ ಸಿಕ್ಕಲ್ಲೆಲ್ಲ ಡಮ್ಮಿ ಹಕ್ಕಿಗಳನ್ನು ಸೃಷ್ಟಿಸಿ ಮೆರೆದಿರುವ ದಿವ್ಯಾ ಸ್ಪಂದನ ಅಲಿಯಾಸ್ ರಮ್ಯಾ ಇಂದು ಪ್ರಧಾನಿಯನ್ನು ಹಕ್ಕಿಯ ಹಿಕ್ಕೆಗೆ ಹೋಲಿಸುತ್ತಿರುವಳು.

ಈಕೆ ಸ್ಪರ್ಧಿಸಿದ ಕ್ಷೇತ್ರ ಮಂಡ್ಯದಲ್ಲೇ ಇತ್ತೀಚೆಗೆ ಪಾಪ ಅನ್ನದಾತನಿಗೆ ಬ್ಯಾಂಕುಗಳಿಂದ ಅರೆಸ್‌ಟ್ ವಾರೆಂಟ್‌ಗಳು ಬಂದಿರುವುದು ಈಕೆಯ ಕಣ್ಣಿಗೆ ಕಾಣುತ್ತಿಲ್ಲ. ಕೇವಲ ರಾಜಕೀಯ ಮಾಡಲು ಬಂದಂತಹ ಇಂಥವರಿಗೂ ಮತ ಹಾಕುವ ಜನರಿರುವುದು ಮಾತ್ರ ವಿಪರ್ಯಾಸ. ತನ್ನದೇ ಪಕ್ಷ 2013-18ರ ವರೆಗೆ ಆಡಳಿತ ನಡೆಸುತ್ತಿತ್ತು. ಈಗಲೂ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಇಷ್ಟಾದರೂ ಮಂಡ್ಯ ಜಿಲ್ಲೆಯ ಕಷ್ಟಗಳಿಗೆ ಸ್ಪಂದಿಸದ ಈ ನಾಯಕಿ ಎಲ್ಲಿ, ದಿನದ 18ಗಂಟೆಯೂ ದೇಶಕ್ಕಾಗಿ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲಿ? ಮುಂದೊಂದು ದಿನ ಮೋದಿಯವರ ಪ್ರತಿಮೆ ನಿರ್ಮಿಸಿದರೂ, ಆ ಪ್ರತಿಮೆಯ ಕಾಲ ಬಳಿಯೂ ನಿಲ್ಲಲಾರಂದಂತಹ ಪರಿಸ್ಥಿತಿ ಎದುರಾಗುವುದರಲ್ಲಿ

ಇನ್ನು 2013ರಲ್ಲಿ ಮೋದಿಯವರ ಚುನಾವಣಾ ಭಾಷಣಕ್ಕೆ ಕೆಲವೇ ದಿನಗಳ ಇರುವಾಗ ಆರೆಸ್ಸೆಸ್ ದೇಶಕ್ಕಾಗಿ ಹೋರಾಡಿದವರಲ್ಲವೆಂದು ಹೇಳಿ ಅವಮಾನ ಮಾಡಿದ್ದರು. ಅವರನ್ನು ಬ್ರಿಟಿಷರ ಜತೆ ಕೈ ಜೋಡಿಸಿದ ಸಂಘಟನೆ ಎಂಬಂತೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಅಲ್ಲ ಭಾರತವು ಸ್ವತಂತ್ರಗೊಂಡಾಗ ಇದ್ದದ್ದು ಒಂದೇ ಪಕ್ಷ. ಯಾಕೆಂದರೆ, ಸ್ವತಂತ್ರ ಪ್ರಜಾಪ್ರಭುತ್ವ ಸ್ಥಾಪನೆಯಾದ ಮೇಲೆ ಚುನಾವಣೆ, ಆಡಳಿತ ಪಕ್ಷ, ಪ್ರತಿಪಕ್ಷ, ಮತದಾನ ಆಗುವುದೆಂಬ ಕನಿಷ್ಟ ಜ್ಞಾನ ಈಕೆಗೆ ಇಲ್ಲ.

