About Us Advertise with us Be a Reporter E-Paper

ಅಂಕಣಗಳು

ನಮ್ಮ ಆಸುಪಾಸು ಬದುಕುತ್ತಿರುವ ಜನರನ್ನು ಗೌರವಿಸುವುದು ಅತ್ಯವಶ್ಯಕ

ಗೌರ್ ಗೋಪಾಲ್

ಒಂದು ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದಮೇಲೆ, ಆಸುಪಾಸು ಬದುಕುತ್ತಿರುವ ಜನರನ್ನು ಗೌರವಿಸುವುದು ಅತ್ಯವಶ್ಯಕವಾಗಿರುತ್ತದೆ. ಚಿಕ್ಕವರು-ದೊಡ್ಡವರು, ಬಡವ-ಶ್ರೀಮಂತ, ವಿದ್ಯಾವಂತ ಅವಿದ್ಯಾವಂತನೆಂಬ ಬೇಧ ತೋರದೆ ಎಲ್ಲರನ್ನೂ ಸಮಾನ ಮನಸ್ಥಿತಿಯಯಿಂದ ಕಂಡಾಗ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆಗ ನಾವು ಬಯಸುತ್ತಿರುವ ಮನಶಾಂತಿ, ತನ್ನಿಂತಾನೆ ನಮ್ಮೊಡಲಿಗೆ ಬಂದು ಬೀಳುತ್ತದೆ. ಇಲ್ಲವಾದಲ್ಲಿ ಎಲ್ಲರ ನಿರ್ಲಕ್ಷ್ಯಕ್ಕೊಳಗಾಗಿ ತಾವೂ ಒಳಗೊಳಗೆ ನೋವುಣ್ಣುತ್ತಾ ಇನ್ನೊಬ್ಬರನ್ನೂ ನೋಯಿಸುತ್ತಾ, ಪೀಡನ ಸುಖಿಯಾಗಿಯೇ ಬದುಕಿ, ಕೊನೆಗಾಲದಲ್ಲಿ ಬಾಯಿಗೆ  ನೀಡುವವರೂ ಇಲ್ಲದೇ ಸಾಯಬೇಕಾಗಿ ಬರಬಹುದು.

ಇದೇ ರೀತಿ ಬದುಕಿ, ಯಾರೂ ಇಲ್ಲದೆ, ಒಬ್ಬಂಟಿಯಾಗಿ ಸತ್ತ ಸನ್ಯಾಸಿಯೋರ್ವನ ಕಥೆಯಿದು. ಬಹಳ ವರ್ಷಗಳ ಹಿಂದಿನ ಮಾತು. ಬಾವಿಕಟ್ಟೆ ಎಂಬ ಊರಲ್ಲಿ ಒಬ್ಬರು ಸನ್ಯಾಸಿ ವಾಸವಾಗಿದ್ದರು. ಊರಿನಿಂದ ಹೊರಗೆ ಕಾಡೊಂದರಲ್ಲಿ ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು. ಈ ರೀತಿ ಸನ್ಯಾಸ ಸ್ವೀಕಾರಕ್ಕೂ ಮುನ್ನ ಅವರೋರ್ವ ಅತ್ಯುನ್ನತ ಜ್ಞಾನ ಹೊಂದಿರುವ ವಿದ್ವಾಂಸರಾಗಿದ್ದರು. ಮೊದಲಿಗೆ ಬಾವಿಕಟ್ಟೆ ಎಂಬ ಊರಿನ ಪಕ್ಕದ ಪ್ರದೇಶವಾದ ಮಾಗಡಿಯ, ಕಶ್ಯಪ ಎಂಬ ರಾಜನ  ಮಹಾಕವಿಯಾಗಿ ಕಾರ್ಯನಿರ್ವಗಿಸುತ್ತಿದ್ದರು. ಇವರ ಸಾಹಿತ್ಯ ಜ್ಞಾನ ಎಷ್ಟಿತ್ತೆಂದರೆ, ಸ್ವತಃ ಮಹಾರಾಜರೇ ಅವರ ಪ್ರತಿಭೆಗೆ ತಲೆ ಬಾಗಿದ್ದರು.

