About Us Advertise with us Be a Reporter E-Paper

ಅಂಕಣಗಳು

ನೆನಪು ಕಳೆದ ಜಗತ್ತಿಗೆ ಜಾರದಂತೆ ಜಾಗ್ರತೆಯಿರಲಿ!

ವೈದ್ಯಕೀಯ: ಎಸ್.ಜಿ. ಹೆಗಡೆ

ನೆನಪು ಕಳೆದುಹೋದವರ ದುನಿಯಾ ಎಲ್ಲೆ ಮೀರಿ ಪಸರಿಸುತ್ತಿದೆ. ಅಲ್ಝೆಮಿರ್ ಬಾಧೆಯು ಜಗತ್ತಿನ ತುಂಬಾ ಹರಡುತ್ತಿದೆ. ಈ ಬಾಧೆ ಚೀನಾದಲ್ಲಿ ಅತಿಯಾಗಿದೆ ಮತ್ತು ತೀವ್ರವಾಗಿ ಏರುತ್ತಿದೆ. ಈ ಕಾಯಿಲೆಯಿಂದ ಬಳಲುತ್ತಿರುವಂಹವರ ಗುಂಪನ್ನು ಅಲ್ಲಿ ಕಣ್ಣಾರೆ ಕಂಡೆ. ಇತ್ತೀಚೆಗೆ ಚೀನಾಕ್ಕೆ ಭೇಟಿ  ಸಂದರ್ಭದಲ್ಲಿ ಅಲ್ಲಿನ ಶಾಂಘೈನ ‘ರ್ಯಾಡಿಸನ್ ಬ್ಲ್ಯೂ’ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ರ್ಯಾಡಿಸನ್ ಬ್ಲ್ಯೂ ಪಂಚತಾರಾ ಹೋಟೇಲ್ ಸುಂದರವಾದ ಶಾಂಘೈ ನಗರದ ಆಯಕಟ್ಟಿನ ಜಾಗದಲ್ಲಿದೆ. ಪಂಚತಾರಾ ಹೋಟೆಲ್‌ನ ಹತ್ತಿರವೇ ಗಗನಚುಂಬಿ ಕಟ್ಟಡಗಳು, ಸುಪ್ರಸಿದ್ಧ ಬಂಡ್ ಅಲ್ಲದೆ ಬೆಡಗಿನ ನಾನ್ಜಿಂಗ್ ಬೀದಿ ಇದೆ. ರ್ಯಾಡಿಸನ್ ಹೋಟೆಲ್ ಮುಂದಿನ ರಸ್ತೆಯ ಅಕ್ಕಪಕ್ಕದಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಪ್ಲೇ ಪಾರ್ಕ್ ಇವೆ. ಹಿಂದೆ ಬ್ರಿಟಿಷ್ ಆಡಳಿತದ ಜಮಾನದಲ್ಲಿ ಆ ಜಾಗವನ್ನು ಕುದುರೆ ಸವಾರಿಗೆಂದು ಬಳಸುತ್ತಿದ್ದರಂತೆ.  ಹಲವು ಪ್ಲೇ ಪಾರ್ಕ್‌ಗಳನ್ನಾಗಿ ಪರಿವರ್ತಿಸಲಾಯಿತು ಎಂದು ಹೇಳಲಾಗಿದೆ. ಅಲ್ಲಿ ಮುಂಜಾನೆಯಿಂದ ರಾತ್ರಿಯತನಕ ಬ್ಯಾಂಡ್ ಜತೆಯಲ್ಲಿ ಜನರು ವಿವಿಧ ವೇಷದಲ್ಲಿ, ವಿವಿಧ ಭಂಗಿಯಲ್ಲಿ ನೃತ್ಯ ಮಾಡುತ್ತಿರುತ್ತಾರೆ. ಬೆಳಗ್ಗೆ ಸುಮಾರು ನಾಲ್ಕು ಗಂಟೆಯಿಂದಲೇ ಕುಣಿತ ಶುರುವಾಗುತ್ತದೆ. ಅವರ ನಿತ್ಯ ವ್ಯಾಯಾಮದ ಪ್ರಕ್ರಿಯೆಯೂ ಹೌದು. ಅಲ್ಲಿ ಯಾರು ಬೇಕಾದರೂ ಕುಣಿತದಲ್ಲಿ ಹೆಜ್ಜೆ ಜೋಡಿಸಿ ಆನಂದ ಪಡೆಯಬಹುದು. ಪ್ಲೇ ಪಾರ್ಕ್ ಬ್ಯಾಂಡನ್ನು ವೀಕ್ಷಿಸಲು  ಸಾಕಷ್ಟು ಜನರು ನೆರೆದಿರುತ್ತಾರೆ. ವೃದ್ಧರು ಸಾಕಷ್ಟು ಸಂಖ್ಯೆಯಲ್ಲಿ ನೃತ್ಯ ಮತ್ತು  ಸೇರುತ್ತಾರೆ. ಹಲವಾರು ಜನರು ಅಲ್ಲಿಗೆ ತಮ್ಮ ಜತೆಯಲ್ಲಿ ಮುದುಕರನ್ನು ಕರೆತಂದು ಭಾಗಿಯಾಗಿಸಲು ಯತ್ನಿಸುವುದನ್ನು ಕಾಣಬಹುದಾಗಿದ್ದು ಅವರಲ್ಲಿ ಕೆಲವರು ಪ್ರಜ್ಞೆ ಕಳೆದುಕೊಂಡು ಏನೂ ಹೊಳೆಯದರಾಗಿರುತ್ತಾರೆ.

