ಓದುವವರ ಸಮಯ

Posted In : ವಿರಾಮ

ಹೊರಗೆ ಧೋ… ಎಂದು ಮಳೆ ಸುರಿಯುತ್ತಿರುವಾಗ, ಬಿಸಿಬಿಸಿ ಕಾಫಿ ಮತ್ತು ಕುರುಕುಲು ತಿಂಡಿಯೊಂದಿಗೆ ಬೆಚ್ಚನೆಯ ಪ್ರೀತಿಯಿಂದ ನೆಚ್ಚಗೆ ಹೊತ್ತು ಮತ್ತೊಂದೇ ಜಗತ್ತಿಗೆ ಕರೆದೊಯ್ಯಬಲ್ಲ ಪುಷ್ಪಕವಿಮಾನವಿದು, ಪುಸ್ತಕ! ಏನಿದರ ಮಾಯಕ? ಒಂದು ಪುಸ್ತಕ ಕೊಟ್ಟ ಸಖ್ಯಕ್ಕೆ, ಸೌಖ್ಯಕ್ಕೆ, ಸಾಂಗತ್ಯಕ್ಕೆ ಎಣೆಯುಂಟೆ? ಇದೀಗ ಇಲ್ಲಿ ನಿಮ್ಮ ಪ್ರಿಯ ಲೇಖಕರೇ ನಿಮ್ಮ ಹೆಗಲಿಗೆ ಕೈಯಿಟ್ಟು ಕರೆದೊಯ್ಯಲು ಬಂದಿದ್ದಾರೆ ನೋಡಿ. ನಿಮ್ಮ ಜಯಂತ, ಚಂಪಾ, ನುಗಡೋಣಿ, ಜೋಗಿ, ಸುನಂದಾ, ರಶೀದ್, ವಸ್ತಾರೆ… ಒಬ್ಬರೇ ಇಬ್ಬರೇ? ಮುಹೂರ್ತ ಕೂಡಿ ಬಂದಿದೆ, ಕಾದಂಬರೀ ನಾಮ ಸಂವತ್ಸರೇ, ವಾಚನ ಋತೌ, ಕಥನ ಮಾಸೇ, ಕಾವ್ಯ ಪಕ್ಷೇ, ವಿರಾಮಸ್ಯ ಶುಭದಿನೇ, ಪುಸ್ತಕ ನಕ್ಷತ್ರೇ; ಆರಂಭಕಾಲೇ ನಿರ್ವಿಘ್ನಮಸ್ತು! ಶುರುವಾಗಲಿ ಓದುಮಳೆ…

ಜಯಂತ ಕಾಯ್ಕಿಣಿ ಆಯ್ಕೆ

ಬಿಸಿಲುಕೋಲು- ಉಮಾರಾವ್
ಪ್ರಸೂತಿಗ್ರಹದ ಪ್ರಸಂಗಗಳು – ಕುಮುದಾ ಶರ್ಮಾ
ಅಂಚೆ ಪೇದೆಯ ಆತ್ಮಕಥನ – ವಿಡಂಬಾರಿ
ನಾದದ ನವನೀತ- ಸಂ: ಎಸ್. ದಿವಾಕರ್
ತೆಂಕನಿಡಿಯೂರಿನ ಕುಳುವಾರಿಗಳು – ವ್ಯಾಸರಾವ್ ನಿಂಜೂರ್
ಆಖ್ಯಾನ – ಮೂರ್ತಿ
ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು – ಜಿ.ಎನ್. ಉಪಾಧ್ಯ
ಜನಸೇವಕನ ನೆನಪಿನಂಗಳ – ಅಮ್ಮೆಂಬಳ ಆನಂದ
ಆ ಬದಿಯ ಹೂವು – ದೀಪ್ತಿ ಭದ್ರಾವತಿ

ಅರಬ್ಬೀ
ಒಬ್ಬ ಕವಿ ತನ್ನ ಒಂದೇ ಕವಿತೆಯನ್ನು ಹಲವು ರೀತಿಗಳಲ್ಲಿ ಬರೆಯುತ್ತಾನೆಯೇ ಅಥವಾ ಒಂದೊಂದು ಕವಿತೆಯೂ ಬೇರೆ ಬೇರೆ ಎನ್ನಬಹುದೇ, ಬರೆಯುತ್ತಾ ಬರೆಯುತ್ತಾ ಕವಿ ಬೆಳೆಯುತ್ತಾನೆಯೇ ಅಥವಾ ಕೇವಲ ಬದಲಾಗುತ್ತಾನೆಯೇ? ಇದ್ದ ಹಾಗೇ ಇರುತ್ತಾನೆಯೇ, ಒಬ್ಬೊಬ್ಬನ ಶೈಲಿ ಎಂದರೇನು, ಆದರ್ಶ ಕವಿತೆ ಎನ್ನುವುದೊಂದು ಇದೆಯೇ? ಇಂಥಾ ಅಕಡೆಮಿಕ್ ವಿಷಯಗಳ ಕುರಿತು ಕವಿ ನಿಜಕ್ಕೂ ಯೋಚಿಸುತ್ತಾನೆ ಎನ್ನುವಂತಿಲ್ಲ. ಯೋಚಿಸಬೇಕಾಗಿಯೂ ಇಲ್ಲ. ಬಹುಷಃ ಯೋಚಿಸಿದರೆ ಅದರಿಂದ ತೊಡಕೇ ಜಾಸ್ತಿ. ಕವಿತೆ ಸಹಜವಾಗಿ ಮೂಡಿ ಬರಬೇಕು ಎನ್ನುತ್ತಾನೆ ಕೀಟ್ಸ್. ಸಹಜವಾಗಿ ಎಂದರೆ? ‘ಸಹಜ’ಎನ್ನುವುದೊಂದು ಇದೆಯೆ?
-ಕೆ. ವಿ. ತಿರುಮಲೇಶ್

*
ಅಮರೇಶ ನುಗಡೋಣಿ ಆಯ್ಕೆ

ನೆಲದ ಬೇರು ನಭದ ಬಿಳಲು- ಎಸ್.ಮಂಜುನಾಥ್
ಅಲೆಗಳಲ್ಲಿ ಅಂತರಂಗ ವೈದೇಹಿ
ಹಾಡು ಹಾದಿಯ ತೋರಿತು- ಎಚ್ ಎಸ್.ರಾಘವೇಂದ್ರ ರಾವ್
ಅಮೃತಬಳ್ಳಿ ಕಷಾಯ – ಜಯಂತ್ ಕಾಯ್ಕಿಣಿ
ಮಹಾಚೈತ್ರ – ಎಚ್ ಎಸ್.ಶಿವಪ್ರಕಾಶ್
ಹಳಗನ್ನಡ – ಷ. ಶಟ್ಟರ್
ಬೇರು ಕಾಂಡ ಚಿಗುರು – ಕೆ.ವಿ.ನಾರಾಯಣ
ನಾರೀಕೇಳಾ ಎಮ್.ಎಸ್.ಆಶಾದೇವಿ
ಕರ್ನಾಟಕದ ಸೂಫಿಗಳು – ರಹಮತ್ ತರೀಕೆರೆ

ಎದೆಗೆ ಬಿದ್ದ ಅಕ್ಷರ
ಕಡುಬಡತನದ ಜತೆಗೆ ಅವಮಾನವೂ ಸೇರಿದ ಬಡತನ ಅಸ್ಪಶ್ಯರದು. ಸಾಮಾಜಿಕ ಸಾಂಸ್ಕೃತಿಕ ಚಲನೆ ಇರುವವರ ಬಡತನ ರೆಕ್ಕೆಪುಕ್ಕ ಇರುವ ಬಡತನವಾದರೆ, ಸಾಮಾಜಿಕ ಸಾಂಸ್ಕೃತಿಕ ಚಲನೆ ಇಲ್ಲದ ದಲಿತರ, ಹಿಂದುಳಿದವರ ಬಡತನವು ರೆಕ್ಕೆಪುಕ್ಕ ಕಿತ್ತ, ತೆವಳುವ ಬಡತನವಾಗಿದೆ. ಬಸ್ಸು ರೈಲುಗಳ ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ. ಹೋಟೆಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ. ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೇ ಇದೆ…
– ದೇವನೂರು ಮಹದೇವ
*

ಜೋಗಿ ಆಯ್ಕೆ

ಘಾಚರ್ ಘೋಚರ್ – ವಿವೇಕ ಶಾನಭಾಗ
ಅಜ್ಞಾತನೊಬ್ಬನ ಆತ್ಮಚರಿತ್ರೆ- ಕೃಷ್ಣಮೂರ್ತಿ ಹನೂರು
ತಾವರೆಯ ಬಾಗಿಲು – ಎಚ್. ಎಸ್. ವೆಂಕಟೇಶಮೂರ್ತಿ
ಸರ್ವಋತು ಬಂದರು-ಸಿಂಧು ರಾವ್ ಟಿ.
ಮಳೆಗಾಲ ಬಂದು ಬಾಗಿಲು ತಟ್ಟಿತು – ವಿಕಾಸ್ ನೇಗಿಲೋಣಿ
ಸಣ್ಣ ಸಣ್ಣ ಆಸೆಗಳ ಆತ್ಮಚರಿತ್ರೆ – ಕೆ. ಸತ್ಯನಾರಾಯಣ
ಅರ್ಥಾರ್ಥ – ಎಂ. ಎಸ್. ಶ್ರೀರಾಮ್
ಗೌರೀದುಃಖ – ವಿದ್ಯಾರಶ್ಮಿ ಪೆಲತಡ್ಕ
ಅರಬ್ಬೀ – ಕೆ.ವಿ.ತಿರುಮಲೇಶ

ತೆಂಕನಿಡಿಯೂರಿನ ಕುಳುವಾರಿಗಳು
ಅರವತ್ತರ ದಶಕದಲ್ಲಿ ನವ್ಯದ ಪ್ರಭಾವದಿಂದ ಸಣ್ಣಕತೆಗಳನ್ನು ಬರೆಯಲು ಪ್ರಾರಂಭಿಸಿದ ಡಾ. ವ್ಯಾಸರಾವ್ ನಿಂಜೂರ್ ಅವರು, ಕ್ರಮೇಣ ಯಾವ ವಾದದ ಬೆನ್ನು ಹತ್ತದೆ, ತಮ್ಮದೇ ಆದ ದಾರಿಯಲ್ಲಿ ತಮ್ಮ ತಮ್ಮ ಅನುಭವದ ಮೂಸೆಯಿಂದ ಹೊರಬಂದ ಕತೆಗಳನ್ನು ಬರೆಯಲಾರಂಭಿಸಿದರು. ದಕ್ಷಿಣ ಕನ್ನಡದ ವಿವಿಧ ಸಮುದಾಯದವರು, ಊರು ಬಿಟ್ಟು ಮುಂಬೈ ಸೇರಿದ ನವಯುವಕರ ತವಕ ತಲ್ಲಣಗಳು. 70-80ರ ದಶಕದಲ್ಲಿ ವಿದೇಶದಲ್ಲಿ ನೆಲೆಸಿದ ‘ಇಂಟೆಲಿಜೆಂಟ್’ತರುಣರ ತಾಕಲಾಟಗಳು, ಗ್ರಾಮೀಣ ಪರಿಸರ, ಎದುರಿರುವ ಮುಂಬೈ, ಹೀಗೆ ಭಿನ್ನ ಸಂಸ್ಕೃತಿಯ ಹೊರದೇಶದ ಚಿತ್ರಗಳನ್ನು ಪರಿಪೂರ್ಣವಾಗಿ ಚಿತ್ರಿಸಬಲ್ಲವರು.
-ರಮಾದೇವಿ ಉಡುಪ
*

ಎಮ್.ಎಸ್.ಶ್ರೀರಾಮ್ ಆಯ್ಕೆ

ಪಾಪಿಯೂ – ಕೆ.ವಿ. ತಿರುಮಲೇಶ್
ದಗಡೂ ಪರಬನ ಅಶ್ವಮೇಧ – ಜಯಂತ ಕಾಯ್ಕಿಿಣಿ
ನಾಪತ್ತೆೆಯಾದ ಗ್ರಾಾಮಫೋನು – ದಿವಾಕರ್
ಒಡಲಾಳ – ದೇವನೂರು ಮಹಾದೇವ
ಹಾಲು ಕುಡಿದ ಹುಡುಗಾ-ಅಬ್ದುಲ್ ರಶೀದ್
ಬಂಡವಾಳವಿಲ್ಲದ ರಾಜ್ಯದಲ್ಲಿ -ಬೋಳುವಾರ್ ಮಹಮದ ಕುಂಞ
ಗೋಲ – ವೈದೇಹಿ
ಒಂದು ಬದಿ ಕಡಲು – ವಿವೇಕ ಶಾನಭಾಗ
ಅಣುಕ್ಷಣ ಚರಿತೆ – ಎಚ್.ಎಸ್.ಶಿವಪ್ರಕಾಶ್
ಅಜ್ಞಾತನೊಬ್ಬನ ಆತ್ಮಚರಿತ್ರೆ
ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತಾಗಿದೆ. ಇದು ಇತಿಹಾಸವೋ, ದಂತಕತೆಯೋ, ಜಾನಪದ ಆಖ್ಯಾನಿಕೆಯೋ, ಕಾವ್ಯಮಯ ಕಥನವೋ ಎಂದು ವರ್ಗೀಕರಿಸಲು ಯತ್ನಿಸುವುದು ಅದರ ಶ್ರೀಮಂತ ಕ್ರಿಯಾ ಪರಿಸರಕ್ಕೆ ಅನ್ಯಾಯ ಬಗೆದಂತೆ. ಟಿಪ್ಪು ಸುಲ್ತಾನನ ಕಾಲದ ಒಬ್ಬ ದಳವಾಯಿಯ ಕಥೆಯೆಂದು ಆರಂಭವಾಗುವ ಈ ಕಥಾನಕ ಈ ಎಲ್ಲಾ ಪ್ರಕಾರಗಳನ್ನು ಬಳಸುತ್ತ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಜಾರುತ್ತ, ದೇಶ ಕಾಲಗಳ ಸೀಮೆ ದಾಟುತ್ತ ಹಿಮ್ಮೆಟ್ಟುತ್ತ ಹೋಗುತ್ತದೆ. – ಗಿರೀಶ್ ಕಾರ್ನಾಡ್
*

ಉಷಾ ಪಿ. ರೈ ಆಯ್ಕೆ

ರೂಪರೂಪಗಳನು ದಾಟಿ -ಎಸ್ ದಿವಾಕರ್
ಜಮೀನು – ಎಂ. ಎಸ್. ವೇದಾ
ಸ್ವಾತಂತ್ರ್ಯದ ಓಟ- ಬೊಳುವಾರ ಮೊಹಮ್ಮದ್ ಕುಂಞ
ನಾನು ಭಾರ್ಗವಿ – ಭಾರ್ಗವಿ ನಾರಾಯಣ್
ತಂತಿಬೇಲಿಯ ಒಂಟಿಕಾಗೆ – ಜಯಶ್ರೀ ಕಾಸರವಳ್ಳಿ
ಪಾಚಿಕಟ್ಟಿದ ಪಾಗಾರ – ಮಿತ್ರಾವೆಂಕಟ್ರಾಜ್
ಸಾಸಿವೆ ತಂದವಳು – ಭಾರತಿ ಬಿ.ವಿ.
ಮಿಥ್ಯೆ- ಗೀತಾ ಬಿ.ಯು.
ಶಬ್ದಗಳು – ಕೆ. ಟಿ. ಗಟ್ಟಿ
ಗಾಂಧಿ ಬಂದ
ಸ್ವಾತಂತ್ರ್ಯ ಚಳವಳಿಯ ಕಾಲಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಮೂರು ಬಾರಿ ಬಂದು ಹೋದ ‘ಗಾಂಧಿ’ಈ ಕಾದಂಬರಿಯಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದ್ದಾರೆ. ಇಲ್ಲಿ ಗಾಂಧಿ ಒಬ್ಬ ವ್ಯಕ್ತಿಯ ಹೆಸರು ಮಾತ್ರವಾಗಿರದೆ ಬದಲಾವಣೆಯ ಸಂಕೇತವಾಗಿಬಿಟ್ಟಿದೆ. ಒಟ್ಟಾರೆ ಜನಜೀವನದಲ್ಲಿ ನಿರ್ದಿಷ್ಟ ಕಾಲಮಾನವೊಂದರಲ್ಲಿ ನಡೆದ ಸಾಮಾಜಿಕ ಪರಿವರ್ತನೆಯನ್ನು ಕಾದಂಬರಿ ಧ್ವನಿಪೂರ್ಣವಾಗಿ ಕಟ್ಟಿಕೊಡುತ್ತದೆ. ಘಟನಾವಳಿಗಳ ರಚನಾವಿನ್ಯಾಸ ಮತ್ತು ಪಾತ್ರ ಕಲ್ಪನೆಯಲ್ಲಿ ಕಂಡುಬರುವನಾಟಕೀಯತೆಯಿಂದಾಗಿ ‘ಗಾಂಧಿ ಬಂದ’-ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಒಂದು ಅಪೂರ್ವ ಕೃತಿಯಾಗಿದೆ.
-ಡಾ.ಕೆ.ಮರುಳಸಿದ್ಧಪ್ಪ
*

ಅಬ್ದುಲ್ ರಶೀದ್ ಆಯ್ಕೆ

ಕುಸುಮಬಾಲೆ – ದೇವನೂರ ಮಹಾದೇವ
ಬಣ್ಣದ ಕಾಲು – ಜಯಂತ ಕಾಯ್ಕಿಣಿ
ಅಜ್ಞಾತನೊಬ್ಬನ ಆತ್ಮ ಚರಿತ್ರೆ – ಕೃಷ್ಣಮೂರ್ತಿ ಹನೂರು
ಬುಗುರಿ – ಮೊಗಳ್ಳಿ ಗಣೇಶ್
ರಸ್ತೆ ನಕ್ಷತ್ರ- ಟಿ.ಕೆ.ದಯಾನಂದ
ಸಮಗಾರ ಭೀಮವ್ವ – ಎಚ್. ಎಸ್. ಶಿವಪ್ರಕಾಶ್
ಮಾಯಾದರ್ಪಣ- ಎಂ. ಎಸ್. ಶ್ರೀರಾಮ್
ನೋಂಬು ಫಕೀರ್ ಮಹಮ್ಮದ್ ಕಟ್ಪಾಡಿ
ಕೋ.ಲ.ಕಾರಂತರ ಜೀವನ ಚರಿತ್ರೆ – ವೈದೇಹಿ

