About Us Advertise with us Be a Reporter E-Paper

ಅಂಕಣಗಳು

ನಾಡು ಒಡೆವ ಮಾತಿಗೆ ಮುನ್ನ ಇತಿಹಾಸ ಓದಿ

ಏಕೀಕರಣ: ಪ್ರಕಾಶ.ಎಸ್.ಶೇಟ್ ಹುಬ್ಬಳ್ಳಿ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಗಾದೆ ಮಾತು ಇದೀಗ ಮತ್ತೆ ಮತ್ತೆ ನೆನಪಾಗುತ್ತಿದೆ. ಅಖಂಡ ಕರ್ನಾಟಕದ ಕನು ಕಾಣುತ್ತಿರುವಾಗಲೇ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಕೆಲವರು  ಕರ್ನಾಟಕ ಕಟ್ಟಿ ಬೆಳೆಸಲು ಆ ಮಂದಿ ಅದೆಷ್ಟು ಕಷ್ಟ ಪಟ್ಟಿದ್ದಾರೆಂಬುದು ಬಹುಶಃ ಇತಿಹಾಸ ಓದಿದ್ದರೆ ತಿಳಿಯುತ್ತಿತ್ತು. ಆದರೆ ಇದರ ಖಬರೇ ಇರದವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕರ್ನಾಟಕಕ್ಕೆ ಕತ್ತರಿ ಹಾಕಲು ಹೊರಟಿದ್ದಾರೆ. ಹಿಂದೆ ಮುಂದೆ ಯೋಚಿಸದೇ ಹಿರಿಯರು ಕಟ್ಟಿ ಬೆಳೆಸಿದ ನಾಡನ್ನು ಕ್ಷಣಾರ್ಧದಲ್ಲಿ ತುಂಡರಿಸಲು ಹೊರಟಿದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ ಮೈಸೂರು ರಾಜ್ಯ, ಬಳಿಕ ಕರ್ನಾಟಕವಾಗಲು ಹೋರಾಡಿದವರು ಇದೇ ಉತ್ತರ ಕರ್ನಾಟಕ ನೆಲದವರೇ. ಅವರಲ್ಲಿ ದೂರದೃಷ್ಟಿತ್ವವಿತ್ತು. ಮನಸ್ಸು ಮಾಡಿದ್ದರೆ ಆಗಲೇ  ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿಕೊಂಡು ಇರಬಹುದಿತ್ತು. ಆದರೆ ಕನ್ನಡಿಗರು ಭದ್ರವಾಗಿರಬೇಕು, ಸಮಗ್ರ ಅಭಿವೃದ್ಧಿಗೆ ಅಖಂಡ ಕರ್ನಾಟಕವೇ ರಚನೆಯಾಗಬೇಕೆಂದು ಹಿರಿ ತಲೆಗಳು ಬಡಿದಾಡಿದ್ದವು. ಕರುನಾಡು ಹೀಗೇ ಇರಬೇಕೆಂದು ಅವರು ಸ್ಪಷ್ಟ ಕಲ್ಪನೆ ಹೊಂದಿದ್ದರು. ಹೀಗಾಗಿ ಮನೆ-ಮಠ ತ್ಯಜಿಸಿ ನಾಡು ಕಟ್ಟಲು ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹಿರಿಯರ ಪರಿಶ್ರಮದ ಫಲವಾಗಿ ಸುಂದರ ಕರುನಾಡು ಕಣ್ಮುಂದೆ ವಿಜ್ರಂಭಿಸುತ್ತಿದೆ.