ಅಲ್ಲಿ ಸೇರುವ ಜನರಲ್ಲಿ ಅದರಲ್ಲಿಯೂ ಮುದುಕರಲ್ಲಿ ಕೆಲವರು ನೆನಪೇ ಹೋದವರು ಎಂದು ಅರಿತಾಗ ನನಗೆ ಅಚ್ಚರಿಯಾಯಿತು, ಅಷ್ಟೇ ಕನಿಕರವೆನಿಸಿತು. ಅಂತಹ ಜನರಲ್ಲಿ ಕೆಲವರು ತಮ್ಮ ವಿಚಿತ್ರ ಭಂಗಿಯಲ್ಲಿ ಕುಣಿಯುತ್ತಿದ್ದರೆ, ಮತ್ತೆ ಕೆಲವರು ಏನೂ ತಿಳಿಯದಂತೆ  ನಿರ್ವಿಣ್ಣರಾಗಿ ಕುಳಿತಿದ್ದರು. ಇನ್ನು ಕೆಲವರು ತಮ್ಮನ್ನು ಗಮನಿಸಿದವರಲ್ಲಿ ಜೋರಾಗಿ  ತೊಡಗಿದ್ದರು.

ಅದೇ ಥರ ನಾನ್ಜಿಂಗ್ ಬೀದಿ ಮತ್ತು ದಿಗಿಲು ಹುಟ್ಟಿಸುವ ಬಂಡೆಕಟ್ಟೆಯ ಮೇಲೆ ಕಾಣಸಿಗುತ್ತಾರೆ. ಮತ್ತೆ ನೆನಪಿಗೆ ಜೀವ ಮರಳಲ್ಪಟ್ಟು ಚೈತನ್ಯ ಎಬ್ಬಿಸಲು ಅವರನ್ನು ಚಟುವಟಿಕೆಗಳಿಂದ ತುಂಬಿದ ಅಂತಹ ಬೆಡಗಿನ ಪ್ರದೇಶದಲ್ಲಿ ಬಿಟ್ಟಿರುತ್ತಾರೆ.  ಅಲ್ಲಿ ಸೇರಿರುವ ಅವರೆಲ್ಲ ಅಲ್ಝೆಮಿರ್ ಪೀಡಿತರು. ಚೀನಾ ಇಂದು ಅಲ್ಝೆಮಿರ್ ಪೀಡೆಯನ್ನು ಬೃಹತ್ ಪ್ರಮಾಣದಲ್ಲಿ ಎದುರಿಸುತ್ತಿದೆ. ಇದರ ವಿರುದ್ಧ ಸೆಣಸುತ್ತಿದೆ. ಸುಮಾರು ಒಂದು ಕೋಟಿ ಜನರು ಅಲ್ಲಿ ಈ ಕಾಯಿಲೆಯಿಂದ ಬಳಲುತಿದ್ದು ಪ್ರತಿವರ್ಷವೂ ಲಕ್ಷಗಟ್ಟಲೇ  ಈ ರೋಗಕ್ಕೆ ಹೊಸದಾಗಿ ತುತ್ತಾಗುತ್ತಿದ್ದಾರೆ. ಹೀಗೆಯೇ ಮುಂದುವರಿದರೆ 2050ರ ವೇಳೆಗೆ ಈ ಸಂಖ್ಯೆಯು ನಾಲ್ಕೂವರೆ ಕೋಟಿಗೆ ತಲುಪಬಹುದೆಂದು ಅಂದಾಜಿಸಲಾಗಿದೆ. ಅ್ಝ್ಢಛಿಜಿಞಛ್ಟಿ ಭಾದೆಯು ರೋಗವಲ್ಲ. ವೃದ್ಧಾಪ್ಯದಲ್ಲಿ ತಗಲುವ ಸರ್ವೇಸಾಮಾನ್ಯವಾದ ಒಂದು ನೈಸರ್ಗಿಕ ಪ್ರಕ್ರಿಯೆಯೆಂಬ ನಂಬಿಕೆ ಈಗಲೂ ಅಲ್ಲಿನ ಜನತೆಯಲ್ಲಿದೆ. ಆದರೆ ಸರಕಾರದ ಮುಖ್ಯ ಪ್ರಸಾರವಾಹಿನಿ ಈಗ ಈ ಪೀಡೆಯನ್ನು ಒಂದು ಅನಾರೋಗ್ಯದ ಬಾಧೆಯೆಂದು ಪರಿಗಣಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.