ಘಾಚರ್ ಘೋಚರ್
ಹಾಗೆ ನೋಡಿದರೆ ಅವತಾರವೆತ್ತಿ ಬಂದವರು ದೊಡ್ಡ ದೊಡ್ಡ ಮಾತುಗಳನ್ನು ಆಡುವುದೇ ಇಲ್ಲ. ಅವರ ಸಾಮಾನ್ಯ ಮಾತುಗಳಿಗೇ ದೊಡ್ಡ ದೊಡ್ಡ ಅರ್ಥಗಳನ್ನು ಪಾಮರರು ಗ್ರಹಿಸುವುದಲ್ಲವೇ? ಶಬ್ದಗಳ ಶಕ್ತಿ ಸ್ಫೋಟವಾಗುವುದು ಅವು ಹೊಕ್ಕ ಮನಸ್ಸಿನಲ್ಲಿಯೇ ತಾನೇ? ಅಷ್ಟಕ್ಕೂ ದೇವರು ಯಾವ ರೂಪದಲ್ಲಿ ಬರುತ್ತಾನೆಂದು ಬಲ್ಲವರಾರು? (‘ಘಾಚರ್ ಘೋಚರ್’ಕತೆಯಿಂದ) ಆ ಸಂಜೆ, ಆ ಹಸಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆ ಪರದೇಶ – ಇದೆಲ್ಲ ಇಲ್ಲದಿದ್ದರೆ ಈ ಭೆಟ್ಟಿ ಆಗುತ್ತಲೇ ಇರಲಿಲ್ಲ. ಸಂಯೋಗ ಅಂದರೆ ಹಾಗೇ. ಎಲ್ಲವೂ ಏಕತ್ರ ಸಂಭವಿಸಬೇಕು. (‘ನಿರ್ವಾಣ’ಕತೆಯಿಂದ)
*
ರಾಘವೇಂದ್ರ ರಾವ್
ಲೋಕಸಂವಾದಿ – ದೀಪಾ ಫಡ್ಕೆ
ಬ್ರಿಟಿಷ್ ಬಂಗ್ಲೆ – ಫಕೀರ (ಶ್ರೀಧರ ಬನವಾಸಿ)
ಮಾಂಜಿ ರವಾ ಫ್ರೈ – ಬಿ.ಎಂ.ಹನೀಫ
ಟಕ್ ಟಿಕ್ ಪೆನ್ನು – ನರೇಂದ್ರ ಪೈ
ಜೋಗತಿ ಜೋಳಿಗೆ – ಅನುಪಮಾ ಪ್ರಸಾದ್
ಮೌನ – ಚಿದಾನಂದ ಸಾಲಿ
ಪರಿಣಾಮದೊಳಗೆ – ಡಾ. ರಾಜಶೇಖರ ಹಳೆಮನೆ
ಚಿಟ್ಟೆ ಮತ್ತು ಜೀವಯಾನ – ಟಿ. ಎಲ್ಲಪ್ಪ
ಜಯಂತ ಕಾಯ್ಕಿಣಿ ಕತೆಗಳು ಗೋಡೆ

ಗೋಡೆಗೆ ಬರೆದ ನವಿಲು (ಸಂದೀಪ ನಾಯಕ)
ಈ ಕಥೆಗಳ ಪ್ರಧಾನ ಗುಣವೆಂದರೆ ಹದವಾದ ಭಾಷೆ, ಸಂಯಮದ ನಿರೂಪಣೆ. ಕಥೆಯಲ್ಲಿ ಹಲವು ಪಾತ್ರಗಳು ಕಾಣಿಸಿಕೊಂಡರೂ ಎಲ್ಲವೂ ಮುನ್ನೆಲೆಗೆ ಬರುವುದಿಲ್ಲ. ಮುಖ್ಯ ಪಾತ್ರದ ಮುಖೇನ ಕಥೆ ನಿರೂಪಣೆಗೊಳ್ಳುತ್ತದೆ. ಸಂದೀಪರ ಕಥೆಗಳು ಸಮಾನತೆಯನ್ನು ಕಾಯ್ದುಕೊಂಡಿವೆ. ಪಾತ್ರಗಳ ಸೃಷ್ಟಿಯಲ್ಲಾಗಲಿ, ಸನ್ನಿವೇಶಗಳ ನಿರ್ಮಾಣದಲ್ಲಾಗಲಿ, ಉದ್ಭವಿಸುವ ಸಮಸ್ಯೆಯಲ್ಲಾಗಲಿ, ಭಾಷೆಯ ಬಳಕೆಯಲ್ಲಾಗಲಿ, ಒಟ್ಟು ಕಥನಕ್ರಮದಲ್ಲಾಗಲಿ ಏಕರೂಪತೆಯನ್ನು ಹೊಂದಿವೆ. -ಅಮರೇಶ ನುಗಡೋಣಿ
*
ಡಿ.ಎಸ್.ಚೌಗಲೆ
ದ್ವಾಪರ – ಕಂನಾಡಿಗಾ ನಾರಾಯಣ
ಮನಸು ಅಭಿಸಾರಿಕೆ – ಶಾಂತಿ ಕೆ. ಅಪ್ಪಣ್ಣ
ಕುದಿ ಎಸರು (ಆತ್ಮಕತೆಯ ಮೊದಲಭಾಗ)- ಡಾ.ವಿಜಯಾ
ಹಿಂದೂ (ಅನುವಾದಿತ ಕಾದಂಬರಿ)- ಚಂದ್ರಕಾಂತ ಪೋಕಳೆ
ಗಿರಿಜಾ ಕಲ್ಯಾಣ – ಬಿ.ಸುರೇಶ
ಪಂಪಭಾರತ -ಕೆ.ವೈ.ನಾರಾಯಣಸ್ವಾಮಿ
ಜಯ-(ದೇವದತ್ತ ಪಟ್ಟನಾಯಕರ ಮಹಾಭಾರತದ
ಸಚಿತ್ರ ಕಥನದ ಅನುವಾದ)- ಗಿರಡ್ಡಿ ಗೋವಿಂದರಾಜ
ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ – ವೀರಣ್ಣ ಮಡಿವಾಳರ
ಸಿರಿ – ನಾ.ದಾಮೋದರ ಶೆಟ್ಟಿ

ಅಮೀರಬಾಯಿ ಕರ್ನಾಟಕಿ (ರಹಮತ್ ತರೀಕೆರೆ)
ನಲವತ್ತರ ದಶಕದ ಜನಪ್ರಿಯ ಹಾಡುನಟಿ ಅಮೀರ್‌ಬಾಯಿ ಕರ್ನಾಟಕಿ ಅವರ ಜೀವನಕಥನವಿದು. ‘ಕಿತ್ತೂರ ರುದ್ರಮ್ಮ’ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದ ಇವರು. ಬಿಜಾಪುರದ ಬೀಳಗಿಯ ಸಾಮಾನ್ಯ ಕುಟುಂಬದಿಂದ ಮುಂಬೈ ಶಹರಿಗೆ ಹೋದ ಅಮೀರ್ 30-40 ದಶಕದಲ್ಲಿ ಮುಂಬೈ ಚಿತ್ರರಂಗದಲ್ಲಿ ತಮ್ಮ ಗಾಯನದ ಮೂಲಕ ದೊಡ್ಡ ಸಾಧನೆ ಮಾಡಿದರು. ‘ವೈಷ್ಣವ ಜನತೊ’ಹಾಡಿನ ಮೂಲಕ ಗಾಂಧೀಜಿಗೆ ಪ್ರಿಯವಾಗಿದ್ದ ಇವರ ಅನೇಕ ಹಾಡುಗಳು ಬ್ರಿಟಿಶ್ ವಿರೋಧಿ ಚಳುವಳಿಯಲ್ಲಿ ಪ್ರಭಾತ್ ಫೇರಿ ಗೀತೆಗಳಾದವು.
*
ಯತಿರಾಜ್ ವೀರಾಂಭುದಿ
ತಂದೆ ತಾಯಿ ದೇವರಲ್ಲ – ಜೋಗಿ
ಮೂರ್ಖನ ಮಾತುಗಳು – ಅಹೋರಾತ್ರ
ಶ್ರೀಮದ್ಭಗವದ್ಗೀತಾ ಮತ್ತು ಕಗ್ಗ ತಾತ್ಪರ್ಯ – ಶ್ರೀಕಾಂತ್
ಉತ್ತರಕಾಂಡ – ಎಸ್ ಎಲ್ ಭೈರಪ್ಪ
ಪ್ರಾಣೇಶ್ ಪ್ರಪಂಚ – ಗಂಗಾವತಿ ಪ್ರಾಣೇಶ್
ಸೆಲ್ಫೀ ವಿಥ್ ಲೈಫ್ – ವಿಶ್ವೇಶ್ವರ ಭಟ್
ಕಣಿವೆಯಿಂದ ಶಿಖರಕ್ಕೆ – ಡಾ. ಯಂಡಮೂರಿ ವೀರೇಂದ್ರನಾಥ್
ಕ್ರಾಂತಿಪರ್ವ – ಡಾ. ಬಾಬು ಕೃಷ್ಣಮೂರ್ತಿ
ಶ್ರೀಮದ್ರಾಮಾಯಣದ ಮಹಾವಾಕ್ಯಗಳು – ಡಾ. ಕೆ. ಎಸ್. ನಾರಾಯಣಾಚಾರ್ಯ

ಮಿಸಳ್ ಭಾಜಿ (ಭಾರತಿ ಬಿ.ವಿ)
‘ಸಾಸಿವೆ ತಂದವಳು’ಎನ್ನುವಂತಹ ಬಹು ಗಂಭೀರ ವಸ್ತುವಿನ ತಮ್ಮ ಮೊದಲ ಪುಸ್ತಕದಲ್ಲಿಯೇ ಭಾರತಿಯವರ ಅಪರೂಪದ ಹಾಸ್ಯಪ್ರಜ್ಞೆಯನ್ನು ಗುರುತಿಸಬಹುದಾಗಿತ್ತು. ಸಾವಿನ ಸನಿಹದ ತಮ್ಮ ಪರಿಸ್ಥಿತಿಯಲ್ಲೂ ನಗುವನ್ನು ಅವರು ಬಿಟ್ಟುಕೊಟ್ಟಿರಲಿಲ್ಲ. ನೋವುಂಡವರಿಗೆ ನಗಿಸುವುದು ಕರಗತವಾಗಿರುತ್ತದಂತೆ. ಈ ಪುಸ್ತಕವಂತೂ ಲಲಿತ ಪ್ರಬಂಧಗಳ ಗುಚ್ಛ ಇನ್ನು ಕೇಳಬೇಕೆ? ಗರಿಬಿಚ್ಚಿದ ನವಿಲಿನಮತೆ ಸಂತೋಷದಿಂದ ತಮ್ಮ ಬದುಕಿನ ಹಲವು ನಗೆಯ ಸಂಗತಿಗಳನ್ನು ಹೇಳಿ ಕೊಂಡಿದ್ದಾರೆ.
*
ಎಸ್.ಆರ್.ವಿಜಯಶಂಕರ
ಮಾವಿನ ಮರದಲ್ಲಿ ಬಾಳೆಯ ಹಣ್ಣು – ಕೆ.ವಿ.ಅಕ್ಷರ
ಬುಗುರಿ – ಮೊಗಳ್ಳಿ ಗಣೇಶ್
ಬೆಳಕಿಗಿಂತ ಬೆಳ್ಳಗೆ – ಎಮ್.ಎಸ್.ಆಶಾದೇವಿ
ಅಸಮಗ್ರ – ರಾಜೇಂದ್ರ ಚೆನ್ನಿ
ಕರ್ನಾಟಕದಲ್ಲಿ ನಾಥಪಂಥ – ರಹಮತ್ ತರಿಕೇರಿ
ಘಾಚರ್ ಘೋಚರ್ – ವಿವೇಕ್ ಶ್ಯಾನಭಾಗ
ಕೆಚ್ಚಿನೆಲ – ಲಲಿತಾ ಸಿದ್ಧಬಸವಯ್ಯ
ಪಂಪಭಾರತ – ಕೆ.ವೈ. ನಾರಾಯಣಸ್ವಾಮಿ
ಆಡುಕುಳ – ಶ್ರೀಧರ ಬಳಗಾರ

ತಮಂಧದ ಕೇಡು (ಅಮರೇಶ ನುಗಡೋಣಿ)
ಈ ಸಂಕಲನದ ‘ಧರೆ ಉರಿದರೆ’,‘ಕಾಗೀಕೂಟ’ದಂತಹ ಕತೆಗಳ ಬಡತನದ ವಿವರಗಳು ನಮ್ಮ ಸೈರಣೆಗೇ ಸವಾಲು ಹಾಕುವಂತಿವೆ. ಆದರೆ ಈ ಬದುಕಿನಲ್ಲಿಯೂ ತರ್ಕಕ್ಕೆ ಮೀರಿ ಸಂಬಂಧಗಳು ಬೆಳೆಯುತ್ತವೆ. ಪ್ರೀತಿಯಲ್ಲಿ ಮಾತ್ರವಲ್ಲ, ಹಗೆತನದಲ್ಲಿಯೂ ಇಲ್ಲಿ ಒಬ್ಬರನ್ನು ಒಬ್ಬರು ಹಚ್ಚಿಕೊಳ್ಳುತ್ತಾರೆ. ‘ತಮಂಧದ ಕೇಡು’,‘ನೀರು ತಂದವರು’,‘ಉತ್ಕ್ರಮಣ’,-ಈ ಕತೆಗಳಲ್ಲಿ ಋಣಾನುಬಂಧ ಎಂಬಂತೆ ಬೆಸೆದುಕೊಳ್ಳುವ ಸಂಬಂಧಗಳ ಚಿತ್ರಣ ನಮ್ಮ ಒಳಜೀವನಕ್ಕೆ ತಟ್ಟುವಷ್ಟು ಸೂಕ್ಷ್ಮವಾಗಿದೆ
– ಜಿ. ರಾಜಶೇಖರ್
*
ಗಿರಿಜಾ ಶಾಸ್ತ್ರಿ
ಪಾಚಿಕಟ್ಟಿದ ಪಾಗಾರ – ಮಿತ್ರಾವೆಂಕಟರಾಜ್
ಜೇನ್ ಏರ್ – ಷಾಲೆಟ್ ಬ್ರಾಂಟೆ
(ಕನ್ನಡಕ್ಕೆ- ಶ್ಯಾಮಲಾ ಮಾಧವ),
ತೆಂಕನಿಡಿಯೂರಿನ ಕುಳುವಾರಿಗಳು – ವ್ಯಾಸರಾವ್ ನಿಂಜೂರ್
ಸಂಗೀತ ಕೋಣೆ -(ಅನುವಾದ)ಸದಾನಂದ ಕನವಳ್ಳಿ
ಕುದಿ ಎಸರು – ಡಾ.ವಿಜಯಾ
ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ- ಕೆ. ಸತ್ಯನಾರಾಯಣ
ನಾನು ಭಾರ್ಗವಿ – ಭಾರ್ಗವಿ ನಾರಾಯಣ್
ನೆತ್ತರಲ್ಲಿ ನೆಂದ ಚಂದ್ರ – ಎಮ್. ಆರ್. ಕಮಲಾ

ನ್ಯಾಸ (ಹರೀಶ ಹಾಗಲವಾಡಿ)
ಸಮೃದ್ಧ ಅನುಭವ ಸಾಮಗ್ರಿ, ಸಹಾನುಭೂತಿ ಇದ್ದರೂ ಸಂಯಮವುಳ್ಳ ಸಂವೇದನೆ, ಆವರಣ ನಿರ್ಮಾಣಕ್ಕೆ ಅವಶ್ಯವಾದ ಎಲ್ಲ ವಿವರಗಳಲ್ಲಿ ಅರಿವು, ಅಧ್ಯಯನ, ಯಾವುದೇ ಸುಲಭೀ-ಸರಳೀಕರಣಗಳ ಸಮಯಸಾಧಕತೆಯಿಲ್ಲದೆ ರಸ- ಭಾವಗಳಿಗಷ್ಟೇ ಬದ್ಧವಾಗಿರುವ ತಾತ್ವಿಕತೆ, ಹಾಗೂ ಕಾವ್ಯಾತ್ಮಕವಾದ ಬನಿಯುಳ್ಳ ಭಾಷೆ ನ್ಯಾಸದ ಹೆಗ್ಗಳಿಕೆಗಳೆನ್ನಬೇಕು. ಘಟನೆಗಳು, ಪಾತ್ರಗಳು ಮತ್ತವೆರಡನ್ನೂ ಬೆಸೆಯುವ ಬುದ್ಧಿಭಾವಗಳು ಹರೀಶರನ್ನು ಮೊದಲ ಕಾದಂಬರಿಯಲ್ಲೇ ಪ್ರಭುದ್ಧತೆಯತ್ತ ಕೊಂಡೊಯ್ಯುತ್ತವೆ. – ಶತಾವಧಾನಿ ಡಾ. ಆರ್.ಗಣೇಶ್
*
ನರೇಂದ್ರ ಪೈ
ತೆರೆದ ಪಠ್ಯ – ಸಂ: ನಟರಾಜ್ ಹುಳಿಯಾರ್
(ಕೀ ರಂ ನಾಗರಾಜ್ ಆಯ್ದ ಬರಹಗಳು)
ಇಗೋ ಕನ್ನಡ – ಪ್ರೊ.ಜಿ. ವೆಂಕಟಸುಬ್ಬಯ್ಯ
ವಾಗರ್ಥ ವಿಲಾಸ – ಕೆ.ವಿ.ತಿರುಮಲೇಶ್
ರಸ್ತೆ ನಕ್ಷತ್ರ – ಟಿ.ಕೆ.ದಯಾನಂದ
ಕಸೂತಿ – ಸ.ಉಷಾ
ತಲೆಗಳಿ – ವಿ.ತಿ.ಶೀಗೆಹಳ್ಳಿ
ಅನುಕ್ತ – ರವೀಂದ್ರ ಕಾಶಿ
ಚಿತ್ರಕತೆ – ಎ.ಎನ್.ಪ್ರಸನ್ನ
ಡೇರಿ ಡಾಕ್ಟರ್, ಹೋರಿ ಮಾಸ್ಟರ್ – ಡಾ. ಗಣೇಶ ನೀಲೇಸರ

ಅಗ್ನಿಕಾರ್ಯ (ಶ್ರೀನಿವಾಸ ವೈದ್ಯ)
ಕನ್ನಡದಲ್ಲಿ ಲಲಿತ ಪ್ರಬಂಧಗಳು ಹಾಸ್ಯ-ಅಪಹಾಸ್ಯ- ಉಪಹಾಸ್ಯ ಇತ್ಯಾಾದಿ ಏನೇನೋ ಸ್ವರೂಪ ಪಡೆದುಕೊಂಡು ದಿಕ್ಕುತಪ್ಪಿ ಅಲೆಯುತ್ತಿದ್ದಾಗ ಅದಕ್ಕೊಂದು ಚೌಕಟ್ಟು ಒದಗಿಸಿ ಮತ್ತೆ ಓದುಗರು ಲಲಿತ ಪ್ರಬಂಧಗಳ ಕಡೆ ಆಕರ್ಷಿತರಾಗುವಂತೆ ಮಾಡಿದವರು ಶ್ರೀನಿವಾಸ ವೈದ್ಯರು. ಅಗ್ನಿಕಾರ್ಯ ವೈದ್ಯರ ಪ್ರಥಮ ಕಥಾಸಂಕಲನ. ವೈದ್ಯರು ಬರೆದಿರುವುದು ಸ್ವಲ್ಪವೇ. ಆದರೆ ಬರೆದದ್ದೆಲ್ಲ ಅಪ್ಪಟ ಬಂಗಾರ.
*

