About Us Advertise with us Be a Reporter E-Paper

ಯಾತ್ರಾ

ವಿದೇಶ ಪ್ರಯಾಣ ತಯಾರಿ ಕೂಡ ಅಷ್ಟೇ ಮುಖ್ಯ

- ವಿಶ್ವೇಶ್ವರ್ ಭಟ್

‘ಕೊಂಡೆ ನಾಸ್ಟ್ ಟ್ರಾವೆಲ್ಲರ್’ ಮ್ಯಾಗಜಿನ್ ಹೆಸರನ್ನು ನೀವು ಕೇಳಿರಬಹುದು. ನೀವು ಪ್ರವಾಸವನ್ನು ಇಷ್ಟಪಡುವವರಾದರೆ ಈ ಮ್ಯಾಗಜಿನ್‌ನ್ನು ನೋಡಿರುತ್ತೀರಿ ಅಥವಾ ಓದಿರುತ್ತೀರಿ. ಈ ನಿಯತಕಾಲಿಕವನ್ನು ಒಂದು ಸುತ್ತು ತಿರುವಿ ಹಾಕಿದರೆ ಸುಮ್ಮನೆ ಲೋಕ ಸಂಚಾರ ಮಾಡಿದ ಅನುಭವವಾಗುತ್ತದೆ. ಕಳೆದ ಎಂಟು ದಿವಿಯ ಥಾನಿ ಎಂಬಾಕೆ ಈ ಪತ್ರಿಕೆಯ ಸಂಪಾದಕಿಯಾಗಿದ್ದಾರೆ.

ಹೊಸ ವರ್ಷದ ಸಂಚಿಕೆಗೆ ಆಕೆಯನ್ನು ಕೇಳಿದರು: ‘ಕಳೆದ ಎಂಟು ವರ್ಷಗಳಲ್ಲಿ ಒಂದು ಟ್ರಾವೆಲ್ ಮ್ಯಾಗಜಿನ್ ಸಂಪಾದಕಿಯಾಗಿ ಸಂಕ್ಷಿಪ್ತವಾಗಿ ನಿಮ್ಮ ಅನುಭವವನ್ನು ಹೇಗೆ ಹೇಳುತ್ತೀರಿ?’ ಅದಕ್ಕೆ ಥಾನಿ ಕೆಲವು ಸಂಗತಿಗಳನ್ನು ಪಟ್ಟಿ ಮಾಡಿದರು. ಈ ಸಂಗತಿಗಳು ಸರಳವಾಗಿರಬಹುದು, ಆದರೆ ಅವು ಎಷ್ಟು ಉಪಯುಕ್ತ ಎಂಬುದು ಗೊತ್ತಾಗುತ್ತದೆ.

* ನೀವು ಯಾವುದೋ ಒಂದು ಕಾರಣಕ್ಕೆ ಒಂದು ಪ್ರವಾಸಿ ತಾಣಕ್ಕೆ ಬಂದಿರುತ್ತೀರಿ. ಕಾರಣವಿಲ್ಲದೇ ಬಂದಿದ್ದರೂ ಒಂದು ಅನುಪಮ ಅನುಭವವನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿ.

* ನೀವು ಎಲ್ಲಿಗೇ ಹೋಗಿ, ನಿಮ್ಮ ಜತೆ ಯಾರಿದ್ದಾರೆ ಅಥವಾ ನೀವು ಯಾರ ಜತೆ ಹೋಗುತ್ತೀರಿ ಎಂಬುದು ಬಹಳ ಮುಖ್ಯ.

* ಯಾವ ಊರಿಗೇ ಹೋಗಿ, ಸ್ಥಳೀಯ ಆಹಾರವನ್ನು ಸೇವಿಸದೇ ಬರಬೇಡಿ. ಅದು ಹೇಗೆ ಇರಲಿ, ಅದರ ಸವಿಯನ್ನು ಅನುಭವಿಸಿ. ಇಷ್ಟವಾಗಲಿಲ್ಲವೆನ್ನಿ, ಅದಕ್ಕೆ ಸ್ವಲ್ಪ ಖಾರವಾದ ಸಾಸ್ (ತಬಾಸ್ಕೋ) ಸೇರಿಸಿ, ರುಚಿ ನೋಡಿ.