ಬದುಕಿನ ನೆನಪುಗಳೆಲ್ಲ ಮಾಸಿ ಮಾನಸಿಕವಾಗಿ ಅನಾಥರಾಗುವವರ ಸಮಸ್ಯೆ  ದೇಶದಲ್ಲಿಯೂ ವಾಸ್ತವದ ವಿಚಾರವೇ. ಈಗಾಗಲೇ ಸುಮಾರು 50 ಲಕ್ಷ ಜನರು ಈ ಪೀಡೆಗೆ ತುತ್ತಾಗಿದ್ದಾರೆಂಬುದು ತಿಳಿದುಬಂದಿದೆ. ಅಲ್ಲದೆ ಈ ಸಮಸ್ಯೆಯು ತೀವ್ರವಾಗಿ ಹೆಚ್ಚುತ್ತಿದ್ದು ಕೆಲವೇ ವರ್ಷಗಳಲ್ಲಿ ಇಮ್ಮಡಿಯಾಗಬಹುದೆಂದು ಊಹಿಸಲಾಗಿದೆ. ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿಯೇ ಸುಮಾರು ಐದು ಲಕ್ಷಕ್ಕೂ ಅಧಿಕ ಪ್ರಮಾಣ ತಲುಪಿರುವ ದಾಖಲೆಯಿದೆ. ನಮ್ಮ ದಿನಚರಿಯಲ್ಲಿ ಅಲ್ಲಲ್ಲಿ ಪೀಡೆಗೆ ತುತ್ತಾದವರು ಕಾಣಸಿಗುತ್ತಾರೆ. ಈ ಕಾಯಿಲೆಗೆ ಬಡವ, ಬಲ್ಲಿದ ಮೇಲು-ಕೀಳು ಜ್ಞಾನ-ಅಜ್ಞಾನವೆಂಬುದಿಲ್ಲ ಎಲ್ಲರೂ ತುತ್ತಾಗುತ್ತಾರೆ. ಸಮಾಜದ ಉನ್ನತ ವರ್ಗದವರನ್ನೂ ಆವರಿಸಿಬಿಡುತ್ತದೆ.