ಗೀತಾ ಬಿ.ಯು. ಆಯ್ಕೆ
ವ್ಯಾನಿಟಿ ಬ್ಯಾಗ್ – ವೈದೇಹಿ
ರವಿ ಕಾಣದ್ದು – ಜೋಗಿ
ಅಂತರಂಗದ ಪಿಸುನುಡಿ – ವಸುಮತಿ ಉಡುಪ
ಹಂಪಿ ಎಕ್ಸ್ ‌ಪ್ರೆಸ್ – ವಸುಧೇಂದ್ರ
ಯಾವ ನಾಳೆಯೂ ನಮ್ಮದಲ್ಲ – ಉಷಾ.ಪಿ. ರೈ
ಮುಟ್ಟು – ಶಾಂತಾಕುಮಾರಿ
ಸಾಸಿವೆ ತಂದವಳು – ಬಿ.ವಿ.ಭಾರತಿ
ಶಬ್ದಗಳು – ಕೆ.ಟಿ.ಗಟ್ಟಿ
ನಾಗಮಂಡಲ – ಕಾರ್ನಾಡ್

ಪರ್ವ (ಎಸ್.ಎಲ್. ಭೈರಪ್ಪ)
ವ್ಯಾಸ ಮಹರ್ಷಿಗಳ ‘ಮಹಾಭಾರತ’ವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕಾದಂಬರಿ ‘ಪರ್ವ’.ಇದೊಂದು ಮರುಸೃಷ್ಟಿ. ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಹಾಕೃತಿಯೊಂದನ್ನು ಆಧುನಿಕ ಸಾಹಿತ್ಯಪ್ರಕಾರವಾದ ಕಾದಂಬರಿಯನ್ನಾಗಿ ನಿರ್ಮಿಸುವ ಪ್ರಕ್ರಿಯೆಯಲ್ಲಿ ಶ್ರೇಷ್ಠ ಕಾದಂಬರಿಕಾರರೊಬ್ಬರ ಪಕ್ವವಾದ ಮನಸ್ಸು ಕಾಲ ದೇಶಗಳನ್ನು ದಾಟಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ಇಲ್ಲಿ ನೋಡಬಹುದು. ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್ಕಾದಂಬರಿಯ ಪುಟಪುಟಗಳಲ್ಲಿ ಸ್ಫುಟಗೊಂಡಿದೆ.
*

ಸುನಂದಾ ಪ್ರಕಾಶ್ ಕಡಮೆ ಆಯ್ಕೆ
ಕುದರಿ ಮಾಸ್ತರ -ಟಿ.ಎಸ್.ಗೊರವರ
ನೆಲದ ಕರುಣೆಯ ದನಿ -ವೀರಣ್ಣ ಮಡಿವಾಳರ
ಶೇಪಿನ ಡಬ್ಬಿ – ಪದ್ಮನಾಭ ಭಟ್ ಶೇವ್ಕಾರ
ಮನಸು ಅಭಿಸಾರಿಕೆ -ಶಾಂತಿ ಕೆ.ಅಪ್ಪಣ್ಣ
ಮಾಗಿ ಕಾಲದ ಸಾಲುಗಳು -ಜ.ನಾ.ತೇಜಶ್ರೀ
ನನ್ನ ಶಬ್ದ ನಿನ್ನಲಿ ಬಂದು -ಕೆ. ಪಿ ಮೃತ್ಯುಂಜಯ
ಒಂದು ತುಂಡು ಬೆಲ್ಲ -ತಾರಿಣಿ ಶುಭದಾಯಿನಿ
ಭೂಮಿ ತಿರುಗುವ ಶಬ್ದ – ಚೆನ್ನಪ್ಪ ಅಂಗಡಿ
ಮಾಯಾ ಕೋಲಾಹಲ – ಮೌನೇಶ ಬಡಿಗೇರ್

ಬೆಂಕಿಗೆ ತೊಡಿಸಿದ ಬಟ್ಟೆ (ಆರಿಫ್ ರಾಜಾ)

ಕವಿತೆ ಎಂದರೆ ಎಷ್ಟು ಲೌಕಿಕವೋ ಅಷ್ಟೇ ಅಲೌಕಿಕ ಅನ್ನುವುದನ್ನು ತಿಳಿದಂತೆ ಬರೆಯುವ ಈ ಕವಿ ತನ್ನ ಸುತ್ತಲಿನ ವಿವರಗಳನ್ನು ಬಳಸಿಕೊಂಡೂ ಅದನ್ನು ಮೀರಿದ್ದನ್ನು ಹೇಳಬಲ್ಲಬರೆಂಬುದಕ್ಕೆ ಸಾಕಷ್ಟು ಪುರಾವೆಗಳು ಅವರ ಮೊದಲ ಸಂಕಲನದಲ್ಲಿಯೇ ಇವೆ. ಹಾದಿ ಇದ್ದಲ್ಲಿ ಮಾತ್ರ ನಡೆಯುವವರಿಗೆ ಆರಿಫ್‌ರ ಕಾವ್ಯ ಸಪ್ಪೆಯೆನಿಸಬಹುದು. ಕಾಡಲ್ಲಿ ಹಾದಿ ಹುಡುಕುವ ತಾಳ್ಮೆ, ಧೈರ್ಯ, ಗೊತ್ತಿಲ್ಲದ್ದನ್ನು ತಿಳಿಯುವ ಹಂಬಲ ಇದ್ದವರಿಗೆ ಇವರು ರುಚಿಸುತ್ತಾರೆ – ಪ್ರಜಾವಾಣಿ- ದೇಶಕಾಲ ಸಾಹಿತ್ಯ ಪುರವಣಿ
*
ಜಿ.ಕೆ.ರವೀಂದ್ರಕುಮಾರ್
ಪರಿಕಲ್ಪನಾ ಕೋಶಗಳು – ಡಾ.ಕೆ.ಕೇಶವ ಶರ್ಮಾ
ಅಂತಃಪಠ್ಯ ಮತ್ತು ಇತರ ಪ್ರಬಂಧಗಳು – ಕೆ.ವಿ. ಅಕ್ಷರ
ಕೇಳು ಜನಮೇಜಯ – ಟಿ.ಎಸ್. ವೇಣುಗೋಪಾಲ್ ಶೈಲಜಾ
ಕೃಷ್ಣೆ ಹರಿದಳು – ಬಾಳಾಸಾಹೇಬ ಲೋಕಾಪುರ ಸಂಚಯ,
ಕಾವ್ಯ ಸಂಭ್ರಮ – 75 – (ಸಂ) ಡಿ.ವಿ. ಪ್ರಹ್ಲಾದ್
ಜಂಗುಂ ಜಕ್ಕುಂ – ವಿಷ್ಣು ನಾಯ್ಕ
ಕಾವಳದ ಸಂಜೆಯಲ್ಲಿ – ಚಂದ್ರಶೇಖರ ತಾಳ್ಯ
ಪಶ್ಚಿಮ ದ್ವಾರದಾಚೆಗೆ – ಡಾ.ಎನ್.ಎಸ್.ದಿನೇಶ್
(ಸಂತ ಶಿಶುನಾಳ ಷರೀಫರ ಕಾವ್ಯದ ಅಂತರಾಳ)
ವ್ಯೋಮ ತಂಬೂರಿ ನಾದ – ಆನಂದ. ಈ. ಕುಂಚನೂರ

ಪುನರಪಿ (ಕಾವ್ಯಾ ಕಡಮೆ ನಾಗರಕಟ್ಟೆ)
ಆಸ್ಮಾ ಮತ್ತು ಅನುಷಾರ ಸಂಬಂಧ ಅಫೇರ್ ಅಲ್ಲ. ಒನ್‌ನೈಟ್ ಸ್ಟ್ಯಾಂಡ್ ಅಲ್ಲ, ಮಾರ್ದವದಿಂದ ಕೂಡಿದ್ದು, ಒಬ್ಬರನ್ನು ಇನ್ನೊಬ್ಬರು ಪೊರೆಯುವಂಥದ್ದು, ಗೆಳತಿ ತಲ್ಲಣಗೊಂಡಾಗ ಅವಳನ್ನು ಚುಕ್ಕುಬಡಿದು ಮಲಗಿಸುವಂಥ ಪ್ರೀತಿ ಇಲ್ಲಿದೆ. ಇವರ ಜಗತ್ತು ಸಹ ಅವರಿಬ್ಬರಿಗೆ ಮಾತ್ರ ಸೀಮಿತವಾದುದಲ್ಲ. ಅವರ ಸಮಾಜ ಸೇವೆ ವಲಯದಲ್ಲಿ ‘ಮನಿಯೂಟ’ದ ದಾರಿ ಕಾಯುವ ಹಲವು ವೃದ್ಧ ವೃದ್ಧೆಯರಿದ್ದಾರೆ. ಅದರಿಂದಲೇ ಆರ್ಥಿಕ ಕಾರಣಗಳಿಗಾಗಿ ಮನಿಯೂಟ ನಿಲ್ಲುವ ಪರಿಸ್ಥಿತಿ ಬಂದಾಗ ಅನುಷಾ ತನ್ನ ಮಿತಿಗಳಲ್ಲಿ ಒಂದು ವ್ಯವಸ್ಥೆ ಮಾಡುತ್ತಾಳೆ. – ಸ.ಉಷಾ
*
ಶ್ರೀಧರ ಬಳಗಾರ
ಒಡಲಾಳ – ದೇವನೂರು ಮಹಾದೇವ
ಕಲ್ಪಿತ ವಾಸ್ತವ – ಗಿರಡ್ಡಿ ಗೋವಿಂದರಾಜ
ಬಹುವಚನ ಭಾರತ – ಜಿ.ರಾಜಶೇಖರ
ಉತ್ತರಾಯಣ ಮತ್ತು….- ಎಚ್ ಎಸ್ ವೆಂಕಟೇಶಮೂರ್ತಿ
ಮಳೆಬಿಡದ ನೆಲದಲ್ಲಿ – ಎಚ್ ಎಸ್ ಶಿವಪ್ರಕಾಶ
ಕ್ರೌಂಚ ಪಕ್ಷಿಗಳು – ವೈದೇಹಿ
ಆಹಾ ಪುರುಷಾಕಾರಂ! – ಪ್ರತಿಭಾ ನಂದಕುಮಾರ್
ಬೇರು ಕಾಂಡ ಚಿಗುರು – ಕೆ. ವಿ.ನಾರಾಯಣ
ಇಂದಿನ ಹೆಜ್ಜೆ – ಓ.ಎಲ್.ನಾಗಭೂಷಣಸ್ವಾಮಿ

ಅಮೃತಬಳ್ಳಿ ಕಷಾಯ (ಜಯಂತ ಕಾಯ್ಕಿಣಿ )

ಈಗಿನ ಬರಹಗಾರರಲ್ಲಿ ನನಗೆ ಜಯಂತ ಕಾಯ್ಕಿಣಿ ಇಷ್ಟ. ಅವರಿಗೆ ಎಲ್ಲವನ್ನೂ ಗಮನಿಸುವ, ಗ್ರಹಿಸುವ ಕಣ್ಣು ಇದೆ ಮತ್ತು ಅವರಿಗೇ ವಿಶಿಷ್ಟವಾದ ಒಂದು ಗದ್ಯವಿದೆ. ನಮ್ಮಲ್ಲಿ ಹೆಚ್ಚಿನ ಗದ್ಯ ಬರಹಗಾರರಿಗೆ, ಕತೆಗಾರರಿಗೆ ಒಳ್ಳೆಯ ಗದ್ಯ ಎಂದರೆ ಹುಸಿಕಾವ್ಯದಲಯದಲ್ಲಿ ‘ಪ್ರೆಟಿ’ಅನ್ನಿಸುವಂತೆ ಬರೆಯುವುದು. ಜಯಂತ ಅದನ್ನು ಮಾಡುವುದಿಲ್ಲ. ಅನೇಕರ ಹಾಗೆ ಸುಂದರವಾದುದನ್ನೋ, ಲಯಬದ್ಧವಾದುದನ್ನೋ ನೋಡಬೇಕು, ಕೇಳಬೇಕು ಎಂಬ ಹಟವಿಲ್ಲ. ಲೇಖಕರಾಗಿ ಕುರೂಪ, ಅಪಶ್ರುತಿಗಳನ್ನು ಅವರು ತಿರಸ್ಕರಿಸಲು ಹೋಗುವುದಿಲ್ಲ. -ಜಿ.ರಾಜಶೇಖರ
*
ಡಿ.ವಿ.ಪ್ರಹ್ಲಾದ್
ಒಂದು ಮರ ನೂರು ಸ್ವರ – ಎಮ್.ಎಸ್.ಶಾರದಾಪ್ರಸಾದ್
ಆಫ್ರಿಕನ್ ಕವಿತೆಗಳು – ಎಚ್.ಎಸ್.ರಾಘವೇಂದ್ರರಾವ್
ಪ್ರೀತಿ ಬೇಡುವ ಮಾತು – ವಿಜಯ ರಾಘವೇಂದ್ರ
ಅರಬ್ಬೀ – ಕೆ.ವಿ.ತಿರುಮಲೇಶ್
ಷೆಫೀಲ್ಡ್ ಕವಿತೆಗಳು- ಎಚ್.ಎಸ್.ವೆಂಕಟೇಶ್‌ಮೂರ್ತಿ
ಜೀವಯಾನ – ಎಸ್.ಮಂಜುನಾಥ
ಬಂಧವಿರದ ಬಂಧುರ – ಆನಂದ ಝಂಜರವಾಡ
*
ಶಿವನ ಡಂಗುರ (ಚಂದ್ರಶೇಖರ ಕಂಬಾರ)
ಸಮಕಾಲೀನ ಬದುಕಿನ ತಲ್ಲಣಗಳನ್ನು ಹೀಗೆ ಮುಖಾಮುಖಿಯಾಗಿಸಿ ರಚನೆಯಾದ ಮತ್ತೊಂದು ಕೃತಿ ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಇತರ ಭಾಷೆಗಳಲ್ಲೂ ಕಂಡಿಲ್ಲ. ಕಂಬಾರರನ್ನು ಓದುವಾಗ ಇಳಂಗೋಅಡಿ, ಅಚಿಬೆ, ಷೋಯೆಂಕಾ, ಮಾರ್ಕ್ವೇಜ್ ಮೊದಲಾದವರ ಜೊತೆ ಹೋಲಿಸುವ ಉತ್ಸಾಹ ಮೂಡುತ್ತದೆ. ಆದರೆ ಇವರೆಲ್ಲರಿಗಿಂತ ಭಿನ್ನರಾದ ಕಂಬಾರರಿಗೆ ಜಾನಪದ ಜಗತ್ತು ಮೂಲಪ್ರೇರಣೆ. ಈ ದೃಷ್ಟಿಯಿಂದ ಇದು ವಿಶಿಷ್ಟ ಕೃತಿ, ಮಾತ್ರವಲ್ಲ, ಹೊಸ ದರ್ಶನ ನೀಡುವ ಕಾದಂಬರಿ. -ನರಹಳ್ಳಿ ಬಾಲಸುಬ್ರಹ್ಮಣ್ಯ
*
ಬಾಳಾಸಾಹೇಬ್ ಲೋಕಾಪುರ
ಹುಲಿಕಾನು – ಎಚ್. ಬಿ. ಇಂದ್ರಕುಮಾರ
ಬಲಿಹಾರ – ಚೀಮನಹಳ್ಳಿ ರಮೇಶ ಬಾಬು
ಉರಿವಜಲ – ವೈ.ಎಸ್.ಹರಗಿ
ವೈವಸ್ವತ – ರೇಖಾ ಕಾಖಂಡಕಿ
ಗೆಂಡೆದೇವ್ರ – ಹನುಮಂತ ಹಾಲಿಗೇರಿ
ಬ್ರಿಟೀಷ್ ಬಂಗ್ಲೆ – ಫಕೀರ (ಶ್ರೀಧರ ಬನವಾಸಿ)
ನಾನು ಚಂದ್ರಗುಪ್ತಮೌರ್ಯ – ಮಹಾಂತೇಶ ನವಲಕಲ್
ಅಮೋಘಸಿದ್ಧ ಪರಂಪರೆ – ಡಾ.ಚನ್ನಪ್ಪ ಕಟ್ಟಿ
ಧಮ್ಮಪದಂ (ಮೂಲ:ಭಗವಾನ ಬುದ್ಧ) : ಅನು – ಡಾ. ಶಿ. ಚೆ. ನಂದಿಮಠ

ಸಿಂಗರ್ ಕತೆಗಳು (ಓ.ಎಲ್.ನಾಗಭೂಷಣಸ್ವಾಮಿ)
ಒಬ್ಬ ದೊಡ್ಡ ಲೇಖಕ ಜಗತ್ತಿನ ವ್ಯಾವಹಾರಿಕ ಪ್ರಪಂಚದಲ್ಲಿ ಯಾವ ರೀತಿಯಲ್ಲಿಯೂ ಸಲ್ಲದೆ ಹೋಗುವ ಒಂದು ಭಾಷೆಯನ್ನು, ಭಾಷಿಕ ಸ್ಮತಿಯನ್ನು ಚಾಲ್ತಿಯಾಗಿಡಬಲ್ಲ ಎಂಬುದಕ್ಕೆ ಸಿಂಗರ್‌ನೇ ಸಾಕ್ಷಿ.ಸಿಂಗರ್‌ನ ಪಾತ್ರಪ್ರಪಂಚ, ಪಾತ್ರ ಸೃಷ್ಟಿಯ ರೀತಿಯಿಂದಲೂ ನಾವು ಬಹಳ ಕಲಿಯುವುದಿದೆ. ಮೇಲುನೋಟಕ್ಕೆ ಪ್ರಜ್ಞೆಯ ಬೆನ್ನೆಲುಬಿಲ್ಲದ, ಪ್ರವೃತ್ತಿಯ ಸ್ಥರದಲ್ಲಿ ಮಾತ್ರವೇ ಬದುಕುತ್ತಿರುವ ಪಾತ್ರಗಳಂತೆ ಕಾಣುವ ಸಿಂಗರ್‌ನ ಪಾತ್ರಗಳು ಮನುಷ್ಯ ಸ್ವಭಾವದಲ್ಲೇ ಇರುವ ವಿವಿಧ ಸ್ತರ ಉಪಸ್ತರಗಳನ್ನು ನಮಗೆ ಕಾಣಿಸುತ್ತಾ ಸಂಕೀರ್ಣವಾಗುವುದು ಮಾತ್ರವಲ್ಲ, ನಿಗೂಢವೂ ಆಗುತ್ತವೆ. -ಕೆ. ಸತ್ಯನಾರಾಯಣ
*
ಪಿ.ಚಂದ್ರಿಕಾ
ಕುದಿ ಎಸರು – ಡಾ. ವಿಜಯಾ
ಹಳಗನ್ನಡ ಲಿಪಿಲಿಪಿಕಾರ ಲಿಪಿ ವ್ಯವಸಾಯ- ಷ. ಶೆಟ್ಟರ್
ಸ್ವಪ್ನ ಸಾರಸ್ವತ – ಗೋಪಾಲಕೃಷ್ಣ ಪೈ
ಆನಂದಲಹರಿ – ಲಕ್ಷ್ಮೀಶ ತೋಳ್ಪಾಡಿ
ಮೊಕಾರ – ಬಸವರಾಜ ಕುಕ್ಕರಹಳ್ಳಿ
ಆತ್ಮ ವೃತ್ತಾಂತ – ರಜನಿ ನರಹಳ್ಳಿ
ಒಡಲಾಳ – ದೇವನೂರ ಮಹಾದೇವ
ಸದ್ದು ದೇವರು ಸ್ನಾನಮಾಡುತ್ತಿದ್ದಾನೆ – ಕೆ. ಸತ್ಯನಾರಾಯಣ
ಹದ- ಚೀಮನಹಳ್ಳಿ ರಮೇಶಬಾಬು

