About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ರೆಸಾರ್ಟ್ ರಾಜಕಾರಣ: ‘ಕೈ’ ಶಾಸಕರು ಈಗಲ್ಟನ್ ರೆಸಾರ್ಟ್ ಗೆ ಶಿಫ್ಟ್, ಬಿಗಿ ಭದ್ರತೆ

ಬೆಂಗಳೂರು: ರಾಜ್ಯದಲ್ಲೀಗ ರೆಸಾರ್ಟ್‌ ರಾಜಕಾರಣದ ಪೈಪೋಟಿ ಶುರುವಾಗಿದೆ. ಆಪರೇಷನ್‌ ಕಮಲ ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಎಲ್ಲ ಕಾಂಗ್ರೆಸ್‌ ಶಾಸಕರನ್ನು ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ.

ಬಿಡದಿ ಬಳಿಯ ಈಗಲ್ ಟನ್ ಹಾಗೂ ವಂಡರ್ ಲಾ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕರು ಬೀಡುಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್​ ಸುತ್ತಲೂ ಪೊಲೀಸ್​ ಬಿಗಿ ಭದ್ರತೆ ಒದಗಿಸಲಾಗಿದೆ. ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕರು ಸೇರಿದಂತೆ 30ರಿಂದ 35 ಶಾಸಕರು ವಾಸ್ತವ್ಯ ಹೂಡಿದ್ದಾರೆ. ಸಾರ್ವಜನಿಕರಿಗೆ ರೆಸಾರ್ಟ್ ಪ್ರವೇಶ ನಿಷೇಧಿಸಿದೆ.

ಮತ್ತೊಂದೆಡೆ 11 ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದ್ದು, ಆಪರೇಷನ್‌ ಕಮಲ ಕಾರ್ಯಾಚರಣೆ ಅಂತ್ಯವೋ- ಆರಂಭವೋ ಎಂಬ ಕುತೂಹಲ ಮೂಡಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close