About Us Advertise with us Be a Reporter E-Paper

ಅಂಕಣಗಳು

ರೆಸಾರ್ಟ್ ಶಾಸಕರ ನಡವಳಿಕೆ ನಿರ್ಲಜ್ಜೆಯ ಪರಮಾವಧಿ

ಸಂಪಾದಕೀಯ

ಬಹಳ ಬೇಡ, ಸುಮಾರು ಮೂವತ್ತು ವರ್ಷಗಳ ಹಿಂದೆ ನಮಗೆ ರಸ್ತೆೆ ಮೇಲೆ ಕೆಲವರು ಹಿರಿಯರು ಕಾಣಸಿಗುತ್ತಿದ್ದರು. ಅವರು ಹೋಗುತ್ತಿದ್ದರೆ ಗೊತ್ತಾಗದಂತೆ ಅವರ ಬಗ್ಗೆೆ ಗೌರವ ಭಾವನೆ ಮೂಡುತ್ತಿತ್ತು.ಅದರಲ್ಲೂ ಅವರು ಮೇಷ್ಟ್ರು ಎಂದು ಗೊತ್ತಾದರೆ ಗೌರವ ಇಮ್ಮಡಿಯಾಗುತ್ತಿತ್ತು. ಮೈಸೂರು ಮಹಾಜರು ಬರುತ್ತಾರೆ ಎಂದರೆ ಇಡೀ ಊರನ್ನು ಸಿಂಗರಿಸಿಕೊಂಡು ಜನ ಕಾಯುತ್ತಿದ್ದರು ಎನ್ನುವುದನ್ನು ನಾವು ಕೇಳಿದ್ದೇವೆ. ರಾಜರ ನಂತರ ಬಂದ ರಾಜಕಾರಣಿಗಳೂ ಕೂಡಾ ಹಾಗೇ ಇದ್ದರು. ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಅವರೆಲ್ಲ ಊರಿಗೆ ಬರುತ್ತಾರೆಂದರೆ ಜನ ಹೆಮ್ಮೆಪಡುತ್ತಿದ್ದರು. ರಾಜರ ನಂತರ ಬಂದ ರಾಜಕಾರಣಿಗಳು ಸ್ವಲ್ಪಮಟ್ಟಿಗೆ ಅದೇ ಗಾಂಭೀರ್ಯವನ್ನು ಮುಂದುವರಿಸಿಕೊಂಡು ಬಂದರು. ಬರುಬರುತ್ತ ನಮ್ಮ ಸಂಸ್ಕೃತಿಹೀನ ರಾಜಕಾರಣಿಗಳು ಆಯ್ಕೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಮಹಾತ್ಮ ಗಾಂಧಿ ಹೆಸರು ಹೇಳುವ ಕಾಂಗ್ರೆೆಸ್ ನಾಯಕರು ಕುಡಿದು ಗಲಾಟೆ ಮಾಡಿಕೊಂಡು ಆಸ್ಪತ್ರೆೆ ದಾಖಲಾಗಿರುವುದು ನಿರ್ಲಜ್ಜೆೆಯ ಪರಮಾವಧಿ.