ಬಹುವಚನ ಭಾರತ (ಜಿ. ರಾಜಶೇಖರ)
ಇವರ ಬರಹ, ನೇರ, ನಿಷ್ಠುರ, ಪಾರದರ್ಶಕ. ತನಗೆ ದಕ್ಕಿದ ಕೋಶದ ಜ್ಞಾನ, ಆಯಾ ಕಾಲಸನ್ನಿವೇಶಗಳಲ್ಲಿ ತಾನು ಬದುಕುವ ಊರಿನ ಸಾಮಾನ್ಯ ಸಂಸಾರಸ್ಥರಿಗೆ ಪಾಲಿಸಲು ಸಾಧ್ಯವಿರುವ ಸಾಮಾಜಿಕ ಸಭ್ಯತೆಯ ದೇಶ-ಇವುಗಳ ಅರಿವಿನಲ್ಲಿ ಬರೆದ ಬರಹಗಾರರಿವರು. ಇವರ ಬರಹಗಳನ್ನು ಓದಲಿಕ್ಕೆ ನಮ್ಮ ಊರುಕೇರಿಗಳನ್ನು ಸ್ವಸ್ಥವಾಗಿಟ್ಟುಕೊಳ್ಳಲು ಬೇಕಾದ ವಿವೇಕ-ವಿವೇಚನೆಗಳ ಹೊರತಾಗಿ ಬೇರೇನೂ ಬೇಕಿಲ್ಲ. ಆದರೆ, ನಮ್ಮ ಊರುಕೇರಿಗಳಲ್ಲಿ ನಿತ್ಯದ ಬದುಕನ್ನು ಬದುಕಿಯೂ ಪಡೆದುಕೊಳ್ಳಲು ಸಾಧ್ಯವಿರುವ ದೇಶ-ಕೋಶಗಳ ಜ್ಞಾನ ಖಂಡಿತ ಬೇಕು. -ಕೆ.ಫಣಿರಾಜ್
*
ಗುರುಪ್ರಸಾದ್ ಕಾಗಿನೆಲೆ
ಘಾಚರ್ ಘೋಚರ್ – ವಿವೇಕ ಶಾನಭಾಗ
ಹಂಪಿ ಎಕ್ಸ್ ‌ಪ್ರೆಸ್ – ವಸುಧೇಂದ್ರ
ತೂಫಾನ್ ಮೇಲ್ – ಜಯಂತ ಕಾಯ್ಕಿಣಿ
ಹಕೂನ ಮಟಾಟ – ನಾಗರಾಜ ವಸ್ತಾರೆ
ಪುನರಪಿ – ಕಾವ್ಯಾ ಕಡಮೆ ನಾಗರಕಟ್ಟೆ
ಬಿ ಕ್ಯಾಪಿಟಲ್ – ಜೋಗಿ
ಮಸುಕು ಬೆಟ್ಟದ ಹಾದಿ – ಎಮ್. ಆರ್. ದತ್ತಾತ್ರಿ
ಅಮೂರ್ತ ಚಿತ್ತ – ಪ್ರಕಾಶ್ ನಾಯಕ್
ಕದಳಿ ಹೊಕ್ಕು ಬಂದೆ – ರಹಮತ್ ತರಿಕೆರೆ

ಜೀರೋ ಮತ್ತು ಒಂದು (ವಿಕ್ರಮ್ ಹತ್ವಾರ್)
ವಿಹಾರವೆಂದರೆ ಅದು ಹೆಜ್ಜೆ ಅಲ್ಲ. ಅದು ದಾರಿಯೂ ಅಲ್ಲ. ಅದೊಂದು ಏಕಾಂತ ಬಿಂದುವಿನಿಂದ ದಬ್ಬಿಸಿಕೊಂಡರೆ ಹಬ್ಬಿಕೊಳ್ಳುವ ಅನಂತಾಕಾಶ, ಹಾಗಿರುವಾಗ, ಹೆಜ್ಜೆಗುರುತು ಮೂಡಬೇಕು ತಾನೆ ಹೇಗೆ ? ಆದರೂ ಪಯಣವಿದೆ. ರಹದಾರಿಗಳಿಂದ ಹೊರತಾದ ಮತ್ತೊಂದಿದೆ. ಅದು ಅಲ್ಲಗಳದ್ದೇ ಜಗತ್ತು. ಹಣವಲ್ಲ, ಕೀರ್ತಿಯಲ್ಲ, ಸ್ವಾರ್ಥವಲ್ಲ. ಕ್ಯಾರಲ್ ನಿನಗೆ ಹೇಗೆ ಹೇಳುವುದು? ಅದು ಈಗಷ್ಟೇ ಅನುಭವಿಸಿದ ಭೋಗವಲ್ಲ. ಅದು ಧ್ಯಾನವೂ ಅಲ್ಲ. ತಿಳಿದಿಲ್ಲ ಅಂತಲ್ಲ. ಆದರೂ ವಿವರಿಸಲು ಸಾಧ್ಯವಾಗುತ್ತಿಲ್ಲ. (ಕಾಯಕವೇ ಕೈಲಾಸ ಕತೆಯಿಂದ)
*
ಆರಿಫ್ ರಾಜಾ
ಜಾಲಿ ಹೂಗಳ ನಡುವೆ – ಬಿ.ಪೀರ್ ಬಾಷ
ಚಿತ್ರದ ಬೆನ್ನು- ಎನ್. ಕೆ. ಹನುಮಂತಯ್ಯ
ಅವನರಿವಲ್ಲಿ- ಜ.ನಾ.ತೇಜಶ್ರೀ
ಜುಮುರು ಮಳೆ-ಸುಮಂಗಲ
ದೇವರ ನಾಲಿಗೆ ಮೇಲೆ- ತುರುವಿಹಾಳ ಚಂದ್ರು
ನಾತಲೀಲೆ- ಸುರೆಂದ್ರನಾಥ
ಲೆವೆಲ್ ಕ್ರಾಸಿಂಗ್- ವಿ. ಎಮ್. ಮಂಜುನಾಥ
ಬಾಳೆ ಗಿಡ ಗೊನೆ ಹಾಕಿತು- ಬಿ. ಎಮ್.ಬಶಿರ್
ನೀವು ಕಾಣಿರೆ ನೀವು ಕಾಣಿರೆ- ಎಚ್. ಎಸ್. ಮುಕ್ತಾಯಕ್ಕ

ಆಡು ಕಾಯೊ ಹುಡುಗನ ದಿನಚರಿ (ಟಿ.ಎಸ್.ಗೊರವರ)
ಭಾರತದಲ್ಲಿ ಬಡವರ ಬದುಕಿನಲ್ಲಿ ನಡೆಯುವ ಎಲ್ಲವೂ ಆಕಸ್ಮಿಕವೇನೋ. ಜೀತಗಾರನೊಬ್ಬನ ಮಗ ಆಡು ಕಾಯುತ್ತಾ ಬೆಳೆದ. ಬಡತನ ಮುತ್ತಿದ ಮನೆಯ ಹಿಂಸೆ, ಕಷ್ಟಗಳ ನಡುವೆಯೂ ಅಪ್ಪ, ಅವ್ವ ಹಲ್ಲುಕಚ್ಚಿ ಬೇರೆಯವರೆದುರು ಬೇಡದೆ ವಿಚಿತ್ರ ಸ್ವಾಭಿಮಾನದಿಂದ, ಘನತೆಯಿಂದ ಬದುಕಲೆತ್ನಿಸುತ್ತಿದುದನ್ನು ದಿನನಿತ್ಯ ಕಂಡ… ಮುಂದೊಮ್ಮೆ ಕತೆಗಾರನಾಗುವ ಊಹೆ ಕೂಡ ಮಾಡದ ಗೊರವರ್‌ಗೆ ಈ ಎಲ್ಲ ಲೋಕಗಳ ನೆನಪಿನ ಕೋಶವೇ ಕತೆಗಳನ್ನು ಬರೆಸತೊಡಗಿತೇನೋ. – ನಟರಾಜ್ ಹುಳಿಯಾರ್
*
ವಾಸುದೇವ ನಾಡಿಗ
ಅರಬ್ಬೀ (ಕವನ ಸಂಕಲನ) – ಕೆ.ವಿ.ತಿರುಮಲೇಶ್
ಬುದ್ಧ ಮತ್ತು ಪರಂಪರೆ- ಓಶೋ: ಟಿ.ಎನ್.ವಾಸುದೇವ ಮೂರ್ತಿ
ಜುಲೈ 22-1947- ಸರಜೂ ಕಾಟ್ಕರ್
ಮಠದ ಹೋರಿ ಮತ್ತು ಈವರೆಗಿನ ಕಥೆಗಳು – ಹನುಮಂತ ಹಾಲಗೇರಿ
ಗಾಯದ ಹೂಗಳು- ಕಾಜೂರು ಸತೀಶ್
ಬೀಜದೊಳಗಿನ ವೃಕ್ಷ – ಗೀತಾ ವಸಂತ
ನನ್ನೊಳಗೆ ನಿನ್ನ ನಡಿಗೆ -ಜ.ನಾ.ತೇಜಶ್ರೀ
ವ್ರೋಮ ತಂಬೂರಿ ನಾದ – ಆನಂದ ಕುಂಚನೂರ
ಲಂಕೇಶ್ ಹೇಗಿದ್ದರು!?- ಹಾಲತಿ ಸೋಮಶೇಖರ್

ಗಾಂಧೀಜಿಯ ಅಂತಿಮ ದಿನಗಳು (ರಾಜಶೇಖರ ಮಠಪತಿ)
‘ನನ್ನ ಈ ಸ್ಥಿತಿ ನೋಡಿ ನಿನಗೆ ಮರುಕ ಹುಟ್ಟುತ್ತಿಲ್ಲವೇ? ಕನಿಷ್ಠ ನಿನ್ನಂಥವರಾದರೂ ನನ್ನನ್ನು ಸಾಧ್ಯವಾದಷ್ಟು ಬೇಗ ಈ ಪ್ರಪಂಚದಿಂದ ಕರೆಯಿಸಿಕೊಳ್ಳುವಂತೆ ಯಾಕೆ ದೇವರ ಮೊರೆ ಹೋಗಬಾರದು? ನಾನೀಗ ಎಲ್ಲರಿಗೂ ಕಿರಿಕಿರಿಯಾಗಿದ್ದೇನಲ್ಲವೆ? ಉಳಿದವರು ತಪ್ಪು, ನಾನು ಸರಿ ಎಂದು ಅಂದುಕೊಳ್ಳುವುದಾದರೂ ಹೇಗೆ? ಆದರೆ ನನಗೂ ಅಷ್ಟೇ ನೋವಾಗುತ್ತದೆ. ಯಾವ ಜನರನ್ನು ನಾನು ಶ್ರೀರಾಮನ ಸ್ವರೂಪರು ಎಂದುಕೊಂಡಿರುವೆನೊ ಅದೇ ಜನ ಹೀಗೆ ಮೋಸ ಮಾಡುವುದೇ?
*
ಮೌನೇಶ್ ಬಡಿಗೇರ
ಕುಸುಮಬಾಲೆ/ಒಡಲಾಳ -ದೇವನೂರ ಮಹದೇವ
ತಲೆದಂಡ- ಗಿರೀಶ್ ಕಾರ್ನಾಡ್
ಹಳ್ಳ ಬಂತು ಹಳ್ಳ – ಶ್ರೀನಿವಾಸ ವೈದ್ಯ
ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ – ಲಕ್ಷ್ಮೀಶ ತೋಳ್ಪಾಡಿ
ಅಂತಃಪಠ್ಯ- ಅಕ್ಷರ ಕೆ.ವಿ
ದಾರಿನೆಂಟ- ಲಲಿತಾ ಸಿದ್ಧಬಸವಯ್ಯ
ರಾಘವೇಂದ್ರ ಪಾಟೀಲರ ಸಮಗ್ರ ಕಥೆಗಳು
ಜಯಂತ ಕಾಯ್ಕಿಣಿಯವರ ಸಮಗ್ರ ಕಥೆಗಳು
ಪರಿಸರದ ಮರುದನಿಗಳು – ಶಶಿಧರ ವಿಶ್ವಾಮಿತ್ರ

ಜಗತ್ತಿನ ಅತಿ ಸಣ್ಣ ಕತೆಗಳು (ಎಸ್.ದಿವಾಕರ್)
ಪ್ರಪಂಚದ ಅನೇಕ ದೇಶಗಳ ಲೇಖಕರು ಬದುಕಿನ ಅಪೂರ್ವ ಕ್ಷಣಗಳನ್ನು ಹಿಡಿದಿಟ್ಟಿರುವ ಅಪರೂಪದ ಸಂಕಲನ ಅತಿ ಸಣ್ಣ ಕತೆಗಳು. ಗ್ಯಾಬ್ರಿಯಲ್ ಗಾರ್ಸಿಯಾ ಮಾರ್‌ಕೆಸ್, ಹೇನ್ರಿಕ್ ರ್ಬ್ಯೋಲ್, ಯಾಸುನಾರಿ ಕವಾಬಾಟ, ಅರ್ನೆಸ್ಟ್ ಹೆಮಿಂಗ್‌ವೇ, ಒಕ್ತಾವಿಯೋ ಪಾಜ್, ನಗೀಬ್ ಮಹಫೂಸ್ ಮೊದಲಾದ ನೊಬೆಲ್ ಪ್ರಶಸ್ತಿ ವಿಜೇತರಿಂದ ಹಿಡಿದು ನಾವು ಓದಲೇಬೇಕಾದ, ಓದಿದರೆ ಇನ್ನೂ ಓದಬೇಕೆನಿಸುವ ಇಲ್ಲಿನ ಕತೆಗಳು ಓದುಗರನ್ನು ಮನುಷ್ಯ ಲೋಕದ ವಸ್ತು ಪ್ರದರ್ಶನವೊಂದರಲ್ಲಿ ಸುತ್ತಾಡಿಸುವಂತಿವೆ.
*
ಸಚ್ಚಿದಾನಂದ ಹೆಗಡೆ
ಕೇಪಿನ ಡಬ್ಬಿ- ಪದ್ಮನಾಭ ಭಟ್ಟ ಶೇವ್ಕಾರ
ಅಕ್ಷಿ ಎಂದಿತು ವೃಕ್ಷ- ವಿಕ್ರಮ ಹತ್ವಾರ್
ಮಾಯಾಕೋಲಾಹಲ – ಮೌನೇಶ್ ಬಡಿಗೇರ
ಬೆಂಕಿಗೆ ಹೊದಿಸಿದ ಬಟ್ಟೆ – ಆರೀಫ್ ರಾಜಾ
ನ್ಯಾಸ – ಹರೀಶ್ ಹಾಗಲವಾಡಿ
ಮಿಶೆಲ್ ಫ್ರಕೋ(ಸತ್ಯ ಅಧಿಕಾರ ಮತ್ತು ಮುಕ್ತ ಮಾತುಕತೆ)- ಎ.ಪಿ.ಅಶ್ವಿನ್ ಕುಮಾರ್
ಕಸಬರಿಗೆ ಪಾದ – ಬಸವರಾಜ ಹೃತ್ಸಕ್ಷಿ
ಮಲೆದೇಗುಲ(ಪುತಿನ ಕಾವ್ಯ ಮತ್ತು ಫೋಟೋಗ್ರಫಿ)- ಎ.ಎನ್.ಮುಕುಂದ ಮತ್ತು ಪ್ರತೀಕ್ ಮುಕುಂದ

ಪುಟ್ಟಲಕ್ಷ್ಮಿ ಕಥೆಗಳು (ರಘುನಾಥ ಚ.ಹ)

ಎಣ್ಣೆಗೆಂಪು ಬಣ್ಣದ, ಮೊಂಡು ಮೂಗಿನ ಪುಟ್ಟಲಕ್ಷ್ಮಿ ಅಪ್ಪ- ಅಮ್ಮನ ಮುದ್ದಿನ ಮಗಳು. ಎರಡನೆ ತರಗತಿಯಲ್ಲೋ ಮೂರನೆ ತರಗತಿಯಲ್ಲೋ ಓದುತ್ತಿರುವ ಪುಟ್ಟಲಕ್ಷ್ಮಿ ತುಂಬಾ ಜಾಣೆ, ಧೈರ್ಯವಂತೆ. ಕನ್ನಡದ ಬಗ್ಗೆ ಅಪಾರ ಪ್ರೇಮವುಳ್ಳ ಪುಟ್ಟಲಕ್ಷ್ಮಿಯನ್ನು ಕಂಡರೆ ಶಾಲೆಯ ಸರ್‌ಗಳಿಗೂ ಮಿಸ್‌ಗಳಿಗೂ ಹಾಗೂ ಆಯಮ್ಮಗಳಿಗೂ ತುಂಬಾ ಇಷ್ಟ… ಅವಳ ಗೆಳೆತನ ಮಾಡಿಕೊಳ್ಳುವ ಸುಲಭದ ದಾರಿಯೆಂದರೆ ಇಲ್ಲಿನ ಕತೆಗಳನ್ನು ಓದುವುದು ಮತ್ತು ಮಕ್ಕಳಿಗೆ ಓದಿಹೇಳುವುದು.