* ಪ್ರವಾಸಕ್ಕೆ ಹೊರಟಾಗ ಟಾರ್ಚ್, ಮಾಸ್ಕಿಟೊ ರೆಪೆಲ್ಲೆಂಟ್, ಅಡಾಪ್ಟರ್, ವೈಫೈ ಇಲ್ಲದ ಮ್ಯೂಸಿಕ್, ಪ್ರಥಮ ಚಿಕಿತ್ಸೆ ಕಿಟ್, ಪವರ್ ಬ್ಯಾಂಕ್ ಒಯ್ಯಲು ಮರೆಯಬೇಡಿ.

* ಪ್ರವಾಸಕ್ಕೆ ಹೊರಟಾಗ ಹೊಪ್ಪರ್, ಸ್ಕೈ ಸ್ಕ್ಯಾನರ್, ಮೇಕ್ ಮೈ ಟ್ರಿಪ್, ಫ್ಲೈಟ್ ಗೇಟ್, ಫ್ಲೈಟ್ ಟ್ರಾಕರ್, ರೈಲ್ ಯಾತ್ರಿ ಮುಂತಾದ ಆಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಮರೆಯಬೇಡಿ.

* ವಿಮಾನದಲ್ಲಿನ್ಯಾವ ಕ್ಲಾಸಿನಲ್ಲಿ ಪ್ರಯಾಣಿಸುತ್ತೀರಿ ಎಂಬುದು ಮುಖ್ಯವಲ್ಲ. ಯಾವ ಕ್ಲಾಸಿನಲ್ಲಿ ಪ್ರಯಾಣಿಸಿದರೂ ಪ್ರಯಾಣದ ಅನುಭವವನ್ನು ಎಷ್ಟು ದಕ್ಕಿಸಿಕೊಳ್ಳುತ್ತೀರಿ ಎಂಬುದಷ್ಟೇ ಮುಖ್ಯ.

* ನೀವು ಊರಿಗೆ ಹೋದರೇನಂತೆ, ಅಲ್ಲಿ ನಿಮಗೆ ಯಾರೂ ಪರಿಚಯದವರು ಇಲ್ಲದಿರಬಹುದು. ಆದರೂ ಚೆನ್ನಾಗಿ, ಸುಂದರವಾಗಿ ಕಾಣುವಂತೆ ಡ್ರೆಸ್ ಮಾಡಿಕೊಳ್ಳಿ.

* ನೀವು ಎಲ್ಲಿ ವಾಸ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ಅಷ್ಟಕ್ಕೂ ನೀವು ವಿದೇಶಕ್ಕೆ ಹೋಗುವುದು ಮಾಲುಗಳು ಅಲ್ಲ.

* ಒಂದು ಶಾಲು, ಸ್ವೇಟರ್ ನಿಮ್ಮ ಜತೆ ಇರಲಿ. ಯಾವಾಗ ಅದರ ಅಗತ್ಯಬೀಳುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ.

* ಸಾಧ್ಯವಾದಷ್ಟು ಮಟ್ಟಿಗೆ ಹೊರಡುವ ಮುನ್ನ ಆರೋಗ್ಯ ವಿಮೆ ಮಾಡಿಸಿ. ವಿದೇಶದಲ್ಲಿದ್ದಾಗ ವೈದ್ಯರನ್ನು ಅಗತ್ಯ ಬರಬಹುದು.

* ನೀವು ಪದೇ ಪದೆ ಪ್ರವಾಸ ಮಾಡುವವರಾದರೆ, ಕರ್ಕಶ ಸದ್ದು ಕಡಿಮೆ ಮಾಡುವ ಹೆಡ್ ಫೋನ್ ಬಳಸಿ. ವಿಮಾನ ಪ್ರಯಾಣದಲ್ಲಿ ಇದು ನಿಮಗೆ ಅತ್ಯಂತ ಉಪಯುಕ್ತ. ಇದು ಹೊರಗಿನ ಸದ್ದು ತಡೆಯುತ್ತದೆ.