ಆದರೆ ಅವರಲ್ಲಿ ಒಂದು ಕೆಟ್ಟ ಅಭ್ಯಾಸವಿತ್ತು. ತನ್ನಷ್ಟು ಜ್ಞಾನಿ ಬೇರೆ ಯಾರಿಲ್ಲವೆಂಬ ಅಹಂಕಾರದಲ್ಲಿ ಎಲ್ಲರನ್ನೂ ಕೀಳಾಗಿ ಕಾಣುತ್ತಿದ್ದರು. ಯಾರೊಂದಿಗೂ ಬೆರೆಯದೇ ಏಕಾಂತವಾಗಿರುತ್ತಿದ್ದರು. ಮಾತನಾಡಿಸಲು ಬಂದ ಮಂತ್ರಿಗಳನ್ನೆಲ್ಲಾ ಅವಮಾನಿಸಿ ಕಳುಹಿಸುವುದು ಅವರಿಗೆ ಅಭ್ಯಾಸವಾಗಿತ್ತು. ಇವರ ವರ್ತನೆಯಿಂದ ಇಡೀ ಮಂತ್ರಿಮಂಡಲವೇ ನೊಂದುಕೊಂಡಿತ್ತು. ಅವರ ವರ್ತನೆ ಸಹಿಸಲಾರದ ಮಟ್ಟಕ್ಕಿಳಿದಾಗ, ಒಂದು ದಿನ ಇಡೀ ಮಂತ್ರಿ ಮಂಡಲವೇ  ರಾಜನ ಬಳಿ, ‘ನಿಯತೇಯರ ವರ್ತನೆ ನಮಗೆ ತುಂಬಾ ತೊಂದರೆ ಕೊಡುತ್ತಿದೆ. ನಮ್ಮನ್ನೆಲ್ಲಾ ಅವಮಾನಿಸುವುದು, ಮಾನಸಿಕವಾಗಿ ಹಿಂಸಿಸುವುದು ರೂಢಿಯಾಗಿದೆ. ಇವರಿಂದಾಗಿ ನಮ್ಮ ಕೆಲಸದ ಪರ ಶ್ರದ್ಧೆಯೂ ಹಾಳಾಗುತ್ತದೆ. ದಯವಿಟ್ಟು ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಪ್ರಾರ್ಥಿಸಿಕೊಂಡರು.

