Tulsi Pooje 2025: ಇಂದು ನಾಡಿನೆಲ್ಲೆಡೆ ತುಳಸಿ ಹಬ್ಬದ ಸಂಭ್ರಮ; ಏನಿದರ ಮಹತ್ವ? ಆಚರಣೆ ಹೇಗೆ?
Tulsi Vivah Shubh Muhurat: ವಿಷ್ಣುವಿನ ಜಾಗೃತಿಯ ನಂತರ, ತುಳಸಿಯನ್ನು ಸಾಲಿಗ್ರಾಮ ಅವತಾರದೊಂದಿಗೆ ವಿವಾಹ ಮಾಡುವ ಸಂಪ್ರದಾಯವಿದೆ. ಇದನ್ನೇ ಕಾರ್ತಿಕ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹವಾಗಿ ಆಚರಿಸಲಾಗುತ್ತದೆ. ಏಕಾದಶಿ ತಿಥಿಯಂದು ಈ ಹಬ್ಬವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಇದು ವೈವಾಹಿಕ ಜೀವನದ ಕಷ್ಟಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ತುಳಸಿ ವಿವಾಹದ ಶುಭ ಮುಹೂರ್ತ ಮತ್ತು ಪೂಜಾ ವಿಧಾನದ ಬಗ್ಗೆ ಇಲ್ಲಿ ತಿಳಿಸಲಾಗಿದೆ.
-
Rakshita Karkera
Nov 2, 2025 8:30 AM
ಬೆಂಗಳೂರು: ಇಂದು ನಾಡಿನೆಲ್ಲೆಡೆ ತುಳಸಿ ಪೂಜೆಯನ್ನು(Tulsi Pooje) ಸಂಭ್ರಮದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ತುಳಸಿ ವಿವಾಹವು ವಿಶೇಷ ಪವಿತ್ರ ಮಹತ್ವವನ್ನು ಹೊಂದಿದೆ. ಈ ಶುಭ ದಿನದಂದು ಭಗವಾನ್ ಶಾಲಿಗ್ರಾಮ (ವಿಷ್ಣುವಿನ ಅವತಾರ) ಮತ್ತು ತುಳಸಿಯಾಗಿ ವೃಂದಾ ದೇವಿಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಆಷಾಢ ಶುಕ್ಲ ಪಕ್ಷದ ದೇವಶಯನಿ ಏಕಾದಶಿಯಂದು ಶ್ರೀ ಹರಿವಿಷ್ಣುವು ನಾಲ್ಕು ತಿಂಗಳ ಯೋಗ ನಿದ್ರೆಯಿಂದ ಎಚ್ಚರಗೊಳ್ಳುವ ಮಹತ್ವದ ದಿನವಿದು.
ವಿಷ್ಣುವಿನ ಜಾಗೃತಿಯ ನಂತರ, ತುಳಸಿಯನ್ನು ಸಾಲಿಗ್ರಾಮ ಅವತಾರದೊಂದಿಗೆ ವಿವಾಹ ಮಾಡುವ ಸಂಪ್ರದಾಯವಿದೆ. ಇದನ್ನೇ ಕಾರ್ತಿಕ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹವಾಗಿ ಆಚರಿಸಲಾಗುತ್ತದೆ. ಏಕಾದಶಿ ತಿಥಿಯಂದು ಈ ಹಬ್ಬವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಇದು ವೈವಾಹಿಕ ಜೀವನದ ಕಷ್ಟಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ತುಳಸಿ ವಿವಾಹದ ಶುಭ ಮುಹೂರ್ತ (Tulsi Vivah Shubh Muhurat) ಮತ್ತು ಪೂಜಾ ವಿಧಾನದ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮುಹೂರ್ತ ಯಾವುದು?