* ವಿದೇಶಗಳಲ್ಲಿದ್ದಾಗ ನಡೆಯುವ ಪ್ರಸಂಗ ಬಂದರೆ ಬೇಡ ಎನ್ನಬೇಡಿ. ಅದಕ್ಕಾಗಿ ಒಳ್ಳೆಯ ವಾಕಿಂಗ್ ಷೂ ತೆಗೆದುಕೊಂಡು ಹೋಗಿ.

* ವಿದೇಶಗಳಿಗೆ ಹೋಗುವಾಗ ಗಿಫ್‌ಟ್ಗಳನ್ನು ತೆಗೆದುಕೊಂಡು ಹೋಗಿ. ಯಾರಾದರೂ ನಿಮಗೆ ಆಪ್ತರಾಗಬಹುದು. ಅಂಥವರಿಗೆ ಇದನ್ನು ಸಂತುಷ್ಟರನ್ನಾಗಿ ಮಾಡಬಹುದು.

* ನೀವು ವಿದೇಶಗಳಿಗೆ ಹೋಗುವುದು ಸಂತಸದ ಅನುಭವ ಪಡೆಯಲು. ಯಾವ ಕಾರಣಕ್ಕೂ ಯಾರೊಂದಿಗೂ ಜಗಳವಾಡಬೇಡಿ. ಎಲ್ಲರೊಂದಿಗೂ ಸ್ನೇಹ ಭಾವ ಪ್ರದರ್ಶಿಸಿ.

* ನಿಮ್ಮ ಬ್ಯಾಗ್ ಅಥವಾ ಸೂಟ್‌ಕೇಸ್ ಕಳುವಾಗಬಹುದು. ಗಾಬರಿಯಾಗಬೇಡಿ, ಅಂಥ ಸಂದರ್ಭಕ್ಕೆ ಹೇಗೆ ಅಣಿಯಾಗಬೇಕು ಎಂಬುದನ್ನು ಮೊದಲೇ ನಿರ್ಧರಿಸಿ. ಬದಲಿ ವ್ಯವಸ್ಥೆ ಮಾಡಿಕೊಳ್ಳಿ.

* ಯಾವುದಕ್ಕೂ ನಿಮ್ಮ ಸೂಟಕೇಸ್ ಫೋಟೋ ಕ್ಲಿಕ್ಕಿಸಿಟ್ಟುಕೊಳ್ಳಿ. ಒಂದು ವೇಳೆ ಮಿಸ್ ಆದರೆ, ಹೆಚ್ಚಿನ ವಿವರ ನೀಡಲು ಇದು ಸಹಕಾರಿ.

ನೀವು ವಿಮಾನದಲ್ಲಿ ಮಧ್ಯ ಸೀಟಿನಲ್ಲಿ ಕುಳಿತುಕೊಳ್ಳುವ ಸಂದರ್ಭ ಬಂದರೆ, ಎರಡೂ ಆರ್ಮ್ ರೆಸ್‌ಟ್ ನಿಮಗೇ ಬೇಕೆಂಬ ಧೋರಣೆ ಬೇಡ.

* ಯಾವುದೇ ತಾಣಕ್ಕೆ ಹೋದಾಗ ಸಾಧ್ಯವಾದಷ್ಟು ಮಾಹಿತಿ ಸಂಗ್ರಹಿಸಿ. ಸಾಧ್ಯವಾದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ. ನೋಟ್‌ಸ್ ಮಾಡಿಕೊಳ್ಳಿ.