1883ರಲ್ಲಿ ಕಾಂಗ್ರೆಸ್ ಪಕ್ಷ ಸ್ಥಾಪನೆಯಾದದ್ದು ನಿಂತು ಬ್ರಿಟಿಷರ ವಿರುದ್ಧ ಹೋರಾಡಲು ಅಲ್ಲವೇ ಅಲ್ಲ. ಯಾಕೆಂದರೆ ಆಗ ಸ್ವಾತಂತ್ರ್ಯ ಭಾರತವೇ ಇರಲಿಲ್ಲ. ಹಾಗಾದರೆ ಇವರ ಪಕ್ಷದವರು ಮಾತ್ರ ಹೇಗೆ ಸ್ವಾತಂತ್ರ್ಯ ಹೋರಾಟಗಾರರೋ ತಿಳಿಯಲಿಲ್ಲ. ನಗುವ ವಿಷಯವೆಂದರೆ, ಇವರ ಪಕ್ಷದಲ್ಲಿಯೇ ಪ್ರಜಾಪ್ರಭುತ್ವವಿಲ್ಲ. ತಾತ, ಮೊಮ್ಮಗ, ಮಕ್ಕಳೇ ಲೀಡರ್‌ಗಳು. ಉಳಿದವರೆಲ್ಲ ಏನಿದ್ದರೂ ಅವರ ಫಾಲೋವರ್‌ಗಳು. ನಮ್ಮೊಟ್ಟಿಗೆ ಸ್ವಾತಂತ್ರ್ಯಗೊಂಡ ಅದೆಷ್ಟೋ ರಾಷ್ಟ್ರಗಳು ಇಂದು ಎಷ್ಟೋ ಅಭಿವೃದ್ಧಿ ಹೊಂದಿವೆ. ನಾವು ಮಾತ್ರ ಇಂಥವರ ಹಿಂದೆ ಬಿದ್ದಿದ್ದೇವೆ.

ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಜನರ ನೆರವಿಗೆ ಬಂದವರು ಆರೆಸ್ಸೆಸ್‌ನವರು. ಕೊಡಗು, ಕೇರಳದಲ್ಲಿ ಪ್ರವಾಹವಾದಾಗಲೂ ಅಲ್ಲಿನ ಜನರ ಸಹಾಯಕ್ಕೆ ಬಂದವರು ಆರೆಸ್ಸೆಸ್‌ನವರು. ಶಬರಿಮಲೆಯಲ್ಲಿ ಭಕ್ತರ ಜತೆಗಿದ್ದವರು ಆರೆಸ್ಸೆಸ್‌ನವರು. ಇಷ್ಟೆಲ್ಲ ಮಾತನಾಡುವ ಈಕೆ, ಕನಿಷ್ಟ ಒಬ್ಬ ಸಂತ್ರಸ್ಥನಿಗಾದರೂ ಒಂದು ಬಿಸ್ಕಿಟ್ ಪ್ಯಾಕೆಟ್ ಕಳಿಸಿಕೊಟ್ಟಿದ್ದಾಳಾ? ಇಲ್ಲ. ನಾಲ್ಕು ಗೋಡೆಗಳ ಮಧ್ಯೆ ಎ.ಸಿ. ರೂಮಿನಲ್ಲಿ ಕುಳಿತುಕೊಂಡು, ರಾಜಕೀಯ ಮಾಡುವ ಇಂತಹ ನಾಲಾಯಕ್ ರಾಜಕಾರಣಿಗಳಿಗೇನು ಗೊತ್ತು; ಆರೆಸ್ಸೆಸ್‌ನ ಸೇವಾ ಕಾರ್ಯ. ಈಕೆಗೆ ಜನರ ಮುಂದೆ ಚರ್ಚೆಗೆ ಬರಲು ಧೈರ್ಯವಿಲ್ಲ. ಹೀಗೆ ಮೇ ತಿಂಗಳಲ್ಲಿ ನೋಟು ಅಮಾನ್ಯೀಕರಣವಾದ ಬಳಿಕ ಮಂಡ್ಯ ಜಿಲ್ಲೆಗೆ ಬಂದಾಗ, ಅಲ್ಲಿನ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ರೀತಿಯಂತೂ ಮರೆಯುವಂತಿಲ್ಲ. ಬೀದಿ ವ್ಯಾಪಾರಿಗಳ ಬಳಿ ಹೋಗಿ, ಎಲ್ಲ ಹಾಳಾಯ್ತು ಅಂತ ತಾನೇ ಹೇಳಿ, ಅವರ ಬಾಯಿಯಲ್ಲಿ ಹೇಳಿಸಲು ಪ್ರಯತ್ನಿಸಿ, ಸಾರ್ವಜನಿಕರಿಂದ ಅವಮಾನಕ್ಕೊಳಗಾಗಿದ್ದೂ ಸಹ ಇನ್ನೂ ತನ್ನ ಚಾಳಿ ಬಿಟ್ಟಿಲ್ಲ.

