About Us Advertise with us Be a Reporter E-Paper

Breaking Newsದೇಶಪ್ರಚಲಿತ

ಭಾರತದ ಸ್ವಾತಂತ್ಯ್ರ ಹೋರಾಟವನ್ನು ನೆನಪಿಸುವ ಸ್ಥಳಗಳು

ದೆಹಲಿ: ಇಂದು ದೇಶದೆಲ್ಲೆಡೆ 72 ಸ್ವಾತಂತ್ಯ್ರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ದಿನ ಎಲ್ಲರೂ ಸಾಂಸ್ಕೃತಿಕ ಭಿನ್ನಾಭಿಪ್ರಾಯ ಮರೆತು ನಾವು ಭಾರತೀಯರು ಎಂಬ ಮನೋಭಾವನೆಯಿಂದ ಸಂಭ್ರಮದಲ್ಲಿ ತೊಡಗುತ್ತೇವೆ.

ದೇಶದ ಸ್ವಾತಂತ್ಯ್ರಕ್ಕಾ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ ಪ್ರಾಣ ತೆತ್ತವರನ್ನು ನೆನೆಯುವ ದಿನ ಎಂದರೆ ತಪ್ಪಗುವುದಿಲ್ಲ. ಅವರ ತ್ಯಾಗ, ಬಲಿದಾನದಿಂದ ಇಂದು ನಾವು ಶಾಂತಿಯುತ ಜೀವನವನ್ನು ನಡೆಸುತ್ತಿದೆ. ಸ್ವಾತಂತ್ಯ್ರ ಹೋರಾಟಗರನ್ನು ನೆನಪಿಸಿಕೊಳ್ಳುವುದರ ಜತೆಗೆ ಕೆಲವು ಮಾಸದ ನೆನಪುಗಳನ್ನು ಉಳಿಸಿರುವ ಸ್ಥಳಗಳನ್ನು ನೋಡಿಯೇ ತಿರಬೇಕು. ಅಂತಹ ಸ್ಥಳಗಳನ್ನು ಈ ಕೆಳಗೆ ನೀಡಲಾಗಿದೆ.

ಕೆಂಪು ಕೋಟೆ 

ಸ್ವಾತಂತ್ಯ್ರ ದಿನಾಚರಣೆ ದಿವಸದಂದು ದೇಶದ ಪ್ರಧಾನಿ ರಾಷ್ಟ್ರವನ್ನು ಪ್ರತಿನಿಧಿಸಿ, ಭಾಷಣ ಮಾಡುವ ಸ್ಥಳವಾಗಿದೆ. ಅಲ್ಲದೇ ಪ್ರತಿಯೊಬ್ಬರು ಒಂದು ಬಾರಿಯಾದರು ಭೇಟಿ ನೀಡುವಂತಹ ಸ್ಥಳವಾಗಿದೆ. ಸ್ವಾತಂತ್ಯ್ರ ದಿನಾಚರಣೆಯಂದು  ದೇಶದ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದಿನವಾದರಿಂದ  ಅಂದು ಬೇಟಿ ನೀಡುವುದು ಉತ್ತಮ.ಇದು ದೆಹಲಿಯಲ್ಲಿದೆ.

ಇಂಡಿಯಾ ಗೇಟ್‌

ಅಮರ್‌ ಜವಾನ್‌ ಜ್ಯೋತಿ ಐತಿಹಾಸಿಕ ಸ್ಥಳ. ದೇಶಕ್ಕಾಗಿ ಹೋರಾಡಿ ಮರಣ ಹೊಂದಿದ ಸೈನಿಕರ ಅಂತಿಮ ಸಂಸ್ಕಾರವನ್ನು ಇಲ್ಲಿ ಮಾಡಲಾಗುತ್ತದೆ. ದೇಶಕ್ಕಾಗಿ ಮನೆ ಕುಟುಂಬವನ್ನು ಬಿಟ್ಟ ದೇಶಕ್ಕಾಗಿ ಹೋರಾಡಿ ಸೈನಿಕರನ್ನು ನೋಡಲು ಒಮ್ಮೆಯಾದರೂ ಭೇಟಿ ನೀಡಬೇಕು.

ಜಲಿಯನ್‌ವಾಲಾಬಾಗ್

ಅಮೃತಸಾರಾದಲ್ಲಿರಿವ ಜಲಿಯನ್‌ವಾಲಾಬಾಗ್‌ನಲ್ಲಿ 380 ಅಹಿಂಸ್ಮಾತ್ಮಕ ಪ್ರತಿಭಟನಾಕಾರರನ್ನು 13 ಏಪ್ರಿಲ್‌ 1919 ರಂದು ಬ್ರಿಟಿಷರ ಸೇನಯೊಂದು ನಿಷ್ಕರುಣೆಯಿಂದ ಕೊಂದ ಸ್ಥಳವಾಗಿದೆ. ಇದನೊಮ್ಮೆ ನೋಡಲೇ ಬೀಕಾದ ಸ್ಥಳವಾಗಿದೆ.

ಸಬರಮತಿ ಆಶ್ರಮ

ಇದು ಸಬರಮತಿ ನದಿಯ ದಡದಲ್ಲಿದೆ. ದೇಶದ ಅನೇಕ ಚಳುವಳಿಗಳು ಈ ಆಶ್ರಮದಿಂದಲೇ ಪ್ರಾರಂಭವಾಗಿವೆ. ರಾಷ್ಟ್ರಪಿತಾ ಮಹಾತ್ಮ ಗಾಂಧಿ 12 ವರ್ಷಗಳ ಕಾಲ ಇದೆ ಆಶ್ರಮದಲ್ಲಿ ವಾಸವಾಗಿದ್ದರು.

ಝಾನ್ಸಿ ಕೋಟೆ

ದೇಶದ ಸ್ವತಂತ್ಯ್ರಕ್ಕಾಗಿ ಮೊದಲು ಯುದ್ದ ಆರಂಭವಾದದ್ದು 1957 ರಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ. ಝಾನ್ಸಿಯ ರಾಣಿ, ರಾಣಿ ಲಕ್ಷ್ಮಿ ಬಾಯಿ ನೇತೃತ್ವದಲ್ಲಿ ನಡೆಯಿತು. ಅಲ್ಲದೇ ಈ ಪ್ರದೇಶವನ್ನು ಶಿವ ಹಾಗೂ ಅವನ ಪುತ್ರ ಗಣೇಶನ ದೇವಾಲದ ಮೂಸಿಯಮಗೆ ಮೀಸಲಿಡಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close