TTD: ಟಿಟಿಡಿ ನೀತಿ ಸಂಹಿತೆಯನ್ನು ಉಲ್ಲಂಘನೆ- ನಾಲ್ವರ ಅಮಾನತು
ನೀತಿ ಸಂಹಿತೆಯನ್ನು (Code of conduct) ಉಲ್ಲಂಘಿಸಿದ ಕಾರಣಕ್ಕೆ ನಾಲ್ವರು ನೌಕರರನ್ನು ಆಂಧ್ರಪ್ರದೇಶದ ( Andhra Pradesh) ಚಿತ್ತೂರು (Chittoor) ಜಿಲ್ಲೆಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು (Tirumala Sri Venkateswara Swamy temple) ನಿಯಂತ್ರಿಸುವ ಅಧಿಕೃತ ಸಂಸ್ಥೆ ತಿರುಮಲ ತಿರುಪತಿ ದೇವಸ್ಥಾನಗಳು (Tirumala Tirupati Devasthanams) ಅಮಾನತುಗೊಳಿಸಿದೆ.


ತಿರುಮಲ: ನೀತಿ ಸಂಹಿತೆಯನ್ನು (code of conduct) ಉಲ್ಲಂಘಿಸಿದ ಕಾರಣಕ್ಕೆ ನಾಲ್ವರು ನೌಕರರನ್ನು ಆಂಧ್ರಪ್ರದೇಶದ ( Andhra Pradesh) ಚಿತ್ತೂರು ( Chittoor) ಜಿಲ್ಲೆಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು (Tirumala Sri Venkateswara Swamy temple) ನಿಯಂತ್ರಿಸುವ ಅಧಿಕೃತ ಸಂಸ್ಥೆ ತಿರುಮಲ ತಿರುಪತಿ ದೇವಸ್ಥಾನಗಳು (Tirumala Tirupati Devasthanams ) ಅಮಾನತುಗೊಳಿಸಿದೆ. ಸಂಸ್ಥೆಯ ನಾಲ್ವರು ನೌಕರರು ಹಿಂದೂಯೇತರ ನಂಬಿಕೆಗಳನ್ನು ಪಾಲಿಸುತ್ತಿದ್ದರು. ಇವರ ವಿರುದ್ದ ಟಿಟಿಡಿ ವಿಜಿಲೆನ್ಸ್ ಇಲಾಖೆ ಸಲ್ಲಿಸಿದ ವರದಿ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಿ ಅಮಾನತುಗೊಳಿಸಿರುವುದಾಗಿ ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಐಆರ್‌ಆರ್‌ಡಿ ಆಸ್ಪತ್ರೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಎಲಿಜರ್, ಸ್ಟಾಫ್ ನರ್ಸ್ ಬಿ. ಎಲಿಜರ್, ಬಿಐಆರ್‌ಆರ್‌ಡಿ ಆಸ್ಪತ್ರೆಯ ಗ್ರೇಡ್- 1 ಫಾರ್ಮಸಿಸ್ಟ್ ಎಸ್. ರೋಸಿ, ಎಸ್‌ವಿ ಆಯುರ್ವೇದ ಫಾರ್ಮಸಿಯ ಎಂ. ಪ್ರೇಮಾವತಿ ಮತ್ತು ಜಿ. ಅಸುಂತ ಅವರನ್ನು ತಿರುಮಲ ತಿರುಪತಿ ದೇವಸ್ಥಾನಗಳು ಅಮಾನತುಗೊಳಿಸಿದೆ.
ಬೇರೆ ಧರ್ಮದ ನಂಬಿಕೆಗಳನ್ನು ಪಾಲಿಸಿದ ಆರೋಪದ ಆಧಾರದ ಮೇಲೆ ನಾಲ್ವರು ನೌಕರರನ್ನು ಟಿಟಿಡಿ ಅಮಾನತುಗೊಳಿಸಿದ್ದು, ಇವರು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹಿಂದೂ ಧಾರ್ಮಿಕ ಸಂಘಟನೆಯನ್ನು ಪ್ರತಿನಿಧಿಸುವಾಗ ಮತ್ತು ಕೆಲಸ ಮಾಡುವಾಗ ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಹೇಳಿದೆ.
ಈ ಕುರಿತು ಟಿಟಿಡಿ ವಿಜಿಲೆನ್ಸ್ ಇಲಾಖೆ ಸಲ್ಲಿಸಿದ ವರದಿ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಿರುವುದಾಗಿ ಟಿಟಿಡಿ ತಿಳಿಸಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನೇತೃತ್ವದಲ್ಲಿ ಮೇ 20ರಂದು ಟಿಟಿಡಿ ಟ್ರಸ್ಟ್ ಮಂಡಳಿಯು ಟಿಟಿಡಿ ನಿರ್ವಹಿಸುವ ಯಾವುದೇ ಸಂಸ್ಥೆಗಳಲ್ಲಿ ಹಿಂದೂಯೇತರರು ಇರದಂತೆ ನೋಡಿಕೊಳ್ಳಲು ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯದ ಪ್ರಯುಕ್ತ ಹಿಂದೂಯೇತರ ಉದ್ಯೋಗಿಗಳನ್ನು ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಕೆಲವರಿಗೆ ಸ್ವಯಂಪ್ರೇರಿತ ನಿವೃತ್ತಿ ಅವಕಾಶ ನೀಡಲಾಯಿತು.
ಇದನ್ನೂ ಓದಿ: Dam Safety: ಅಣೆಕಟ್ಟುಗಳ ಸುರಕ್ಷತೆ ತಾಂತ್ರಿಕ ಸಮಿತಿ ವರದಿ ಬಂದ ಬಳಿಕ ಅಗತ್ಯ ಕಾಮಗಾರಿ: ಡಿಸಿಎಂ ಡಿಕೆಶಿ
ಈ ತಿಂಗಳ ಆರಂಭದಲ್ಲಿ ತಿರುಪತಿ ಜಿಲ್ಲೆಯಲ್ಲಿರುವ ಟಿಟಿಡಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎ. ರಾಜಶೇಖರ್ ಬಾಬು ಅವರನ್ನು ಅಮಾನತುಗೊಳಿಸಲಾಗಿತ್ತು. ಅವರು ಪ್ರತಿ ಭಾನುವಾರ ತಮ್ಮ ಊರಿನಲ್ಲಿ ಚರ್ಚ್ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಿದ್ದುದರಿಂದ ಅವರನ್ನು ಅಮಾನತುಗೊಳಿಸಿರುವುದಾಗಿ ಟಿಟಿಡಿ ತಿಳಿಸಿದೆ.