ಅತ್ತ ಸಿನಿಮಾನೂ ಇಲ್ಲ, ಇತ್ತ ರಾಜಕೀಯವೂ ಇಲ್ಲದ ಈ ಅತಂತ್ರ ಜೀವನ ನಡೆಸುವ ಈಕೆಯ ಬಾಯಲ್ಲಿ ಈ ರೀತಿಯ ಮಾತುಗಳು ಬಾಯಿಯಿಂದ ಹಕ್ಕಿ ಹಿಕ್ಕೆ ಹಾಕುತ್ತಿದ್ದಾಳೆ. ಮಾಧ್ಯಮದ ಮುಂದೆ ಬಹಿರಂಗ ಚರ್ಚೆಗೆ ಬರಲಿ. ಈಕೆಗೆ ಬರಲು ಆಗುವುದಿಲ್ಲ. ಯಾಕೆಂದರೆ, ಅಲ್ಲಿಯೂ ಎಲ್ಲರೂ ಸರಿಯಾಗಿ ಇಳಿಸುತ್ತಾರೆ.
2018ರ ಬೆಂಗಳೂರಿನಲ್ಲಿ ಮೋದಿಯವರ ಭಾಷಣ ಮುಗಿದ ನಂತರ ರಮ್ಯಾ ಆಡಿದ ಮಾತಂತೂ ಇನ್ನೂ ಚೀಪ್ ಆಗಿತ್ತು. ಪ್ರಧಾನಿ ಮೋದಿಯವರು ನಶೆಯಲ್ಲಿ ತೇಲಾಡುತ್ತಿದ್ದಾರೆ ಎಂಬಂತೆ ಟ್ವೀಟ್ ಮಾಡಿದ್ದರು.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ರಾಮಯ್ಯನವರನ್ನು ಸೀದಾರುಪಯ್ಯ ಸರಕಾರ ಎಂದು ಕರೆದರು ಸಹ, ಮುಖ್ಯಮಂತ್ರಿಗಳು ಈಕೆಯಷ್ಟು ಚೀಪ್ ಆಗಿ ಪ್ರತಿಕ್ರಿಯೆ ಏನು ಇಲ್ಲದ ಈಕೆ ಮಾತ್ರ ನಶೆಯ ವಿಚಾರವನ್ನು ತಂದಿದ್ದಳು. ನೇರವಾಗಿ ಮಾತನಾಡುವ ಮೋದಿಗೆ ನಶೆ ಇರಬೇಕು ಎಂದರೆ ಇನ್ನು ವಿಶ್ವೇಶ್ವರಯ್ಯ ಎನ್ನಲು ತಿಣುಕಾಡುವ, ಇವನಾರ್ವ, ಇವನಾರ್ವ ಎನ್ನುವ, ಎಚ್‌ಎಎಲ್ ಮೊಬೈಲ್, ಟೀಶರ್ಟ್ ಮಾಡಿಸುತ್ತೀನಿ ಎನ್ನುವ ಘ್ಕೆಉಎಅ ಅನ್ನಲು ಬಾರದ, 25,000-30,000 ಕೋಟಿ ಎನ್ನುವ ಈಕೆಯ ಬಾಸ್‌ಗೆ ಇನ್ನೆಷ್ಟು ನಶೆ ಏರಿರಬಹುದೆಂದು ಆಕೆಗೆ ತಿಳಿದಿದ್ದರೆ, ಜನತೆಯ ಮುಂದೆ ಬಂದು ತಿಳಿಸಲಿ. ಸಿನಿಮಾದಲ್ಲಿ ಕಥೆ ಹೇಳುವಂತೆ, ಬಾಯಿಗೆ ಬಂದಂತೆ ಈ ರೀತಿಯ ನಿಜ ಜೀವನದಲ್ಲಿ ಅದರಲ್ಲಿಯೂ ರಾಜಕೀಯ ಜೀವನದಲ್ಲಿ ಹೇಳಿದರೆ, ನಶೆಯ ಪ್ರಮಾಣ ಎಷ್ಟಿರಬಹುದು ಯೋಚಿಸಿ.