ಸ್ವಲ್ಪಹೊತ್ತು ಯೋಚಿಸಿದ ರಾಜ, ‘ಒಂದು ಗೌಪ್ಯ ವಿಚಾರ ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ. ಇದನ್ನು ತಿಳಿದ ಮೇಲೆ ಅನ್ಯತಾ ಭಾವಿಸಬೇಡಿ. ನನ್ನ ತಂದೆಯವರ ಕಾಲದಿಂದಲೂ ಅವರು ನಮ್ಮ ಅಸ್ತಾನದ ಮಹಾಕವಿಯಾಗಿದ್ದರು. ಅವರ ಕುರಿತು ಎಲ್ಲರೂ  ಕಂಡರೂ ಆಸ್ಥಾನದ ಹಿತ ದೃಷ್ಟಿಯಿಂದ ಇಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ. ಬೇರೆ ರಾಜ್ಯಗಳಲ್ಲೂ ಧಿಕ್ಕರಿಸಿಕೊಂಡು ಕೊನೆಯದಾಗಿ ಇಲ್ಲಿ ಬಂದಿದ್ದಾರೆ. ಅವರಿಗೆ ಜೀವನ ನೀಡುವ ಸಲುವಾಗಿ ನಾವು ಹೀಗೆ ಮಾಡಿದ್ದೇವೆ. ಅವರನ್ನು ನಿವೃತ್ತಿಗೊಳಿಸುವುದು ಅಸಾಧ್ಯವಾದ ಮಾತು. ಆದ್ದರಿಂದ ದಯವಿಟ್ಟು ನೀವೇ ಹೊಂದಿಕೊಳ್ಳಿ’ ಎಂದರು.
ಇಷ್ಟನ್ನೂ ತಾಳ್ಮೆಯಿಂದ ಕೇಳಿದ ಮಂತ್ರಿಮಂಡಲ, ‘ಅಪ್ಪಣೆ ದೊರೆ!’ ಎಂದು ಅಲ್ಲಿಂದ ಹೊರಟು ಹೋದರು. ಆವತ್ತಿಂತ ಅವನ ಕುರಿತು ಯಾರೂ ತಲೆಕೆಡಿಸಿಕೊಳ್ಳಲು ಹೋಗಲೇ ಇಲ್ಲ. ಆ ಸನ್ಯಾಸಿ, ‘ಕಾಗೆ ಬಿಳಿ’  ‘ಹೌದು ಗುರುಗಳೇ, ಕಾಗೆ ಬಿಳಿಯೇ’ ಎನ್ನುವುದನ್ನು ರೂಢಿಸಿಕೊಂಡರು. ಹೀಗೆ ದಿನಗಳು ಸಾಗುತ್ತಿದ್ದವು.ಬರು ಬರುತ್ತಾ ಈ ಸನ್ಯಾಸಿಗೆ, ಎಲ್ಲರೂ ತನ್ನ ಹಿಂದಿಂದ ತನ್ನನ್ನು ಆಡಿಕೊಳ್ಳುತ್ತಿದ್ದಾರೆ ಎಂಬ ಭ್ರಮೆ ಆರಂವಾಯಿತು. ಇದರಿಂದ ಮಾನಸಿಕ ಸಂತೋಲನ ಕಳೆದುಕೊಂಡು ಎಲ್ಲರೊಡನೆ ಕೆಟ್ಟದಾಗಿ ವರ್ತಿಸತೊಡಗಿದ. ಇದರಿಂದ ಬೇಸತ್ತ ಜನ ಅವನನ್ನು ದೂರವೇ ಇಡ ತೊಡಗಿದರು.

ಬಹಳ ದಿನಗಳ ನಂತರ, ಯಾರೂ ನನ್ನ ಬಳಿಗೆ ಬರಬಾರದು ಎಂದು ಆದೇಶಿಸಿದವವೇ ಪಕ್ಕದ ರಾಜ್ಯಕ್ಕೆ ತೆರಳಿ ಅಲ್ಲಿನ ಕಾಡೊಂದರಲ್ಲಿ ವಾಸಿಸತೊಡಗಿದರು.  ಸಹವಾಸವೇ ಸಾಕೆಂದುಕೊಂಡಿದ್ದ ರಾಜ್ಯದ ಜನರೆಲ್ಲಾ, ‘ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ’ ಎಂಬಂತಿದ್ದರು. ಅವರ ವಿಚಾರ ಬಾವಿಕಟೆಯ ಜನರನ್ನೂ ತಲುಪಿತ್ತು. ಹೀಗಾಗಿ ಯಾರೂ ಅವರನ್ನು ಮಾತನಾಡಿಸುತ್ತಿರಲಿಲ್ಲ. ದಿನಾ ಕಾಡೆಲ್ಲಾ ಸುತ್ತಿ, ಹಣ್ಣು ಹಂಪಲು ತರುವುದು, ಕಟ್ಟಿಗೆ ತಂದಿಡುವುದು, ಸ್ನಾನ ಮಾಡಿ, ತಿಂದು ಮಲಗುವುದು ಅಭ್ಯಾಸವಾಗಿತ್ತು.

