About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್
Trending

ಹಾಡುತ್ತಾ ಅಭಿಮಾನಿಗಳ ಮೇಲೆ ಜಿಗಿದ ರಣವೀರ್ ಸಿಂಗ್: ಹಲವರಿಗೆ ಗಾಯ (ವಿಡಿಯೊ)

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹಾಡು ಹಾಡುತ್ತಾ ಏಕಾಏಕಿ ಅಭಿಮಾನಿಗಳ ಮೇಲೆ ಹಾರಿದ್ದಾರೆ. ಇದರಿಂದ ಹಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ರಣವೀರ್ ಸಿಂಗ್ ಲ್ಯಾಕ್ಮೆ ಫ್ಯಾಶನ್ ವೀಕ್ ಕಾರ್ಯಕ್ರಮದಲ್ಲಿ ರ‍್ಯಾಂಪ್ ವಾಕ್ ಮೇಲೆ ತಮ್ಮ ‘ಗಲ್ಲಿ ಬಾಯ್’ ಚಿತ್ರದ ‘ಅಪ್‍ನಾ ಟೈಂ ಆಯೇಗಾ’ ಹಾಡನ್ನು ಹಾಡುತ್ತಾ ಏಕಾಏಕಿ ಅಭಿಮಾನಿಗಳ ಮೇಲೆ ಜಿಗಿದಿದ್ದಾರೆ. ಪರಿಣಾಮ ಹಲವು ಅಭಿಮಾನಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ರಣವೀರ್ ಅವರ ಈ ವರ್ತನೆ ನೋಡಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಣವೀರ್ ಸಿಂಗ್ ಅಭಿಮಾನಿಗಳ ಮೇಲೆ ಜಿಗಿದ ಫೊಟೊ ಮತ್ತು ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದರೆ ಇನ್ನು ಕೆಲವರು ನಿಮಗೆ ಮದುವೆಯಾಗಿದೆ. ಮಕ್ಕಳಂತೆ ಮಾಡುವುದನ್ನು ನಿಲ್ಲಿಸಿ. ನಿಮ್ಮ ಈ ವರ್ತನೆಯಿಂದ ನನ್ನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದೆಲ್ಲ ಟ್ವೀಟ್ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close