ಆದರೆ ಇತಿಹಾಸ ಓದದವರು, ಕನ್ನಡ ಕಟ್ಟಿ ಬೆಳೆಸಿದವರ  ಒಂದಿಷ್ಟೂ ಖಬರ್ ಇಲ್ಲದವರು ನಾಡು ಇಬ್ಭಾಗ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಉಮೇಶ ಕತ್ತಿ, ಶ್ರೀರಾಮುಲು, ಎ.ಎಸ್. ಪಾಟೀಲ ನಡಹಳ್ಳಿ ಸೇರಿದಂತೆ ಕೆಲವರು ತಾವೇ ಕರುನಾಡಿಗೆ ಗೌಡರು ಎನ್ನುವಂತೆ ವರ್ತಿಸುತ್ತಿದ್ದಾರೆ. ನಾಡು ಕಡಿದು ಬಿಸಾಕಿ ಎನ್ನುತ್ತಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯಾಗಿಲ್ಲ ಎನ್ನುವ ಇವರೆಲ್ಲರ ಆಕ್ರೋಶದ ಮಾತುಗಳನ್ನು ಒಪ್ಪಿಕೊಳ್ಳೋಣ. ಹಾಗಂತ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿದ ಕೂಡಲೇ ಉತ್ತರ ಕರ್ನಾಟಕ ಅಭಿವೃದ್ಧಿ ಕಂಡೇ ಬಿಡುತ್ತದೆಯೇ? ಉಮೇಶ ಕತ್ತಿ  ಎಂಟು ಬಾರಿ ಶಾಸಕನಾಗಿ ನನ್ನ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ, ಹೀಗಾಗಿ ಪ್ರತ್ಯೇಕತೆಯ ಮಾತನ್ನಾಡುತ್ತಿದ್ದೇನೆ’ ಎನ್ನುತ್ತಿದ್ದಾರೆ. ಉಮೇಶ ಕತ್ತಿಯವರು ಎಂಟು ಅವಧಿಗೆ ಶಾಸಕರಾಗಿದ್ದಾರಲ್ಲ ಹಾಗಿದ್ದರೆ, ಅವರು ಕ್ಷೇತ್ರಕ್ಕೆ ತಂದುಕೊಟ್ಟ ಅನುದಾನವೆಷ್ಟು? ಮಾಡಿದ ಅಭಿವೃದ್ಧಿ ಎನು? ಎನ್ನುವ ಲೆಕ್ಕ ಕೊಡಬೇಕಲ್ಲವೇ. ಎಂಟು ಬಾರಿ ಶಾಸಕರಾಗಿಯೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎನ್ನುವುದಾದರೆ ಇದಕ್ಕೆ ಯಾರು ಹೊಣೆ? ಕತ್ತಿಯೋ? ಅಥವಾ ಮೈಸೂರು ಪ್ರಾಂತ್ಯದವರೋ? ಎನ್ನುವುದನ್ನು ಅವರೇ ಸಾಕ್ಷಿ ಸಮೇತ ವಿವರಿಸಬೇಕಲ್ಲವೇ?

ಉತ್ತರ ಕರ್ನಾಟಕದ  ಒತ್ತು ನೀಡಿಲ್ಲ ಎನ್ನುವ ಈ ಭಾದ ಜನಪ್ರತಿನಿಧಿಗಳು, ಆಳುವ ಸರಕಾರದ ಮೇಲೆ ಒತ್ತಡ, ಪ್ರಭಾವ ಬೀರಿ ಯೋಜನೆ ತರಬಹುದಿತ್ತಲ್ಲ. ಹಣಕಾಸು ನೆರವು ಪಡೆಯಬಹುದಿತ್ತಲ್ಲ. ಅದೆಷ್ಟು ಮಂದಿ ಶಾಸಕರು, ಸಚಿವರು ವಿಧಾನಸೌಧದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಧರಣಿ ಕುಳಿತಿದ್ದಾರೆ? ಮೂಗು ಹಿಡಿದಾಗಲೇ ಬಾಯಿ ತೆರೆಯುವುದು ಎನ್ನುವುದು ವಾಸ್ತವ. ಈ ವಾಸ್ತವ ಗೊತ್ತಿರುವ ಇಲ್ಲಿನ ಜನಪ್ರತಿನಿಧಿಗಳು ಸರಕಾರದ ಮೂಗು ಹಿಡಿದಿದ್ದಾರೆ? ತಾವು ಮಾಡಿದ ತಪ್ಪನ್ನು ಮರೆ ಮಾಚಲು ಇದೀಗ ಉತ್ತರ  ಆದ್ಯತೆ ನೀಡಿಲ್ಲ, ಇಬ್ಭಾಗ ಮಾಡಿ ಎನ್ನುತ್ತಿದ್ದಾರೆ. ಇವರದ್ದು ಪ್ರತ್ಯೇಕ ರಾಜ್ಯ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳಬೇಕೆಂಬ ದೂರಾಲೋಚನೆಯೇ ವಿನಾ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಇವರು ತೋರುತ್ತಿರುವ ನೈಜ ಕಾಳಜಿಯಂತೂ ಅಲ್ಲವೇ ಅಲ್ಲವೇ ಎನ್ನುವುದು ವಾಸ್ತವ.