ಹೀಗೆ ವರ್ಷಗಳು ಕಳೆದವು. ದಿನೇ ದಿನೆ ಅವನಲ್ಲಿ ಒಂಟಿತನ ಕಾಡತೊಡಗಿತ್ತು. ಜನರು ತನ್ನನ್ನು ಬಂದು ಮಾತನಾಡಿಸಲಿ, ತನ್ನ ಕುರಿತು ಕಾಳಜಿ ವಹಿಸಲಿ  ಬಯಸುತ್ತಿದ್ದರು. ಹೀಗಾಗಿ ಜನ ಜಂಗೊಳಿ ಇದ್ದ ಪ್ರದೇಶದಲ್ಲೇ ಹೆಚ್ಚಾಗಿ ತಿರುಗುತ್ತಿದ್ದರು. ಆದರೂ ಜನ ಅವರನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಅವರು ಬಹಳ ಕಾಯಿಲೆ ಬಿದ್ದಿದ್ದರು. ದಾರಿ ಹೋಕರು ಅವರ ಮೇಲೆ ಕರುಣೆ ತೋರಿ, ಅವನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದರು. ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ ಅವನು ಮತ್ತೆ ಜನರಲ್ಲಿ, ‘ನೀವು ಮಾಡಿದ್ದು ನಿಮ್ಮ ಕರ್ತವ್ಯ. ನಾನು ಹಿರಿಯ. ಚಿಕಿತ್ಸೆ  ಏನು ಮಹಾ? ನನಗೆ ನೀವು ತಲೆ ಬಾಗಿ ನಡೆಯಬೇಕು’ ಎಂದ. ಆವತ್ತೆ ಜನ, ಯಾವುದೇ ಸಂದರ್ಭದಲ್ಲಿ ಅವನಿಗೆ ಸಹಾಯ ಮಾಡಬಾರದು ಎಂದು ನಿರ್ಧರಿಸಿ, ಅವನನ್ನು ತನ್ನ ಆಶ್ರಮದಲ್ಲಿ ಬಿಟ್ಟು ಹೊರಟು ಹೋದರು.

ಮಾರನೇ ದಿನ ಅವನ ಜ್ವರ ಏರಿತ್ತು. ಸಾಯುವ ಪರಿಸ್ಥಿತಿ ಬಂದಿತ್ತು. ಸನ್ಯಾಸಿ ಕೂಗಿಕೊಂಡರು, ‘ಕಾಪಾಡಿ, ಕಾಪಾಡಿ’ ಎಂದು ಬೇಡಿದರು. ಆದರೆ ಯಾರೂ ಅತ್ತ ತಲೆಯೂ ಹಾಕಲಿಲ್ಲ. ಕೊನೆಗೆ ಒಂಟಿಯಾಗಿರಬಯಸಿದ, ಅಹಂಕಾರಿ ಸನ್ಯಾಸಿ, ತನ್ನ ಕೊನೆಯ ಕಾಲಕ್ಕೆ  ಹನಿ ನೀರಿಗೂ ಗತಿ ಇಲ್ಲದೆ ಮರಣ ಹೊಂದಿದರು.

ಈಗ ಕೇಳಿ. ನಮ್ಮೆಲ್ಲರ ಮನಸ್ಸಿನಲ್ಲೂ ‘ನಾನು, ನಾನೇ ದೊಡ್ಡವನು, ಎಲ್ಲರೂ ನನ್ನ ಮಾತನ್ನೇ ಕೇಳಬೇಕು’ ಎಂಬ ಭಾವನೆ ಸಹಜವಾಗಿಯೇ ಇರುತ್ತದೆ. ಇದು ಮಿತಿ ಮೀರಿದಾಗ ಮಾತ್ರ, ಪರಿಸ್ಥಿತಿ ರುಧ್ರ ತಾಂಡವವಾಡುತ್ತದೆ. ಜನರೆಲ್ಲಾ ನಮ್ಮನ್ನು ಬಿಟ್ಟು ಬಿಡುತ್ತಾರೆ. ನಾವು ಒಂಟಿಯಾಗುತ್ತೇವೆ. ಕೊನೆಗೆ ನಾವು ಸತ್ತರೆ, ಎರಡು ಹನಿ ಕಣ್ಣೀರು ಹಾಕುವವರೂ ಉಳಿಯುವುದಿಲ್ಲ. ಹೀಗಾಗಿ, ನಮ್ಮ ಆಸುಪಾಸಿನವರನ್ನು ಗೌರವಿಸುತ್ತಾ, ಅವರ ಭಾವನೆಗಳಿಗೆ ಬೆಲೆ  ಅವರನ್ನು ತನ್ನಂತೆಯೇ ಕಂಡಾಗ, ಎಲ್ಲವೂ ಚೆನ್ನಾಗಿರುತ್ತದೆ.

