About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ರಣಜಿ ಟ್ರೋಫಿ: ಛತ್ತೀಸ್​ಗಢ ವಿರುದ್ಧ ಕರ್ನಾಟಕಕ್ಕೆ 198 ರನ್​ಗಳ ಭರ್ಜರಿ ಜಯ

ನಾಕೌಟ್ ತಲುಪಿದ ಕರ್ನಾಟಕ

ಬೆಂಗಳೂರು: ಇಲ್ಲಿನ ಆಲೂರು ಕ್ರೀಡಾಂಗಣದಲ್ಲಿ ನಡೆದ ಛತ್ತೀಸ್​​​​ಗಢ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ 198 ರನ್​ಗಳ ಭರ್ಜರಿ ಜಯ ಸಾಧಿಸಿದೆ.

355 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಛತ್ತೀಸ್​ಗಢ ಬ್ಯಾಟ್ಸ್​ಮನ್​​​ಗಳು ಶ್ರೇಯಸ್ ಗೋಪಾಲ್ ಹಾಗೂ ರೋನಿತ್ ಮೋರೆ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 156 ರನ್​ಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಕರ್ನಾಟಕ ನಾಕೌಟ್ ಹಂತಕ್ಕೆ ತಲುಪಿದೆ.

ನಿನ್ನೆ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಕಳೆದುಕೊಂಡು 113 ರನ್ ಬಾರಿಸಿದ್ದ ರಾಜ್ಯ ತಂಡಕ್ಕೆ ಇಂದು ನಾಯಕ ಮನೀಶ್ ಪಾಂಡೆ ಹಾಗೂ ಅಭಿಮನ್ಯು ಮಿಥುನ್ ರನ್​ಗತಿಯನ್ನು ಏರಿಸಿದರು. ಪಾಂಡೆ 102 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ ಅಜೇಯ 102 ರನ್ ಸಿಡಿಸಿದರೆ, ಮಿಥುನ್ ಕೇವಲ 17 ಎಸೆತಗಳಲ್ಲಿ 33 ರನ್ ಚಚ್ಚಿದರು.

7 ವಿಕೆಟ್ ಕಳೆದುಕೊಂಡು 219 ರನ್​ ಕಲೆಹಾಕಿದ್ದ ರಾಜ್ಯ ತಂಡ ಡಿಕ್ಲೇರ್ ಮಾಡಿಕೊಂಡಿತು. ಅಂತೆಯೆ 135 ರನ್​ಗಳ ಮುನ್ನಡೆಯೊಂದಿಗೆ ರಾಜ್ಯ ತಂಡ ಎದುರಾಳಿ ತಂಡಕ್ಕೆ ಗೆಲ್ಲಲು 355 ರನ್​​ಗಳ ಟಾರ್ಗೆಟ್ ನೀಡಿತು. ಛತ್ತೀಸ್​ಗಢ ಪರ ಪಂಕಜ್ ಕುಮಾರ್ 4 ವಿಕೆಟ್ ಕಿತ್ತರೆ, ಅಜಯ್ ಹಾಗೂ ಓಂಕಾರ್ ತಲಾ 1 ವಿಕೆಟ್ ಪಡೆದರು.

355 ರನ್​ಗಳ ಗುರಿ ಬೆನ್ನತ್ತಿದ ಛತ್ತೀಸ್​ಗಢ ಪರ ಆರಂಭಿಕ ಆಟಗಾರ ಅವ್​ನೀಶ್ ಧಲಿವಾಲ್ 61, ಅಮನ್​ದೀಪ್ ಖೇರ್ 35 ಹಾಗೂ ಅನುಜ್ ತಿವಾರಿ 14, ಅಶುತೋಶ್ ಸಿಂಗ್ ಅಜೇಯ 16 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ ಎರಡಂಕಿ ದಾಟಲಿಲ್ಲ. ಈ ಮೂಲಕ ಡ್ರಾ ಸಾಧಿಸುವಲ್ಲು ವಿಫಲವಾದ ಛತ್ತೀಸ್​​ಗಢ 156 ರನ್​ಗೆ ಸರ್ವಪತನ ಕಂಡಿತು. ಶ್ರೇಯಸ್ ಗೋಪಾಲ್ ಹಾಗೂ ರೋನಿತ್ ಮೋರೆ ತಲಾ 4 ವಿಕೆಟ್ ಕಿತ್ತು ಮಿಂಚಿದರೆ,ಅಭಿಮನ್ಯು ಮಿಥುನ್ 1 ವಿಕೆಟ್ ಪಡೆದರು.

198 ರನ್​ಗಳ ಗೆಲುವಿನೊಂದಿಗೆ ಕರ್ನಾಟಕ ತಂಡಕ್ಕೆ 6 ಅಂಕ ಸಂಪಾದಿಸಿದೆ. ಅಂತೆಯೆ ಒಟ್ಟು 27 ಅಂಕದೊಂದಿಗೆ ಎಲೈಟ್ ಗ್ರೂಪ್ ಎ ಮತ್ತು ಬಿ ಯಲ್ಲಿ ಎರಡನೇ ಸ್ಥಾನಕ್ಕೇರಿ ನಾಕೌಟ್ ಹಂತ ತಲುಪಿದೆ. 28 ಅಂಕ ಸಂಪಾದಿಸಿ ವಿದರ್ಭ ತಂಡ ಮೊದಲ ಸ್ಥಾನದಲ್ಲಿದೆ.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ ಮೊದಲ ಇನ್ನಿಂಗ್ಸ್​: 418/10
(ದೇಗ ನಿಶ್ಚಲ್ 107, ಕೃಷ್ಣಮೂರ್ತಿ ಸಿದ್ಧಾರ್ಥ್​ 105, ವಿನಯ್ ಕುಮಾರ್ 90*, ಪಂಕಜ್ ಕುಮಾರ್ 82/7)

ಛತ್ತೀಸ್​ಗಢ ಮೊದಲ ಇನ್ನಿಂಗ್ಸ್​: 283/10
(ಹರ್​ಪ್ರೀತ್ ಸಿಂಗ್​ 120, ಅಮನ್​ದೀಪ್​​ ಖೇರ್ 45, ರೋನಿತ್ ಮೋರೆ 48/5, ಅಭಿಮನ್ಯು ಮಿಥುನ್ 64/4)

ಕರ್ನಾಟಕ ಎರಡನೇ ಇನ್ನಿಂಗ್ಸ್​: 219/7 (ಡಿಕ್ಲೇರ್)
(ಮನೀಶ್ ಪಾಂಡೆ 102*, ಅಭಿಮನ್ಯು ಮಿಥುನ್ 33*, ಪಂಕಜ್ ಕುಮಾರ್ 67/4)

ಛತ್ತೀಸ್​ಗಢ ಎರಡನೇ ಇನ್ನಿಂಗ್ಸ್​: 156/10
(ಅವ್​ನೀಶ್ ಧಲಿವಾಲ್ 61, ಅಮನ್​ದೀಪ್​​ ಕೇರ್ 35, ರೋನಿತ್ ಮೋರೆ 35/4, ಶ್ರೇಯಸ್ ಗೋಪಾಲ್ 44/4)

ಪಂದ್ಯ ಶ್ರೇಷ್ಠ: ರೋನಿತ್ ಮೋರೆ

Tags

Related Articles

Leave a Reply

Your email address will not be published. Required fields are marked *

Language
Close