About Us Advertise with us Be a Reporter E-Paper

Breaking Newsದೇಶಪ್ರಚಲಿತ

ಶೇ. 0.25 ರಿಪೋ ದರ ಹೆಚ್ಚಿಸಿದ ಆರ್‌ಬಿಐ

ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ತನ್ನ ರಿಪೋ ದರವನ್ನು 0.25ರಷ್ಟು ಹೆಚ್ಚಳ ಮಾಡಿದ್ದು, ಇದರಿಂದಾಗಿ ಗೃಹ ಸಾಲ ಸೇರಿದಂತೆ ಇತರೆ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಾಗಲಿದೆ. ಈವರೆಗೂ ಶೇ.6.25ರಷ್ಟಿದ್ದ ರೆಪೋ ದರ ಈಗ ಶೇ.6.50 ಗೆ ಹೆಚ್ಚಾಗಿದೆ. ಇದೇ ರೀತಿ ರಿವರ್ಸ್ ರಿಪೋ ದರವನ್ನು ಶೇ.6ರಿಂದ ಶೇ.6.25ಕ್ಕೆೆ ಹೆಚ್ಚಿಸಿದೆ.

ಹಣಕಾಸು ನೀತಿ ಪರಾಮರ್ಶೆ ಸಮಿತಿಯ (ಎಂಪಿಸಿ) ಆರು ಸದಸ್ಯರ ಪೈಕಿ ಐವರು ರಿಪೋ ಮತ್ತು ರಿವರ್ಸ್ ರಿಪೋ ದರ ಏರಿಕೆ ಪ್ರಸ್ತಾವದ ಪರವಾಗಿ ಮತ ಹಾಕಿದರು. ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಆರ್‌ಬಿಐ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಪ್ರಗತಿಯ ನಡುವೆ ಸಂತುಲನೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರಕ್ಕೆೆ ಬರಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

2013ರ ಅಕ್ಟೋಬರ್ ಬಳಿಕ ಇದೇ ಮೊದಲ ಬಾರಿಗೆ ಆರ್‌ಬಿಐ ಎರಡು ದ್ವೈಮಾಸಿಕದಲ್ಲಿ ಸತತವಾಗಿ ರೆಪೋ ದರವನ್ನು ಏರಿಕೆ ಮಾಡಿದ್ದು, ಗಮನ ಸೆಳೆದಿದೆ. ಈ ನಿರ್ಧಾರದೊಂದಿಗೆ ಆರ್‌ಬಿಐ ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗಿನ ಜಿಡಿಪಿ ಬೆಳವಣಿಗೆ ಪ್ರಮಾಣ ಶೇ.7.5- ಶೇ.7.6ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಪ್ರಸಕ್ತ ಸಾಲಿನ ಜೂನ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.5ಕ್ಕೆೆ ತಲುಪಿತ್ತು. ಆರ್‌ಬಿಐ ಮಧ್ಯಮಾವಧಿಗೆ ಮಾಡಿದ್ದ ಶೇ.4ರ ಹಣದುಬ್ಬರ ಪ್ರಮಾಣ ಅಂದಾಜನ್ನು ಮೀರಿ ನಿರಂತರವಾಗಿ ಎಂಟನೇ ತಿಂಗಳಲ್ಲೂ ಏರಿಕೆ ಕಂಡಿತ್ತು.

Tags

Related Articles

Leave a Reply

Your email address will not be published. Required fields are marked *

Language
Close