ಅಷ್ಟಕ್ಕೂ ರಾಜ್ಯ ಹೋಳು ಮಾಡುತ್ತೇವೆಂದು ಗರ್ಜಿಸುತ್ತಿರುವ ಇಂಥವರು ನಾಡು ಹುಟ್ಟಿದ ಕಥೆಯನ್ನು, ಅದರಲ್ಲೂ ಕರುನಾಡು ಕಟ್ಟಲು ಉತ್ತರ ಕರ್ನಾಟಕದ ಯಾವೆಲ್ಲಾ ನಾಯಕರು, ಏನೆಲ್ಲಾ ಪರಿಶ್ರಮ ಪಟ್ಟಿದ್ದಾರೆನ್ನುವುದನ್ನು ತಿಳಿಯಲೇಬೇಕು. ಇವರು ಕನ್ನಡ ನಾಡು ಒಡೆಯುವ  ಬ್ರಿಟಿಷ್ ಅಧಿಕಾರಿಯೊಬ್ಬರು ಕನ್ನಡ ಪ್ರದೇಶಗಳನ್ನು ಒಂದೇ ಪ್ರಭುತ್ವಕ್ಕೆ ಒಳಪಡಿಸಬೇಕೆಂದು ಕನಸು ಕಂಡಿದ್ದರು. 1825ರಲ್ಲಿ ಧಾರವಾಡ ಜಿಲ್ಲೆಯ ಕಲೆಕ್ಟರ್ ಆಗಿದ್ದ ಮುನ್ರೋ ಕರುನಾಡಿನ ಕನಸು ಕಂಡಿದ್ದ. ಅಂಥ ಕಲ್ಪನೆ, ಕನಸ್ಸು ನಮ್ಮವರಿಗೆ ಕಾಣುತ್ತಿಲ್ಲವಲ್ಲ ಎನ್ನುವುದು ದುರಂತ.

ಕನ್ನಡಿರ ಮೇಲೆ ಪರಭಾಷಿಗರ ಆಕ್ರಮಣ ಹೆಚ್ಚುತ್ತಾ ಹೋದಾಗ ಕನ್ನಡಿಗರಿಲ್ಲರೂ ಒಂದಾಗಬೇಕೆಂದು ಹೋರಾಟದ ಬೀಜ ಮೊಳಕೆಯೊಡೆಯಿತು. ಆಲೂರು ವೆಂಕಟರಾಯರು, ಸಕ್ಕರಿ ಬಾಳಾಚಾರ್ಯರು ಕರ್ನಾಟಕ ಎನ್ನುವ ಪದವನ್ನು ಮೊಟ್ಟ ಮೊದಲು ಬಳಕೆ ಮಾಡಿದರು. 1890ರಲ್ಲಿ ಕನ್ನಡ  ನುಡಿ ರಕ್ಷಣೆಗಾಗಿ ಧಾರವಾಡದಲ್ಲಿ ರಾ.ಹ.ದೇಶಪಾಂಡೆಯವರು ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟು ಹಾಕಿದರು.

