Sri Ganesh Tel

ರವಿ ಮಾಮನೊಂದಿಗೆ ಪ್ರೇಮ ಗೀತೆ!

Posted In : ಸಿನಿಮಾ ಸಮಾಚಾರ

ಉದಯ ಸಿಂಗರ್ ಜೂನಿಯರ್ಸ್‌ ವೇದಿಕೆಯಲ್ಲಿ ಮಕ್ಕಳೊಂದಿಗೆ ಹಾಡುತ್ತಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಕಿರುತೆರೆಯ ಪ್ರೇಕ್ಷಕರಿಗೆ ತಮ್ಮ ಹಳೆಯ ಖದರ್ ತೋರಿಸುತ್ತಿದ್ದಾರೆ. ಕನಸುಗಾರ ರವಿಚಂದ್ರನ್ ಇದ್ದಲ್ಲಿ ಪ್ರೀತಿ, ಪ್ರೇಮ, ಪ್ರಣಯಕ್ಕೇನೂ ಕೊರತೆ ಇರುವುದಿಲ್ಲ ಎಂದು ಮತ್ತೆ ತೋರಿಸಿಕೊಡುತ್ತಿದ್ದಾರೆ. ಹೌದು, ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಉದಯ ಸಿಂಗರ್ ಜೂನೀಯರ್ಸ್‌’ ಸಂಗೀತ ಕಾರ್ಯಕ್ರಮದಲ್ಲಿ ಕನಸಿನ ರಾಣಿ ಮಾಲಾಶ್ರೀ ಕಾಣಿಸಿಕೊಂಡಿದ್ದರು.

ಈ ವಾರ ಮತ್ತೊಬ್ಬ ರಾಣಿಯ ಪ್ರವೇಶವಾಗಿದೆ. ಕನಸುಗಾರನ ಜತೆ ‘ಎಲ್ಲೋ ಅದು ಎಲ್ಲೋ..’ ಎಂದು ಹಾಡುತ್ತ ಹೆಜ್ಜೆ ಹಾಕಿದ್ದಾರೆ ಕೊಡಗಿನ ಬೆಡಗಿ ಪ್ರೇಮಾ. 17 ವರ್ಷಗಳ ಬಳಿಕ ಮತ್ತೊಮ್ಮೆ ರವಿ-ಪ್ರೇಮ ಜೋಡಿಯನ್ನು ತೆರೆಯ ಮೇಲೆ ನೋಡುವ ಭಾಗ್ಯ ಪ್ರೇಕ್ಷಕರಿಗೆ ಸಿಗಲಿದೆ. ‘ನಮ್ಮಿಬ್ಬರ ಜೋಡಿಯ ಹಲವು ಯುಗಳ ಗೀತೆಗಳು ಅದೃಷ್ಟ ತಂದಿದೆ. ಅಭಿನಯವೂ ಸೂಪರ್ ಹಿಟ್’ ಎಂದು ಕ್ರೇಜಿ ಸ್ಟಾರ್ ಇದೇ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಸಿಂಗರ್ ವೇದಿಕೆಯಲ್ಲಿ ಪ್ರೇಮಾ ‘ಬಾಳ ಬಂಗಾರ ನೀನು..’ ಹಾಡನ್ನು ಹೇಳಿ ರಂಜಿಸಿದರು. ಕನಸುಗಾರನ ಪ್ರೇಮ ಗೀತೆಯ ವಿಶೇಷ ಇದೇ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.

 

Leave a Reply

Your email address will not be published. Required fields are marked *

seventeen + seven =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top