*

ಉಷಾ ಕಟ್ಟೆಮನೆ
ಮೋಹನ ಸ್ವಾಮಿ- ವಸುಧೇಂದ್ರ
ಗತಿಸ್ಥಿತಿ ಮತ್ತೆಲ್ಲ -ಗಿರಿ
ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ – ಲಕ್ಷ್ಮೀಶ ತೋಳ್ಪಾಡಿ
ಎನ್ನ ಭವದ ಕೇಡು-ಸೂರಿ
ಗಾಂಧಿ ಬಂದ- ಎಚ್.ನಾಗವೇಣಿ
ಅನುಕ್ತ- ರವಿಕುಮಾರ್ ಕಾಶಿ
ಮುದುಕಿಯರಿಗಿದು ಕಾಲವಲ್ಲ- ಪ್ರತಿಭಾ ನಂದಕುಮಾರ್
ಅರೆಶತಮಾನದ ಮೌನ – ಅನುವಾದ; ಅರುಣ್
ಬೆಸುಗೆಯ ಬಂಧನದಲ್ಲಿ (ಬಾ ಮತ್ತು ಬಾಪು ದಾಂಪತ್ಯ ಕಥನ)-ಡಾ. ವಿಜಯ ಸುಬ್ಬರಾಜು
ಸಾವನ್ನು ಸ್ವಾಗತಿಸಿ (ಷ. ಶೆಟ್ಟರ್)

ಭಾರತದಲ್ಲಿ ಪುರಾತನ ಕಾಲದಿಂದ ಸುಮಾರು ಹದಿನೈದನೆಯ ಶತಮಾನದವರೆಗೆ ಸ್ಥಿತ್ಯಂತರಗೊಳ್ಳುತ್ತಿದ್ದ ಮರಣ ಪ್ರಕ್ರಿಯೆಯ ಚಾರಿತ್ರಿಕ ವಿಶ್ಲೇಷಣೆಯ ಗ್ರಂಥ ಇದು. ಹಲವು ನಕ್ಷೆ, ರೇಖಾಚಿತ್ರ ಮತ್ತು ಕಪ್ಪುಬಿಳುಪಿನ ದೃಶ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು, ಸಮಾಧಿಕಲೆಯನ್ನು ಇಲ್ಲಿ ಪರಿಚಯಿಸಲಾಗಿದೆ. ವಾಸ್ತವವಾಗಿ ಇದು ವಿಭಿನ್ನ ಓದುಗರಿಗೆ ಒದಗಿಸಿರುವ ಎರಡು ಪಠ್ಯಗಳ ಒಂದು ಗ್ರಂಥ. – ಅಗೇಹನಂದ ಭಾರತಿ
*

ಎಲ್. ಸುರೇಂದ್ರನಾಥ ಆಯ್ಕೆ

ಶನಿವಾರ ಸಂತೆ – ಎಂ. ಎಸ್.ಶ್ರೀರಾಮ್
ಎದೆಗೆ ಬಿದ್ದ ಅಕ್ಷರ – ದೇವನೂರು ಮಹಾದೇವ
ಹಾರಿಕೊಂಡು ಹೋದವನು – ಎಸ್.ದಿವಾಕರ್
ಅಂಗದ ಧರೆ – ಕೇಶವ ಮಳಗಿ
ಸವಾರಿ – ಅಮರೇಶ್ ನುಗಡೋಣಿ
ಜಯಂತ್ ಕಾಯ್ಕಿಣಿಯವರ ಎಲ್ಲಾ ಕತೆಗಳು
ಕೇಪಿನ ಡಬ್ಬಿ – ಪದ್ಮನಾಭಭಟ್ ಶೇವ್ಕಾರ್
ಮಾಯಿಯ ಮೂರು ಮುಖಗಳು – ರಾಘವೇಂದ್ರ ಪಾಟೀಲ
ಘಾಚರ್ ಘೋಚರ್ – ವಿವೇಕ್ ಶಾನಭಾಗ
ಶನಿವಾರ ಸಂತೆ – ಎಂ. ಎಸ್. ಶ್ರೀರಾಮ್

ಕೇಪಿನ ಡಬ್ಬಿ (ಪದ್ಮನಾಭ ಭಟ್)
ಕಲಾಪಠ್ಯವೆನ್ನುವುದು ಅನುಭವ-ಕಾಣ್ಕೆಗಳ ಅಖಂಡ ಸೃಷ್ಟಿ ಎನ್ನುವುದು ನಿಜ. ಆದರೆ ಅನುಭವಗಳೊಂದಿಗಾಗಲಿ ಕಾಣ್ಕೆಗಳೊಂದಿಗಾಗಲಿ ನಿಷ್ಠುರವಾದ ಅನುಸಂಧಾನಕ್ಕೆ ಬೇಕಾಗುವ ಮನೋವಿನ್ಯಾಸವನ್ನು ಕಟ್ಟಿಕೊಳ್ಳುವುದು ಮತ್ತು ಅದನ್ನು ಎಲ್ಲ ಕಾಲಕ್ಕೂ ಉಳಿಸಿಕೊಳ್ಳುವುದು ಒಂದು ನಿರಂತರ ಸವಾಲು. ಪದ್ಮನಾಭ ಅವರು ಈ ಸವಾಲನ್ನು ಬಹುದಿಟ್ವಾಗಿ ಎದುರಿಸಿದ್ದಾರೆ. ಆರಂಭದಲ್ಲಿ ಸಹಜವೆನ್ನುವಂತೆ ಕಾಡುವ ಕೆಲವು ಹಿಂಜರಿಕೆ ಮತ್ತು ಅನುಮಾನಗಳನ್ನು ಪದ್ಮನಾಭ ಯಶಸ್ವಿಯಾಗಿ ನಿಭಾಯಿಸಿದ್ದಾರೆಂದೇ ಅವರ ಕಥೆಗಳಲ್ಲಿ ಅಪಾರ ಆಸಕ್ತಿ ಹುಟ್ಟುತ್ತದೆ.
– ಎಂ.ಎಸ್.ಆಶಾದೇವಿ
*

ಚಂಪಾ ಆಯ್ಕೆ
ಗಾಯಂಗೊಂಡಿದೆ ಗರಿಕೆ ಗಾನ – ಕೃಷ್ಣಮೂರ್ತಿ ಬೆಳಗೆರೆ
ಅಮೆರಿಕನ್ ಮನೆ – ಕೆ. ಸತ್ಯನಾರಾಯಣ
ಮೂರು ಸಂಜು ಮುಂದ ಧಾರವಾಡ – ಮಲ್ಲಿಕಾರ್ಜುನ ಹಿರೇಮಠ
ಊರ್ಧ್ವಸ್ಥ – ಡಿ.ಎಸ್.ಚೌಗಲೆ
ನಿತ್ಯಂ ಭ್ರೂಯಾತ್- ನಾರಾಯಣ ಘಟ್ಟ
ಇದ್ದೇನಯ್ಯಾ ಇಲ್ಲದಂತೆ – ಶಶಿಕಲಾ ವಸ್ತ್ರದಮಠ
ಕಬಂಧ ಬಾಹುಗಳು ಬೇಕಿಲ್ಲ -ಡಾ.ಮುಮ್ತಾಜ್ ಬೇಗಂ
ತುಂತುರು – ಸತ್ಯೇಶ ಎನ್. ಬೆಳ್ಳೂರು
ಬಸವರಾಜ ಕುಕ್ಕರಹಳ್ಳಿ ಕಥಾಲೋಕ

ಕೃಷ್ಣೆ ಹರಿದಳು (ಬಾಳಾಸಾಹೇಬ ಲೋಕಾಪುರ)
ಗ್ರಾಮಜಗತ್ತಿನ ಒಳಸುಳಿಗಳು, ಸಂಘರ್ಷಗಳು, ಸಂಕಟಗಳು ಹಾಗೂ ಪಲ್ಲಟವನ್ನು ನಿರುದ್ವಿಗ್ನವಾಗಿ ಚಿತ್ರಿಸುವ ‘ಕೃಷ್ಣೆ ಹರಿದಳು’ಕಾದಂಬರಿ ಏಕಾಕೃತಿಯ ಸ್ವರೂಪ್ಪದ್ದಲ್ಲ; ಅನೇಕ ಎಳೆಗಳ ಹೆಣಿಗೆ ಈ ಕೃತಿಯ ವಿನ್ಯಾವನ್ನು ರೂಪಿಸಿದೆ. ಹೀಗಾಗಿ ಈ ಕಾದಂಬರಿ ಒಂದು ಬಹುಮುಖಿ ಕಥನ. ಕತೆಯ ಜೀವಶಕ್ತಿಯ ಬಗ್ಗೆ ಗಾಢ ನಂಬಿಕೆಯಿರುವ ಲೋಕಾಪುರ ಅವರಿಗೆ ಕತೆಯೆಂದರೆ ಬದುಕು. ತಮ್ಮ ಪರಿಸರ ಬದುಕಿನ ಅನೇಕ ವಿನ್ಯಾಸಗಳನ್ನು ಬಾಳಾಸಾಹೇಬ ಇಲ್ಲಿ ದಟ್ಟವಾಗಿ ಇಲ್ಲಿ ಕಟ್ಟಿಕೊಡುತ್ತಾರೆ. ನಗರೀಕರಣದ ಉತ್ಪಾತಗಳ ತಲ್ಲಣಗಳ ಜೊತೆಜೊತೆಗೇ ಪರಿಹಾರದ ಸಾಧ್ಯತೆಗಳನ್ನೂ ಸೂಚಿಸುವ ಈ ಕಾದಂಬರಿ ನಮ್ಮ ಕಾಲದ ಚರಿತ್ರೆಯ ಕಥನ.
– ನರಹಳ್ಳಿ ಬಾಲಸುಬ್ರಹ್ಮಣ್ಯ

*

ವೈಶಾಲಿ ಹೆಗಡೆ
ಘಾಚರ್ ಘೋಚರ್ – ವಿವೇಕ ಶಾನಭಾಗ
ಊರುಭಂಗ – ವಿವೇಕ ಶಾನಭಾಗ
ಚಾರ್‌ಮಿನಾರ್ – ಜಯಂತ ಕಾಯ್ಕಿಣಿ
ಸಮಾಜಶಾಸ್ತ್ರಜ್ಞೆಯ ತಿಪ್ಪನಿಗೆ – ವೈದೇಹಿ
ಗಾಂಧಿಕ್ಲಾಸು – ಕುಂವೀ
ಸ್ವಪ್ನ ಸಾರಸ್ವತ – ಗೋಪಾಲಕೃಷ್ಣ ಪೈ
ಹಂಪಿ ಎಕ್ಸ್‌ಪ್ರೆಸ್ – ವಸುಧೇಂದ್ರ
ನೇಮಿಚಂದ್ರರ ಕತೆಗಳು – ನೇಮಿಚಂದ್ರ
ದೇವರ ರಜಾ – ಗುರುಪ್ರಸಾದ್ ಕಾಗಿನೆಲೆ

ಕಾಲುಚಕ್ರ (ಅಬ್ದಲ್ ರಶೀದ್)
ಈ ಲೇಖನಗಳು ಕಥೆ ಕಾದಂಬರಿಗಿಂತಲೂ ಹೆಚ್ಚು ಆಪ್ತವಾಗುತ್ತವೆ. ಫಿಕ್ಷನ್ ಹಿಂದಕ್ಕೆ ಸರಿದು ರಿಯಾಲಿಟಿಯೇ ಮುಂದಕ್ಕೆ ಬರುವ ಲಕ್ಷಣಗಳು ಎಲ್ಲೆಡೆಯೂ ಕಾಣಿಸುತ್ತಿವೆ. ನೈಜತೆಯನ್ನು ಕಥೀಕರಿಸದೆ, ನೈಜವಾಗಿಯೇ ತೋರಿಸಲು ಯತ್ನಿಸುವ ಕೃತಿಗಳು ಇಂದು ಜನರಿಗೆ ಬೇಕಾಗಿವೆ. ಕಾಲುಚಕ್ರದ ಲೇಖನಗಳು ಇಂಥ ರಿಯಾಲಿಟಿಯ ತುಣುಕುಗಳು. ಆದರೆ ಅಷ್ಟಕ್ಕೇ ಯಾವುದೂ ಪ್ರಶಂಸೆಗೆ ಪಾತ್ರವಾಗಬೇಕೆಂದಿಲ್ಲ. ಹಾಗಾಗುತ್ತಿದ್ದರೆ, ಪತ್ರಿಕೆಯಲ್ಲಿನ ಸುದ್ದಿ ಚೂರುಗಳು ಶ್ರೇಷ್ಠ ಬರಹಗಳು ಎನಿಸುತ್ತಿದ್ದವು. – ಕೆ.ವಿ. ತಿರುಮಲೇಶ್
*
ಡಾ.ಎಚ್.ಎಸ್.ಅನುಪಮಾ
ದಾರಿ ನೆಂಟ (ಕವಿತೆ) – ಲಲಿತಾ ಸಿದ್ಧಬಸವಯ್ಯ
ಕಣ್ಣಹನಿಗಳೆ ಕಾಣಿಕೆ – ಎಚ್.ಎಸ್.ರಾಘವೇಂದ್ರ ರಾವ್
ಬುಗುರಿ (ಕಥಾ ಸಂಕಲನ) – ಮೊಗಳ್ಳಿ ಗಣೇಶ್
ಅಮೀರ್ ಬಾಯಿ ಕರ್ನಾಟಕಿ (ಜೀವನ ಚರಿತ್ರೆ) – ರಹಮತ್ ತರೀಕೆರೆ
ಕಾಡು ಲಿಲ್ಲಿಯ ಹೂಗಳು – ಸವಿತಾ ನಾಗಭೂಷಣ
ಗಾಂಧಿ ಬಂದ (ಕಾದಂಬರಿ) – ಎಚ್. ನಾಗವೇಣಿ
ಸಿಂಗರ್ ಕತೆಗಳು – ಓ. ಎಲ್. ನಾಗಭೂಷಣ ಸ್ವಾಮಿ
ಮಾತು ಮಂತ್ರವಾಗುವವರೆಗೆ – ಎಚ್.ಎಸ್.ಶಿವಪ್ರಕಾಶ್
ದ್ವಿತ್ವ (ಕಾದಂಬರಿ) – ಡಾ.ಆರ್.ಸುನಂದಮ್ಮ

ಋಗ್ವೇದ ಪ್ರವೇಶಿಕೆ (ಡಾ. ಜಿ. ರಾಮಕೃಷ್ಣ)
ಮಾನವನ ನಾಗರಿಕತೆಯ ಇತಿಹಾಸದಲ್ಲಿ ಋಗ್ವೇದಕ್ಕಿಂತಲೂ ಪ್ರಾಚೀನವಾದ ಹಲವಿವೆ. ಹರಪ್ಪ-ಮೊಹೆಂಜೋದಾರೊ, ಬ್ಯಾಬಿಲೋನೊಯಾ, ಈಜಿಪ್ತ್ ಮುಂತಾದವು ಅದಕ್ಕೆ ಉದಾಹರಣೆ. ಆದರೆ ಋಗ್ವೇದವೇ ಮಾನವ ಸಂಸ್ಕೃತಿಯ ಆದಿಗ್ರಂಥ. ಅದನ್ನು ಗುರುತಿಸಿ, ಗೌರವಿಸಲು ನಮ್ಮಲ್ಲಿ ಅದನ್ನು ‘ಅಪೌರುಷೇಯ’ ಎನ್ನಲಾಗಿದೆ.
*
ಕರ್ಕಿ ಕೃಷ್ಣಮೂರ್ತಿ
360 ಡಿಗ್ರೀ – ನಾಗರಾಜ ವಸ್ತಾರೆ
ತುದಿ ಮಡಚಿಟ್ಟ ಪುಟ – ಸುನಂದಾ ಕಡಮೆ
ಸರ್ವಋತು ಬಂದರು – ಸಿಂಧು ರಾವ್
ಪರ್ವತದಲ್ಲಿ ಪವಾಡ – ಸಂಯುಕ್ತಾ ಪುಲಿಗಲ್
ಕೇಪಿನ ಡಬ್ಬಿ- ಪದ್ಮನಾಭ ಭಟ್ ಶೇವ್ಕಾರ
ಆಕ್ಷೀ ಅಂದಿತು ವೃಕ್ಷ – ವಿಕ್ರಮ್ ಹತ್ವಾರ್
ಮಾಯಾ ಕೋಲಾಹಲ – ಮೌನೇಶ ಬಡಿಗೇರ
ಪುಟ್ಟಲಕ್ಷ್ಮಿ ಕಥೆಗಳು – ರಘುನಾಥ ಚ.ಹ
ಮರೆವಿನ ಬಳ್ಳಿ- ಸಚ್ಚಿದಾನಂದ ಹೆಗಡೆ

ಎವರೆಸ್ಟ್(ವಸುಧೇಂದ್ರ)
1996ರ ಮೇ ತಿಂಗಳಲ್ಲಿ ಎವರೆಸ್ಟ್ ಪರ್ವತಾರೋಹಣ ತಂಡವೊಂದರಲ್ಲಿ ಭಾಗವಹಿಸಿ, ಲೇಖನವೊಂದನ್ನು ಬರೆಯುವುದಕ್ಕಾಗಿ ‘ಔಟ್ ಸೈಡ್’ಪತ್ರಿಕೆ ನನ್ನನ್ನು ನೇಪಾಳಕ್ಕೆ ಕಳುಹಿಸಿತು. ಈ ತಂಡವು ಪ್ರಸಿದ್ಧ ಮಾರ್ಗದರ್ಶಕನಾದ ರಾಬ್ ಹಾಲ್ ಎನ್ನುವ ನ್ಯೂಜಿಲೆಂಡಿನ ಪರ್ವತಾರೋಹಿಯ ನೇತೃತ್ವದಲ್ಲಿ ನಡೆಯುತ್ತಿತ್ತು. ಮೇ, 10ನೇ ತಾರೀಕಿನಂದು ನಾನು ಎವರೆಸ್ಟ್ ಪರ್ವತದ ತುದಿಯನ್ನು ತಲುಪಿದೆನಾದರೂ, ಈ ಸಾಧನೆಯು ಇಡೀ ತಂಡವು ಒಂದು ದೊಡ್ಡ ದುರಂತಕ್ಕೆ ಬೆಲೆಯನ್ನು ತೆತ್ತುವುದರೊಂದಿಗೆ ಬಂದಿತ್ತು. – ಜಾನ್ ಕ್ರಾಕೌರ್
*
ಉದಯಕುಮಾರ ಹಬ್ಬು
ಆಧುನಿಕ ಚೀನಿ ಕಥೆಗಳು- ಗೋಪಾಲಕೃಷ್ಣ ಪೈ
ಅದು ಅಂತರಂಗದ ಸಿದ್ಧಿ- ವಿ.ಎನ್ ಶಾನಭಾಗ
ಅಮೃತಪಡಿ – ಶ್ರೀಧರ ಬಳಗಾರ
ಯಾರೂ ನೆಡದ ಮರ – ಗಣೇಶ ಹೊಸ್ಮನೆ
ಹಳ್ಳ ಬಂತು ಹಳ್ಳ- ಶ್ರೀನಿವಾಸ ವೈದ್ಯ
ಅಲ್ಲಮ ಪ್ರಭು ಮತ್ತು ನಾಗಾರ್ಜುನ – ಒಂದು ತೌಲನಿಕ ಅಧ್ಯಯನ ಲೇಖಕ ಡಾ. ನಟರಾಜ ಬೂದಾಳು
ದ್ವಾಪರ- ಕಂನಾರಾಯಣ

