ನಾನು ಡಾಕ್ಟರ್, ನೀನೂ ಡಾಕ್ಟರ್, ನಾವೆಲ್ಲರೂ ಡಾಕ್ಟರ್

Posted In : ಸಂಗಮ, ಸಂಪುಟ

-ಡಾ. ದಯಾನಂದ ಲಿಂಗೇಗೌಡ
ರೇಡಿಯಾಲಜಿಸ್ಟ್

ರಾಷ್ಟ್ರೀಯ ವೈದ್ಯ ಆಯೋಗ (ನ್ಯಾಷನಲ್ ಕಮಿಷನ್) ಸ್ಥಾಪನೆಗೆ ವಿರೋಧಿಸಿ ಇತ್ತೀಚೆಗೆ ಭಾರತೀಯ ವೈದ್ಯ ಸಂಘ (ಐಎಂಎ) ಕರೆ ನೀಡಿತ್ತು. ಹೊಸ ಸಂಸ್ಥೆಯ ಕೆಲವು ಅಂಶಗಳು ಅಕ್ಷರಶಃ ಆಧುನಿಕ ವೈದ್ಯ ಪದ್ಧತಿಯ (ಅಲೋಪಥಿ) ವೈದ್ಯರನ್ನು ಬೀದಿಗೆ ಬಂದು ಪ್ರತಿಭಟಿಸುವಂತೆ ಮಾಡಿತ್ತು. ಅವುಗಳಲ್ಲಿ ಪ್ರಮುಖವಾದುದು ಕೆಲವು ತಿಂಗಳ ತರಬೇತಿಯ ನಂತರ ‘ಆಯುಷ್’ ವೈದ್ಯರು ಅಲೋಪಥಿ ಔಷಧಗಳನ್ನು ಕೊಡಬಹುದು ಎಂಬ ಅಂಶ. ಸಾಮಾಜಿಕ ಜಾಲತಾಣಗಳಲ್ಲಿ ಆಧುನಿಕ ವೈದ್ಯ ಪದ್ಧತಿಯ ವೈದ್ಯರುಗಳು ಪರಿಸ್ಥಿತಿ ಹೀಗೇ ಮುಂದುವರಿದರೆ, ‘ಕ್ರಾಶ್ ಕೋರ್ಸ್ ಪಡೆದ ಚಾಲಕರು ವಿಮಾನ ಚಾಲಕರಾಗಬಹುದು. ಸಿಂಹಗಳ ಸಂಖ್ಯೆ ಕಡಿಮೆ ಇರುವ ಕಡೆ ನಾಯಿಗಳನ್ನು ತಯಾರು ಮಾಡಿ ಕಾಡಿಗೆ ಬಿಡಬಹುದು’ ಎಂದು ಬರೆದುಕೊಂಡಿದ್ದು ಆಯುಷ್ ವೈದ್ಯರುಗಳನ್ನು ಸಿಟ್ಟಿಗೆಬ್ಬಿಸಿತ್ತು. ಅಲೋಪಥಿ ಮತ್ತು ಆಯುಷ್ ವೈದ್ಯರ ಸಮರ ತಾರಕದಲ್ಲಿರುವಾಗಲೇ, ಮತ್ತೊಂದು ವಿವಾದ ಕಾಣಿಕೊಳ್ಳುವ ಸೂಚನೆ ಕಾಣುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಡಾ. ಮುರಳಿ ಮೋಹನ್ ನೇತೃತ್ವದ ಸದನ ಸಮಿತಿ ‘ಡಾಕ್ಟರ್’ ಎಂಬ ಪದವನ್ನು ಆಧುನಿಕ ವೈದ್ಯ ಪದ್ಧತಿಯವರು (ಅಲೋಪಥಿ) ಮಾತ್ರ ಬಳಸಬೇಕು. ಪದ್ಧತಿಯ ವೈದ್ಯರುಗಳಿಗೆ ‘ವೈದ್ಯ, ವೈದ್ಯ ರಾಜ , ಹಕೀಮ್’ ಎಂಬ ಪದ ಬಳಸಬೇಕು. ಇದರಿಂದ ಸಾರ್ವಜನಿಕರಿಗೆ ಹಾಗೂ ವೈದ್ಯರಿಗೆ ಸ್ಪಷ್ಟತೆ ಬರುತ್ತದೆ ಎಂಬ ಸಲಹೆ ನೀಡಿದೆ. ಈ ಸಲಹೆ ಏನಾದರೂ ಕಾರ್ಯರೂಪಕ್ಕೆ ಬಂದರೆ, ಮೊದಲೇ ಆಧುನಿಕ ವೈದ್ಯರ ಹೇಳಿಕೆಗಳಿಂದ ಸಿಟ್ಟಿನಲ್ಲಿರುವ ಆಯುಷ್ ಪದ್ಧತಿಯ ವೈದ್ಯರು ರೊಚ್ಚಿಗೇಳಿಸುವುದರಲ್ಲಿ ಸಂಶಯವಿಲ್ಲ.