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಕಾರ್ತಿಕ ಮಾಸದ ದ್ವಾದಶಿ ತಿಥಿಯು ನವೆಂಬರ್ 02ರ ಭಾನುವಾರ ಅಂದರೆ ಇಂದು ಹಬ್ಬವನ್ನು ಆಚರಿಸಲಾಗುತ್ತಿದೆ. ತುಳಸಿ ಹಬ್ಬದ ದಿನ ಬೆಳಗಿನ ಜಾವ 5 ಗಂಟೆಯಿಂದ 5.48ರ ನಡುವೆ ಪೂಜೆ ಸಲ್ಲಿಸಲು ಪ್ರಸಕ್ತ ಸಮಯವಾಗಿದೆ. ಇದಲ್ಲದೇ ಸಂಜೆ 6.40 ರಿಂದ 8.40ರ ನಡುವಿನ ವೃಷಭ ಲಗ್ನದಲ್ಲಿಯೂ ಪೂಜೆ ಸಲ್ಲಿಸಬಹುದು.
ಈ ಸುದ್ದಿಯನ್ನೂ ಓದಿ: Vastu Tips: ಮನೆಗೆ ಸುಖ, ಶಾಂತಿ, ಸಮೃದ್ಧಿ ತರುವ ತುಳಸಿ
ವಿಧಿ
ತುಳಸಿ ಹಬ್ಬದ ದಿನದಂದು, ಪೂಜೆಗೆ ಮೊದಲು ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ. ಬಳಿಕ ಅರಿಶಿನ, ಕುಂಕುಮ ಮತ್ತು ಶ್ರೀಗಂಧದಿಂದ ಅಲಂಕರಿಸಿ. ಸಾಲಿಗ್ರಾಮ ಕಲ್ಲನ್ನು ಗಂಗಾ ಜಲದಿಂದ ತೊಳೆದು ಸ್ವಚ್ಛಗೊಳಿಸಿ ಮತ್ತು ತುಳಸಿ ಎಲೆಗಳಿಂದ ಅಲಂಕರಿಸಿ. ಬಳಿಕ ತುಳಸಿ ಕಟ್ಟೆಯ ಸುತ್ತ ಸಣ್ಣ ಮಂಟಪವನ್ನು ಸಿದ್ಧಪಡಿಸಿ. ಮಂಟಪವನ್ನು ಹೂವುಗಳಿಂದ ಅಲಂಕರಿಸಬೇಕು. ದೀಪಗಳನ್ನು ಇಡಬೇಕು. ದೀಪಕ್ಕೆ ತಾಮ್ರ, ಹಿತ್ತಾಳೆ ಅಥವಾ ಇದಾವುದೂ ಇಲ್ಲವೆಂದಲ್ಲಿ ಅಡಿಕೆ ತಟ್ಟೆಗಳನ್ನು ಇಡಬೇಕು. ಪೂಜೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಅಂದರೆ ದೀಪ, ಧೂಪದ್ರವ್ಯ, ಅಕ್ಕಿ, ಹೂವುಗಳು, ಹಣ್ಣುಗಳು ಇತ್ಯಾದಿಗಳನ್ನು ಸಂಗ್ರಹಿಸಿ. ಪೂಜೆಯ ಸಮಯದಲ್ಲಿ ಮಂತ್ರಗಳನ್ನು ಪಠಿಸಬೇಕು. ಈ ದಿನ ಬಡವರಿಗೆ ಆಹಾರ ಅಥವಾ ಬಟ್ಟೆಗಳನ್ನು ದಾನ ಮಾಡುವುದು ಸಹ ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ತುಳಸಿ ಹಬ್ಬದಂದು ಏನು ಮಾಡಬಾರದು?
- ಈ ದಿನ ಮಾಂಸ, ಮೀನು, ಮೊಟ್ಟೆ ಅಥವಾ ಮದ್ಯ ಸೇವಿಸಬಾರದು.
- ಈ ದಿನ ಶುದ್ಧ, ಸಾತ್ವಿಕ ಆಹಾರವನ್ನು ಸೇವಿಸಬೇಕು.
- ನೀವು ಯಾರೊಂದಿಗೂ ಜಗಳವಾಡಬಾರದು. ಇಂದು ಯಾರೊಂದಿಗೂ ವಾದ ಮಾಡುವುದನ್ನು ತಪ್ಪಿಸಿ.
- ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಬೇಕು. ಇಂದು ಪೂರ್ಣ ಭಕ್ತಿಯಿಂದ ಪೂಜೆ ಮಾಡಿ.