ಯಾರ ಮುಲಾಜೂ ಇಲ್ಲದೆ (ಹರಿಯಪ್ಪ ಪೇಜಾವರ)
ಪಾದ್ರಿಗಳು ಆದಿವಾಸಿಗಳಿಗೆ ತಮ್ಮ ದೇಹವನ್ನು ಮುಚ್ಚುವಂತೆ ಉಪದೇಶಿಸಿ ಹತ್ತಿಯ ಸಾಮಾನುಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿದ್ದಾರೆ. ಒಂದು ವೇಳೆ ಮನುಷ್ಯ ದೇಹದಲ್ಲಿ ನಾಚಿಕೆ ಪಡುವಂಥದ್ದು ಏನೂ ಇಲ್ಲವಾಗಿದ್ದಿ ದ್ದರೆ ಹತ್ತಿ ಉದ್ದಿಮೆಯನ್ನು ತನ್ನ ಲಾಭದ ಮೂಲವನ್ನು ಬಹುಶಃ ಕಳೆದುಕೊಳ್ಳಬೇಕಾಗಿ ಬರುತ್ತಿತ್ತು. ಸದ್ಗುಣಗಳನ್ನು ವ್ಯಾಪಕವಾಗಿ ಹರಡುವ ಮೂಲಕ ಲಾಭ ಹೆಚ್ಚಾಗುತ್ತದೆ ಎನ್ನುವುದನ್ನು ಈ ಉದಾಹರಣೆಗೆ ತೋರಿಸು ತ್ತದೆ. (ಸಭ್ಯ ಮನುಷ್ಯರು ಲೇಖನದಿಂದ)
*
ಹರೀಶ್ ಕೇರ
ಸರ್ವ ಋತು ಬಂದರು – ಸಿಂಧು ರಾವ್
ಪರ್ವತದಲ್ಲಿ ಪವಾಡ – ಸಂಯುಕ್ತ ಪುಲಿಗಲ್
ಜೀರೋ ಮತ್ತು ಒಂದು -ವಿಕ್ರಮ್ ಹತ್ವಾರ್
ರಾಮಂದ್ರ – ಹರಿಪ್ರಸಾದ್
ಅಲೆ ತಾಕಿದರೆ ದಡ – ವಾಸುದೇವ ನಾಡಿಗ್
ಮೊದಲ ಮಳೆಯ ಮಣ್ಣು – ಕಣಾದ ರಾಘವ
ಕುಮಾರವ್ಯಾಸನ ಕಾಲನಿರ್ಣಯ – ಧನಂಜಯ ಕುಂಬ್ಳೆ
ಧ್ಯಾನಕ್ಕೆ ತಾರೀಕಿನ ಹಂಗಿಲ್ಲ- ಕಾವ್ಯ ಕಡಮೆ ನಾಗರಕಟ್ಟೆ
ಕೇಪಿನ ಡಬ್ಬಿ – ಪದ್ಮನಾಭ ಭಟ್ ಶೇವ್ಕಾರ
*
ಮಳೆಗಾಲ ಬಂದು ಬಾಗಿಲು ತಟ್ಟಿತು (ವಿಕಾಸ ನೇಗಿಲೋಣಿ)
ವಿಕಾಸ್ ಪಕ್ಕ ಕೂತುಕೊಂಡು ಇನ್ನೊಂಚೂರು ಕತೆ ಹೇಳಿ ಅಂತ ಕೇಳುವ ಆಸೆಯಾಗುತ್ತದೆ. ಅವರೊಳಗೊಂದು ನಾವ್ಯಾರೂ ನೋಡದ ಜಗತ್ತಿದೆ. ತೀರ್ಥಹಳ್ಳಿಯ ಹಸಿರು, ಉಡುಪಿಯ ಗಂಧ, ಉಜಿರೆಯ ನಿಗೂಢ- ಎಲ್ಲವೂ ವಿಕಾಸ್ ಭಾವಕೋಶದೊಳಗೆ ಸೇರಿಕೊಂಡು ಹೊಚ್ಚಹೊಸ ಕಥಾಜಗತ್ತೊಂದನ್ನು ರೂಪಿಸಿದೆ. ಆ ಜಗತ್ತಿನಲ್ಲಿ ಒಂದು ಹಳೆಯ ಮನೆ, ಎಂದೋ ತಿರುಗಿ ಬರುವ ಅಪ್ಪ, ಪ್ರೇಮ ಕೂಡ ಕತೆಯಾಗುವ ವಿಷಾದ, ನೆನಪು ಮತ್ತು ಆಶೆಗಳು ಕಲೆಸಿಕೊಳ್ಳುವ ಪವಾಡ – ಎಲ್ಲವೂ ಜರುಗುತ್ತದೆ. – ಜೋಗಿ
****
ತೇಜಸ್ವಿನಿ ಹೆಗಡೆ
ತೆಂಕನಿಡಿಯೂರಿನ ಕುಳುವಾರಿಗಳು – ಡಾ.ವ್ಯಾಸರಾವ್ ನಿಂಜೂರ್
ನ್ಯಾಸ – ಹರೀಶ ಹಾಗಲವಾಡಿ
ಬಿ ಕ್ಯಾಪಿಟಲ್ – ಜೋಗಿ
ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ – ಶೃತಿ ಬಿ.ಎಸ್.
ಪದ್ಮಪಾಣಿ – ಡಾ.ಕೆ.ಎನ್. ಗಣೇಶಯ್ಯ
ಹರಿಚಿತ್ತ ಸತ್ಯ – ವಸುಧೇಂದ್ರ
ಯಾದ್ ವಶೇಮ್ – ನೇಮಿಚಂದ್ರ
ಕಾಲಜಿಂಕೆ – ಕೆ.ಸತ್ಯನಾರಾಯಣ
ಕೇಪಿನ ಡಬ್ಬಿ – ಪದ್ಮನಾಭ ಭಟ್ ಶೇವ್ಕಾರ್
ದಾಟು – ಎಸ್.ಎಲ್.ಭೈರಪ್ಪ

ನನ್ನಿ (ಕರಣಂ ಪವನ್ ಪ್ರಸಾದ್)
ಕಾದಂಬರಿಯ ವಸ್ತು ಮೇಲ್ನೋಟಕ್ಕೆ ‘ನನ್’ಒಬ್ಬಳ ಸತ್ಯಾನ್ವೇಷಣೆಯಂತೆ ಕಂಡರೂ, ಇದರ ವಸ್ತು ಮನುಷ್ಯನ ಮೂಲ ಪ್ರವೃತ್ತಿಯ ಹುಡುಕಾಟವಾಗಿದೆ. ಸಮಕಾಲೀನವಲ್ಲದ, ಒಂದು ಪ್ರದೇಶದ ಸೀಮಿತ ವಸ್ತುವನ್ನು ಒಳಗೊಳ್ಳದ, ವಿಸ್ತಾರವಾಗಿ ಹರಡಿಕೊಂಡಿರುವ ಕಥಾವಸ್ತುವಿನಲ್ಲಿ, ಪ್ರತಿ ಪಾತ್ರವೂ ‘ಸತ್ಯ ಎಂದರೆ ಸೂರ್ಯನಿದ್ದಂತೆ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವು ಎಂಬುದನ್ನು ನಿರೀಕ್ಷಿಸುತ್ತದೆ.’ವಸ್ತು, ಸಾಮಗ್ರಿ, ರಸಸೃಷ್ಟಿ, ಅಭಿವ್ಯಕ್ತಿ ಇವೆಲ್ಲದರ ಒಟ್ಟಂದದ ಕಲಾಕೃತಿಯೇ ‘ನನ್ನಿ’.
*
ಟಿ.ಎಸ್.ಗೊರವರ
ಕತೆ ಎಂಬ ಇರಿವ ಅಲಗು – ಮಂಜುನಾಥ ಲತಾ
ಜಂಗಮ ಫಕೀರನ ಜೋಳಿಗೆ – ಆರೀಫ್ ರಾಜಾ
ಕಾಣ್ಕೆ ಕಣ್ಕಟ್ಟು – ಡಾ. ಸುರೇಶ್ ನಾಗಲಮಡಿಕೆ
ಕಿಚ್ಚಿಲ್ಲದ ಬೇಗೆ – ಶೈಲಜಾ ನಾಗರಘಟ್ಟ
ಜುಲುಮೆ (ಕವನ ಸಂಕಲನ) – ರಮೇಶ ಅರೋಲಿ
ಕಸಬಾರಿಗೆ ಪಾದದವರು – ಬಸವರಾಜ ಹೃತ್ಸಾಕ್ಷಿ
ಬೋಧಿ ನೆರಳಿನ ದಾರಿ – ವಿಠ್ಠಲ ದಳವಾಯಿ
ನೆಲದ ಕರುಣೆಯ ದನಿ – ವೀರಣ್ಣ ಮಡಿವಾಳರ
ನನ್ನೊಳಗಿನ ನಿನ್ನ ನಡಿಗೆ (ಅನುವಾದ)
– ಜ.ನಾ.ತೇಜಶ್ರೀ

ಬಲಿಹಾರ (ಚೀಮನಹಳ್ಳಿ ರಮೇಶಬಾಬು)
ರಮೇಶಬಾಬು ಅವರ ಬಲಿಹಾರ ನಮ್ಮ ಸಮಾಜವನ್ನು ವಾಸ್ತವವಾದಿಯಾಗಿ ಕಾಣಿಸುತ್ತದೆ. ಸಮಾಜದ ಊನವುಳ್ಳ ಕುಟುಂಬ ವ್ಯವಸ್ಥೆಯ ತುಣುಕೊಂದನ್ನು ಕಥಿಸುತ್ತದೆ. ಅಂತಹ ಸಂದರ್ಭದಲ್ಲಿ ಹೆಣ್ಣಿನ ಪಾತ್ರ ಹೇಗಿರುತ್ತದೆ? ಹೇಗಿರಬೇಕು? ಎಂಬ ವೈಚಾರಿಕತೆಯನ್ನು ಕಾದಂಬರಿ ಕಥನರೂಪಿಯಾಗಿ ಮಂಡಿಸುತ್ತದೆ. ಈ ದೃಷ್ಟಿಯಿಂದ ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಪಠ್ಯ ಆಗಬಲ್ಲುದು.
– ಡಾ.ರಾಮಲಿಂಗಪ್ಪ ಟಿ.ಬೇಗೂರು
*
ಗಿರೀಶ್ ಹಂದಲಗೆರೆ
ಕಡಲ ಕರೆ (ಅನುವಾದಿತ) – ಕಾಜೂರು ಸತೀಶ್
ಬೀಸುವ ಗಾಳಿಗೆ ಯಾರಹಂಗಿಲ್ಲ- ಸತ್ಯಮಂಗಲ ಮಹದೇವ
ಲಾವೋನ ಕನಸು – ರಾಜೇಂದ್ರ ಪ್ರಸಾದ್
ಬೆಂಕಿಗೆ ತೊಡಿಸಿದ ಬಟ್ಟೆ-ಆರೀಫ್ ರಾಜ
ಚಾಟಿಗೆ ಕಟ್ಟಿದ ಗೆಜ್ಜೆ – ಎಸ್.ಮಂಜುನಾಥ್
ಕಸಬಾರಿಗೆ ಪಾದ – ಬಸವರಾಜ್ ಹೃತ್ಸಾಕ್ಷಿ
ರೆಕ್ಕೆ ಹಾವು -ಟಿ.ಕೆ ದಯಾನಂದ್
ಎರಡು ಲೋಟಗಳು – ಚೀಮನಳ್ಳಿ ರಮೇಶ್ ಬಾಬು
ಕಾಣ್ಕೆ, ಕಣ್ಕಟ್ಟು(ವಿಮರ್ಶೆ)- ಸುರೇಶ್ ನಾಗಲ ಮಡಿಕೆ

ಗೆಂಡೆದೇವ್ರ (ಹನುಮಂತ ಹಾಲಿಗೇರಿ)
ಇಲ್ಲಿನ ಕತೆಗಳು ಒಂದೇ ಭಾವದ ಹುದುಲಲ್ಲಿ ಸಿಲುಕದೆ ಲೋಕದ ಹಲವು ಮೊಗಗಳನ್ನು ಕಾಣಿಸುವತ್ತ ಹೊರಳಿಕೊಳ್ಳಬೇಕಿದೆ. ಪಾತ್ರಗಳಾಡುವ ಜೀವಂತ ಭಾಷೆಯನ್ನು ನಿರೂಪಣೆಗೂ ಬಳಸುವ ಪ್ರಯೋಗ ದಿಟ್ಟವಾಗಿದೆ. ಆದರೆ ಅದು ಮತ್ತಷ್ಟು ಧ್ವನಿಪೂರ್ಣತೆಗೆ ಬೇಕಾದ ತಾಳ್ಮೆಯನ್ನು ಗಳಿಸಬೇಕಿದೆ. ಮತ ಧರ್ಮ ಜಾತಿ ಭಾಷೆಗಳಾಚೆ ಎಲ್ಲ ಜೀವಿಗಳಲ್ಲೂ ತುಡಿಯುವ ಮನುಷ್ಯತ್ವವನ್ನು ಕತೆಗಳು ಹುಡುಕುತ್ತಿವೆಯಾಗಿ, ಅವುಗಳ ನರಗಳಲ್ಲಿ ಆಕ್ರೋಶ ಮತ್ತು ವಿಷಾದಗಳು ಚಿಮ್ಮಲು ತವಕಿಸುತ್ತಿವೆ. -ರಹಮತ್ ತರೀಕೆರೆ
*
ಚೈತ್ರಾ ಅರ್ಜುನಪುರಿ
ಗೃಹಭಂಗ – ಎಸ್. ಎಲ್. ಭೈರಪ್ಪ
ಮಂದ್ರ – ಎಸ್.ಎಲ್. ಭೈರಪ್ಪ
ಪಾಪಿಗಳ ಲೋಕದಲ್ಲಿ – ರವಿ ಬೆಳಗೆರೆ
ರಾಷ್ಟ್ರಪತಿ ಜೊತೆ ಹದಿನಾಲ್ಕು ದಿನ- ವಿಶ್ವೇಶ್ವರ ಭಟ್
ಬೆಂಗಳೂರು – ಜೋಗಿ
ಬಾಡದ ಹೂ – ಸಾಯಿಸುತೆ
ನುಡಿ ಪೂಜೆ – ಹಿರೇಮಗಳೂರು ಕಣ್ಣನ್
ಬುದ್ಧ ಮಹಾದರ್ಶನ – ಲತಾ ರಾಜಶೇಖರ್
ಗತಿ – ಬಿ.ಟಿ. ಲಲಿತಾ ನಾಯಕ್

ಗಾಂಧಿಕ್ಲಾಸು (ಕುಂವೀ)
ಗಾಂಧಿ ಕ್ಲಾಸ್ ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು; ಕುಂವೀ ಮರೆತು ಆತ್ಮಕಥೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿ ಒಂದನ್ನು ನನಗೆ ಕಳಿಸಿದ್ದಾರೆಯೇ? ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೇ? -ಸಿ.ಎನ್.ರಾಮಚಂದ್ರನ್
*
ಸಂಯುಕ್ತಾ ಪುಲಿಗಲ್
ಐದು ಪೈಸೆ ವರದಕ್ಷಿಣೆ – ವಸುಧೇಂದ್ರ
ಡೋರ್ ನಂಬರ್ 142 – ಜಿ.ಎನ್.ಮೋಹನ್
ಹಳಗನ್ನಡ – ಷ.ಶೆಟ್ಟರ್
ಜಾನಕಿ ಕಾಲಂ – ಜೋಗಿ
ಭೂಮಿಯೆಂಬ ಗಗನ ನೌಕೆ – ನಾಗೇಶ ಹೆಗಡೆ
ಘಾಚರ್ ಘೊಚರ್ – ವಿವೇಕ ಶಾನಭಾಗ
ಆಡುಕುಳ – ಶ್ರೀಧರ ಬಳಿಗಾರ
ತೂಫಾನ್ ಮೇಲ್ – ಜಯಂತ ಕಾಯ್ಕಿಣಿ
ಎದೆಗೆ ಬಿದ್ದ ಅಕ್ಷರ – ದೇವನೂರು ಮಹಾದೇವ

ಅರ್ಧನಾರೀಶ್ವರ (ಪೆರಮಾಳ್ ಮುರುಗನ್ ಅನುವಾದ: ಕೆ.ನಲ್ಲತಂಬಿ)
ಇದು ಪೆರುಮಾಳ್ ಮುರುಗನ್ ಅವರ ಐದನೇ ಕಾದಂಬರಿ, ತಿರುಚ್ಚೆಂಗೋಡಿನ ದೇವಾಲಯದಲ್ಲಿ ಪ್ರತಿಷ್ಠಾಪಿತನಾಗಿರುವ ಅರ್ಧನಾರೀಶ್ವರನ ರೂಪ ವೈಶಿಷ್ಟ್ಯವೇ ಈ ಕಾದಂಬರಿ. ಸಂತಾನ ಪ್ರಾಪ್ತಿ ಕುರಿತಾದ ಸತ್ಯ ಇಲ್ಲಿ ವಿವಾದಕ್ಕೆ ಗ್ರಾಸವಾಗುತ್ತದೆ. ಸ್ವಾತಂತ್ರ್ಯ ಪೂರ್ವದ ಘಟನೆಗಳನ್ನು ಕೇಂದ್ರೀಕರಿಸಿರುವ ಈ ಕಾದಂಬರಿ ಸರಳವಾದ ಭಾಷೆಯಲ್ಲಿ ಲೈಂಗಿಕತೆಯ ಸಂಕೀರ್ಣ ವಿದ್ಯಮಾನಗಳನ್ನು ನಿರ್ಭಿಡೆಯಿಂದ ನಿರ್ವಹಿಸಿರುವುದು ಕುತೂಹಲಕಾರಿಯಾಗಿದೆ.
*
ಸಿಂಧು ರಾವ್
ಯೋಳ್ತೀನ್ ಕೇಳಿ – ಕುಸುಮ ಪಿ. ಆಯರಹಳ್ಳಿ
ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ – ಲಕ್ಷ್ಮೀಶ ತೋಳ್ಪಾಡಿ
ಗಾಳಿಗೆ ಮೆತ್ತಿದ ಬಣ್ಣ – ಕರ್ಕಿ ಕೃಷ್ಣಮೂರ್ತಿ ಕಥೆಗಳು
ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆ- ಕೆ.ಸತ್ಯನಾರಾಯಣ
ಪರ್ವತದಲ್ಲಿ ಪವಾಡ – ಸಂಯುಕ್ತ ಪುಲಿಗಲ್
(ಅನುಭವ ಕಥನದ ಅನುವಾದ)
ಝೀರೋ ಮತ್ತು ಒಂದು – ವಿಕ್ರಂ ಹತ್ವಾರ್
ವಿಕಲ್ಪ – ಕೆ.ಸತ್ಯನಾರಾಯಣ
ಮೋಹನಸ್ವಾಮಿ – ವಸುಧೇಂದ್ರ
ಮನಸು ಅಭಿಸಾರಿಕೆ – ಶಾಂತಿ ಕೆ.ಅಪ್ಪಣ್ಣ

ಕುದಿ ಎಸರು (ಡಾ.ವಿಜಯಾ)
ವಿಜಯಮ್ಮನಿಗೇ ವಿಶಿಷ್ಟವಾದ ನಿರ್ಭಿಡೆಯ ಬರವಣಿಗೆ ಮಡಿವಂತ ಮನಸ್ಸುಗಳನ್ನು ಘಾಸಿಗೊಳಿಸಿದರೂ, ಉಸುರಲಾಗದೆ ಉಳಿದ ಕ್ರೌರ್ಯಗಳ ಕಲ್ಪನೆ – ಕೃತಿಯ ಪಾರ್ಶ್ವ ಭೂಮಿಯಲ್ಲಿನದು – ಯಾರನ್ನೂ ಬೆಚ್ಚಿಬೀಳಿಸಬಲ್ಲುದು. ಪುರುಷ ಅಹಮಿಕೆ, ಲೈಂಗಿಕ ನೆಲೆಯ ಕ್ರೌರ್ಯಗಳಂತೂ ಸಮಾಜ ಶಾಸ್ತ್ರೀಯ ಅಧ್ಯಯನಕ್ಕೆ ಒತ್ತಾಯಿಸುವಂಥವು. ಎಚ್ಚರದ ಓದಿನ ನಡುವೆಯೂ, ದುರಂತ ಕಾದಂಬರಿಯಂತೆ ಆವರಿಸಿ, ದುಃಸ್ವಪ್ನವಾಗಿ ಕಾಡುತ್ತೆ. ಈ ಪ್ರಮಾಣದ ದಾರುಣತೆಯ ಕೃತಿ ನನಗೆ ತಿಳಿದಂತೆ ಕನ್ನಡದಲ್ಲಿ ಮತ್ತೊಂದಿಲ್ಲ.
– ಲಕ್ಷ್ಮೀಪತಿ ಕೋಲಾರ
*
ಕಾವ್ಯಾ ಕಡಮೆ ನಾಗರಕಟ್ಟೆ
ಬೊಗಸೆ ಜಲ ಒಂದು ಬೀಜಕ್ಕಾಗಿ – ಜೀವಯಾನದ ಎಸ್. ಮಂಜುನಾಥ್
ವನಜಮ್ಮನ ಸೀಟು – ಉಮಾ ರಾವ್
ನೆಲದ ಕರುಣೆಯ ದನಿ – ವೀರಣ್ಣ ಮಡಿವಾಳರ
ನನ್ನ ಶಬ್ದ ನಿನ್ನಲಿ ಬಂದು – ಕೆ.ಪಿ.ಮೃತ್ಯುಂಜಯ
ಜೀವ ಮಿಡಿತದ ಸದ್ದು – ವಿಭಾ
ಭೂಮಿ ತಿರುಗುವ ಶಬ್ದ – ಚನ್ನಪ್ಪ ಅಂಗಡಿ
ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ – ಲಕ್ಷ್ಮೀಶ ತೋಳ್ಪಾಡಿ
ಬೆಂಕಿಗೆ ತೊಡಿಸಿದ ಬಟ್ಟೆ – ಆರಿಫ್ ರಾಜಾ
ದೇವರು ಮನುಷ್ಯನಾದ ದಿನ- ಪೀರ ಬಾಷಾ

