About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ರಣಜಿ 2018: ಮೊದಲ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

ಮೈಸೂರು: ಇಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿರುದ್ಧದ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ಮೊದಲ ಜಯದ ನಿರೀಕ್ಷೆಯಲ್ಲಿದೆ. ವಿನಯ್ ಕುಮಾರ್ ಬಳಗಕ್ಕೆ ಗೆಲ್ಲಲು 184 ರನ್​ಗಳ ಟಾರ್ಗೆಟ್ ನೀಡಿದ್ದ ಮಹಾರಾಷ್ಟ್ರ, ಕರ್ನಾಟಕ ಗುರಿ ಬೆನ್ನಟ್ಟಿ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 54 ರನ್ ಬಾರಿಸಿದೆ. ಇನ್ನೂ ಒಂದು ದಿನದ ಆಟ ಬಾಕಿ ಉಳಿದಿದ್ದು, ಕರ್ನಾಟಕ ಗೆಲುವಿಗೆ 130 ರನ್​ಗಳ ಅವಶ್ಯಕತೆಯಿದೆ.

ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ಮಹಾರಾಷ್ಟ್ರ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಕಳೆದುಕೊಂಡು 48 ರನ್ ಕಲೆಹಾಕಿತ್ತು. ಮೂರನೇ ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದ ಮಹಾರಾಷ್ಟ್ರ ಬೇಗನೆ ವಿಕೆಟ್ ಕಳೆದುಕೊಂಡಿತು. ತಂಡದ ಪರ ರಾತುರಾಜ್ ಗಾಯಕ್ವಾಡ್ 89 ಹಾಗೂ ನೌಷದ್ ಶೇಕ್ 73 ರನ್ ಗಳಿಸಿ ತಂಡಕ್ಕೆ ಆಸರೆಯಾದರಷ್ಟೆ. ಈ ಮೂಲಕ 2ನೇ ಇನ್ನಿಂಗ್ಸ್​ನಲ್ಲಿ ಮಹಾರಾಷ್ಟ್ರ 256 ರನ್​ಗೆ ಸರ್ವಪತನ ಕಂಡು, ಎದುರಾಳಿಗೆ 184 ರನ್ ಟಾರ್ಗೆಟ್ ನೀಡಿತು.

ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಕಿತ್ತರೆ, ವಿನಯ್ ಕುಮಾರ್ 3 ವಿಕೆಟ್ ಪಡೆದರು. 184 ರನ್​ಗಳ ಗುರಿ ಬೆನ್ನತ್ತಿದ ಕರ್ನಾಟಕ ಭರ್ಜರಿ ಆರಂಭ ಪಡೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದೆ. ಇನ್ನು ಒಂದು ದಿನದಾಟ ಬಾಕಿ ಉಳಿದಿದ್ದು, ಕರ್ನಾಟಕ ಗೆಲುವಿಗೆ 130 ರನ್​ಗಳ ಅವಶ್ಯತೆಯಿದೆ. ದೇವದತ್ ಪಡಿಕ್ಕಲ್ 33 ಹಾಗೂ ನಿಶ್ಚಲ್ 21 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕ ಆಡಿರುವ ಎರಡು ಪಂದ್ಯಗಳಲ್ಲಿ ಎರಡೂ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಹೀಗಾಗಿ ವಿನಯ್ ಬಳಗ ಮಹಾರಾಷ್ಟ್ರ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

Tags

Related Articles

Leave a Reply

Your email address will not be published. Required fields are marked *

Language
Close