* ಕ್ಲಿಕ್ಕಿಸಿದ ಎಲ್ಲ ಫೋಟೋಗಳನ್ನು ಇನ್ಸ್ಟಾಗ್ರಾಮ್ ಅಥವಾ ಫೇಸ್ ಬುಕ್‌ಗೆ ಅಪ್ಲೋಡ್ ಮಾಡಬೇಡಿ. ನಿಮ್ಮ ಪ್ರವಾಸದ ಎಷ್ಟು ವಿವರಗಳನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಡಬೇಕು ಎಂಬುದು ನಿಮಗೆ ಗೊತ್ತಿರಲಿ. ಅಷ್ಟಕ್ಕೂ ನಿಮ್ಮ ಪ್ರವಾಸ, ಅನುಭವ ನಿಮ್ಮದು. ಎಲ್ಲವನ್ನೂ ಸಾರ್ವತ್ರಿಕಗೊಳಿಸಬೇಕಿಲ್ಲ.

* ನಿಮ್ಮ ಪಾಸ್ ಪೋರ್ಟ್ ಮತ್ತು ವೀಸಾ ಜೆರಾಕ್‌ಸ್ ಪ್ರತಿಗಳನ್ನು ಮಾಡಿಟ್ಟುಕೊಳ್ಳಲು ಮರೆಯಬೇಡಿ. ಒಂದು ವೇಳೆ ಪಾಸ್ ಪೋರ್ಟ್ ಕಾಣೆಯಾದರೆ, ಇವು ನೆರವಿಗೆ ಬರಬಹುದು.

* ಅಪರಿಚಿತರೊಂದಿಗೆ ಪ್ರಯಾಣಿಸುವಾಗ ಯೋಚಿಸಿ. ಒಂದು ವೇಳೆ ಪ್ರಯಾಣಿಸುವ ಸಂದರ್ಭ ಬಂದರೆ ಅದೂ ಸಹ ಒಳ್ಳೆಯ ಅನುಭವ ಎಂದು ಭಾವಿಸಿ.

* ನೀವು ವಿದೇಶದಲ್ಲಿದ್ದಾಗ, ಕಾರಿನಲ್ಲಿ ಪ್ರಯಾಣಿಸುವಾಗ, ಸಾಧ್ಯವಾದರೆ ಸ್ಥಳೀಯ ರೇಡಿಯೋ ಕೇಳಿ. ನಿಮಗೆ ಅಲ್ಲಿನ ಸಂಗೀತದ ಗೊತ್ತಾದೀತು.

* ನೀವು ಹೋಟೆಲ್ ರೂಮ್ ಒಳಗೆ ಪ್ರವೇಶಿಸುತ್ತಿದ್ದಂತೆ, ಏರ್ ಕಂಡೀಷನಿಂಗ್ (ಏಸಿ) ಕಂಟ್ರೋಲ್, ವೈಫೈ ಪಾಸ್ವರ್ಡ್ ಪಡೆಯಲು ಮರೆಯಬೇಡಿ. ಏಸಿ ಹೇಗೆ ಆಪರೇಟ್ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಎಲ್ಲಾ ಲೈಟುಗಳನ್ನು ಆಪರೇಟ್ ಮಾಡುವುದು ಹೇಗೆ ಎಂಬುದನ್ನೂ ತಿಳಿದುಕೊಳ್ಳಿ. ಇದು ಸಣ್ಣ ವಿಷಯವಾಗಿರಬಹುದು, ಆದರೆ ಇದರಿಂದ ನಿಮ್ಮ ನೆಮ್ಮದಿಗೆ ಭಂಗವಾಗುವುದಿಲ್ಲ.

* ಕ್ಯಾಪ್, ಮೊಇಸ್ಟುರೈಸರ್, ಲಿಪ್ ಬಾಮ್, ಸನ್ ಕ್ರೀಮ್, ಐ ಮಾಸ್‌ಕ್, ಸಿಮ್ ಕಾರ್ಡ್ ಪಿನ್, ಮಂಕಿ ನೈಲ್ ಕಟರ್.. ಮುಂತಾದವುಗಳನ್ನು ಒಯ್ಯಲು ಮರೆಯಬೇಡಿ. ಯಾವತ್ತೂ ಈ ಎಲ್ಲಾ ಸಾಮಾನುಗಳನ್ನು ಒಳಗೊಂಡ ಒಂದು ಕಿಟ್ ಸಿದ್ಧವಾಗಿಟ್ಟುಕೊಳ್ಳುವುದು ಒಳ್ಳೆಯದು.