******

ಪ್ರತೀ ಕೇವಲ ನಾವು ಕಂಡಿದ್ದು, ಕೇಳಿದ್ದು ನಿಜವೇ ಆಗಬೇಕೆಂದೇನಿಲ್ಲ. ಯಾರೋ ಹೇಳಿದ್ದನ್ನು ಕೇಳಿ, ನಮ್ಮವರನ್ನು ನಮ್ಮಿಂದ ದೂರ ಮಾಡಿಕೊಂಡು ಅಥವಾ ಅವರೇನೆಂದು ಗೊತ್ತೇ ಇಲ್ಲದಾಗ ಯಾರೋ ಹೇಳಿದ ಮಾತು ಕೇಳಿ, ಅವರು ಹೀಗೆ ಎಂದು ನಿರ್ಧರಿಸಿದಾಗ, ಸತ್ಯ ನಮ್ಮ ಕಣ್ಣಮುಂದೆ ಬಂದಾಗ ಆಗುವ ನೋವು, ಯೋಚನೆಗೂ ನಿಲುಕದ್ದು. ‘ಛೇ! ನಾನು ಹೀಗೆ ಮಾಡಿದೆಯಲ್ಲಾ?’ ಎಂದು ಕೊರಗುವಷ್ಟರಲ್ಲಿ ಪರಿಸ್ಥಿತಿ  ಕೈಮೀರಿ ಹೋಗಿರುತ್ತದೆ. ಹೀಗೆ ತನ್ನ ಸ್ನೇಹಿತನ ಕುರಿತು ತಪ್ಪು ವಿಚಾರಗಳನ್ನು ಕೇಳಿದೊಡನೆ ಅವನ ಕೈಬಿಟ್ಟು, ಕೊನೆಗೆ ನಿಜ ತಿಳಿದಾಗ ನೊಂದು, ಪ್ರಾಣ ಬಿಟ್ಟವನ ಕಥೆಯಿದು.

ಹತ್ತು ವರ್ಷಗಳ ಹಿಂದೆ ಅರುಣ, ರಮಣ ಎಂಬ ಬಾಲ್ಯದ ಗೆಳೆಯರಿಬ್ಬರು ಕೆಲಸದ ಹುಡುಕಾಟದಲ್ಲಿ ಮುಂಬೈಗೆ ತೆರಳಿದ್ದರು. ಬ್ಬರ ಕೈಯಲ್ಲೂ ಕೇವಲ 100 ರುಪಾಯಿಗಳಿದ್ದವು. ಇನ್ನೇನು ಎಂಬುವುದೇ ತಿಳಿದಿರಲಿಲ್ಲ. ನೌಕರಿ ಹುಡುಕುತ್ತಾ ಬೀದಿ ಬೀದಿಗಳಲ್ಲಿ ಅಲೆದರೂ, ಕೊನೆಗೂ ಒಂದು ದಿನಸಿ ಅಂಗಡಿಯಲ್ಲಿ ಕೆಲಸ ದೊರಕಿತು.  ಬಂದದ್ದು ಪಂಚಾಮೃತ ಎಂಬಂತೆ ಅಲ್ಲೇ ಕೆಲಸ ಮಾಡತೊಡಗಿದರು. ಬಹಳ ಶ್ರದ್ಧೆಯಿಂದ ದುಡಿದು, ಒಂದು ಹೊತ್ತು ಊಟ ಮಾಡಿ, ಉಳಿದ ಹಣವನ್ನು ಕೂಡಿಡುವುದು ಅವರಿಬ್ಬರ ಅಭ್ಯಾಸವಾಗಿತ್ತು.