ಮದ್ಯಪಾನದ ವಿರುದ್ಧ ಗಾಂಧಿ ಸಮಾಜವನ್ನು ಎಚ್ಚರಿಸಿದ್ದರು. ಕುಡಿತ ಮನುಷ್ಯನನ್ನು ಆತ್ಮಹೀನನನ್ನಾಗಿ ಮಾಡುತ್ತದೆ ಎಂದಿದ್ದರು. ಅಂಥ ಗಾಂಧಿ ಹೆಸರು ಹೇಳುವ ಪಕ್ಷದ ನಾಯಕರು ಮದ್ಯದ ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಇದರಿಂದ ರಾಜಕಾರಣಿಗಳಿಗೆ ಏನೂ ಅನ್ನಿಸದಿರಬಹುದು ಆದರೆ ಅಂಥವರು ನಮ್ಮನ್ನಾಳುತ್ತಿದ್ದಾಾರೆ ಎನ್ನುವ ನೋವು ಜನರನ್ನು ಕಾಡದೇ ಇರುವುದಿಲ್ಲ. ಕಳೆದೊಂದು ವಾರದಿಂದ ಆಪರೇಷನ್ ಕಮಲದಿಂದ ರಾಷ್ಟ್ರ ರಾಜಕೀಯದಲ್ಲಿ ಸುದ್ದಿಯಾಗಿದ್ದ ಕರ್ನಾಟಕ ರಾಜಕೀಯ, ಇದೀಗ ಕೈ ನಾಯಕರ ‘ಎಣ್ಣೆೆ ಗಲಾಟೆ’ಯಿಂದ ಭಾರಿ ವಿವಾದಕ್ಕೆೆ ಕಾರಣವಾಗಿರುವುದು ಮತದಾರರಲ್ಲಿ ಅಸಹ್ಯ ಹುಟ್ಟಿಸಿದೆ. ಎಂಥ ಆತ್ಮಶೂನ್ಯರು ನಮ್ಮನ್ನು ಆಳುತ್ತಿದ್ದಾರೆ ಎನಿಸದೇ ಇರದು. ಇದು ರಾಜ್ಯದ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ. ಸುಸಂಸ್ಕೃತರ ನಾಡು ಎಂದೇ ಹೆಸರಾಗಿರುವ ಕನ್ನಡ ನಾಡಿನ ಹಿರಿಮೆ- ಗರಿಮೆಗಳಿಗೆ ಮಸಿ ಬಳಿಯುತ್ತಿದ್ದಾರೆ. ಶಾಸಕ ಆನಂದ್ ಸಿಂಗ್‌ಗೆ ಮತ್ತೊಬ್ಬ ಶಾಸಕ ಗಣೇಶ್ ಬಾಟಲಿಯಿಂದ ಹೊಡೆದಿದ್ದಾರೆ. ಬಾಟಲಿ ಏಟಿಗೆ ಆನಂದ್ ಸಿಂಗ್ ತಲೆಯಲ್ಲಿ ರಕ್ತ ಕಾಣಿಸಿಕೊಂಡಿದ್ದು, ಮುಂಜಾನೆ ಏಳು ಗಂಟೆ ಸುಮಾರಿಗೆ, ಖಾಸಗಿ ವಾಹನದಲ್ಲಿ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆೆಗೆ ಬಂದು ದಾಖಲಾಗಿದ್ದಾಾರೆ. ಈ ಇಬ್ಬರು ಶಾಸಕರು ಹೊಡೆದಾಡಿಕೊಂಡಿರುವುದರಿಂದ, ಗಾಂಧಿ ಹೆಸರಿನ ಪಕ್ಷದ ವರ್ಚಸ್ಸಿಗೆ ಧಕ್ಕೆೆಯಾಗಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗಳು ಕೇಳಿಬಂದಿವೆ. ರಾಜಕೀಯ ನಾಯಕರು ಹೇಗೆ ಇರಬೇಕು ಎನ್ನುವ ಸಾಮಾನ್ಯ ಜ್ಞಾನ ಕೂಡ ಈ ಶಾಸಕರಿಗೆ ಇದ್ದಂತೆ ಕಾಣುತ್ತಿಲ್ಲ. ಎಂಥ ಜನಪ್ರತಿನಿಧಿಗಳು ನಮ್ಮನ್ನು ಆಳುತ್ತಿದ್ದಾರೆ ಎಂದು ಯೋಚಿಸಿದರೆ ಅಸಹ್ಯ ಹುಟ್ಟುವಂಥ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿರುವುದು ಸುಳ್ಳಲ್ಲ.

Tags

Related Articles

Leave a Reply

Your email address will not be published. Required fields are marked *

Language
Close