ಡಾಕ್ಟರ್ ಪದದ ವಿವಾದ ಹೊಸದೆನಲ್ಲ. ಸ್ವಲ್ಪ ಹಿಂದೆ ಹೋಗಿ ನೋಡಿದರೆ ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ವೈದ್ಯರುಗಳು ಮತ್ತು ಭೌತ (ಫಿಸಿಯೋಥೆರಪ್ಟ್) ಸಂಘದ ನಡುವೆ ಗುದ್ದಾಟ ನಡೆದಿತ್ತು. ಭೌತ ವಿಧಾನದ ಮೂಲಕ ಚಿಕಿತ್ಸೆ ನೀಡುವವರು ‘ಡಾಕ್ಟರ್ ’ ಎಂಬ ಪದವನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿರುವುದನ್ನು ಗಮನಿಸಿದ ಭಾರತೀಯ ವೈದ್ಯಕೀಯ ಸಂಘ ನೋಟಿಸ್ ಕೊಟ್ಟಿತ್ತು. ಅದರಲ್ಲಿ ಫಿಸಿಯೋಥೆರಪ್ಟ್ಿಗಳು, ವೈದ್ಯರಿಗೆ ಸಹಾಯ ಮಾಡುವ ದಾದಿಯರು, ಎಕ್ಸರೆ ತಂತ್ರಜ್ಞ ಅಥವಾ ಲ್ಯಾಬ್ ತಂತ್ರಜ್ಞರು ವೈದ್ಯರು ಹೇಳುವ ಚಿಕಿತ್ಸೆ ನೀಡುತ್ತಾರೆಯೇ ಹೊರತು, ಸ್ವತಃ ವೈದ್ಯರಲ್ಲ. ಔಷಧ ಕೊಡುವ ಹಕ್ಕು ಇಲ್ಲ. ಇಂಡಿಯನ್ ಮೆಡಿಕಲ್ ಆ್ಟ್ 1916/6 ಪ್ರಕಾರ ವೈದ್ಯರಲ್ಲದವರು ‘ಡಾಕ್ಟರ್’ ಪದವನ್ನು ಸೇರಿಸಿಕೊಳ್ಳುವುದು ಅಪರಾಧವಾಗುತ್ತದೆ. ಆದ್ದರಿಂದ ವೈದ್ಯರೇತರರು ‘ಡಾಕ್ಟರ್’ ಪದವನ್ನು ಬಳಸಿದರೆ ನಕಲಿ ವೈದ್ಯರ ಮೇಲಿನ ಕಾನೂನು ಕ್ರಮಗಳನ್ನು ಜರುಗಿಸಬೇಕಾಗುತ್ತದೆ ಎಂದು ತಿಳಿಸಿತ್ತು.