ಅವರಿಬ್ಬರ ಸ್ನೇಹ ಎಷ್ಟು ಗಾಢವಾಗಿತ್ತೆಂದರೆ, ಕಂಡವರಿಗೆ ಹೊಟ್ಟೆಕಿಚ್ಚಾಗುವಂತ್ತಿತ್ತು. ಒಟ್ಟಿಗೆ ತಿನ್ನುವುದು, ತಿರುಗುವುದು ಇತ್ಯಾದಿ. ಸ್ವಂತ ಅಣ್ಣ ತಮ್ಮಂದಿರ ಸಂಬಂಧವೂ ಅಷ್ಟೊಂದು ಗಾಢವಾಗಿರಲಿಕ್ಕಿಲ್ಲ. ನೋಡಿದವರಿಗೆ, ಸಂಬಂಧವೆಂದರೆ ಹೀಗಿರಬೇಕು ಎನಿಸುತ್ತಿತ್ತು.

ಹೀಗಿರುವಾಗ ಒಂದು ದಿನ, ಅರುಣ ದಾರಿಯಲ್ಲಿ ಹೋಗುತ್ತಿದ್ದ. ಅಲ್ಲಿ ಅವನ ಮತ್ತು ರಮಣನ ಬಾಲ್ಯದ  ಯಮ ಸಿಕ್ಕಿದ. ಹೀಗೆ ಮಾತನಾಡುತ್ತಾ ಯಮ, ‘ಅಲ್ವೋ, ನಿಂಗೆ ರಮಣನ ಬಗ್ಗೆ ಗೊತ್ತಾಗಿಲ್ಲವೇನೋ? ಅವನು ನಿನ್ನ ಬೆನ್ನ ಹಿಂದೆ ಆಟವಾಡುತ್ತಿದ್ದಾನಂತೆ. ನೀನು ಕೂಡಿಟ್ಟ ಹಣವನ್ನೆಲ್ಲಾ ಸೇರಿಸಿ ಅವು ಊರಿಗೆ ಬರುವ ಯೋಜನೆ ರೂಪಿಸುತ್ತಿದ್ದಾನೆ. ನನ್ನನ್ನು ನಂಬೋ. ನಾನು ನಿನ್ನ ಒಳ್ಳೆಯದಕ್ಕೇ ಹೇಳುತ್ತಿದ್ದೇನೆ’ ಎಂದ.

