About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ನಿಖಾ ಹಲಾಲಾ, ಬಹುಪತ್ನಿತ್ವದ ವಿರೋಧಿಸಿದ್ದಕ್ಕೆ ಕೊಲೆ, ಅತ್ಯಾಚಾರದ ಬೆದರಿಕೆ

ತ್ರಿವಳಿ ತಲಾಖ್, ನಿಖಾ ಹಲಾಲಾ, ಬಹುಪತ್ನಿತ್ವದಂಥ ಅನಿಷ್ಠ ಪದ್ಧತಿಗಳಿಗೆ ನಿಷೇಧ ಹೇರುವ ಮೂಲಕ ಮುಸ್ಲಿಂ ಮಹಿಳೆಯರ ಸಮಾನತೆಯನ್ನು ರಕ್ಷಿಸಬೇಕೆಂದು ಝೈದಿ ಪ್ರತಿಪಾದುತ್ತಿರುವ ವೇಳೆ ಈ ಬೆದರಿಕೆಗಳು ಇನ್ನಷ್ಟು ಹೆಚ್ಚಾಗಿದೆ. 

ದೆಹಲಿ: ತ್ರಿವಳಿ ತಲಾಕ್‌,ನಿಖಾ ಹಲಾಲಾ ಹಾಗು ಬಹುಪತ್ನಿತ್ವವನ್ನು ವಿರೋಧಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಅಂಬೆರ್‌ ಝೈದಿಗೆ ಕೊಲೆ, ಅತ್ಯಾಚಾರದ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ.

ಮಾಧ್ಯಮವವೊಂದರ ಪ್ಯಾನೆಲ್‌ ಚರ್ಚೆ ವೇಳೆ ಝೈದಿ ತ್ರಿವಳಿ ತಲಖ್ಅನ್ನು ವಿರೋಧಿಸಿ, ಇದನ್ನು ನಿಷೇಧಿಸಲು ಮುಂದೆ ಬಂದಿರುವ ಕೇಂದ್ರ ಸರಕಾರಕ್ಕೆ ಬೆಂಬಲ ನೀಡಿದ್ದರು. ಇದೇ ಕಾರ್ಯಕ್ರಮದಲ್ಲಿ ಝೈದಿರ ಸಹಾ ಪ್ಯಾನೆಲಿಸ್ಟ್‌, ಹಿರಿಯ ವಕೀಲೆ ಫರಾ ಫೈಝ್‌ ಮೇಲೆ ಹಲ್ಲೆ ಮಾಡಲು ಮೌಲಾನಾ ಒಬ್ಬರು ಮುಂದಾಗಿದ್ದರು.

ಝೈದಿರ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಕೊಲೆ, ಅತ್ಯಾಚಾರದ ಬೆದರಿಕೆಗಳು ಸಾಮಾನ್ಯವಾಗಿ ಬರುತ್ತಿರುತ್ತವೆ. ತ್ರಿವಳಿ ತಲಾಖ್, ನಿಖಾ ಹಲಾಲಾ, ಬಹುಪತ್ನಿತ್ವದಂಥ ಅನಿಷ್ಠ ಪದ್ಧತಿಗಳಿಗೆ ನಿಷೇಧ ಹೇರುವ ಮೂಲಕ ಮುಸ್ಲಿಂ ಮಹಿಳೆಯರ ಸಮಾನತೆಯನ್ನು ರಕ್ಷಿಸಬೇಕೆಂದು ಝೈದಿ ಪ್ರತಿಪಾದುತ್ತಿರುವ ವೇಳೆ ಈ ಬೆದರಿಕೆಗಳು ಇನ್ನಷ್ಟು ಹೆಚ್ಚಾಗಿದೆ.

ಈ ಕುರಿತಾಗಿ ನೋಯ್ಡಾದ ಪೊಲಿಸ್ ಠಾಣೆಯೊಂದರಲ್ಲಿ ಝೈದಿ ದೂರು ದಾಖಲಿಸಿದ್ದಾರೆ. ತಮ್ಮ ಫೇಸ್‌ಬುಕ್‌ ಖಾತೆಯನ್ನು ಡಿಲೀಟ್ ಮಾಡಿದ್ದು, ಟ್ವಿಟರ್‌ ಹಾಗು ಇ-ಮೇಲ್‌ ಮೂಲಕ ಬೆದರಿಕೆ ಕರೆಗಳು ಇನ್ನೂ ಬರುತ್ತಲೇ ಇವೆ ಎಂದು ಝೈದಿ ಹೇಳಿದ್ದಾರೆ. ಈ ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಝೈದಿ ಆಗ್ರಹಿಸಿದ್ದಾರೆ.

ಪ್ಯಾನೆಲ್‌ ಚರ್ಚೆ ವೇಳೆ, ತ್ರಿವಳಿ ತಲಾಖ್‌ ಕುರಿತು ಕುರ್‌’ಆನ್‌ನಲ್ಲಿ ಉಲ್ಲೇಖವೇ ಇಲ್ಲ ಎಂದಿದ್ದ ವಕೀಲೆ ಫರಾ ಫೈಝ್‌ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಮೌಲಾನಾ ಎಝಾಝ್‌ ಅರ್ಶದ್‌ ಕಸ್ಮಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಸ್ಮಿಗೆ ಜಾಮೀನು ನೀಡಲು ನಿರಾಕರಿಸಲಾಗಿದೆ.

ಸಂಬಂಧಿತ ಲಿಂಕ್‌ಗಳು

https://www.vishwavani.news/maulanaslapping/

https://www.vishwavani.news/fatwaagainsttripletalaqcrusader/

https://www.vishwavani.news/congress-caters-to-muslim-men-bsp-sp-ignore-backwards-after-polls-pm-modi-spares-none-at-azamgarh-event/

Tags

Related Articles

Leave a Reply

Your email address will not be published. Required fields are marked *

Language
Close