ಆದರೆ ಇದಕ್ಕೆ ಕ್ಯಾರೇ ಎನ್ನದ ಭಾರತೀಯ ಫಿಸಿಯೋಥೆರಫ್ಟ್‌ ಸಂಘ () ಭಾರತೀಯ ವೈದ್ಯ ಸಂಘಕ್ಕೆ ನಮಗೆ ಆದೇಶ ನೀಡುವ ಅಧಿಕಾರವಿಲ್ಲ. ನಾವುಗಳು ಕೂಡ ರೋಗಿಗಳಿಗೆ ದೈಹಿಕ ಚಟುವಟಿಕೆ ಮೂಲಕ ಚಿಕಿತ್ಸೆ ನೀಡುತ್ತಿದ್ದೇವೆ. ಆದ್ದರಿಂದ ಫಿಸಿಯೋಥೆರಪ್ಟ್ಿಗಳು ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ವೈದ್ಯರಿಂದ ನಮ್ಮನ್ನು ಬೇರೆಯಾಗಿ ಗುರುತಿಸಿಕೊಳ್ಳಲು, ಹೆಸರಿನ ನಂತರ ‘ಫಿಸಿಯೋಥೆರಫ್ಟ್‌ಿ ಎಂದು ಬರೆದುಕೊಳ್ಳುತ್ತೇವೆ (ಉದಾಹರಣೆಗೆ ಡಾ. ಹೆಸರು, )’ ಎಂದು ಹೇಳಿಕೊಂಡಿತು.  ಕೆಲವು ತಿಂಗಳುಗಳ ಹಿಂದೆ ಕಿರುತೆರೆಯ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ಐದು ‘ಗೌರವ ಡಾಕ್ಟರೇಟ್ ಪದವಿ’ ಪಡೆದಿರುವ ಜಸ್ಟಿಸ್ ಸಂತೋಷ್ ಹೆಗ್ಡೆಯವರು ಕಾಣಿಸಿಕೊಂಡಿದ್ದರು. ಅವರನ್ನ ಬಿಟ್ಟು ಬೇರೆಯವರಿಗೆ ಐದು ಡಾಕ್ಟರೇಟ್ ಪದವಿ ಸಿಕ್ಕಿದ್ದರೆ, ಬಹುಶಃ ‘ಡಾ. ಡಾ. ಡಾ. ಡಾ. ಡಾ ’ ಅಂತ ಐದು ಬರೆದುಕೊಳ್ಳುತ್ತಿದ್ದರು. ಆದರೆ ತಮ್ಮ ಹೆಸರಿನ ಮುಂದೆ ಒಂದು ಬಾರಿಯೂ ಡಾ. ಎಂದು ಸಂತೋಷ್ ಹೆಗ್ಡೆಯವರು ಬರೆದುಕೊಂಡಿಲ್ಲ.

ಆ ಬಗ್ಗೆ ನಿರೂಪಕ ರಮೇಶ್ ಪ್ರಶ್ನಿಸಿದಕ್ಕೆ ‘1996 ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಪದ್ಮಶ್ರೀ, ಪದ್ಮ ಭೂಷಣ ಪದವಿಗಳೂ ಸೇರಿದಂತೆ ಗೌರವ ಡಾಕ್ಟರೇಟ್ ಬಿರುದುಗಳನ್ನು ತಮ್ಮ ಹೆಸರಿನ ಮುಂದೆ ಹಾಕಿಕೊಳ್ಳುವಂತಿಲ್ಲ. ಹೆಸರಿನ ನಂತರ ಹಾಕಿಕೊಳ್ಳಬಹುದು. ಹಾಗೇನಾದರೂ ಹೆಸರಿನ ಮುಂದೆ ಇಂತಹ ಗೌರವ ಸೂಚಕ ಬಿರುದುಗಳನ್ನು ಹಾಕಿಕೊಂಡರೆ, ಅಂತಹ ಬಿರುದುಗಳನ್ನು ವಾಪಾಸ್ ಪಡೆದುಕೊಳ್ಳಬಹುದು ಎಂದು  ಗೌರವ ಡಾಕ್ಟರೇಟ್ ಪಡೆದವರು ತಮ್ಮ ಹೆಸರಿನ ಮುಂದೆ ‘ಡಾಕ್ಟರ್’ ಪದ ಬಳಸಿದರೂ, ಹೆಸರಿನ ಕೊನೆಯಲ್ಲಿ ‘ಗೌರವಾರ್ಥ’ ಎಂದು ಬರೆದು ಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಡಾ. ಹೆಸರು, ಏ.ಇ ( honoris causa, , ಅರ್ಥಾತ್ ಗೌರವಾರ್ಥ).

