ಪಾರ್ಟಿ ಪ್ರಿಯರ ಸ್ವರ್ಗ ಗೋವಾದಲ್ಲೇಕೆ ನಿರ್ಮಿಸಲಾಯಿತು ಅತೀ ದೊಡ್ಡ ಶ್ರೀರಾಮನ ಪ್ರತಿಮೆ?
ಗೋವಾ ಎಂದಾಗ ಎಲ್ಲರಿಗೂ ನೆನಪಾಗುವುದು ಬೀಚ್, ರಾತ್ರಿ ಪಾರ್ಟಿ, ಪಬ್.. ಹೀಗಿರುವಾಗ ಇಲ್ಲಿ ಪುರುಷೋತ್ತಮನೆನಿಸಿಕೊಂಡ ಶ್ರೀರಾಮನ ಅತೀ ಎತ್ತರದ ಪ್ರತಿಮೆಯನ್ನು ಯಾಕೆ ನಿರ್ಮಿಸಲಾಯಿತು ಎನ್ನುವ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿವರಿಸಿರುವ ವರ್ಣನೆ ಇಂತಿದೆ.
(ಸಂಗ್ರಹ ಚಿತ್ರ) -
ಪಣಜಿ: ಗೋವಾದ (Goa) ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ (Shree Samsthan Gokarn Partagali Jeevottam Math) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶ್ರೀರಾಮನ (sriram) 77 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂದು ಬಣ್ಣಿಸಲಾಗಿದೆ. ಗೋವಾ ಎಂದಾಗ ಸಾಮಾನ್ಯವಾಗಿ ಎಲ್ಲರ ಮನದಲ್ಲಿಮೂಡುವ ಚಿತ್ರಣ ಬೀಚ್ ಪಾರ್ಟಿ. ಹೀಗಿರುವ ಇಲ್ಲಿ ಪುರುಷೋತ್ತಮನೆನಿಸಿಕೊಂಡ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಿದ್ದು ಯಾಕಾಗಿ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರ ನೀಡಿದ್ದಾರೆ.
ಕಡಲತೀರಗಳು, ಪಾರ್ಟಿ ಕ್ಲಬ್‌ಗಳು, ಪೋರ್ಚುಗೀಸ್ ವಿಲ್ಲಾಗಳು.. ಸೇರಿದಂತೆ ಮನೋರಂಜನೆಯ ತಾಣವಾಗಿರುವ ಗೋವಾದಲ್ಲಿ ಇನ್ನು ಮುಂದೆ ಶ್ರೀರಾಮನ ದರ್ಶನವನ್ನೂ ಮಾಡಬಹುದು. ವಿಶ್ವದ ಅತಿ ಎತ್ತರದ ಪ್ರತಿಮೆಯು ದಕ್ಷಿಣ ಗೋವಾದ ಪರ್ತಗಾಳಿಯಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಅನಾವರಣಗೊಳಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
Mann Ki Baat: ʼನವೆಂಬರ್ ಅತ್ಯಂತ ವಿಶೇಷʼ; ರಾಮ ಮಂದಿರದ ಧ್ವಜಾರೋಹಣ ಕುರಿತು ಮೋದಿ ಹೇಳಿದ್ದೇನು?