‘ಇಲ್ಲ ಕಣೋ, ಅವನು ಹಾಗೆ ಮಾಡಲ್ಲ’ ಎಂದ. ಯಮ ಅವನನ್ನು ಮತ್ತೆ ಕೆರಳಿಸುತ್ತಾ, ‘ಹೌದು ಕಣೋ. ನೀನು ಫ್ರೆಂಡು, ಫ್ರೆಂಡು ಎನ್ನುತ್ತಿರು. ಅವನು ಮಾತ್ರ  ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹೋಗುತ್ತಾನೆ. ಆಗ ನಿನಗೆ ಗೊತ್ತಾಗುತ್ತದೆ. ನೀನು ಚೆನ್ನಾಗಿರು’ ಎಂದು ಹೇಳಿ ಹೊರಟೇ ಹೋದ. ಅರುಣ ಮನೆಗೆ ಮರಳುತ್ತಿರುವಾಗ ಯಮ ಹೇಳಿದ ಮಾತನ್ನೇ ಮತ್ತೆ-ಮತ್ತೆ ನೆನಪಿಸಿಕೊಳ್ಳುತ್ತಿದ್ದ. ತುಂಬಾ ಯೋಚಿಸಿ, ಅವನ ತಲೆಯಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ರಮಣನ ಕುರಿತು ಸಂಶಯ ಮೂಡಿತ್ತು.
ಮನೆಗೆ ಮುಟ್ಟಿದಾಗ ರಮಣ ಎಲ್ಲೋ ಹೊರಡುವ ಸಲುವಾಗಿ ಬಟ್ಟೆ ಜೋಡಿಸಿಕೊಳ್ಳುತ್ತಿದ್ದ. ಅರುಣನ ಮನಸ್ಸಿನಲ್ಲಿ ಮೂಡಿದ್ದ ಸಂಶಯ ಗರಿಗೆದರಿತ್ತು. ಅವು ಕೋಪದಿಂದ,  ನಾಣು ನಿನ್ನನ್ನು ನಂಬಿ, ಏನೋ ಒಟ್ಟಿಗೆ ಬದುಕೋಣ ಎಂಬ ಭಾವನೆಯಲ್ಲಿದ್ದರೆ, ನೀನು ನನ್ನ ಬೆನ್ನಿಗೆ ಚೂರಿ ಹಾಕುತ್ತೀಯಲ್ಲೋ? ನಿನ್ನ ಜೊತೆ ಮಾತನಾಡುವುದರಲ್ಲಿ ಅರ್ಥವೇ ಇಲ್ಲ.ಹೊರಡು ಇಲ್ಲಿಂದ. ನಿನ್ನ ಹತ್ತಿರ ನನ್ನ ಹಣ ಎಷ್ಟಿದೆಯೋ ಕೊಟ್ಟು ಬಿಡು. ಇನ್ನು ನನಗೂ ನಿನಗೂ ಸಂಬಂಧವೇ ಇಲ್ಲ’ ಎಂದ. ರಮಣನಿಗೆ ಒಂದು ಮಾತೂ ಹೇಳಲು ಬಿಡದೇ ತನ್ನ ಪಾಲಿನ ಹಣ ತೆಗೆದುಕೊಂಡು ಮನೆಯಿಂದ ಹೊರಗೆ ಹಾಕಿದ. ಏನಾಗುತ್ತಿದೆಯೆಂದು ಗೊತ್ತಾಗದ ರಮಣ, ಹೇಗಾದರೂ ಆಗಿ,  ಗೆಳೆಯ ಸುಖವಾಗಿರಲಿ ಎಂದು ಅಲ್ಲಿಂದ ಹೊರಟು ಬಂದ.

ಅರುಣ ತನ್ನ ಮನಸ್ಸಿನಿಂದ ಗೆಳೆಯನನ್ನು ಹೊರಗೆ ಹಾಕಿ, ತನ್ನಷ್ಟಕ್ಕೆ ಬದುಕತೊಡಗಿದ್ದ. ಹೀಗಿರುವಾಗ ಒಂದು ದಿನ ಅರುಣನಿಗೆ ಒಂದು ಮನಿ ಆರ್ಡರ್ ಬಂತು. ಅದರ ಜತೆಗೊಂದು ಪತ್ರವೂ ಇತ್ತ. ‘ಲೋ ಅರು, ನಾನು ಯಾವತ್ತೂ ನಿನಗೆ ಮೋಸ ಮಾಡಿಲ್ಲ ಕಣೋ. ನೀನು ನನ್ನ ಉಸಿರು. ನಿನ್ನ ಬಿಟ್ಟು ಬದುಕೋ ಶಕ್ತಿ ನನಗಿಲ್ಲ. ಅಂದಹಾಗೆ, ನಾನು ನಿನ್ನ ಹೆಸರಲ್ಲಿ ಒಂದಿಷ್ಟು ಹಣ ಕೂಡಿಡುತ್ತಿದ್ದೆ.  ಮೊಬೈಲ್ ಅಂಗಡಿ ತೆರೆಯಬೇಕು ಅಂತ ಇದ್ದೀಯಲ್ಲಾ? ಅದು ನನಸಾಗಬೇಕು. ಇದರಲ್ಲಿ 10ಲಕ್ಷ ಇದೆ. ಸಾಕಾಗುತ್ತಾ ನೋಡು. ಇಲ್ಲವಾದಲ್ಲಿ ಒಮ್ಮೆ ನನಗೆ ಫೋನ್ ಮಾಡು. ಒಟ್ಟಿನಲ್ಲಿ ನಿನ್ನ ಕನಸು ನನಸಾಗಬೇಕು. ಒಟ್ಟಿನಲ್ಲಿ ನೀನು ಸಂತಸವಾಗಿರಬೇಕು. ನಿನಗಾಗಿ ನಾನು ಜೀವ ಬೇಕಾದರೂ ಕೊಡಲು ಸಿದ್ಧನಿದ್ದೇನೆ ಕಣೋ. ಐ ಲವ್ ಯೂ’ ಎಂದು ಬರೆದಿತ್ತು.

