About Us Advertise with us Be a Reporter E-Paper

ಸಿನಿಮಾಸ್

ಚಂದನವನದಲ್ಲಿ ‘ರಂಗಾದ ಹುಡುಗರ’ ಕರಾಮತ್ತು!

ಇತ್ತೀಚಿಗೆ ಆಡಿಯೋ ರಿಲೀಸ್ ಮಾಡಿಕೊಂಡ ‘ರಂಗಾದ ಹುಡುಗರು’ ಕ್ಯಾಚಿ ಟೈಟಲ್ ಇಟ್ಟುಕೊಂಡು ರಂಗಾಗಿ ಬರ್ತೀರೋ ಹೊಸಬರ ಚಿತ್ರ. ಇದು ಸಾಗರ್, ದೇವರನಾಡಲ್ಲಿ ಚಿತ್ರದಲ್ಲಿ ನಟಿಸಿದ್ದ ಮನು ಹೆಗ್ಡೆ ಹಾಗೂ ಸಂದೀಪ್ ಮೂರು ಯುವ ನಟರು ಆ್ಯಕ್ಟ್ ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಸಿನಿಮಾ.
ಮೋಜು ಮಸ್ತಿ ಮಾಡಿಕೊಂಡು ಹುಡುಗರು ದೇಶ, ಭಾಷೆ ಅಂತಾ ಬಂದಾಗ ಏನು ಮಾಡ್ತಾರೆ ಅನ್ನೋದು ಈ ಚಿತ್ರದ ಒನ್ ಲೈನ್ ಸ್ಟೋರಿ. ಈ ಚಿತ್ರದಲ್ಲಿ ಮೂರು ನಾಯಕರಿಗೆ ಜ್ಯೋತಿ, ಅಮಿತಾ ಖುನಾಲ್ ಹಾಗೂ ಶಾನಾ ಪೊನ್ನಮ್ಮ ಎನ್ನುವ ಮೂವರು ಚೆಲುವೆಯರು ನಾಯಕಿಯಾಗಿ ನಟಿಸುತ್ತಿದ್ದಾರೆ.

ಕಳೆದ 20 ವರ್ಷದಿಂದ ನಿರ್ದೇಶಕ ಆನಂದ್.ಪಿ.ರಾಜ್ ಹಾಗೂ ಮಹೇಶ್ ಸುಖಧರೆ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಯು.ಎಎಸ್. ತೇಜಸ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧಾರವಾಹಿಗಳಿಗೆ ಸಂಭಾಷಣೆ ಬರೆದಿರುವ ರುದ್ರೇಶ್ ನಾಗಸಂದ್ರ ಈ ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ. ದಿಲ್ಸೆ ದೀಲಿಪ್ ಬರೆದಿರುವ ಗೀತ ರಚನೆಗೆ, ಸೌಂಡ್ ಇಂಜಿನಿಯರಿಂಗ್ ಕೆಲಸ ಮಾಡಿದ್ದ ಪಳನಿರಾಜ್ ಸಂಗೀತ ನೀಡಿದ್ದಾರೆ. ಬಸವರಾಜ್ ಟಿ.ಎಂ. ಎಂಬುವರು ಚಿತ್ರಕ್ಕೆ ಹಣ ಹಾಕಿದ್ದಾರೆ. ಶೂಟಿಂಗ್ ಮುಗಿಸಿರೋ ’ರಂಗಾದ ಹುಡುಗರು’ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

 

Tags

Related Articles

Leave a Reply

Your email address will not be published. Required fields are marked *

Language
Close