ಮಾಗಿಕಾಲದ ಸಾಲುಗಳು (ಜ.ನಾ.ತೇಜಶ್ರೀ)
ಈ ಕವಿತೆಗೆ ಮೈತುಂಬ ಎಚ್ಚರಿದೆ. ಆ ಎಚ್ಚರೆಂದರೆ, ಧ್ಯಾನದ ಎಚ್ಚರ. ಆದುದರಿಂದ ತನ್ನೊಡಲು ಬಿಟ್ಟು, ಬೇರಲ್ಲೂ ಸುಳಿಯುವುದಿಲ್ಲವಿದು. ಧ್ಯಾನಸ್ಥ ಕವತೆ ಎಂಬ ಮಾತುಗಳನ್ನು ಕೇಳಿದ್ದೇವೆ. ಇಲ್ಲಿದೆ ಧ್ಯಾನಸ್ಥ ಕವಿತೆ. ಯಾರೋ ಎಸೆದ ಕಲ್ಲಿಗೆ ತನ್ನಲ್ಲಿ ಉಂಟಾದ ತರಂಗಗಳನ್ನು ತಾನೇ ಅನುಭವಿಸುವ ಕೊಳದಂತೆ ಈ ಕವಿತೆ ಹೇಗೆ ಎಸೆದರೂ ಹೇಗೆ ಬಿದ್ದರೂ ಬಾಣದ ಮೊನೆಯಲ್ಲೇ ಸದಾ ಇರುವ ಅಗೋಚರ ಗುರಿಯಂತೆ ಈ ಕವಿತೆ. -ಲಕ್ಷ್ಮೀಶ ತೋಳ್ಪಾಡಿ
*
ಪ್ರಕಾಶ್ ನಾಯಕ್
ಊರು ಭಂಗ – ವಿವೇಕ ಶಾನಭಾಗ
ತೇರು – ರಾಘವೇಂದ್ರ ಪಾಟೀಲ್
ಚಾರ್‌ಮಿನಾರ್ – ಜಯಂತ್ ಕಾಯ್ಕಿಣಿ
ಪದ್ಮಪಾಣಿ – ಡಾ.ಕೆ.ಎನ್.ಗಣೇಶಯ್ಯ
ಮಾಯಾಕೋಲಾಹಲ -ಮೌನೇಶ್ ಬಡಿಗೇರ್
ಹಂಪಿ ಎಕ್‌ಸ್‌ ಪ್ರೆಸ್ – ವಸುಧೇಂದ್ರ
ಕಥೆ ಕಥೆ ಕಾರಣ – ವೈದೇಹಿ
ಹುಲಿ ಸವಾರಿ – ವಿವೇಕ ಶಾನಭಾಗ
ದೇವನೂರು ಮಹದೇವ ಅವರ ಕೃತಿಗಳು

ತೇರು (ರಾಘವೇಂದ್ರ ಪಾಟೀಲ)
ಮೂರು ತಲೆಮಾರಿನ ಅಳತೆಗೋಲಿನಲ್ಲಿ ಪುರಾಣ-ಇತಿಹಾಸ- ವರ್ತಮಾನಗಳನ್ನು ಅನುಸಂಧಾನ ಮಾಡುತ್ತ ತೇರು ತನ್ನನ್ನು ತಾನು ಕಟ್ಟಿಕೊಳ್ಳುತ್ತದೆ. ಹಾಗೆ ಕಟ್ಟಿಕೊಳ್ಳುವಾಗ ಪುರಾಣದ ಕೀರ್ತನೆಗೋ ವರ್ತಮಾನದ ಭರ್ತ್ಸನೆಗೋ ತೊಡಗದೆ ಬದುಕಿನ
ಸೂಕ್ಷ್ಮಗಳನ್ನು ಕಣ್ಣಿಟ್ಟು ನೋಡುತ್ತದೆ. ಬದುಕಿನ ಪ್ರವಹನಕ್ಕೆ ಆಯಾ ಕಾಲದಲ್ಲಿ ಕಾರಣವಾಗಿರುವ ಜೀವಶಕ್ತಿಯನ್ನೂ, ಘಾತಕವೃತ್ತಿಯನ್ನೂ ಪಕ್ಷಪಾತರಹಿತವಾಗಿ ಗುರುತಿಸುವುದು ಸಾಧ್ಯವಾಗಿದೆ ಎನ್ನುವುದೇ ಕಾದಂಬರಿಯ ಗುಣಾತ್ಮಕ ಶಕ್ತಿ.
– ಡಾ.ಎಚ್.ಎಸ್.ವೆಂಕಟೇಶಮೂರ್ತಿ
*
ಮಾಲಿನಿ ಗುರುಪ್ರಸನ್ನ
ಪ್ರೇತಕಾಂಡ – ಆನಂದ ಝುಂಜರವಾಡ
ಮನೀಷೆ – ವಸುಧೇಂದ್ರ
ಜಾನಕಿ ಕಾಲಂ – ಜೋಗಿ
ಕದ ತೆರೆದ ಆಕಾಶ – ಮಂಜುನಾಥ್ ಚಾಂದ್
ಅಪ್ರಮೇಯ – ಎಸ್. ಆರ್. ವಿಜಯಶಂಕರ್
ಝೀರೋ ಮತ್ತು ಒಂದು – ವಿಕ್ರಮ್ ಹತ್ವಾರ್
ಬೊಗಸೆಯಲ್ಲಿ ಬಿದ್ದ ಮಳೆ – ಜಯಂತ್ ಕಾಯ್ಕಿಣಿ
ಈ ತನಕದ ಕಥೆಗಳು – ಕೆ. ಸತ್ಯನಾರಾಯಣ
ಸರ್ವ ಋತು ಬಂದರು – ಸಿಂಧು ರಾವ್
ನೀವು ಕಾಣಿರೇ ನೀವು ಕಾಣಿರೇ – ಎಚ್.ಎಸ್. ಮುಕ್ತಾಯಕ್ಕ

ಪರ್ವತದಲ್ಲಿ ಪವಾಡ (ಸಂಯುಕ್ತಾ ಪುಲಿಗಲ್)
ಬಹಳ ಕಾಲದ ನಂತರ ನಾನು ಜಗತ್ತನ್ನು ನೋಡುವ ದೃಷ್ಟಿಯನ್ನು ಬದಲಿಸಬಲ್ಲ ಪುಸ್ತಕವೊಂದು ದೊರೆತಿದೆ. ಪರಾಡೋನ ವಿಶೇಷ ಗುಣವೆಂದರೆ, ಸಮಾಜದ ಸುರಕ್ಷಿತ ಕೋಶಗಳಲ್ಲಿ ಕುಳಿತಿರುವ ನಮ್ಮೆಲ್ಲರಿಗೂ ಬದುಕಿನ ಸಾಧ್ಯತೆಗಳ ಅರಿವನ್ನು ಮೂಡಿಸುವುದು. ನಾವು ಬದುಕಿನಲ್ಲಿ ಒಂದೇ ಒಂದು ಕ್ಷಣ, ಒಂದು ಉಸಿರನ್ನೂ ವ್ಯರ್ಥ ಮಾಡಬಾರದು ಎಂಬ ಪಾಠವನ್ನು ಹೇಳಿಕೊಡುತ್ತದೆ.  -ವಾಷಿಂಗ್ಟನ್ ಪೋ
*
ಅರ್ಪಣಾ ಎಚ್.ಎಸ್.
ಜಯಂತ್ ಕಾಯ್ಕಿಣಿ ಕಥೆಗಳು – ಜಯಂತ್ ಕಾಯ್ಕಿಣಿ
ಪರ್ವ – ಎಸ್.ಎಲ್.ಭೈರಪ್ಪ
ಗೃಹಭಂಗ – ಎಸ್.ಎಲ್.ಭೈರಪ್ಪ
ಬರೀ ಕಥೆಯಲ್ಲೋ ಅಣ್ಣ – ಕುಂವೀ ಸಮಗ್ರ ಕಥೆಗಳು
ಸಮಗ್ರ ನಾಟಕ – ಗಿರೀಶ್ ಕಾರ್ನಾಡ್
ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ – ಅಬ್ದುಲ್ ರಶೀದ್
ಮೋಹನಸ್ವಾಮಿ – ವಸುಧೇಂದ್ರ
ಅಮ್ಮಚ್ಚಿ ಎಂಬ ನೆನಪು – ವೈದೇಹಿ
ತೆಂಕನಿಡಿಯೂರಿನ ಕುಳುವಾರಿಗಳು – ಡಾ.ವ್ಯಾಸರಾವ್ ನಿಂಜೂರ್

ಮನಸು ಅಭಿಸಾರಿಕೆ (ಶಾಂತಿ ಕೆ. ಅಪ್ಪಣ್ಣ)
ಇದು ಅತಿ ಆಧುನಿಕ. ನಮ್ಮ ಬದುಕಿನ ‘ಫೈಬರ್’ನಲ್ಲಿಯೇ ಸೇರಿಹೋಗಿರುವ ಎಲ್ಲವನ್ನೂ ಬದಲಿಸುತ್ತಿರುವ ಆಧುನಿಕತೆ. ಇಂದಿನ ಯುವಕ ಯುವತಿಯರಿಗೆ ಹಾಗೂ ಬರಲಿರುವ ಪೀಳಿಗೆಗೆ ಇದರಿಂದ ಬಿಡುಗಡೆಯೇ ಸಾಧ್ಯವಿಲ್ಲ. ಈ ಕತೆಗಳು ಮುಖ್ಯವೆನಿಸುವುದು ಕಥೆ ಹೇಳುವ ಧಾವಂತದಲ್ಲಿ, ಸಾಮಾಜಿಕ ನ್ಯಾಯದ ಅರಸುವಿಕೆಯಲ್ಲಿ ತಾತ್ವಿಕ ಹುಡುಕಾಟಗಳನ್ನು ಮರೆತಿರುವ ನಮ್ಮ ಕಾಲದ ಹಲವು ಕತೆಗಾರರಿಗಿಂತ ಭಿನ್ನವಾಗುವುದರಿಂದ.  – ಎಚ್.ಎಸ್. ರಾಘವೇಂದ್ರರಾವ್
*
ನಾಗರಾಜ ವಸ್ತಾರೆ ಆಯ್ಕೆ

ಒಂದು ಜಿಲೇಬಿ (ಪದ್ಯಗಳು) – ಜಯಂತ ಕಾಯ್ಕಿಣಿ
ಫಾದರ್ 55 ಮತ್ತು ನೀನಾಸಂ ಡೈರಿಯ ಕವಿತೆಗಳು – ವಿ. ಎಂ. ಮಂಜುನಾಥ
ಮಿಥುನ (ಅನುವಾದ)- ವಸುಧೇಂದ್ರ
ನಾತಲೀಲೆ (ಕತೆಗಳು) – ಎಸ್. ಸುರೇಂದ್ರನಾಥ್
ಮತ್ತೊಬ್ಬನ ಸಂಸಾರ – ವಿವೇಕ ಶಾನಭಾಗ
ಅನಾತ್ಮಕಥನ (ಆತ್ಮಕಥೆ)
ಅವರು ಪುರಾವೆಗಳನ್ನು ಕೇಳುತ್ತಾರೆ – ಪ್ರತಿಭಾ ನಂದಕುಮಾರ್ – ಎಚ್ಚೆಸ್ವಿ
ಝೀರೋ ಮತ್ತು ಒಂದು – ವಿಕ್ರಮ ಹತ್ವಾರ
ಜೋಗಿ ಕತೆಗಳು – ಜೋಗಿ

ದೇವರ ರಜಾ (ಗುರುಪ್ರಸಾದ್ ಕಾಗಿನೆಲೆ)
ನೀನು ನನ್ನ ಮೇಲಿನ ಸಿಟ್ಟಿಗೋಸ್ಕರ ದೇವರುಗಳನ್ನು ಶಿಫ್‌ಟ್‌ ಮಾಡಿ ಆ ತಪ್ಪನ್ನು ನನ್ನ ಮೇಲೆ ಹೊರೆಸಬೇಡ. ಬರೇ ಪೋಸು ಕೊಟ್ಟುಕೊಂಡು ಅಥ್ವಾ ಫೇಸ್‌ಬುಕ್‌ನಲ್ಲಿ ಅಗ್ನಾಸ್ಟಿಕ್ ಅಂತಲೋ, ನಿರೀಶ್ವರವಾದಿ ಅಂತಲೋ ಮೆಸೇಜ್ ಹಾಕಿದಷ್ಟು ಸುಲಭ ಅಲ್ಲ  ನಿಜವಾದ ಜೀವನ. ನಿನಗೂ ಈ ದೇವರ ನಮಸ್ಕಾರ ಮಾಡದೇ, ಗಾಯತ್ತೀ ಮಂತ್ರ ಹೇಳದೇ ಒಂಥರಾ ವಿಥ್‌ಡ್ರಾವಲ್ ಶುರುವಾಗಿದೆ -‘ದೇವರ ರಜಾ’ಕತೆಯ ಶಾಲಿನಿಯ ಮಾತುಗಳು
*
ಕೇಶವ ಮಳಗಿ ಆಯ್ಕೆ

ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ
(ಸಂಶೋಧನ ಗ್ರಂಥ)- ಷ. ಶಟ್ಟರ್
ಆಳ ನಿರಾಳ – ಕೆ.ವಿ.ತಿರುಮಲೇಶ್
ಬಾಳಾಟ – ಬಸವರಾಜ್ ಕುಕ್ಕರವಳ್ಳಿ
ನೆತ್ತರಲ್ಲಿ ನೆಂದ ಚಂದ್ರ- ಎಮ್. ಆರ್.ಕಮಲಾ
ಗಾಳಿ ಬೆಳಕು – ನಟರಾಜ್ ಹುಳಿಯಾರ್
ನಾನು ಒಲಿದಂತೆ ಹಾಡುವೆ – ಚಂದ್ರಶೇಖರ ಆಲೂರು

ಮಬ್ಬಿನ ಹಾಗೆ ಕಣಿವೆಯಾಸಿ – ಎಚ್. ಎಸ್. ಶಿವಪ್ರಕಾಶ್
ಆವಿಗೆ- ಚಿತ್ರಾ ಮುದ್ಗಲ್(ಅನು: ಆರತಿ ಹೆಗಡೆ)
ಆಡು ಕಾಯೋ ಹುಡುಗನ ದಿನಚರಿ- ಟಿ.ಎಸ್.ಗೊರವರ್

ಪ್ರೀತಿ ಎಂಬುದು ಚಂದ್ರನ ದಯೆ (ಎಸ್.ಎಫ್.ಯೋಗಪ್ಪನವರ್)
ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ಪ್ರೇಮದ ಒಂದೊಂದು ಕಥೆ ಇರುತ್ತದೆ. ಆ ಕಥೆಯ ಆಂತರ್ಯದಲ್ಲಿ ಹಲವಾರು ನಾಟಕೀಯ ಘಟನೆಗಳು, ಲೋಕಸತ್ಯದ ಜಾನಪದ ಧ್ವನಿಗಳು, ತಲ್ಲಣಗೊಳಿಸುವ ಶೋಕಗೀತೆಗಳು ತುಂಬಿಕೊಂಡಿರುತ್ತವೆ. ಪ್ರೇಮಕಾಳರಾತ್ರಿಯ ಒಡಲಿನಂತೆ ಪ್ರಾಣಾಂತಿಕವಾಗಿ ಆಕರ್ಷಿಸುತ್ತದೆ. ಪ್ರೇಮದ ಅರ್ಥ ದೇವರಷ್ಟೇ ನಿಗೂಢವಾದದ್ದು. ಅದೊಂದು ನಿರಂತರ ಬಾಯಾರಿಕೆಯ ಲೋಕಕ್ರಿಯೆ.
– ಎಸ್‌ಎಫ್‌ವೈ
*********
ಸೌಮ್ಯಾ ಪ್ರಭು ಕಲ್ಯಾಣಕರ್
ಸಪ್ನ ಸಾರಸ್ವತ – ಗೋಪಾಲ ಕೃಷ್ಣ ಪೈ
ಸರಸ – ಈಶ್ವರಯ್ಯ
ಉತ್ತರಕಾಂಡ – ಎಸ್.ಎಲ್.ಭೈರಪ್ಪ
ಉಲ್ಲಂಘನೆ – ನಾ ಮೊಗಸಾಲೆ
ಮಿತ್ತಬೈಲ್ ಯಮುನಕ್ಕ – ಚೌಟ
ಗಾಂಧಿ ಬಂದ – ಎಚ್ ನಾಗವೇಣಿ
ಬದಲಾಗದ ಫೋಟೋ – ಶಾಂತಾರಾಮ ಸೋಮಯಾಜಿ
ಜಯಂತ್ ಕಾಯ್ಕಿಣಿ ಕಥೆಗಳು
ಮಂಗನ ಬ್ಯಾಟೆ – ಕಲ್ಕುಳಿ ವಿಠಲ ಹೆಗ್ಡೆ

