ವಿಶ್ವವಾಣಿ

ಡಬ್ಬಿಂಗ್ ಬಗ್ಗೆ ಮಾತಾಡೋಕು ಮೊದಲು ಇಲ್ನೋಡಿ..!

ಡಬ್ಬಿಂಗ್ ಬೇಕು.. ಬೇಡ.. ಡಬ್ಬಿಂಗ್ ಇದ್ರೆ ಕನ್ನಡ ಚಿತ್ರರಂಗಕ್ಕೆ ತೊಂದರೆ. ಡಬ್ಬಿಂಗ್ ಇಲ್ಲ ಎಂದ್ರೆ ಕನ್ನಡ ಎಲ್ಲರಿಗೂ ತಿಳಿಯೋದೇ ಇಲ್ಲ, ಕನ್ನಡ ಬೆಳೆಯಬೇಕು ಎಂದರೆ ಡಬ್ಬಿಂಗ್ ಬೇಕು.. ಅಬ್ಬಾ ಒಂದೇ ಎರಡೇ.. ಡಬ್ಬಿಂಗ್ ವಾದ-ವಿವಾದ..

ಈಗ ಈ ಎಲ್ಲ ವಾದಕ್ಕೂ ಒಂದು ತೆರೆ ಬಿದ್ದಂತೆ ಕಾಣುತ್ತಿದೆ. ಮೊನ್ನೆ ಶುಕ್ರವಾರ ತಾನೆ ತಮಿಳಿನ ‘ವಿವೇಗಂ’ ಕನ್ನಡಕ್ಕೆ ಡಬ್ ಆಗಿ ’ಕಮಾಂಡೊ’ ಆಗಿ ಬಂದಿತ್ತು. ಈಗ ಇದರ ಬೆನ್ನಲ್ಲೆ ಇನ್ನೊಂದು ಸ್ಪೋಟ ಸ್ಯಾಂಡಲ್‌ವುಡ್‌ನಲ್ಲಿ ನಡೆದೋಗಿದೆ. ಏನದು ಅಂತೀರಾ? ಮುಂದೆ ಓದಿ…

ಭಾರತದ ಸ್ಪರ್ಧಾತ್ಮಕ ಆಯೋಗವು ಡಬ್ಬಿಂಗ್ ವಿರೋಧಿಸಿ ನಿಂತವರಿಗೆಲ್ಲಾ ದಂಡ ವಿಧಿಸಿದೆ. ಡಬ್ಬಿಂಗ್‌ಗೆ ಕಾನೂನಿನಲ್ಲಿ ಅವಕಾಶವಿದ್ದರೂ ಸಹ ವಿರೋಧಿಸಿರುವುದಕ್ಕೆ ಭಾರಿ ಮೊತ್ತದ ದಂಡವನ್ನು ವಿಧಿಸಲಾಗಿದೆ.ಸಿನಿಮಾ ವಾಣಿಜ್ಯ ಮಂಡಳಿಗೆ 9,72,943 ರೂಪಾಯಿ, ಜಗ್ಗೇಶ್‌ಗೆ 2,71,286 ರೂ., ರಾಜ್ ಕುಮಾರ್ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್‌ಗೆ 15,211 ರೂಪಾಯಿ ದಂಡ ವಿಧಿಸಲಾಗಿದೆ. ಅದಲ್ಲದೇ ಡಬ್ಬಿಂಗ್ ಬೇಡ ಎಂದು ಡಿಫ್‌ರೆಂಟ್ ಆಗಿ ವಾಟಾಳ್ ನಾಗರಾಜ್‌ಗೂ ಸಹ ದಂಡ ವಿಧಿಸಲಾಗಿದೆ.

ಕನ್ನಡ ಒಕ್ಕೂಟಕ್ಕೂ ಸಹ ದಂಡ ವಿಧಿಸಲಾಗಿದೆ ಎನ್ನಲಾಗಿದೆ. ಕನ್ನಡ ಚಿತ್ರರಂಗಕ್ಕಾಗಿ ಹೋರಾಟ ಮಾಡಿ ಮೈಮೇಲೆ ದಂಡ ಎಳೆದುಕೊಂಡಂತಾಗಿದೆ ಸೆಲೆಬ್ರಿಟಿಗಳ ಪರಿಸ್ಥಿತಿ. ನೀವು ಕೂಡ ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡಿದ್ರೆ ದಂಡ ಕಟ್ಟಬೇಕಾದೀತು ಹುಷಾರ್..!