1916ರಲ್ಲಿ ಕರ್ನಾಟಕ ಸಭಾ ರಚನೆಯಾಗಿ ಧಾರವಾಡದಲ್ಲಿ ಕರ್ನಾಟಕ ಏಕೀಕರಣದ ದನಿ ಬಲಗೊಂಡಿತು. 1919ರಲ್ಲಿ ಧಾರವಾಡದಲ್ಲಿ ಕರ್ನಾಟಕ ಏಕೀಕರಣದ ಸಭೆ ನಡೆದು, ಕರ್ನಾಟಕ ರಚನೆಯಾಗಬೇಕೆಂಬ ಐತಿಹಾಸಿಕ ಗೊತ್ತುವಳಿ ಮಂಡಿಸಲಾಯಿತು. ಕಡಪಾ ರಾಘವೇಂದ್ರರಾಯರು, ಮುದವೀಡು ಕೃಷ್ಣರಾಯರು ಗರ್ಜಿಸುತ್ತಲೇ ಆಗ ಮುಂಚೂಣಿಯಲ್ಲಿದ್ದರು.

1946ರಲ್ಲಿ ದಾವಣಗೆರೆಯಲ್ಲಿ ಅಖಿಲ ಕನ್ನಡಿಗರ ಪ್ರಥಮ ಮಹಾಮೇಳ ಆಯೋಜಿಸಲಾಗಿತ್ತು. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಕರ್ನಾಟಕ ರಚನೆಗೆ ದನಿಗೂಡಿಸಿದರು.  ಪುನಃ ದಾವಣಗೆರೆಯಲ್ಲಿ ಆಯೋಜಿಸಿದ್ದ ಕನ್ನಡ ಯುವಜನರ ಮಹಾಮೇಳದಲ್ಲಿ ಎಂ.ಬಿ. ಬೂದಿಹಾಳ, ಪಾಟೀಲ ಪುಟ್ಟಪ್ಪ, ವಿ.ಆರ್.ಪಾಟೀಲ, ಹಾರನಹಳ್ಳಿ ರಾಮಸ್ವಾಮಿ, ಖಾದ್ರಿ ಶ್ಯಾಮಣ್ಣ, ಕೋ.ಚೆನ್ನಬಸಪ್ಪ ಮತ್ತಿತರರು ಕರ್ನಾಟಕ ರಚನೆಯಾಗಬೇಕೆಂದು ಪ್ರತಿಪಾದಿಸಿದರು. ಈ ಹೋರಾಟಕ್ಕೆ ದಾತಾ ಬಳವಂತರಾವ್, ವೆಂಕಟೇಶ ಮಾಗಡಿ, ಮಂಗಳವೇಡೆ ಶ್ರೀನಿವಾಸರಾವ್, ಬೆಳಗಾವಿಯ ರಾಮಚಂದ್ರರಾವ್, ಕೃಷ್ಣಕುಮಾರ ಕಲ್ಲೂರ ಕೈಜೋಡಿಸಿದರು.

ಕರ್ನಾಟಕ ಏಕೀಕರಣ ಹೋರಾಟಕ್ಕೆ ನಿಜವಾದ ತಿರುವು ಸಿ

ಕ್ಕಿದ್ದು, ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಶಂಕರಗೌಡರಿಂದ. ಕರ್ನಾಟಕ ಏಕೀಕರಣವಾಗಬೇಕೆಂದು ಒತ್ತಾಯಿಸಿ 23  ಉಪವಾಸ ಸತ್ಯಾಗ್ರಹ ನಡೆಸಿದರು. ಆಗಿನ ಹೋರಾಟಕ್ಕೆ 20 ಸಾವಿರ ಮಂದಿ ಕೂಡಿದ್ದರು. ಈ ಸುದ್ದಿ ಭಾರತದ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ನ್ಯೂಯಾರ್ಕ್ ಟೈಮ್‌ಸ್  ಪತ್ರಿಕೆಯಲ್ಲಿಯೂ ಸುದ್ದಿ ಪ್ರಕಟಗೊಳ್ಳುವ ಮೂಲಕ ಹೋರಾಟ ವಿಶ್ವವ್ಯಾಪಿ ಗಮನ ಸೆಳೆಯಿತು. ಆಗ ಹುಬ್ಬಳ್ಳಿಯಲ್ಲಿ ಗೋಲಿಬಾರ್ ಸಹ ನಡೆಯಿತು. ಇದರ ಬೆನ್ನಲ್ಲೇ ಬಳ್ಳಾರಿಯಲ್ಲಿ ನಡೆದ ಗೋಲಿಬಾರ್‌ನಲ್ಲಿ ಅಬ್ದುಲ್ ರಝಾಕ್ ಎಂಬಾತ ಪ್ರಾಣ ಕಳೆದುಕೊಂಡ ಶಂಕರಗೌಡರ ಉಪವಾಸದ ಬಿಸಿ ಕೇಂದ್ರ ಸರಕಾರಕ್ಕೆ ತಟ್ಟಿತು, ಪರಿಣಾಮ ಭಾಷಾನ್ವಯ ಪ್ರಾಂತಗಳ  ತ್ರಿಸದಸ್ಯರ ಆಯೋಗ ನೇಮಿಸಿತು.