ಯಾರು ಹೆಸರಿನ ಮುಂದೆ ‘ಡಾಕ್ಟರ್’ ಹಾಕಿಕೊಳ್ಳಬಾರದು, ಯಾರು ಹಾಕಿಕೊಳ್ಳಬಹುದು ಎಂದು ಮೂಲ ಹುಡುಕುತ್ತಾ ಹೊರಟರೆ, ವೈದ್ಯರ ಮೂಲಕ್ಕೆ ನೀರು ಬೀಳುತ್ತದೆ. ಡಾಕ್ಟರ್ ಎಂಬ ಪದ ಮೂಲತಃ ಲ್ಯಾಟಿನ್ ಪದವಾಗಿದ್ದು, ಉಅಇಏಉ್ಕ ಶಿಕ್ಷಕ ಎಂಬ ಕೊಡುತ್ತದೆ. ಮೂಲತಃ ಬೈಬಲ್ ಬೋಧಿಸುವ ಸಾಮರ್ಥ್ಯವುಳ್ಳ ವ್ಯಕ್ತಿಗಳಿಗೆ ‘ಡಾಕ್ಟರ್’ ಎಂಬ ಪದವನ್ನು ಉಪಯೋಗಿಸಲಾಗುತ್ತಿತ್ತು. ಮೊದಲು ಚರ್ಚ್‌ಗಳ ಫಾದರ್‌ಗಳಿಗೆ ಮಾತ್ರ ಲಭಿಸುತ್ತಿದ್ದ ಈ ಡಾಕ್ಟರ್ ಪದವಿ, ನಂತರ ಬೈಬಲ್‌ನ್ನು ಚೆನ್ನಾಗಿ ಅಧ್ಯಯನ ಮಾಡಿದವರೆಲ್ಲರಿಗೂ, ಪರೀಕ್ಷೆಯ ನಂತರ ಸಿಗುತ್ತಿತ್ತು. 1179ರಲ್ಲಿ ಪೋಪರು ಪ್ಯಾರಿಸ್‌ನ ವಿವಿಗಳಿಗೆ ‘ಡಾಕ್ಟರ್’ ಪದವಿಯ ಹಕ್ಕುಗಳನ್ನು ಕೊಟ್ಟರು.

11ನೇ ಶತಮಾನದಲ್ಲಿ ಯುರೋಪ್ ದೇಶಗಳಲ್ಲಿ ವಕೀಲರನ್ನು ‘ಡಾಕ್ಟರ್’ ಎಂದು ಸಂಬೋಧಿಸಲಾಗುತ್ತಿತ್ತು. 1703ರಲ್ಲಿ ಸ್ಯಾಮ್ಯುಲ್ ಬೆನಿಯೋನ್ ಎಂಬ ವೈದ್ಯರಿಗೆ ‘ಗ್ಲಾಸ್ ಗೌ’ ‘ಡಾಕ್ಟರ್’ ಪದವಿಯನ್ನು ಕೊಡಲಾಯಿತು. ನಂತರ ವೈದ್ಯರಿಗೆಲ್ಲಾ ‘ಡಾಕ್ಟರ್’ ಎಂದು ಕರೆಯುವ ಪದ್ಧತಿ ಜಾರಿಗೆ ಬಂದಿತು. 19ನೇ ಶತಮಾನದಲ್ಲಿ ಸಂಶೋಧನೆ ಮೂಲಕ ಹೊಸ ಜ್ಞಾನ ಕೊಟ್ಟವರೆಲ್ಲರಿಗೂ ವಿವಿಗಳು ಪಿಎಚ್. ಡಿ ಪದವಿ ಕೊಡಲಾರಂಭಿಸಿದವು. ವಿಶ್ವ ವಿದ್ಯಾಲಯ ‘ಪಿಎಚ್.ಡಿ’ ಪಡೆದವರೆಲ್ಲರಿಗೂ ‘ಡಾಕ್ಟರ್’ ಎಂದು ಕರೆದು ಗೌರವ ಸೂಚಿಸುತ್ತಿದ್ದರು.

ತೀರಾ ಇತ್ತೀಚಿನವರೆಗೂ ಯಾವುದೇ ವಿಷಯದಲ್ಲಿ ಸಂಶೋಧನೆ ಮಾಡಿ ಪಿಎಚ್. ಡಿ ಪಡೆದವರಿಗೆ ಮತ್ತು ವೈದ್ಯರಿಗೂ ‘ಡಾಕ್ಟರ್’ ಬಳಕೆಯಾಗುತ್ತಿತ್ತು. ಸಾಮಾನ್ಯವಾಗಿ ಸಂಶೋಧನೆ ಮೂಲಕ ಡಾಕ್ಟರೇಟ್ ತಮ್ಮ ಹೆಸರಿನ ಮುಂದೆ ಡಾಕ್ಟರ್ ಬಳಸಿ, ಹೆಸರಿನ ಹಿಂದೆ ಪಿಎಚ್. ಡಿ ಎಂದು ಬರೆದುಕೊಳ್ಳುತ್ತಾರೆ (ಉದಾರಣೆಗೆ ಡಾ .ಹೆಸರು, ಪಿಎಚ್. ಡಿ). ವೈದ್ಯರುಗಳು ತಮ್ಮ ಹೆಸರಿನ ಮುಂದೆ ಡಾಕ್ಟರ್ ಪದ ಬಳಸಿ ನಂತರ MBBS /MD /ಈ ಎಂದು ಪದವಿ ಬರೆದು ಕೊಳ್ಳುತ್ತಾರೆ (ಉದಾಹರಣೆಗೆ ಡಾ. ಹೆಸರು, MBBS ). ಗೌರವ ಡಾಕ್ಟರೇಟ್ ಪದವಿ ಪಡೆದವರು ಹೆಸರಿನ ಮುಂದೆ ಡಾಕ್ಟರ್ ಪದವನ್ನು ಬಳಸುವಂತಿಲ್ಲ. ಬಳಸಿದರೂ ಹೆಸರಿನ ನಂತರ ಏಇ / ಎಂದು ಸ್ಪಷ್ಟಿಕರಣ ನೀಡಬೇಕು. ಈ ರೂಢಿಯ ಉದ್ದೇಶ ಸಾರ್ವಜನಿಕರಿಗೆ ಗೊಂದಲ ಕಡಿಮೆ ಮಾಡಿ ವ್ಯಕ್ತಿ ಯಾವ ರೀತಿಯ ವೈದ್ಯರು ಎಂದು ತಿಳಿಸುವುದು.

ಒಂದು ಕುತೂಹಲಕಾರಿ ಅಂಶವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಇಂಗ್ಲೆಂಡ್‌ನಲ್ಲಿ ಪುರುಷ ಶಸ್ತ್ರ ಚಿಕಿತ್ಸಕ (ಸರ್ಜನ್)ರಿಗೆ ಡಾಕ್ಟರ್ ಪದವನ್ನು ಬಳಸುವುದಿಲ್ಲ. ಈ ವೈದ್ಯರುಗಳು ತಮ್ಮ ಹೆಸರಿನ ಮುಂದೆ ಡಾಕ್ಟರ್ (Dr ) ಬದಲು ಮಿಸ್ಟರ್ ( Mr )ಎಂದೇ ಬರೆದು ಕೊಳ್ಳುತ್ತಾರೆ. ಇದಕ್ಕೆ ಕಾರಣ 18ನೇ ಶತಮಾನದಲ್ಲಿ ಈ ವೈದ್ಯರುಗಳಿಗೆ ಮಾತ್ರ ಡಾಕ್ಟರ್ ಎಂದು ಕರೆಯುವ ಪದ್ಧತಿ ಇತ್ತು. ಆಪರೇಷನ್ ಮಾಡುವ ವೈದ್ಯರಿಗೆ ಖ ಪದವಿ ಕೊಡುವ ಪರಿಪಾಠ ಪ್ರಾರಂಭವಾಗಿರಲಿಲ್ಲ. ಆದ್ದರಿಂದ ಆಪರೇಷನ್ ಮಾಡುವ ವೈದ್ಯರನ್ನು ಮಿಸ್ಟರ್ ಎಂದೇ ಕರೆಯುತ್ತಿದ್ದರು. ಅದೇ ರೂಢಿ ಇನ್ನೂ ಜಾರಿಯಲ್ಲಿ ಇದೆಯಂತೆ!