* ಸಾಮಾನ್ಯಾವಾಗಿ ಸ್ನೇಹಿತರಿಗೆ ಗಿಫ್‌ಟ್ ಐಟಂಗಳನ್ನು ತರದೇ ಯಾರೂ ಬರುವುದಿಲ್ಲ. ಹತ್ತಾರು ಜನರಿಗೆ ಉಡುಗೊರೆ ತರುವುದು ನಿಮಗೆ ಮತ್ತು ನಿಮ್ಮ ಪರ್ಸ್‌ಗೆ ಭಾರವಾಗಬಹುದು. ಆದರೆ ಖಾಲಿ ಕೈಯಲ್ಲಿ ಬರಲು ಮನಸ್ಸು ಒಪ್ಪಲಿಕ್ಕಿಲ್ಲ. ಅಂಥ ಸಂದರ್ಭದಲ್ಲಿ ಆಯಾ ದೇಶದ ಟಿ-ಶರ್ಟ್‌ಗಳನ್ನು ತರಬಹುದು. ಎಷ್ಟೇ ದುಬಾರಿ ಟೀ-ಶರ್ಟ್ ಆದರೂ ಅದು ದುಬಾರಿ

* ವಿಮಾನದಲ್ಲಿ ಪ್ರಯಾಣಿಸುವಾಗ ಸಾಧ್ಯವಾದಷ್ಟು ಮಲಗಿಬಿಡಿ. ಕೆಲವರು ಸಿನಿಮಾ ನೋಡುತ್ತಾರೆ. ಅದು ನಿಜಕ್ಕೂ ಸಮಯ ನಿರರ್ಥಕಗೊಳಿಸಿದಂತೆ. ಈಗ ಸಿನಿಮಾವನ್ನು ಎಲ್ಲಿ ಬೇಕಾದರೂ ನೋಡಬಹುದು. ವಿಮಾನದಲ್ಲೇ ನೋಡಬೇಕೆಂದೇನೂ ಇಲ್ಲ.

* ವಿಮಾನದಲ್ಲಿ ಮಲಗಬೇಕೆಂದು ಕೆಲವರು ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಅದು ಒಳ್ಳೆಯದಲ್ಲ. ನಾನು ವೆನಿಲ್ಲಾ ಹಾಕಿದ ಬಿಸಿ ಹಾಲನ್ನು ಕುಡಿಯುತ್ತೇನೆ. ಇದರಿಂದ ನನಗೆ ಬಹಳ ಪ್ರಯೋಜನವಾಗಿದೆ.

* ವಿದೇಶ ಪ್ರಯಾಣದಲ್ಲಿ ನಿಮ್ಮ ಬ್ಯಾಗ್ ಅಂದ್ರೆ ನಿಮ್ಮ ಪ್ರಪಂಚ. ಅದನ್ನು ಜೋಪಾನವಾಗಿ ಬ್ಯಾಗ್‌ನ್ನು ಯಾವತ್ತೂ ಸರಿಯಾಗಿ ಟ್ಯಾಗ್ ಮಾಡಿ. ಎಲ್ಲಿದ್ದರೂ ಸುಲಭವಾಗಿ ಗುರುತಿಸಲು ಸಾಧ್ಯವಾಗಬೇಕು. ವಿಮಾನ ನಿಲ್ದಾಣದಲ್ಲಿ ನಿಮ್ಮ ಬ್ಯಾಗ್ ನ್ನು ಎತ್ತಿಕೊಳ್ಳುವ ಮುನ್ನ ಅದು ನಿಮ್ಮದೇ ಎಂಬುದನ್ನು ಎರಡೆರಡು ಸಲ ಖಾತ್ರಿಪಡಿಸಿಕೊಳ್ಳಿ. ನೀವು ಎಷ್ಟೇ ಸಲ ವಿದೇಶ ಪ್ರವಾಸ ಹೋಗಿರಬಹುದು, ಈ ವಿಷಯದಲ್ಲಿ ಎಲ್ಲರೂ ಪ್ರಮಾದವೆಸಗುತ್ತಾರೆ.