 ನಡೆದಿದ್ದ ಪ್ರರ್ನವೊಂದಕ್ಕೆ ಬಂದಿದ್ದ  ಔಷಧ ತಯಾರಿಕೆಯಲ್ಲಿರುವ ಭಾರತೀಯ ಉದ್ಯಮಿಯೊಬ್ಬರಿಗೂ ಈ ಬಾಧೆ ಆವರಿಸಿತ್ತು. ಮನಸ್ಸು ಮಣ್ಣಾಗಿತ್ತು. ವಿಮಾನಕ್ಕೆ ಏರಿಸಲು ಅವರನ್ನು ಗಾಡಿಯಲ್ಲಿ ಕೂಡಿಸಿ ಒಯ್ಯುತ್ತಿದ್ದಾಗ, ಕೈ ಬೀಸಿ ಸಾಗಿದ್ದರು. ಜತೆಯಲ್ಲಿ ಸೇವಕನೊಬ್ಬ ಬಂದಿದ್ದ. ತಮ್ಮ  ಸಾಲಿನಲ್ಲಿ ಕುಳಿತಿದ್ದರೂ ಅಲ್ಲಿ ಬಂದವರ ಗುರುತು ತಿಳಿಯುತ್ತಿರಲಿಲ್ಲ. ತಮ್ಮ ಕಂಪನಿಯ ಸರಕುಗಳ ಜ್ಞಾನ ಅಳಿದು ಬೇರೆಯವದೇ ವಸ್ತುಗಳ ಕುರಿತು ಹೇಳುತ್ತಿದ್ದರು. ಅವರೇ ಸ್ಥಾಪಿಸಿ ಬೆಳೆಸಿದ ಸಂಸ್ಥೆಯು ಅಪರಿಚಿತವಾಗಿ ಹೋಗಿತ್ತು. ಅವರು ಈ ಅವಸ್ಥೆಯಲ್ಲಿರುವಾಗ  ಬೇರೆ ದೇಶಗಳಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ಯಾವುದೋ ಘಳಿಗೆಯು ವರಪ್ರಧಾನವಾಗಿ ಪ್ರಜ್ಞೆ ಮರಳಬಹುದೆಂದು ಅವರನ್ನು ಎಲ್ಲೆಡೆ ಕರೆದೊಯ್ಯುತ್ತಿರುವುದಾಗಿ ಅವರ ಸಹಭಾಗಿ ಹೇಳುತ್ತಿದ್ದರು. ನೆನಪಿನ ಜತೆ ಜೀವವೂ ಜಾರಿದ ಜಗತ್ತಿಗೆ ಅವರು ಸೇರಿದ ಸುದ್ದಿ ಇತ್ತೀಚೆಗೆ ಸಿಕ್ಕಿದೆ. ಅವರಿಗೆ ತಗುಲಿದ್ದ ಬಾಧೆಯು ಜೀವವನ್ನೇ ಕಳೆದುಕೊಂಡಿದೆ.

ಸುಪ್ರಸಿದ್ಧ ಮುಂಬೈ ಆಸ್ಪತ್ರೆಯ ಖ್ಯಾತ ವೈದ್ಯರೊಬ್ಬರಿಗೆ ್ಝ್ಢಛಿಜಿಞಛ್ಟಿ ಖಾಯಿಲೆ ಪೀಡಿಸಿತು. ಕಾಯಕದಲ್ಲಿ ತೊಗಿಕೊಂಡಿದ್ದ ಅವರಿಗೆ ರಾತ್ರಿ ಹಗಲಿನ ಪರಿವೆಯೇ ಇರಲಿಲ್ಲ. ಜಗತ್ತಿನಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ನೀಡಿದ್ದರು. ಕೆಲಸದ ಗಡಚಿನ ನಡುವೆ ಸಮಯವೇ ಇರದವರಿಗೆ ಸಂಸಾರ ಮತ್ತು ಮಿಕ್ಕಿದ ಸಮಯದಲ್ಲಿ ಜನರೊಂದಿಗೆ ಬೆಳೆಯಲು ಸಾಕಷ್ಟು ಸಮಯವಿರಲಿಲ್ಲ. ನಡುವೆ ಆರೋಗ್ಯ ಕುರಿತು ಅತಿ ಪ್ರಜ್ಞೆ ಸೇರಿಕೊಂಡಿತ್ತು. ತೂಕದ ಆಧಾರದಿಂದ ಆಹಾರವನ್ನು ಅಳೆದು ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದು ನನಗೆ ನೆನಪಿದೆ. ಬಿಡುವೇ ಇರದ ಅವರನ್ನು ನೆನಪು ಕಳೆದು ಕತ್ತಲು ಮುಸುಕಿತು. ಅಪರೂಪಕ್ಕೆ ಭೇಟಿಯಾಗಿ ಊರಿನ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದ  ನಾನು ಕೊನೆಗೆ ಭೇಟಿಯಾದಾಗ,  ನನ್ನ ಪರಿಚಯವೇ ಸಿಗದೇ ‘ನೀನು  ಎಂದೇ ಕೇಳಿಬಿಟ್ಟರು. ಅವರಿಗೆ ್ಝ್ಢಛಿಜಿಞಛ್ಟಿ ಖಾಯಿಲೆ ತಗುಲಿದ ಅರಿವು ವೈದ್ಯರಾಗಿಯೂ ತಿಳಿಯಲಿಲ್ಲ ಮತ್ತು ವೈದ್ಯಕೀಯ ಜಗತ್ತಿನ ಉಳಿದ ವೈದ್ಯರಿಂದಲೂ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ವೃತ್ತಿಯಿಂದ ನಿವೃತ್ತಿಯಾಗಿ ನಂತರ ಬಹಳ ಕಾಲ ಬದುಕದೆ ಪರಿಚಿತರ ನೆನಪಿನಲ್ಲಿ ಮಾತ್ರ ಸದಾ ಉಳಿದುಕೊಂಡರು.