ಈ ಪ್ರತಿಮೆಯು ಗೋವಾವನ್ನು ಅದರ ಭೂತಕಾಲ ಮತ್ತು ಈಗಿರುವ ಕಾಲದೊಂದಿಗೆ ಸಂಯೋಜಿಸಿ ನೋಡಲಾಗುತ್ತದೆಯಾದರೂ ಇದರ ಹಿಂದಿನ ಉದ್ದೇಶವೇ ಬೇರೆಯಾಗಿದೆ. ಒಂದು ಕಾಲದಲ್ಲಿ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದ ಇಲ್ಲಿ ಈಗ ಕ್ರಿಶ್ಚಿಯನ್ ಪ್ರಭಾವ ಬಲವಾಗಿದೆ. ಹೀಗಾಗಿ ಎತ್ತರದ ರಾಮನ ಪ್ರತಿಮೆಯನ್ನು ಇಲ್ಲಿ ನಿರ್ಮಿಸಿರುವುದು ಹಲವು ರೀತಿಯ ಚರ್ಚೆಗಳಿಗೆ ನಾಂದಿಯಾಗಿದೆ. ಗೋವಾದಲ್ಲಿ ಶ್ರೀರಾಮನ ಪ್ರತಿಮೆ ನಿರ್ಮಿಸಿರುವ ಉದ್ದೇಶ ಪೋರ್ಚುಗೀಸ್ ಆಳ್ವಿಕೆಗಿಂತಲೂ ಹಿಂದಿನ ಕಾಲಕ್ಕೆ ಕೊಂಡೊಯ್ಯುತ್ತದೆ. ಇದು ಉತ್ತರವು ಗೋವಾದ ಆಧ್ಯಾತ್ಮಿಕ ಇತಿಹಾಸದಲ್ಲೊಂದು ಮೈಲುಗಲ್ಲಾಗಿದೆ.
ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ದ್ವೈತ ವೈಷ್ಣವ ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಗೌಡ, ಸಾರಸ್ವತ, ಬ್ರಾಹ್ಮಣ ಸಮುದಾಯಕ್ಕೆ ಸೇರಿದೆ. ಶ್ರೀರಾಮನ ಪ್ರತಿಮೆ ಅನಾವರಣವು ಶತಮಾನಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಮಠಕ್ಕೆ ಒಂದು ಅಪೂರ್ವ ಕ್ಷಣವಾಗಿದೆ. ಇಲ್ಲಿ ಪ್ರತಿಮೆಯ ಜೊತೆಗೆ ಪ್ರಧಾನಿ ಮೋದಿ ಅವರು ರಾಮಾಯಣ ಥೀಮ್ ಪಾರ್ಕ್ ಅನ್ನು ಉದ್ಘಾಟಿಸಿದರು. ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿ ಭಾರತದ ಪಶ್ಚಿಮ ಕೊಂಕಣ ಕರಾವಳಿಯಲ್ಲಿ ಹಿಂದೂ ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಮಠದ ಪಾತ್ರದ ಬಗ್ಗೆ ವಿವರಿಸಿದರು.
ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ಅವರು ನಿರ್ಮಿಸಿರುವ ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಏಕತೆ, ಭಕ್ತಿ ಮತ್ತು ಭಾರತದ ಸಾಂಸ್ಕೃತಿಕ ನಿರಂತರತೆಯ ಸಂಕೇತವೆಂದು ಮೋದಿ ಬಣ್ಣಿಸಿದರು.
ಗೋವಾದಲ್ಲೇಕೆ ಪ್ರತಿಮೆ ನಿರ್ಮಾಣ?
ಪೋರ್ಚುಗೀಸ್ ಆಳ್ವಿಕೆಯ ಬಳಿಕ ಗೋವಾದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಒತ್ತಡಗಳು ನಿರಂತರವಾಗಿದೆ. ಆದರೂ ಇದು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಮತ್ತು ದ್ವೈತ ವೈಷ್ಣವರಿಗೆ ಆಧ್ಯಾತ್ಮಿಕ ಕೇಂದ್ರವಾಗಿದೆ. ದ್ವೈತ ವೈಷ್ಣವ ಧರ್ಮವನ್ನು 13ನೇ ಶತಮಾನದಲ್ಲಿ ಮಧ್ವಾಚಾರ್ಯರು ಸ್ಥಾಪಿಸಿದ್ದರು. ಇದು ದೇವರು ಮತ್ತು ಆತ್ಮ ಎರಡು ಪ್ರತ್ಯೇಕ ಎಂದು ವರ್ಣಿಸುತ್ತದೆ. ಇವರು ಸಂಪ್ರದಾಯಿಕವಾಗಿ ವಿಷ್ಣು, ರಾಮ ಮತ್ತು ಕೃಷ್ಣನನ್ನು ಪೂಜಿಸುತ್ತಾರೆ.
