ನಾಳಿನಿಂದ ರಾಜ್ಯಾದ್ಯಂತ ರಂಜಾನ್ ಉಪವಾಸ ಆರಂಭ

Posted In : ರಾಜ್ಯ

ಬೆಂಗಳೂರು: ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ ನಾಳಿನಿಂದ ಆರಂಭವಾಗಲಿದ್ದು, ನಾಳಿನಿಂದ ಮುಸಲ್ಮಾನರು ಮೂವತ್ತು ದಿನಗಳ ಕಾಲ ಉಪವಾಸ ನಿರತರಾಗಲಿದ್ದಾರೆ.

ಕರಾವಳಿಯಲ್ಲಿ ಚಂದ್ರದರ್ಶನವಾಗಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಅಸಯ್ಯದ್ ಫಝಲ್ ಜಮಲುಲ್ಲೈಲಿ ತಂಙಳ್ ಹಾಗೂ ಮಂಗಳೂರು ಖಾಝಿ ಸ್ಪಷ್ಟಪಡಿಸಿದ್ದು, ನಾಳಿನಿಂದ ಉಪವಾಸ ಆರಂಭವಾಗಲಿದೆ ಎಂದು ಹೇಳಿದ್ಧಾರೆ. ಬೆಂಗಳೂರಿನಲ್ಲೂ ಚಂದ್ರದರ್ಶನವಾಗಿರುವುದಾಗಿ ಬಗ್ಗೆ ಶೈಖ್ ಅಜಾಝ್ ನದ್ವಿ ತಿಳಿಸಿದ್ದಾರೆ.

ರಂಜಾನ್ ತಿಂಗಳಿನಾದ್ಯಂತ ಮುಸಲ್ಮಾನರು ಉಪವಾಸವಿರಲಿದ್ದು, ಬಳಿಕ ಶವ್ವಾಲ್ ತಿಂಗಳ ಚಂದ್ರದರ್ಶನವಾಗುವುದರೊಂದಿಗೆ ಉಪವಾಸ ಅಂತ್ಯಗೊಳ್ಳಲಿದ್ದು, ಈದುಲ್ ಫಿತ್ರ ಅಥವಾ ರಂಜಾನ್ ಹಬ್ಬ ಆಚರಿಸಲಿದ್ದಾರೆ.

Leave a Reply

Your email address will not be published. Required fields are marked *

19 − fourteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top