* ವಿಮಾನದಲ್ಲಿ ನಿಮ್ಮ ಆಸನವನ್ನು ಹಿಂದಕ್ಕೆ ತಳ್ಳುವ ಮೊದಲು ಹಿಂದೆ ಕುಳಿತವರಿಗೆ ತಿಳಿಸಿ. ನಿಮ್ಮ ಮುಂದೆ ಕುಳಿತವರು ಏಕಾ ಏಕಿ ತಮ್ಮ ಆಸನವನ್ನು ತಳ್ಳಿದಾಗ ನಿಮ್ಮ ಮೂತಿಗೆ ತಗುಲಿರಬಹುದು. ಇದು ಒಳ್ಳೆಯ ನಡತೆ. ವಿಮಾನದಲ್ಲಿ ಬ್ಯಾಗ್‌ಗಳನ್ನು ಇಡಲು ಬೇರೆಯವರಿಗೆ ನೇರವಾಗಿ.

* ವಿಮಾನದಲ್ಲಿ ಪ್ರಯಾಣಿಸುವಾಗ ಕೆಲವರು ಪುಸ್ತಕಗಳನ್ನು ಓದುತ್ತಾರೆ, ತಪ್ಪಲ್ಲ. ಅದರ ಬದಲು ಕಿಂಡಲ್ ಬಹಳ ಪ್ರಯೋಜನಕಾರಿ. ನಾನು ಬಹಳ ಸಲ ವಿಮಾನದಲ್ಲಿ ಯೋಚಿಸುತ್ತೇನೆ. ನನ್ನ ಜೀವನದ ಬಹಳ ಮುಖ್ಯ ನಿರ್ಧಾರಗಳು ಇಂಥ ಯೋಚನೆಯಲ್ಲಿ ಉದ್ಭವಿಸಿವೆ.

ವಿದೇಶ ಪ್ರಯಾಣದಂಥ ಅನುಭವ ಮತ್ತೊಂದಿಲ್ಲ. ಪ್ರತಿ ಕ್ಷಣವನ್ನೂ ಆನಂದಿಸಿ, ಅನುಭವಿಸಿ. ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಬೇಡಿ. ಬಂದ ನಂತರ ಆರಾಮವಾಗಿ ಮಲಗಬಹುದು. ವಿದೇಶ ಪ್ರಯಾಣದಲ್ಲಿದ್ದಾಗ ಇಲ್ಲಿನ ರಾಜಕಾರಣ, ಬೆಲೆ ಏರಿಕೆ, ಜನಸಂಖ್ಯಾ ನಿಯಂತ್ರಣ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಹಾಳು ಮಾಡಬೇಡಿ. ಇಂಥ ಚರ್ಚೆಗಳಿಂದ ಏನೂ ಪ್ರಯೋಜನ ಇಲ್ಲ. ಅಲ್ಲದೆ ಈ ಚರ್ಚೆಗಳು ನಿಮ್ಮ ಮೂಡನ್ನು ಬೇರೆಲ್ಲಿಗೋ ಕರೆದೊಯ್ಯುತ್ತವೆ.
ವಿದೇಶಗಳಲ್ಲಿನ ಊರುಗಳನ್ನು ನೋಡಲು ಸಹ ಒಂದು ಒಳ್ಳೆಯ ಮನಸ್ಥಿತಿ ಬೇಕು. ಅಷ್ಟಕ್ಕೂ ನೀವು ಲಕ್ಷಾಂತರ ಹಣ ಕೊಟ್ಟು ಅಲ್ಲಿಗೆ ಹೋಗಿರುತ್ತೀರಿ. ಅದರ ಪ್ರಯೋಜನ ಪಡೆಯುವುದು ನಿಮ್ಮ ಬೇರೆಯವರ ಹಣದಲ್ಲಿ ಅಲ್ಲಿಗೆ ಹೋದಾಗಲೂ ವ್ಯರ್ಥವಾಗಿ ಕಳೆಯಬಾರದು.

Tags

Related Articles

Leave a Reply

Your email address will not be published. Required fields are marked *

Language
Close