ಆದರೂ ಹೋರಾಟ ನಿಲ್ಲಲಿಲ್ಲ. ನಿಜಲಿಂಗಪ್ಪನವರು ಹೋರಾಟದಲ್ಲಿ ತೊಡಗಿಸಿಕೊಂಡರು. ಉತ್ತರ ಕರ್ನಾಟಕದ ಮಂದಿ ಕರ್ನಾಟಕಕ್ಕೆ ಕಟ್ಟಲು ಹೊರಟಿದ್ದಾರೆಂದು ಮಂಡ್ಯ, ಮೈಸೂರಿಗೆ ಸಭೆಗೆ ನಿಜಲಿಂಗಪ್ಪ ಹೋದರೆ ಅವರ ಮೇಲೆ ಕಲ್ಲು ತೂರಲಾಯಿತು. ಆದರೂ ಹೋರಾಟ ನಿಲ್ಲಲಿಲ್ಲ. ಕರ್ನಾಟಕದ ಪರವಾಗಿ ಕೆಂಗಲ್ ಹನುಮಂತಯ್ಯ, ಅ.ನ.ಕೃಷ್ಣರಾಯ, ಶಿವಮೂರ್ತಿಶಾಸ್ತ್ರಿ, ಆರ್.ಎಸ್.ಆರಾಧ್ಯ, ಬಳ್ಳಾರಿ ಸಿದ್ದಮ್ಮ, ಖಾದ್ರಿ ಶ್ಯಾಮಣ್ಣ, ಹಾರನಹಳ್ಳಿ ರಾಮಸ್ವಾಮಿ, ಗ.ಸ. ಹಾಲಪ್ಪ, ಶಾಂತವೇರಿ ಗೋಪಾಲಗೌಡ, ಗಾಂಜಿ ವೀರಪ್ಪ, ಮಲ್ಲಿಕಾರ್ಜುನಗೌಡ ಹೋರಾಟದಲ್ಲಿ ಧುಮುಕಿದರು.  ಮಧ್ಯೆ ಕರ್ನಾಟಕ ಏಕೀಕರಣದ ಬಗ್ಗೆ ಧಾರವಾಡದಲ್ಲಿ ಮಳಿಯೆ ಗೋವರ್ಧನರಾವ್, ಬೆಳಗಾಂವಕರ, ರಾಮಚಂದ್ರರಾವ್, ಬಿ.ಸು. ಪಾಟೀಲ, ಎಂ.ಎಸ್ ಕೇಸರಿ ಹೋರಾಟ ಮುಂದುವರಿಸಿದ್ದರು.

