About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ರಣಜಿ: ಕರ್ನಾಟಕ 378ಕ್ಕೆ ಆಲೌಟ್; 2ನೇ ಇನ್ನಿಂಗ್ಸ್​ನಲ್ಲಿ ವಿದರ್ಭಕ್ಕೆ ಆರಂಭಿಕ ಆಘಾತ

ನಾಗ್ಪುರ: ಇಲ್ಲಿ ನಡೆಯುತ್ತಿರುವ ವಿದರ್ಭ ವಿರುದ್ಧದ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಕರ್ನಾಟದ ಎರಡನೇ ದಿನ ಉತ್ತಮ ಪ್ರದರ್ಶನ ತೋರಿದೆ. ನಿಶ್ಚಲ್ ಹಾಗೂ ಶರತ್ ಅವರ ಶತಕದ ನೆರವಿನಿಂದ ಕರ್ನಾಟಕ 378 ರನ್​ಗಳಿಗೆ ಆಲೌಟ್ ಆದರೆ, ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿದರ್ಭ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 72 ರನ್ ಕಲೆಹಾಕಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿದ್ದ ಕರ್ನಾಟಕ ತಂಡಕ್ಕೆ ಇಂದು ನಿಶ್ಚಲ್ ಹಾಗೂ ಶರತ್ ಶತಕ ಸಿಡಿಸಿ ಆಸರೆಯಾದರು. ಉತ್ತಮ ಜೊತೆಯಾಟ ಆಡಿದ ಈ ಜೋಡಿ 6ನೇ ವಿಕೆಟ್​ಗೆ 160 ರನ್​ಗಳ ಕಾಣಿಕೆ ನೀಡಿದರು. 161 ಎಸೆತಗಳಲ್ಲಿ 103 ರನ್ ಬಾರಿಸಿ ಶರತ್ ಅವರು ದೇಶೀಯ ಕ್ರಿಕೆಟ್​​ನಲ್ಲಿ ಎರಡನೇ ಶತಕ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೆ ನಿಶ್ಚಲ್ ಕೂಡ 113 ರನ್​ಗೆ ಇನ್ನಿಂಗ್ಸ್​ ಮುಗಿಸಿದರು.

ಬಳಿಕ ಬಂದ ಬ್ಯಾಟ್ಸ್​ಮನ್​ ಬೇಗನೆ ಪೆವಿಲಿಯನ್ ಹಾದಿ ಹಿಡಿದರು. ಪರಿಣಾಮ ಕರ್ನಾಟಕ 71 ರನ್​ಗಳ ಮುನ್ನಡೆಯೊಂದಿಗೆ 378 ರನ್​ಗೆ ಆಲೌಟ್ ಆಯಿತು. ನಾಯಕ ವಿನಯ್ ಕುಮಾರ್ 39 ರನ್ ಗಳಿಸಿ ಅಜೇಯರಾಗಿ ಉಳಿದರು. ವಿದರ್ಭ ಪರ ಆದಿತ್ಯ 5 ವಿಕೆಟ್ ಕಿತ್ತು ಮಿಂಚಿದರು.

ಬಳಿಕ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ವಿದರ್ಭ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತಾದರು, ವಾಸಿಂ ಜಾಫರ್(21) ಹಾಗೂ ಗಣೇಶ್ ಸತೀಶ್(24) ತಂಡಕ್ಕೆ ಚೇತರಿಕೆ ನೀಡಿದ್ದಾರೆ. ಈ ಮೂಲಕ ದಿನದಾಟದ ಅಂತ್ಯಕ್ಕೆ ವಿದರ್ಭ ತಂಡ 2 ವಿಕೆಟ್ ನಷ್ಟಕ್ಕೆ 72 ರನ್ ಬಾರಿಸಿದ್ದು, 1 ರನ್​ಗಳ ಮುನ್ನಡೆಯಲ್ಲಿದೆ

Tags

Related Articles

Leave a Reply

Your email address will not be published. Required fields are marked *

Language
Close