ಮತ್ತೊಂದು ಉದಾಹರಣೆ, ಮುಂಬೈನಲ್ಲಿ ನನ್ನ ನೆರೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ನೆನಪಿನ ಕೊಂಡಿ ಕಳಚಿದೆ. ತಾನು ಏನು ಮಾಡುತ್ತಿರುವೆ, ಏನು ಮಾತಾಡುತ್ತಿರುವೆ ಎಂಬ ಅರಿವಿಲ್ಲದ ದಿನಚರಿಯಲ್ಲಿ ಅವರು ಬದುಕುತ್ತಿದ್ದಾರೆ. ಅವರು ಜನರ  ಸಂಬಂಧ, ಹಿಂದಿನ ಸಂಗತಿ, ಹಣದ ವ್ಯವಹಾರ, ವಿಷಯಗಳು ಯಾವುದೂ ಅರಿಯದೆ ಹತಾಶರಾಗಿದ್ದಾರೆ. ನೆನಪು ಮಾಸಿ ಹೋಗುವ ಅವಸ್ಥೆಯನ್ನು ವೈದ್ಯಕೀಯ ಭಾಷೆಯಲ್ಲಿ ಡಿಮೆನ್ಷಿಯ ಅಥವಾ ಅಲ್ಝೆಮಿರ್ ಎಂದು ಗುರುತಿಸಲಾಗಿದೆ. ಅವೆರಡೂ ಶಬ್ದಗಳ ನಡುವೆ  ಹೆಚ್ಚು ವ್ಯತ್ಯಾಸವಿಲ್ಲ. ಅಲ್ಝೆಮಿರ್‌ನ್ನು ದಿಮ್ನೆಸಿಯಾದ ರೂಪ ಅನ್ನುವುದಿದೆ. ಹಲವು ವರ್ಷಗಳ  ಹಿಂದೆ ಭಾದೆಯನ್ನು ರೋಗವೆಂದು ತಿಳಿದಿರಲಿಲ್ಲ. ಈಗಲೂ ಹಲವು ಕಡೆ ಈ ಭಾದೆಯನ್ನು ರೋಗವೆಂದು ಗುರುತಿಸದೇ ವೃದ್ಧಾಪ್ಯದ ಒಂದು ಸಾಮಾನ್ಯ ಭಾಗವೆಂದು ತಿಳಿದಿರುವಾಗ ವೈದ್ಯಕೀಯ ಜಗತ್ತು  ಸ್ಥಿತಿಯನ್ನು ಸ್ಪಷ್ಟವಾಗಿ ರೋಗದ ಪಟ್ಟಿಯಲ್ಲಿ ಸೇರಿಸಿದೆ. ಮಿದುಳಿನಲ್ಲಿ ಹಿಪೋಕ್ಯಾಂಪಸ್ ಭಾಗದ ಜೀವಕೋಶಗಳಿಗೆ ಪೆಟ್ಟು ತಗುಲಿದಾಗ, ಜೀವಕೋಶಗಳು ಪರಸ್ಪರ ಸಂದೇಶ ತಿಳಿಸಲಾಗದೇ ನೆನಪು ಕುಸಿಯುವುದಕ್ಕೆ ಕಾರಣವೆಂದು ವಿಜ್ಞಾನ ಹೇಳಿದೆ. ಆದರ ಅಂತಹ ಮೆದುಳಿನ ಸ್ಥಿತಿಯನ್ನು ಚಿತ್ರೀಕರಣ ತಂತ್ರಗಳಿಂದ ಸರಿಯಾಗಿ ಹೇಳುವುದು ಸಾಧ್ಯವಾಗುತ್ತಿಲ್ಲ. ಕಾರಣ ಬಾಧೆಯನ್ನು ಗುರುತಿಸುವ ವೈಜ್ಞಾನಿಕ ಬಗೆ ಇನ್ನೂ ಅಪೂರ್ಣವಿದ್ದು ಸಂಶೋಧನೆ ಮುಂದುವರಿದಿದೆ. ಪೀಡಿತರ ನಡುವಳಿಕೆಯಲ್ಲಾದ ಬದಲಾವಣೆಯ ಅಧ್ಯಯನವೂ ಸದ್ಯ ಬಾಧೆಯನ್ನು ಅರಿಯುವ ಬಗೆಯಾಗಿದೆ.