ಪ್ರಧಾನ ಮಂತ್ರಿ ಎಂಬ ಹುದ್ದೆಯ ಪಾವಿತ್ರ್ಯತೆಯನ್ನು ತಿಳಿಯದ ಈ ಮಾರಾಯ್ತಿಗೆ ಏನು ಮಾಡಬೇಕು ನೀವೇ ಹೇಳಿ. ಏನು ಮಾಡುತ್ತೀರಾ. ಯಾವಾಗಲೂ ನಶೆಯಲ್ಲಿಯೇ ತೇಲಾಡುವವರಿಗಷ್ಟೇ ಈ ರೀತಿಯ ಯೋಚನೆಗಳು ಬರುವುದು. ಇಷ್ಟೆಲ್ಲ ಮಾತಾಡುವ ಈಕೆಗೆ ನಮ್ಮ ದೇಶದ ಇತಿಹಾಸದ ಗಂಧ-ಗಾಳಿಯೂ ತಿಳಿದಂತೆ ಕಾಣುತ್ತಿಲ್ಲ. ಯಾರೋ, ಎಲ್ಲೋ ಅವರ ಪಕ್ಷದಲ್ಲಿ ಆಡುವ ಮಾತುಗಳನ್ನೇ ಇತಿಹಾಸವೆಂದು ತಿಳಿದಿರುವ ಈಕೆಯ ನಿಮ್ಹಾನ್‌ಸ್ನಲ್ಲಿ ಮಾನಸಿಕ ಅಸ್ವಸ್ಥರು ಆಡುವ ಮಾತಿಗೂ ಯಾವ ವ್ಯತ್ಯಾಸವೂ ಇಲ್ಲ. ಹುಚ್ಚರು, ಕುಡುಕರು ಮಾತಾಡುವಂತೆಯೇ ಈಕೆಯೂ ಮಾತನಾಡುತ್ತಾಳೆ.

ಭಾರತವು ಎಂತೆಂಥ ಘಟಾನುಘಟಿ ರಾಜಕೀಯ ನಾಯಕರನ್ನು ಕಂಡಿದೆ. ಅದರಲ್ಲಿಯೂ ಇವರದ್ದೇ ಪಕ್ಷದ ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಚಿದಂಬರಂ ಇವರ್ಯಾರೂ ಸಹ ಕೀಳುಮಟ್ಟದ ಟೀಕೆಯನ್ನು ಮಾಡುವುದಿಲ್ಲ. ಆದರೆ ಈಕೆ ಬಾಯಿ ಇದೆ ಎಂಬ ಮಾತ್ರಕ್ಕೆ ಈ ರೀತಿಯಲ್ಲಿ ಮಾತಾಡುವುದು ತಪ್ಪು. ರಾಜಕೀಯ ಕೆಸರೆರಚಾಟದಲ್ಲಿ ಆಡುವ ಮಾತಿಗೂ ತೂಕವಿರಬೇಕು.ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಉಪಚುನಾವಣೆಯನ್ನು ಶ್ರೀರಾಮುಲು ಹಾಗೂ ಡಿ.ಕೆ.ಶಿವಕುಮಾರ ಬದ್ಧ ವೈರಿಗಳಾದರೂ, ಈ ರೀತಿಯ ಕೀಳುಮಟ್ಟದ ಮಾತಿನ ಚಕಮಕಿಯನ್ನು ಮಾತ್ರ ಆಡಲಿಲ್ಲ. ಆದರೆ ಈಕೆ ಊರಿಗೊಬ್ಬಳೆ ಪದ್ಮಾವತಿ ಎಂಬಂತೆ ತನ್ನನ್ನು ತಾನು ಏನೋ ಅಂದುಕೊಂಡು, ಪ್ರಧಾನಿಯನ್ನು ಬಾಯಿಗೆ ಬಂದಂತೆ ಬೈದರೆ, ಜನರು ವೋಟು ಹಾಕುತ್ತಾರೆಂಬ ಚೀಪ್ ಪಬ್ಲಿಸಿಟಿ ಮಾಡಿಕೊಳ್ಳುವ ಈಕೆಯ ಬುದ್ಧಿಗೆ ಏನು ಹೇಳಬೇಕೋ ತಿಳಿಯದು.

