About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ರಣಜಿ ಟ್ರೋಫಿ: ಕರ್ನಾಟಕಕ್ಕೆ ಮೊದಲ ಜಯ

ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ 7 ವಿಕೆಟ್​ಗಳ ಜಯ

ಮೈಸೂರು: ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ 7 ವಿಕೆಟ್​ಗಳ ಅಮೋಘ ಜಯ ಸಾದಿಸಿದೆ.

ಮಹಾರಾಷ್ಟ್ರ ಕರ್ನಾಟಕದ ಗೆಲುವಿಗೆ 184 ರನ್ ಗುರಿ ನೀಡಿತ್ತು. ಕರ್ನಾಟಕ ಪರ ದೇವದತ್ ಪಡಿಕ್ಕಲ್ 77 ರನ್ ಸಿಡಿಸಿ ತಂಡದ ಜಯದಲ್ಲಿ ಮಿಂಚಿದ್ರು. ಪಡಿಕ್ಕಲ್​ಗೆ ಉತ್ತಮ ಸಾಥ್ ನೀಡಿದ ಡೇಗಲ್ ನಿಶ್ಚಲ್​ ಕೂಡ ಅರ್ಧಶತಕ ಬಾರಿಸಿ ನೆರವಾದ್ರು.

ಮೊದಲ ಇನ್ನಿಂಗ್ಸ್​​ನಲ್ಲಿ ಮಹಾರಾಷ್ಟ್ರ 113 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 256 ರನ್​ ಆಲೌಟ್​ ಆಗಿತ್ತು. ಕರ್ನಾಟಕ ಮೊದಲ ಇನ್ನಿಂಗ್ಸ್​​​ನಲ್ಲಿ 186 ರನ್​ ಸರ್ವಪತನವಾಗಿತ್ತು.

ಈ ವಿನೊಂದಿಗೆ ಕರ್ನಾಟಕ ಪ್ರಸಕ್ತ ರಣಜಿ ಋತುವಿನಲ್ಲಿ ಮೊದಲ ಜಯದಾಖಲಿಸಿದೆ. ತಂಡಕ್ಕೆ 6 ಅಂಕಗಳು ಲಭಿಸಿವೆ. ಇದಕ್ಕೂ ಮೊದಲು ವಿದರ್ಭ ಹಾಗೂ ಮುಂಬೈ ವಿರುದ್ಧದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರಿಂದ ಎರಡೂ ಪಂದ್ಯಗಳಿಂದ ತಲಾ 3 ಅಂಕಗಳು ಸಿಕ್ಕಿತ್ತು. ಸದ್ಯ ಕರ್ನಾಟದ ಖಾತೆಯಲ್ಲಿ ಒಟ್ಟು 12 ಅಂಕಗಳಿವೆ

Tags

Related Articles

Leave a Reply

Your email address will not be published. Required fields are marked *

Language
Close