ರಾಮ ವಿಷ್ಣುವಿನ ಅವತಾರವೆಂದೇ ಪರಿಗಣಿಸಲಾಗಿದೆ. ಹೀಗಾಗಿ ದ್ವೈತ ಅನುಯಾಯಿಗಳು ರಾಮನನ್ನು ಹೆಚ್ಚಾಗಿ ಪೂಜಿಸುತ್ತಾರೆ. 550 ವರ್ಷಗಳ ಇತಿಹಾಸವಿರುವ ಪರ್ತಗಾಳಿ ಮಠವು ಗೌಡ ಸಾರಸ್ವತ ಬ್ರಾಹ್ಮಣರಿಗೆ ಮೊದಲ ವೈಷ್ಣವ ಸಂಸ್ಥೆಯಾಗಿದೆ. ಇದು ಕರ್ನಾಟಕದ ಗಡಿಗೆ ಹತ್ತಿರವಿದ್ದು, ದಕ್ಷಿಣ ಗೋವಾದ ಕ್ಯಾನಕೋನಾದಲ್ಲಿ ಕುಶಾವತಿ ನದಿಯ ದಡದಲ್ಲಿದೆ. ಹೀಗಾಗಿ ಈ ಮಠವು ಗೋವಾ, ಕರಾವಳಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾರಸ್ವತ ಹಿಂದೂಗಳಿಗೆ ಸಾಂಸ್ಕೃತಿಕ ಕೇಂದ್ರವೂ ಆಗಿದೆ.
Narendra Modi: ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
ಗೋವಾವು 1510 ರಿಂದ 1961 ರವರೆಗೆ ಪೋರ್ಚುಗೀಸ್ ಆಳ್ವಿಕೆಯಲ್ಲಿತ್ತು. ಈ ಸಂದರ್ಭದಲ್ಲಿ ಇಲ್ಲಿ ಮಿಷನರಿಗಳ ಒತ್ತಡ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಬದುಕುಳಿದ ಹಿಂದೂ ದೇವಾಲಯಗಳಲ್ಲಿ ಪರ್ತಗಾಳಿ ಮಠವು ಒಂದು. ಇದು ಸಾರಸ್ವತ ಸಮುದಾಯಕ್ಕೆ ಸೇರಿದ್ದು, ಇಲ್ಲಿ ಶ್ರೀ ವೀರ ಮೂಲರಾಮ ದೇವರು ಸೇರಿದಂತೆ ಪವಿತ್ರ ವಿಗ್ರಹಗಳು, ಧರ್ಮಗ್ರಂಥಗಳು ಮತ್ತು ಆಚರಣೆಗಳನ್ನು ಸಂರಕ್ಷಿಸಿತು. ಈ ಪ್ರದೇಶದಲ್ಲಿ ಹಿಂದೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹೀಗಾಗಿ ಇಲ್ಲಿಯೇ ಶ್ರೀರಾಮನ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಗೋವಾ ಭವನಕ್ಕಾಗಿ ಅಯೋಧ್ಯೆಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಗಳನ್ನು ಘೋಷಿಸಿದ್ದರು. ಈ ಮೂಲಕ 77 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ನಾಂದಿ ಹಾಡಿದ್ದರು. 2024ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡಾಗ ಗೋವಾ ರಾಜ್ಯಾದ್ಯಂತ ಬೃಹತ್ ಆಚರಣೆಗಳನ್ನು ನಡೆಸಲಾಯಿತು. ಇದು ಇಲ್ಲಿನ ಜನರಿಗೆ ಶ್ರೀರಾಮನ ಮೇಲಿರುವ ಭಕ್ತಿಯನ್ನು ಪ್ರದರ್ಶಿಸಿತ್ತು.