About Us Advertise with us Be a Reporter E-Paper

ಅಂಕಣಗಳು

ವಿಶ್ವಾಸಾರ್ಹತೆ ಪ್ರಶ್ನಾರ್ಹ

ಚುನಾವಣೆ ಎಂಬ ಮಹಾ ಪ್ರಹಸನ ಕೊನೆಗೊಂಡು ಮಾಜಿ ಕ್ರಿಕೆಟ್ ಕಪ್ತಾನ ಇಮ್ರಾನ್ ಖಾನ್ ಪ್ರಧಾನಿ ಗದ್ದುಗೆ ಏರುವುದು ಖಚಿತವಾಗಿದೆ. ಇಡೀ ಚುನಾವಣೆಯ ಮೇಲೆ ವಿಶಾಸಾರ್ಹತೆಯ ಕೊರತೆಯ ಕರಿಛಾಯೆ ಇದ್ದು, ಇಮ್ರಾನ್ ಪಾಲಿಗೆ ಇದು ಮುಳ್ಳಿನ ಹಾಸಿಗೆಯಾಗುವ  ಲಕ್ಷಣಗಳು ಢಾಳಾಗಿವೆ. ಇದು ಜನಮತವೋ, ಮಿಲಿಟರಿ ಮತವೋ ಎಂಬಷ್ಟರ ಮಟ್ಟಿಗೆ ಚುನಾವಣೆಯಲ್ಲಿ ಸೇನಾಡಳಿತದ ಕೈವಾಡ ಅಡಕವಾಗಿದೆ. ಇಮ್ರಾನ್ ಅವರ ದಾರಿ ಸುಗಮ ಮಾಡಿಕೊಡಲೆಂದೇ ಚುನಾವಣೆಯಲ್ಲಿ ಸೇನೆಯು ನೇರ ಹಸ್ತಕ್ಷೇಪ ಮಾಡಿದೆ ಎಂಬ  ಅದರಲ್ಲಿಯೂ ಪಿಎಂಎಲ್ ಅಭ್ಯರ್ಥಿಗಳನ್ನು ಸೇನಾ ಪರವಾದ ವ್ಯವಸ್ಥೆ ನಡೆಸಿಕೊಂಡ ರೀತಿಯ ಬಗ್ಗೆ ಅನೇಕ ದೂರುಗಳೂ ಇವೆ. ಒಂದು ದೇಶವಾಗಿ ಬಲಿಷ್ಠವಾಗುವ ಯಾವುದೇ ಕುರುಹು ಇಲ್ಲದೇ ಸೇನೆಯ ಮರ್ಜಿಗೆ ಅನುಗುಣವಾಗಿ ಸಾಗುತ್ತಿರುವ ಪಾಕಿಸ್ತಾನದಲ್ಲಿ ಯಾವುದೇ ನಾಗರಿಕ ಸರಕಾರ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನೆಲೆಗೊಂಡಿದೆ.  ಕ್ರಿಕೆಟ್ ಮೈದಾನದಿಂದ ನೇರ ರಾಜಕೀಯ ಪ್ರವೇಶ ಮಾಡಿದ ಇಮ್ರಾನ್ ಖಾನ್‌ಗೆ ಎರಡು ದಶಕಗಳ ಹೋರಾಟದ ನಂತರ ಪಿಎಂ ಗಾದಿ ಒಲಿದಿರಬಹುದು, ಆದರೆ  ಪರಿಸ್ಥಿತಿಯಲ್ಲಿ ಅವರು ಆ ಹೊಣೆಗಾರಿಕೆಯನ್ನು ಹೇಗೆ ನಿಭಾಯಿಸಬಲ್ಲರು ಎಂಬುದೇ ಯಕ್ಷಪ್ರಶ್ನೆ. ಅವರ ಪ್ರತಿ ನಡೆ, ನುಡಿ, ನೀತಿ, ನಿಲುವಿನ ಮೇಲೆಯೂ ಸೇನೆಯ ನೆರಳು ಇದ್ದೇ ಇರುತ್ತದೆ. ಇನ್ನು ಭಾರತದ ಜೊತೆಗಿನ ಸಂಬಂಧದ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳುವುದು ಎಂದರೆ ಅದು ಸೇನೆಯ ಸುಪರ್ದನ್ನು ಮೀರಿದಂತೆಯೇ ಸರಿ. ಹೀಗಿರುವಾಗ ಹದಗೆಟ್ಟಿರುವ ಸಂಬಂಧ ಸುಧಾರಣೆಯ ಮಾತಂತೂ ದೂರವೇ ಉಳಿಯಲಿದೆ.

Tags

Related Articles

Leave a Reply

Your email address will not be published. Required fields are marked *

Language
Close