 ಮುಖ್ಯವಾಗಿ ದಿನನಿತ್ಯದ ವಹಿವಾಟಿನಲ್ಲಿನ  ಮಾತಿನಲ್ಲಿನ ಗೊಂದಲ, ಸಹಜ ವಿಷಯಗಳಲ್ಲಿ ಮರೆ, ಮುಂತಾದ ಸಂಗತಿಗಳನ್ನು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯಕೀಯ ಶಾಸ್ತ್ರಕ್ಕೆ  ತಿಳಿದಂತೆ ್ಚಛಿಠ್ಝಿ ್ಚಟ್ಝಜ್ಞಿಛಿ ಅನ್ನುವ ಧ್ವಂಸವಾಗದಂತೆ ಉಳಿಸಿಕೊಳ್ಳುವ ಸಲುವಾಗಿ (್ಚಟ್ಝಜ್ಞಿಛಿಠಿಛ್ಟಿಛಿ ಜ್ಞಿಜಿಚಿಜಿಠಿಜಿಟ್ಞ) ಬಗೆಯ ಔಷಧಗಳನ್ನು ನೀಡಲಾಗುತ್ತಿದೆ. ಖಿಖಊಈಅ ಅವನ್ನು ಬಳಸಲು ಒಪ್ಪಿಗೆ ನೀಡಿದೆ. ಚೀನಾದಲ್ಲಿ ಹಲವು ಗಿಡಮೂಲಿಕೆಗಳಿಂದ ಔಷಧಗಳನ್ನು ಪ್ರಯೋಗಿಸುತ್ತಿದ್ದು ಒಟ್ಟಾರೆ ತತ್ವ ಅದೇ ಆಗಿದೆ. ಕೆಲವರಿಗೆ ಅದರಿಂದ ಧನಾತ್ಮಕ ಪರಿಣಾಮ ಸಿಕ್ಕರೂ ಕಡಿಮೆಯಾಗುವ ಕುರಿತು ನಿಖರತೆ ಇಲ್ಲ.

