About Us Advertise with us Be a Reporter E-Paper

Breaking Newsಪ್ರಚಲಿತ

ಶಿವಸೇನೆ ಸಂಸದರಿಗೆ ನಾಯಕರಾಗಿ ಸಂಜಯ್‌‌ ರಾವತ್‌‌ ನೇಮಕ

ದೆಹಲಿ: ಶಿವಸೇನೆಯ ನಾಯಕ ಸಂಜಯ್‌‌ ರಾವತ್‌‌ ಅವರು ಆ ಪಕ್ಷದ ರಾಜ್ಯಸಭೆ ಹಾಗೂ ಲೋಕಸಭೆಯ ಸಂಸದರ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಶಿವಸೇನೆಯ ಮುಖ್ಯಸ್ಥ ಉದ್ದವ್‌‌ ಠಾಕ್ರೆ ಅವರು ಈ ತೀರ್ಮಾನವನ್ನು ತೆಗೆದುಕೊಂಡು ರಾವತ್‌ ಅವರ ನೇಮಕಾತಿ  ಕುರಿತು ಲೋಕಸಭಾ ಸಭಾಪತಿಗಳಾದ ಸುಮಿತ್ರಾ ಮಾಹಾಜನ್‌ ಅವರಿಗೆ ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಎನ್‌ಡಿಎ ನೇತೃತ್ವದ ಸರಕಾರದ ಪ್ರಮುಖ ಮಿತ್ರ ಪಕ್ಷ ಶಿವಸೇನೆ ಲೋಕಸಭೆಯಲ್ಲಿ 16 ಹಾಗೂ ರಾಜ್ಯಸಭೆಯಲ್ಲಿ 3 ಸಂಸದರನ್ನು ಹೊಂದಿದೆ.

ಠಾಕ್ರೆ ಅವರು ಸಭಾಪತಿಗೆ ಅವರಿಗೆ ಬರೆದ ಪತ್ರದಲ್ಲಿ ಶಿವಸೇನೆಯು 18 ಲೋಕಸಭಾ ಸದಸ್ಯರಲ್ಲಿ 16 ಸಂಸದರು ಹಾಗೂ ರಾಜ್ಯಸಭೆಯಲ್ಲಿ 3 ಸದಸ್ಯರು ಹೊಂದಿದ್ದು, ಸಂಸತ್ತಿಲ್ಲಿ ರಾವತ್‌ ಅವರು ಶಿವಸೇನೆಯನ್ನು ಪ್ರತಿನಿಧಿಸಲಿದೆ ಎಂದು ಠಾಕ್ರೆ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close