ಅ.ನ. ಕೃಷ್ಣರಾಯರು ಉತ್ತರ ಕರ್ನಾಟಕದಾದ್ಯಂತ ಸಂಚರಿಸಿ ನಾಡು ಕಟ್ಟುವ ಮನಸ್ಸುಗಳನ್ನು ಒಗ್ಗೂಡಿಸಿದರು. ವಿಜಯಪುರದ ಮುರಿಗೆಪ್ಪ ಸುಗಂಧಿ, ರಾಜಾರಾಮ ದುಬೈ, ಬಾಗಲಕೋಟೆಯ ಎಸ್.ಆರ್. ಕಂಠಿ, ಕೀರ್ತನ ಕೇಸರಿ ಶಿವಮೂರ್ತಿ ಶಾಸ್ತ್ರಿಗಳು ಏಕೀಕರಣದ ವಿಚಾರ ಬಿತ್ತಿದರು. ಕಾರವಾರದ ಸ.ಪ. ಗಾಂವಕರ, ದಿನಕರ ದೇಸಾಯಿ, ತಿಮ್ಮಪ್ಪ ನಾಯಕ, ನಿಜಾಮ ರಾಜ್ಯದಲ್ಲಿದ್ದ ಸರದಾರ  ಅಳವಂಡಿ ಸ್ವಾಮಿಗಳು, ಕೊಪ್ಪಳದ ಅ