ನೆನಪು ಕಳೆದು  ಬಾಧೆಯು ಆರ್ಥಿಕ, ಸಾಮಾಜಿಕ ಆಧುನಿಕತೆ ಮತ್ತು ಪ್ರಗತಿಯೊಂದಿಗೆ ಹೆಚ್ಚುತ್ತ ಹೋಗುವ ರೋಗವೆಂದು ಪರಿಗಣಿಸಲಾಗಿದೆ. ಸಾಂಪ್ರದಾಯಿಕ ಜೀವನ ಶೈಲಿ ಮತ್ತು ನಂಬಿಗೆಗಳಿಂದ ಹಠಾತ್ ನೂತನ ಜೀವನ ಪ್ರಕ್ರಿಯೆಯ ಪರಿವರ್ತನೆಯನ್ನು ಕ್ಲಿಷ್ಟತೆಯು ಮಿದುಳಿನ ಜೀವಕೋಶ ತೊಂದರೆಗಳಿಗೆ ಕಾರಣವಿರಲು ಸಾಧ್ಯ. ಆಧುನಿಕ ಜೀವನಶೈಲಿಯಿಂದ ಹೆಚ್ಚುತ್ತಿರುವುದರಿಂದ ಮತ್ತು ನಿಖರವಾದ ಚಿಕಿತ್ಸೆ ಕೊರತೆಯಿಂದ ರೋಗಕ್ಕೆ ಅಷ್ಟೆಲ್ಲ ಗಂಭೀರತೆಯಿದೆ. ನಿಯಮಿತ ವ್ಯಾಯಾಮ, ಮದ್ಯ ಮತ್ತು ಧೂಮಪಾನಗಳ ನಿಷೇಧ ಹಾಗೂ ಸದಾ ಚಟುವಟಿಕೆಯಿಂದ ಕೂಡಿದ ಜೀವನಶೈಲಿ ರೂಪಿಸಿಕೊಳ್ಳುವುದರಿಂದ ಈ  ಸಾಮಾನ್ಯ ನಿರೋಧ ಕ್ರಮಗಳು ಹೆಚ್ಚ್ತುವೆ. ಪೀಡಿತರನ್ನು ಪ್ರೀತಿ ಮತ್ತು ಸಹಾನುಭೂತಿಯಿಂದ ಕಂಡು ಮಾನಸಿಕ ಬೆಂಬಲ ನೀಡಿದಾಗ, ಖಾಯಿಲೆ ಮಿತಿಯಲ್ಲಿರಲು ಸಾಧ್ಯ.

ಚಟುವಟಿಕೆ ನೀಡುವುದು ಮತ್ತು ಸಾಮಾಜಿಕವಾಗಿ ಅವರನ್ನು ಬೆಸೆಯುವುದು ಚಿಕಿತ್ಸೆಯಲ್ಲಿ ತುಂಬಾ ಮಹತ್ವದ್ದು. ಚೀನಾದಲ್ಲಿ ಅನುಸರಿಸುವ ಕ್ರಮವನ್ನು ಈ ನಿಟ್ಟಿನಲ್ಲಿ ಎಲ್ಲೆಡೆ ಅನುಸರಿಸಬೇಕಿದೆ. ವಿಶೇಷ ಡಿಮೆನ್ಷಿಯಾ ಚಿಕಿತ್ಸಾ ಮತ್ತು ಪೋಷಣಾ ಕೇಂದ್ರಗಳನ್ನು ಅಲ್ಲಲ್ಲಿ ತೆರೆದಿದ್ದು ಅಂತಹ ಕೇಂದ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸರಕಾರವೂ ನೀಡಬಹುದು. ಈ ಕುರಿತು ಜಾಗೃತಿ ಮೂಡಿಸುವಲ್ಲಿ  ವೈದ್ಯಕೀಯ ಮತ್ತು ಸಮಾಜದ ಜವಾಬ್ದಾರಿ ಸಾಕಷ್ಟಿದೆ.

ಸೆಪ್ಟಂಬರ್ ತಿಂಗಳನ್ನು ಅಔಘಏಉಐಉ್ಕಖ ತಿಂಗಳೆಂದು ಜಾತಿಕವಾಗಿ ಗುರುತಿಸಲಾಗಿದೆ. ಸೆಪ್ಟಂಬರ್-21 ಈ ಕುರಿತಾದ ದಿನವಾಗಿದೆ. ಈ ಸಂದರ್ಭದಲ್ಲಿ ಬಾಧೆಯ ಕುರಿತು, ಸೂಕ್ತ ಜಾಗ್ರತೆ ಕುರಿತು ಸಮಾಜಕ್ಕೆ  ಎಚ್ಚರಿಸುವುದು ಯೋಗ್ಯವಾಗಿದೆ. ನೆನಪು ಮಾಸುವ ರೋಗದಿಂದ ಬಹಳಷ್ಟು ಜನರು ಮಾನಸಿಕವಾಗಿ ಅನಾಥರಾಗುತ್ತಿದ್ದಾರೆ. ಬಾಧೆಯ ಕುರಿತು ಅರಿವು ಮತ್ತು ಜಾಗ್ರತೆಯ ಕ್ರಮಗಳು ತುಂಬಾ ಮಹತ್ವವಾಗಿದ್ದು ಜನತೆಯು ಗಂಭೀರ ಕಾಯಿಲೆಯ ಕುರಿತು ಸರಿಯಾಗಿ ಅರಿತು ಜಾಗ್ರತೆವಹಿಸಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close