ಸ್ವಾತಂತ್ರ್ಯದ ಓಟ (ಬೊಳುವಾರು ಮಹಮದ್ ಕುಂಞ)
ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ಒಂದೇ ಪಟ್ಟಿಗೆ ಓದಿ ಮುಗಿಸಿದೆ. ಅದ್ಭುತವಾದ ಓದು ಇದು. ಕಣ್ಣಂಚಿನ ನೀರ ಹನಿಗಳು ಆರುವ ಮೊದಲೇ ಬರೆಯುತ್ತಿದ್ದೇನೆ. ಈ ಕಾದಂಬರಿಯನ್ನು ಓದಿದ ಯಾರ ಮನಸ್ಸಾದರೂ ಇನ್ನಷ್ಟು ಮೃದು, ಇನ್ನಷ್ಟು ಉದಾರ ಆಗದಿದ್ದರೆ ಅವರು ಮನುಷ್ಯರೇ ಅಲ್ಲ. – ಎಚ್. ಎಸ್ ರಾಘವೇಂದ್ರರಾವ್
*
ಕೀರ್ತಿ ಕೋಲ್ಗಾರ್
ಮಾಯಾ ಕೋಲಾಹಲ – ಮೌನೇಶ್ ಬಡಿಗೇರ್
ಮಲೆನಾಡ ಗಾಂಧಿ – ಗಿರೀಶ್ ಜಕಾಪುರೆ
ಎಲ್ಲೆ ದಾಟಿ – ನಿರೂಪ
ದೇವ ಕೀಟದ ರತಿ ರಹಸ್ಯ- ರೋಹಿತ್ ಚಕ್ರತೀರ್ಥ
ಅಕ್ಷೀ ಎಂದಿತು ವೃಕ್ಷ – ವಿಕ್ರಮ್ ಹತ್ವಾರ್
ಪುನರಪಿ – ಕಾವ್ಯಾ ಕಡಮೆ ನಾಗರಕಟ್ಟೆ
ರಸ್ತೆ ನಕ್ಷತ್ರ- ಟಿ.ಕೆ.ದಯಾನಂದ
ಲೂಲು ಟ್ರಾವೆಲ್ಸ್ – ಪ್ರಸಾದ್ ಶೆಣೈ
ನೂರ್ ಗಜಲ್ – ಅಲ್ಲಾ ಗಿರಿರಾಜ್

ಮೊದಲ ಮಳೆಯ ಮಣ್ಣು (ಕಣಾದ ರಾಘವ)
ಇವರ ಕತೆಗಳನ್ನು ನಾನು ಮೆಚ್ಚಲು ಕಾರಣ ಬರಹದ ವಸ್ತು ಮತ್ತು ಅನುಭವ ವೈವಿಧ್ಯ. ಈ ವೈವಿಧ್ಯವನ್ನು ಕತೆಗಾರಿಕೆಯಲ್ಲಿ ಮೀಯಿಸಿ, ಹೊಸತೇನನ್ನೋ ಹೊಳೆಯಿಸಬಹುದೇ ಎಂಬುದರ ಬಗ್ಗೆ ಇರುವ ಪ್ರಯತ್ನಶೀಲತೆ. ಆಕರ್ಷಕವಾಗಿ ಕಾಣಬೇಕು ಎಂಬ ಆಸೆಯನ್ನು ಗೆದ್ದು, ತಮ್ಮ ಸ್ವಭಾವ ಪ್ರತಿಭೆಗೆ ಅನುಗುಣವಾಗುವಷ್ಟು ಪ್ರಾಮಾಣಿಕತೆಯಿಂದ ಕತೆ ಬರೆಯುವ ರಾಘವರ ಬರವಣಿಗೆಯ ಸ್ವಭಾವದ ಬಗ್ಗೆ ನನಗೆ ಮೆಚ್ಚುಗೆಯಾಗಿದೆ. -ಕೆ. ಸತ್ಯನಾರಾಯಣ
*
ಕಾವ್ಯಶ್ರೀ ಎಚ್.
ಕದಡಿದ ಕಣಿವೆ – ಅನು: ಜಯಪ್ರಕಾಶ ನಾರಾಯಣ
ಪರ್ವತದಲ್ಲಿ ಪವಾಡ – ಅನು: ಸಂಯುಕ್ತಾ ಪುಲಿಗಲ್
ಮರುಭೂಮಿಯ ಹೂ – ಜಗದೀಶ್ ಕೊಪ್ಪ
ಹೆಸರಿಲ್ಲದ ಹೂ – ಅನು: ಹೇಮಾ ಎಸ್.
ನನ್ನ ಶಬ್ದ ನಿನ್ನಲಿ ಬಂದು – ಕೆ.ಪಿ.ಮೃತ್ಯುಂಜಯ
ಅರ್ಥಾರ್ಥ – ಎಮ್.ಎಸ್.ಶ್ರೀರಾಮ್
ಪ್ರೀತಿ ಎಂಬುದು ಚಂದ್ರನ ದಯೆ – ಎಸ್. ಎಫ್. ಯೋಗಪ್ಪನವರ್

ಅರ್ಥಾರ್ಥ (ಎಂ ಎಸ್ ಶ್ರೀರಾಮ್)
ಸಾಹಿತ್ಯ ಪ್ರಜ್ಞೆಯುಳ್ಳ ಒಬ್ಬ ಲೇಖಕ ಆರ್ಥಿಕ ವಿದ್ಯಮಾನಗಳನ್ನು ಕುರಿತು ಬರೆದರೆ ಎರಡು ಬಗೆಯ ‘ಅರ್ಥ’ಗಳು ಒಟ್ಟಿಗೇ ಹುಟ್ಟುವುದು ಸಾಧ್ಯ – ಮೀನಿಂಗ್ ಎಂಬ ಅರ್ಥದ ಅರ್ಥ ಮತ್ತು finance ಎಂಬ ಅರ್ಥದ ಅರ್ಥ. ಶ್ರೀರಾಮ್ ಅವರು ಈ ಪುಸ್ತಕವನ್ನು ಅರ್ಥಾರ್ಥ ಎಂದು ಕರೆದಿರುವುದು ಇಂಥ ದ್ವಂದ್ವೋದ್ದಿಶ್ಯದಿಂದ ಇರಬಹುದೇ? ಅವರ ಉದ್ದೇಶ ಏನೇ ಇದ್ದಿರಲಿ, ಇಂಥ ಎರಡು ಅರ್ಥಗಳ ಕಸಿಯ ಪ್ರಯೋಗವು ಈ ಬರಹಗಳ ಮೂಲಕ ಆಗಲಿಕ್ಕೆ ಆರಂಭವಾಗಿದೆ ಎನ್ನುವುದೇ ಈ ಪುಸ್ತಕದ ಪ್ರಮುಖ ಸಾಧನೆ.
*
ಕಪಿಲ ಪಿ.ಹುಮನಾಬಾದ್
ಕೆಂಗುಲಾಬಿ – ಹನುಮಂತ ಹಾಲಿಗೇರಿ
ಬಲಿಹಾರ – ಚೀಮನಹಳ್ಳಿ ರಮೇಶಬಾಬು
ಪ್ರೇಮಾ ಮೀಮಾಂಸೆ – ಡಾ. ನಾಗಣ್ಣ ಕಿಲಾರಿ
ಮಂಗನ ಬ್ಯಾಟೆ – ಕಲ್ಕುಳಿ ವಿಠಲ್ ಹೆಗಡೆ
ಮೀಯುವ ಆಟ – ಎಚ್.ನಾಗವೇಣಿ
ನೇರಳೆ ಮರ – ಕೇಶವ ಮಳಗಿ
ಚುಕ್ಕಿ ಮದುವೆ ಪ್ರಸಂಗ – ಅಮರೇಶ ನುಗಡೋಣಿ
ಬೆಳಕ ಮರೆಯ ಬೆಂಕಿ- ರೇಣುಕಾ ಹೆಳವರ
ನೀರಗನ್ನಡಿ – ಅರಡಿಮಲ್ಲಯ್ಯ. ಪಿ.

ಉರಿವ ಜಲ (ವೈ ಎಸ್ ಹರಗಿ)
ಶ್ರೀ ಹರಗಿಯವರು ನಿಜಕ್ಕೂ ಕುಶಲ ಕಾದಂಬರಿಕಾರರು. ಕಾದಂಬರಿಯನ್ನು  ನೇಯ್ಗೆಯ ರೀತಿಯಲ್ಲಿ ಕಾದಂಬರಿಯ ಬಂಧಕ್ಕೆ ಕೊಂಚವೂ ಧಕ್ಕೆಯಾಗದಂತೆ ಬಹು ಸೂಕ್ಷ್ಮವಾಗಿ ಹೆಣೆದಿದ್ದಾರೆ. ಎಲ್ಲೆಲ್ಲಿ ಏನೇನನ್ನು ಚಿತ್ರಿಸಿದರೆ ಕಾದಂಬರಿಯ ಒಟ್ಟಾರ್ಥಕ್ಕೆ ಪೂರಕವಾದೀತೆಂಬ ಕಲಾಕಾರ ನ ಔಚಿತ್ಯಪ್ರಜ್ಞೆ ಅವರಲ್ಲಿದೆ. ತನಗಿರುವ ದಟ್ಟ ಜೀವನಾನುಭವ ವ್ಯರ್ಥವಾಗಿ ಸೋರಿಹೋಗದಂತೆ ಸಾಕಷ್ಟು ಎಚ್ಚರ ವಹಿಸಿದ್ದಾರೆ. – ಡಾ.ಪ್ರಹ್ಲಾದ್ ಅಗಸನಕಟ್ಟೆ
*
ಸಿದ್ಧಲಿಂಗೇಶ್ವರ ಟಿ ದುರ್ಗದ
ತಳ ಒಡೆದ ದೋಣಿಯಲ್ಲಿ – ಸಾರಾ ಅಬೂಬಕರ್
ಹೇಳಿ ಹೋಗು ಕಾರಣ – ರವಿ ಬೆಳಗೆರೆ
ಒಂದು ಬದಿಯ ಕಡಲು – ವಿವೇಕ ಶಾನಭಾಗ
ಆಡಾಡತಾ ಆಯುಷ್ಯ – ಗಿರೀಶ ಕಾರ್ನಾಡ
ಕುಸುಮಬಾಲೆ – ದೇವನೂರ ಮಹಾದೇವ
ಪರ್ವ – ಎಸ್ ಎಲ್ ಭೈರಪ್ಪ
ಪೆರುವಿನ ಪವಿತ್ರ ಕಣಿವೆಯಲ್ಲಿ – ನೇಮಿಚಂದ್ರ
ಹನಿಖಜಾನೆ – ಎಚ್ ಡುಂಡಿರಾಜ್
ಒಂದು ಊರಿನ ಕತೆಗಳು – ಬರಗೂರು ರಾಮಚಂದ್ರಪ್ಪ

ಮಂಗನ ಬ್ಯಾಟೆ (ಕಲ್ಕುಳಿ ವಿಠ್ಠಲ ಹೆಗ್ಡೆ)
ಕಲ್ಕುಳಿಯವರ ಮಲೆನಾಡನ್ನು ಕುರಿತ ಈ ಪುಸ್ತಕ ಈಚಿನ ದಿನಗಳಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳ ನಡುವೆ ಮುಖ್ಯ ಪುಸ್ತಕ ಎಂದು ನಾನು ತಿಳಿದಿದ್ದೇನೆ. ಯಾಕೆಂದರೆ ನಾನೇ ಈ ಪುಸ್ತಕದಿಂದ ತುಂಬ ಕಲಿತಿದ್ದೇನೆ. ಈವರೆಗೂ ನಾನು ಕಲ್ಕುಳಿ ಒಬ್ಬ ಅಸಾಧಾರಣ ರಾಜಕೀಯ ಚಿಂತನೆಯನ್ನು ಮಾಡಬಲ್ಲ ವಿಶಿಷ್ಟ ವ್ಯಕ್ತಿಯೆಂದು ಮಾತ್ರ ತಿಳಿದಿದ್ದೆ. ಈ ಪುಸ್ತಕವನ್ನು ಓದಿದಾಗ ಕಲ್ಕುಳಿ ಕುವೆಂಪು ಮತ್ತು ತೇಜಸ್ವಿ ಸೃಷ್ಟಿಸುವ ಲೋಕವನ್ನು ರಾಜಕೀಯ ಪ್ರಜ್ಞೆಯಲ್ಲಿಯೂ ಬಲ್ಲವರು ಎಂಬುದನ್ನು ಮನಗಂಡೆ. -ಯು.ಆರ್. ಅನಂತಮೂರ್ತಿ

ಒದ್ದೆ ಮಣ್ಣಲ್ಲಿ ಪುಟ್ಟ ಪಾದದ ಗುರುತು

ನಮ್ಮ ಓದುಗರಿಗಾಗಿ ನಿಮ್ಮ ಸಮಕಾಲೀನ ಸಾಹಿತಿಗಳು ಬರೆದ, ಯಾವುದೇ ಪ್ರಕಾರಕ್ಕೆ ಸೇರಿದ, ನಿಮ್ಮಮೆಚ್ಚಿನ ಹತ್ತು ಪುಸ್ತಕಗಳನ್ನು ಶಿಫಾರಸು ಮಾಡಿ ಎಂದು ನಾವು ಸಾಹಿತಿಗಳನ್ನು, ಲೇಖಕರನ್ನು ಕೇಳಿಕೊಂಡೆವು. ಸಮಕಾಲೀನ ಎಂದರೇನು ಎನ್ನುವುದು ಸ್ವಲ್ಪ ಜಟಿಲ ಪ್ರಶ್ನೆಯಾಯಿತು. ಸಮಕಾಲೀನ ಎಂದರೆ ಒಂದೇ ಕಾಲಘಟ್ಟಕ್ಕೆ ಸೇರಿದವರು ಎಂದಷ್ಟೇ. ಆದರೆ ನಮ್ಮಲ್ಲಿ ಹಲವು ತಲೆಮಾರಿನ ಮಂದಿ ಏಕಕಾಲಕ್ಕೆ ಪ್ರತಿಸ್ಪಂದಿಸುವಾಗ ಕೆಲವು ಗೊಂದಲ ಸಹಜ. ಹಾಗಾಗಿ ‘ಈಗ ಬದುಕಿರುವ’ಎನ್ನುವಂಥ ಒಂದು ವಿಲಕ್ಷಣ ಕಟ್ಟುಪಾಡು ವಿಧಿಸಿದೆವು.

ಡಿವಿಜಿ, ಕುವೆಂಪು, ಬೇಂದ್ರೆ, ಅಡಿಗ, ಕಾರಂತ, ಮಾಸ್ತಿ, ಲಂಕೇಶ್, ತೇಜಸ್ವಿ, ಚಿತ್ತಾಲ, ಅನಂತಮೂರ್ತಿಯಂಥ ಲೇಖಕರನ್ನು ಓದಿ ಎಂದು ಹೇಳುವ ಅಗತ್ಯವಿದೆಯೆ? ಅವರ ಕೃತಿಗಳಲ್ಲ, ಸ್ವತಃ ಅವರೇ ಮಸ್ಟ್ ರೀಡ್ ಕೃತಿಕಾರರಲ್ಲವೆ? ಹಾಗಾಗಿ ಇಂಥ ಮಾತು ಬಂತು. ಆಗಲೂ ನಮ್ಮಲ್ಲಿ ಅನೇಕರು ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ದೇವನೂರು ಮಹದೇವ, ರಾಘವೇಂದ್ರ ಪಾಟೀಲ, ಜಯಂತ್ ಕಾಯ್ಕಿಣಿ, ವಿವೇಕ ಶಾನಭಾಗ, ಅಮರೇಶ್ ನುಗಡೋಣಿ, ಎಸ್. ದಿವಾಕರ್ ಮುಂತಾದವರನ್ನು ಕೂಡ ರೆಕಮಂಡ್ ಮಾಡಿ ಓದಿ ಎನ್ನುವ ಅಗತ್ಯವೇ ಇಲ್ಲ ಎಂದು ಸರಿಯಾಗಿಯೇ ಗ್ರಹಿಸಿದ್ದಾರೆ. ಹಾಗಾಗಿ ಇಲ್ಲಿ ಹೊಸಬರು ತುಂಬಿ ತುಳುಕುತ್ತಿದ್ದಾರೆ ಮಾತ್ರವಲ್ಲ ಹೆಚ್ಚಿನವರು ಹೊಸ ಹೊಸ ಲೇಖಕರನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಕವಿತೆಗೆ, ವಿಮರ್ಶೆಗೆ, ಸಂಶೋಧನಾತ್ಮಕ ಬರವಣಿಗೆಗೆ ಭವಿಷ್ಯವಿಲ್ಲ ಎನ್ನುವುದನ್ನು ಸುಳ್ಳುಮಾಡುವ ಲಕ್ಷಣ ತೋರಿಸಿದ್ದಾರೆ. ಎಲ್ಲರೂ ಒಂದೇ ಕೃತಿಗಳನ್ನು ಶಿಫಾರಸ್ಸು ಮಾಡುತ್ತ ಹೋದರೆ ಏನು ಮಾಡುವುದು ಎನ್ನುವ ನಮ್ಮ ಆತಂಕ ಅರ್ಥವಿಲ್ಲದ್ದು ಎನ್ನುವಂತೆ ಕೇವಲ ಮೂರನೇ ಒಂದರಷ್ಟು ಕೃತಿಗಳು ಮಾತ್ರ ಮತ್ತೆ ಮತ್ತೆ ಕಾಣಿಸಿಕೊಂಡಿರುವುದನ್ನು ಬಿಟ್ಟರೆ ಇಲ್ಲಿ ನಿಮಗೆ ಮುನ್ನೂರಕ್ಕೂ ಹೆಚ್ಚು ಗಮನಾರ್ಹ ಎನಿಸಿದ ಕೃತಿಗಳ ಪಟ್ಟಿಯೊಂದು ತನ್ನಿಂದ ತಾನೇ ಸಿದ್ಧವಾಗಿ ಕೂತಿದೆ.

ನಮಗೆ ಬಂದ ಪ್ರತಿಸ್ಪಂದನ ಮತ್ತು ಅದರ ಒಟ್ಟಾರೆ ಬಂಧ ಗಮನಿಸುವುದು ಅತ್ಯಂತ ಅಗತ್ಯ. ಇದು ಕನ್ನಡದ ಇಂದಿನ ಅಭಿರುಚಿಯನ್ನೂ, ಅದರ ಒಂದು ರೂಪುರೇಷೆಗಳನ್ನೂ ಅತ್ಯಂತ ಸ್ಪಷ್ಟವಾಗಿ ತೆರೆದಿಡುವಂತಿದ್ದು ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಲೇಖಕರು ಮತ್ತು ಹೊಸ ತಲೆಮಾರಿನ ಬರಹಗಾರರು ಇದರಿಂದ ಅಗತ್ಯವಾದ ಮಾಹಿತಿ ಪಡೆದುಕೊಂಡು ನಾಡಿಮಿಡಿತ ತಿಳಿದುಕೊಳ್ಳಲು ಇಲ್ಲಿನ ಕೆಲ ಅಂಕಿ-ಸಂಖ್ಯೆಗಳು ಸಹಾಯಕವಾದವು. ನಮ್ಮ 50 ಲೇಖಕರು, ವಿಮರ್ಶಕರು, ಸಾಹಿತ್ಯಾಸಕ್ತರು ಸೂಚಿಸಿದ ಪುಸ್ತಕಗಳ ಒಟ್ಟು ಸಂಖ್ಯೆ 501. ಇವುಗಳಲ್ಲಿ ಕೇವಲ 135 ಪುಸ್ತಕಗಳನ್ನು ಮಾತ್ರ ಪುನರಾವರ್ತಿಸಲಾಗಿದ್ದು 366 ಪುಸ್ತಕಗಳ ಒಂದು ಪಟ್ಟಿ ಲಭ್ಯವಾಗುವಂತೆ ಇದೆ. 50 ಜನರ ಪೈಕಿ 17 ಲೇಖಕಿಯರು ಮತ್ತು 33 ಲೇಖಕರು.

Leave a Reply

Your email address will not be published. Required fields are marked *

8 − seven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top