ರಣಜಿ ಕ್ರಿಕೆಟ್: ಕರ್ನಾಟಕ ತಂಡ ಪ್ರಕಟ

Posted In : ಕ್ರೀಡೆ

ಬೆಂಗಳೂರು: 84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರರ ಪಟ್ಟಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಶನಿವಾರ ಪ್ರಕಟಿಸಿದೆ. 16 ಆಟಗಾರರನ್ನು ಒಳಗೊಂಡ ರಣಜಿ ತಂಡವನ್ನು 33 ವರ್ಷದ ದಾವಣಗೆರೆ ಎಕ್ಸ್ ಪ್ರೆಸ್ ಆರ್.ವಿನಯ್ ಕುಮಾರ್ ಮುನ್ನಡೆಸಲಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅನುಭವ ಹೊಂದಿರುವ ವಿನಯ್ 400 ವಿಕೆಟ್ ಕಬಳಿಸಿದ್ದಾರೆ. ಇದೇ 14ರಂದು ಕರ್ನಾಟಕ ಮೊದಲ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಎದುರಿಸಲಿದೆ. ಕರ್ನಾಟಕದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಭಾರತ ಆಸ್ಟ್ರೇಲಿಯಾ ವಿರುದ್ಧ ಟಿ20ಯಲ್ಲಿ ಆಡುತ್ತಿರುವುದರಿಂದ ಈ ಬಾರಿ ತಂಡದಿಂದ ಹೊರಗುಳಿದಿದ್ದಾರೆ. ಭಾರತ ಎ ತಂಡದ ಪರವಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿರುವ ಕರುಣ್ ನಾಯರ್ ರಣಜಿಯಲ್ಲಿ ಆಡುತ್ತಿಲ್ಲ.

ಕರ್ನಾಟಕ ರಣಜಿ ತಂಡ ಇಂತಿದೆ: ವಿನಯ್ ಕುಮಾರ್(ನಾಯಕ), ಆರ್.ಸಮರ್ಥ್, ಸಿಎಂ ಗೌತಮ್(ವಿಕೆಟ್ ಕೀಪರ್), ಅಭಿಷೇಕ್ ರೆಡ್ಡಿ, ಮಯಾಂಕ್ ಅಗರವಾಲ್, ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಕೆ.ಗೌತಮ್, ಮಿರ್ ಕೌನೈನ್ ಅಬ್ಬಾಸ್, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಡಿ.ನಿಶ್ಚಲ್, ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ರೋನಿತ್ ಮೋರೆ. ಕೋಚ್: ಮಾಜಿ ಆಟಗಾರ ಪಿ.ವಿ.ಶಶಿಕಾಂತ್.

Leave a Reply

Your email address will not be published. Required fields are marked *

one × 2 =

 
Back To Top