ಕಳೆದೆರಡು ಚುನಾವಣೆಯಿಂದಲೂ ಮಂಡ್ಯದ ಕಡೆಗೆ ತಲೆಯನ್ನು ಹಾಕದೆ, ಕನಿಷ್ಟಪಕ್ಷ ಮತದಾನವನ್ನು ಮಾಡಲು ಬಂದಿಲ್ಲ. 70-80 ವರ್ಷದ ವೃದ್ಧರು, ಕುರುಡರು, ಕಾಲು, ಕೈ ಇರದವರೆಲ್ಲ ಬಂದು ಮತ ಚಲಾಯಿಸಿದ್ದಾರೆ. ಆದರೆ ಈ ಮಾಜಿ ನಟಿ ಮಾತ್ರ ಬಂದು ವೋಟು ಹಾಕಿಲ್ಲ. ವೋಟು ಹಾಕುವುದಕ್ಕೆ ಬಾರದ ಇವಳಿಗೆ ಪ್ರಧಾನಿಯ ಬಗ್ಗೆ, ದೇಶದ ಬಗ್ಗೆ ಮಾತಾಡುವ ಹಕ್ಕು ಏನಿದೆ? ಈಕೆಯಿಂದ ನಮ್ಮ ದೇಶದ ಜನ ಪಾಠ ಕಲಿಯಬೇಕು. ಇದಕ್ಕಾಗಿಯೇ ಇರಬೇಕು ಮತದಾರರ ಪಟ್ಟಿಯಲ್ಲಿ 420ರ ಕ್ರಮ ಸಂಖ್ಯೆಯನ್ನು ರಮ್ಯಾ ಹೆಸರಿಗೆ ನೀಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೆ ಚರ್ಚೆಗಳು ನಡೆಯುತ್ತಿವೆ. ಇಂಥವರಿಗೆ ಲಕ್ಷಾಂತರ ಫಾಲೋವರ್‌ಗಳಿದ್ದಾರೆ. ಈಕೆಯ ಟ್ವಿಟ್ಟರ್‌ನ್ನು ಸರಿಯೆಂದು ಹೇಳುವವರೂ ಇದ್ದಾರೆ ಎಂಬುದು ಆಶ್ಚರ್ಯ.

ಒಂದಂತೂ ನಿಜ. ಮುಕ್ಕಾಲು ಪಾಲು ಈಕೆಯ ಫಾಲೋವರ್‌ಗಳು ಆಕೆಗೆ ಮಂಗಳಾರತಿ ಮಾಡಲೆಂದೇ ಫಾಲೋ ಮಾಡುತ್ತಾರೆ. ಇದನ್ನೆಲ್ಲ ನೋಡಿದರೆ ಈಕೆ ಪುನೀತ ರಾಜಕುಮಾರ ಜತೆ ಅಭಿನಯಿಸಿದ ಮೊದಲ ಚಿತ್ರ ‘ಅಭಿ’ಯ ಹಾಡೊಂದು ನೆನಪಾಗುತ್ತದೆ. ಈ ಹಾಡಿನಲ್ಲಿ ಈಕೆಯೇ ಕುಣಿದು ಕುಪ್ಪಳಿಸಿರುವಂತೆ ಈಕೆ ‘ಸುಮ್ ಸುಮ್ನೆ ಓಳು ಬಿಡೋ ಸುಂದರಿ, ಸುಳ್ಳೇ ತರ್ಲೇ ಮಾಡೋ ಬಿತ್ರಿ… ನಿಂದೆಲ್ಲ ಖ್ಯಾತೆ ಕಣೇ’ ಹಾಡು ಈಗ ಎಲ್ಲರ ನಾಲಗೆ ಮೇಲೆ ನಲಿಯುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close