ಇದನ್ನು ಕಂಡು ರಮಣ ಕಣ್ಣೀರಿಡತೊಡಗಿದ. ‘ಛೇ! ಎಂಥ ತಪ್ಪು ಮಾಡಿದೆ. ಯಾರದೋ ಮಾತಿಗೆ ಮರುಳಾಗಿ ನನ್ನ ಪ್ರಾಣ  ಕೇವಲವಾಗಿ ಕಂಡೆ. ಆದರೆ ಅವನು ಮಾತ್ರ ಈಗಲೂ ನನಗಾಗಿ ಜೀವ ಬಿಡುತ್ತಿದ್ದಾನೆ. ಮೂರ್ಖ ನಾನು’ ಎಂದು ಗೋಡೆಗೆ ಕೈ ಹೊಡೆಯ ತೊಡಗಿದ. ಅಷ್ಟರಲ್ಲೇ ಅರುಣನ ಫೋನ್ ಬಂತು. ಸಂತಸದಿಂದ ರಮಣ ಕರೆ ಸ್ವೀಕರಿಸಿ ‘ಹಲೋ!’ ಎಂದ. ಅಷ್ಟರಲ್ಲೇ ಆ ಕಡೆಯಿಂದ ಬೇರೊಬ್ಬರು ಮಾತನಾಡಿ ‘ರಮಣ ಅವರೆ, ಅರುಣ್‌ಗೆ ಅಪಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಮೊಬೈಲ್‌ನಲ್ಲಿ ಕೇವಲ ನಿಮ್ಮ ನಂಬರ್ ಇತ್ತು. ಅದಕ್ಕೆ ನಿಮಗೇ ಫೋನ್ ಮಾಡಿದ್ದೇನೆ’ ಎಂದರು. ರಮಣ  ನೆಲಕ್ಕೆ ಕುಸಿದ.

ಹೀಗೆ, ನಮ್ಮ ಜೀವನದಲ್ಲೂ ಏನೇನೋ ಘಟನೆಗಳು ನಡೆಯುತ್ತಿರುತ್ತವೆ. ನಮ್ಮವರ ಮೇಲೆಯೇ ಸಂಶಯಗಳು ಮೂಡುತ್ತವೆ ಅಥವಾ ನಮ್ಮನ್ನು ಕಂಡರೆ ಆಗದವರು ಆ ಪರಿಸ್ಥಿತಿ ಮೂಡಿಸುತ್ತಾರೆ. ಇಂಥಹ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸು ನಮ್ಮ ಕೈಯಲ್ಲಿರುಬೇಕು. ಯಾವುದೋ ಒಂದು ಘಳಿಗೆಯ ಸಂಶಯ ನಮ್ಮ ಇಡೀ ಜೀವನವನ್ನು ