About Us Advertise with us Be a Reporter E-Paper

Breaking Newsಸಿನಿಮಾಸ್

ಬಿಡುಗಡೆಯಾದ ಒಂದೇ ವಾರದಲ್ಲಿ 500 ಕೋಟಿ ರೂ. ಕ್ಲಬ್‍ಗೆ ಸೇರಿತು ‘2.0’

ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಬಿಡುಗಡೆಗೊಂಡ ಒಂದು ವಾರದೊಳಗೆ ಭರ್ಜರಿ ಗಳಿಕೆ ಮಾಡಿದ್ದು, 500 ಕೋಟಿ ರೂ. ಕ್ಲಬ್​ಗೆ ಸೇರಿದೆ.

ಬಿಡುಗಡೆಗೆ ಮೊದಲೇ ಬಹುನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ 2.0 ನ.29ರಂದು ಬಿಡುಗಡೆಯಾಗಿತ್ತು. 2.0 ಸದ್ಯ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ 12 ನೇ ಸ್ಥಾನ ಪಡೆದುಕೊಂಡಿದೆ. ಕರಣ್‌ ಜೋಹರ್‌ ಅವರು ಚಿತ್ರ 500 ಕೋಟಿ ರೂ. ಮೀರಿದ ಜಾಗತಿಕ ಗಳಿಕೆಯನ್ನು ದಾಖಲಿಸಿರುವ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

2.0 ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದವರು ಶಂಕರ್‌. 3ಡಿ ಯಲ್ಲಿ ನಿರ್ಮಾಣಗೊಂಡ ಮತ್ತು ವಿಶ್ವಾದ್ಯಂತ 1,500 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆಕಂಡ ಮೊತ್ತ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close