ಒಟ್ಟಿನಲ್ಲಿ ಹೇಳುವುದಾದರೆ ಮೂಲತಃ ‘ಡಾಕ್ಟರ್’ ಪದ ಧಾರ್ಮಿಕ ಪದ. ನಂತರ ಅದನ್ನು ಅತ್ಯುತ್ತಮ ಜ್ಞಾನಿಗಳಿಗೆ ಕೊಡಲಾಯಿತು. ನಂತರ ಡಾಕ್ಟರ್ ಪದವನ್ನು ಪಿಎಚ್. ಡಿ ಪಡೆದ ಸಂಶೋಧಕರು ಮತ್ತು ಆಧುನಿಕ ವೈದ್ಯರಿಗೆ ನಂತರ ಎಲ್ಲ ಪದ್ಧತಿಯ ವೈದ್ಯರಿಗೂ ಬಳಸಲಾಯಿತು. ನಂತರ ‘ಗೌರವ’ ಡಾಕ್ಟರೇಟ್ ಕೊಟ್ಟವರಿಗೂ ಬಳಸುವಂತಾಯ್ತು. ಪ್ರಾಣಿಗಳ ವೈದ್ಯರುಗಳೂ ಕೂಡ ಡಾಕ್ಟರ್ ಪದವನ್ನು ಬಳಸುತ್ತಾರೆ. ಇತ್ತೀಚೆಗೆ ವೈದ್ಯರಿಗೆ ಸಹಾಯ ಮಾಡುವ ಫಿಸಿಯೋಥೆರಪಿಸ್‌ಟ್ಗಳು ಬಳಸುತ್ತಿದ್ದಾರೆ. ಸಸ್ಯಗಳಿಗೆ ರೋಗ ಬಂದರೆ, ಚಿಕಿತ್ಸೆ ಸೂಚಿಸುವ ವಿಜ್ಞಾನಿಗಳು ಕೂಡ ಡಾಕ್ಟರ್ ಪದವನ್ನು ಬಳಸಲು ಇಚ್ಛೆ ಪಡುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಕೇಂದ್ರ ಸರಕಾರ ಡಾಕ್ಟರ್ ಪದವನ್ನು ‘ಆಧುನಿಕ ವೈದ್ಯ ಪದ್ಧತಿಯವರಿಗೆ’ ಮಾತ್ರ ಮೀಸಲಾಗಿಟ್ಟು, ಆಯುಷ್ ವೈದ್ಯರಿಗೆ ‘ವೈದ್ಯ, ವೈದ್ಯ , ಹಕೀಮ್’ ಎನ್ನುವ ಪದ ಪ್ರಯೋಗ ಮಾಡಲು ಸಲಹೆ ಕೊಡುತ್ತಿದೆ. ಆಧುನಿಕ ವೈದ್ಯರ ಸಹಾಯಕರೂ ಡಾಕ್ಟರ್ ಪದವನ್ನು ಬಳಸುತ್ತಿರುವಾಗ, ಆಯುಷ್ ವೈದ್ಯರಿಗೆ ಡಾಕ್ಟರ್ ಬಳಸಬೇಡಿ ಎಂದರೆ ಸಹಜವಾಗಿ ಸಿಟ್ಟಿಗೇಳುವಂತೆ ಮಾಡುತ್ತದೆ.

ಮೂಲತಃ ಡಾಕ್ಟರ್ ಪದ ಆಧುನಿಕ ವೈದ್ಯರದಲ್ಲ. ಆದರೂ ಅವರು ಪದವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಗ ಬೇರೆಯವರೂ ಕೇಳುತ್ತಿದ್ದಾರೆ. ಕೇಳಿದವರಿಗೆಲ್ಲರಿಗೂ ಕೊಡಬೇಕೋ ಬೇಡವೋ ಎಂಬ ಜಿಜ್ಞಾಸೆ ಪ್ರಾರಂಭವಾಗಿದೆ. ಕೇಳಿದವರೆಲ್ಲರಿಗೂ ಕೊಟ್ಟರೆ ಯಾರು ಯಾವ ರೀತಿಯ ಡಾಕ್ಟರ್ ಎಂದು ಸಾರ್ವಜನಿಕರಲ್ಲಿ ಗೊಂದಲ ಕೊಡದೆ ಹೋದರೆ, ಈ ಪದ ನಿಮ್ಮದೇ ? ಎಂದು ಪ್ರಶ್ನೆ ಕೇಳಿದರೆ ಉತ್ತರಿಸುವುದು ಕಷ್ಟ. ಹಾಗಾಗಿ ‘ನಾನು ಗೌರಿ , ನೀನು ಗೌರಿ, ನಾವೆಲ್ಲರೂ ಗೌರಿ’ ಎಂಬ ವಾಕ್ಯದಂತೆ ‘ನಾನು ಡಾಕ್ಟರ್, ನೀನೂ ಡಾಕ್ಟರ್, ನಾವೆಲ್ಲರೂ ಡಾಕ್ಟರ್’ ಎಂದು ಹೇಳಿ, ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯೋಣವೇ?

 

Leave a Reply

Your email address will not be published. Required fields are marked *

two × two =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top