ಡಿ ಸಂಗಣ್ಣ, ರಾಯಚೂರಿನ ಪ್ರಾಣೇಶಾಚಾರ್ಯರು, ಹೊಸಪೇಟೆಯ ಆರ್. ನಾಗನಗೌಡರು, ಬೂದಿಹಾಳ ಅನಂತಾಚಾರ್ಯರು ಕರ್ನಾಟಕ ಏಕೀಕರಣಕ್ಕೆ ಶಕ್ತಿ ತುಂಬಿದರು. ಧಾರವಾಡದ ಮೃತ್ಯುಂಜಯ ಮಹಾಸ್ವಾಮಿಗಳೂ ಕರ್ನಾಟಕ ಏಕೀಕರಣಕ್ಕೆ ಕೈಜೋಡಿಸಿದರು. ಅಂದಾನೆಪ್ಪ ದೊಡ್ಡಮೇಟಿ ಹಾಗೂ ಹಳ್ಳಿಕೇರಿ ಗುದ್ಲೆಪ್ಪ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಇಷ್ಟಾಗಿಯೂ ಮೈಸೂರು ಭಾಗದವರಿಗೆ ಕರ್ನಾಟಕ ರಚನೆಯಾಗುವ ಆಸಕ್ತಿ ಇರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರರ ಮೈಸೂರೇ ಸಾಕು ಎನ್ನುತ್ತಿದ್ದರು. ಆದರೂ ಉತ್ತರ ಕರ್ನಾಟಕ ಈ ಎಲ್ಲ  ನಾಡು ಕಟ್ಟೇ ತೀರುತ್ತೇವೆಂದು ಪಣತೊಟ್ಟರು. ಹೋರಾಟ ನಿಲ್ಲಲಿಲ್ಲ. 1954ರಲ್ಲಿ ಪ್ರದೇಶ ಕಾಂಗ್ರೆಸ್ ಏಕೀಕರಣಕ್ಕಾಗಿ ಒತ್ತಾಯಪಡಿಸಲು ಒಂದು ನಿಯೋಗವನ್ನು ಕಳುಹಿಸಬೇಕೆಂದು ನಿರ್ಧರಿಸಲಾಗಿತ್ತು. ಆದರೆ ದಿಲ್ಲಿಗೆ ನಿಯೋಗ ಕಳುಹಿಸಲು ಪ್ರದೇಶ ಕಾಂಗ್ರೆಸ್ಸಿನಲ್ಲಿ ಹಣದ ಅನುಕೂಲ ಇರಲಿಲ್ಲ. ಆಗ ಗದಗಿನ ಬಸರಿಗಿಡದ ವೀರಪ್ಪನವರ ಬಳಿ ಕಾಂಗ್ರೆಸ್ಸಿಗರು ದಿಲ್ಲಿಗೆ ನಿಯೋಗ ಒಯ್ಯಲು ಹಣಕಾಸಿನ ನೆರವು ಕೋರಿದರು. ಆಗ ವೀರಪ್ಪನವರ ಮನೆಯ ಹೆಣ್ಣು ಮಕ್ಕಳ ಆಭರಣಗಳನ್ನು ಒತ್ತೆಯಿಟ್ಟು 25 ಸಾವಿರ ರು. ತಂದು ಕಾಂಗ್ರೆಸ್ ನಾಯಕರಿಗೆ  ಇಂಥ ತ್ಯಾಗ, ಬಲಿದಾನದ ಫಲವಾಗಿ ಕನ್ನಡ ರಾಜ್ಯವು ‘ಮೈಸೂರು’ ಎಂಬ ಹೆಸರನ್ನು ಪಡೆದು 1 ನವೆಂಬರ್ 1956ರಲ್ಲಿ ಉದಯಿಸಿತು. ಇದು ಅನೇಕರಿಗೆ ಸರಿಬರಲಿಲ್ಲ. ಕರ್ನಾಟಕದ ಕನಸ್ಸು ಅಪೂರ್ಣವಾಗಿತ್ತು. ಪುನಃ ಕರ್ನಾಟಕ ಎಂಬ ಹೆಸರಿಗೆ ಇದೇ ಪಾಟೀಲ ಪುಟ್ಟಪ್ಪ, ಕಡಪಾ ರಾಘವೇಂದ್ರರಾಯರು, ಗದಿಗೆಪ್ಪ ಹೊನ್ನಾಪೂರಮಠ, ಮಂಗಳವೇಡಿಯ ಶ್ರೀನಿವಾಸರಾಯರು, ಕಂಬಳಿ ಸಿದ್ದಪ್ಪ, ಹೊಸಮನಿ ಸಿದ್ದಪ್ಪ, ಬೀದರಿನ ಪ್ರಭುರಾವಜೀಯವರು, ಬೆನಗ… ಶಿವರಾಯರು, ಮುದವೀಡು ಕೃಷ್ಣರಾಯರು, ಜಂಗೀನ ಮುರಿಗೈಯನವರು, ಹರ್ಡೇಕರ ಮಂಜಪ್ಪನವರು, ಅಂದಾನೆಪ್ಪ ದೊಡ್ಡಮೇಟಿ  ಹೋರಾಟದ ಫಲವಾಗಿ 1973 ನವೆಂಬರ್ 1ರಂದು ಕರ್ನಾಟಕವೆಂದು ನಾಮಕರಣವಾಯಿತು. ಗಮನಾರ್ಹ ಸಂಗತಿಯೆಂದರೆ ಮೈಸೂರು ರಾಜ್ಯ ಸ್ಥಾಪನೆಯಾಗಲು, ನಂತರ ದಿನಗಳಲ್ಲಿ ಕರ್ನಾಟಕವೆಂದು ಮರು ನಾಮಕರಣವಾಗಲು ಹೋರಾಡಿದ ಕನ್ನಡ ಮನಸ್ಸುಗಳ ಪೈಕಿ ಬಹುಪಾಲು ಮಂದಿ ಉತ್ತರ ಕರ್ನಾಟಕದವರೇ. ಇಂಥ ಮಹನೀಯರು ಕಟ್ಟಿದ ನಾಡನ್ನು ಇಬ್ಭಾಗ ಮಾಡುವ ಮಾತುಗಳನ್ನಾಡುತ್ತಿದ್ದಾರಲ್ಲ ಇವರು, ಈ ಇತಿಹಾಸ ಅರಿತುಕೊಳ್ಳಬೇಕು. ಇನ್ನಾದರೂ ನಾಡು ಒಡೆಯುವ ಮಾತು ನಿಲ್ಲಸಬೇಕು. ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯಲ್ಲಿ ಆದ್ಯತೆ ಸಿಕ್ಕಿಲ್ಲವೆಂದರೆ ಅದಕ್ಕಾಗಿ ಹೋರಾಡಬೇಕೇ ವಿನಃ  ಒಡೆಯುವ ಮಾತು ಸಾಧುವಲ್ಲ.

Tags

Related Articles

Leave a Reply

Your email address will not be published. Required fields are marked *

Language
Close