About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಧರ್ಮದ ನಡುವೆ ಸಂಘರ್ಷ ನಡೆಯುತ್ತಿರುವುದು ವಿಷಾದನೀಯ: ಸಿದ್ದರಾಮಯ್ಯ

ಬೆಳಗಾವಿ: “ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ರಾಜರ ನಡುವೆ ಸಂಘರ್ಷವಾಗುತ್ತಿತ್ತೆ ವಿನಃ ಧರ್ಮ-ಧರ್ಮದಲ್ಲಿ ಸಂಘರ್ಷ ಆಗುತ್ತಿರಲಿಲ್ಲ. ಆದರೆ ಈಗ ಸಮಾಜದಲ್ಲಿ ಧರ್ಮದ ನಡುವೆ ಸಂಘರ್ಷ ನಡೆಯುತ್ತಿರುವುದು ವಿಷಾದನೀಯ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಛತ್ರಪತಿ‌‌ ಶಿವಾಜಿ ಮಹಾರಾಜರ ಅಶ್ವರೂಡ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಗೌರವವಿದೆ. ಆದರೆ ಕೆಲವರು ಧರ್ಮದ ಹೆಸರಿನಲ್ಲಿ ಸಂಘರ್ಷ ನಡೆಸುತ್ತಿರುವುದು ದುರ್ದೈವದ ಸಂಗತಿ. ಧರ್ಮದ ಉದ್ದೇಶ ಮನುಕುಲದ ಉದ್ದಾರಮಾಡುವುದೇ ವಿನಃ ಸಂಘರ್ಷ ಮಾಡುವುದಲ್ಲ” ಎಂದು ಹೇಳಿದರು.

”ರಾಜಕೀಯ ವಿರೋಧಿಗಳು ನಾನು ಧರ್ಮ ವಿರೋಧಿ ಎಂದು ಆರೋಪಿಸಿದ್ದರು. ಆದರೆ ನಾನು ಎಲ್ಲ ಧರ್ಮದ ಗೌರವದಿಂದ ಕಾಪಾಡುವವನು” ಎಂದು ಪರೋಕ್ಷವಾಗಿ ಬಿಜೆಪಿಯವರ ವಿರುದ್ದ ಕುಟುಕಿದರು. ”ಛತ್ರಪತಿ‌ ಶಿವಾಜಿ‌ ಮಹಾರಾಜರು ಭಾರತದ ಸ್ವಾಭಿಮಾನದ ಸಂಕೇತ. ಇವರು ಕೇವಲ ಒಂದೇ ಜಾತಿಗೆ ಸೀಮಿತವಾಗಿರಲಿಲ್ಲ. ಅವರು ರಾಜಮನೆತನದಲ್ಲಿ ಹುಟ್ಟಿದವರಲ್ಲ. ಅವರ ಧೈರ್ಯ, ಸಾಹಸ, ಯುದ್ದ‌ ಕೌಶಲ್ಯದಿಂದ ಮೇಲೆ ಬಂದವರು. ಅವರು ಸ್ವಾಭಿಮಾನದಿಂದ ಬದುಕಿದವರು.‌ ಎಂದಿಗೂ ಅವರು ಸ್ವಾಭಿಮಾನದ ಜತೆ ರಾಜಿ ಮಾಡಿಕೊಂಡವರಲ್ಲ ಅಂಥವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆಗಳು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ” ಎಂದರು.

”ಶಿವಾಜಿ ಮಹಾರಾಜರಿಗೆ 44ನೇ ವಯಸ್ಸಿನಲ್ಲಿ ಪಟ್ಟಾಭಿಷೇಕವಾಗಿತ್ತು. ಆದರೆ ಕೆಲವರು ಶಿವಾಜಿ ಪಟ್ಟಾಭಿಷೇಕದ ವಯಸಿನಲ್ಲಿಯೇ ಕೆಲವರು ಅವರನ್ನು ಒಂದೇ ಜಾತಿಗೆ ಸೀಮಿತ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂದಿನ‌ ಕಾಲದಲ್ಲಿ ಶಿವಾಜಿ‌ ಮಹಾರಾಜರು ಸಾಮಾನ್ಯ ಜನರು, ರೈತಾಪಿ‌ ವರ್ಗದ ಹಿತ ಕಾಯುವ ಕೆಲಸ ಮಾಡಿದ್ದರು. ಸಾಮಾನ್ಯ ಜನರ ಹಕ್ಕುಗಳು ಹಾಗೂ ಅವರ ಹಿತ ಕಾಯುವ ಕೆಲಸ‌ ಮಾಡಿದ್ದರು. ಸಮಾಜದ ಉದ್ದಕ್ಕೂ ಹೋರಾಟದ ಮೂಲಕವೇ ಹೆಸರು‌ ಮಾಡಿದ್ದರು.”

”ಇವತ್ತು ವಿವೇಕಾನಂದರ ಜನ್ಮದಿ‌ನ. ದೇಶ-ವಿದೇಶದಲ್ಲಿ ಹಿಂದೂ‌ ಧರ್ಮ‌ ಹಾಗೂ ಸಂಸ್ಕೃತಿಯ ಸಂದೇಶ‌ ನೀಡಿದ‌ ಮಹಾನ್ ವ್ಯಕ್ತಿಯ ಸಂಭ್ರಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಶ್ವರೂಡ ಶಿವಾಜಿ ‌ಮೂರ್ತಿ ಅನಾವರಣ ಮಾಡುತ್ತಿರುವುದು ಹೆಮ್ಮೆಯ ಸಂಗತಿ” ಎಂದರು

Tags

Related Articles

Leave a Reply

Your email address will not be published. Required fields are marked *

Language
Close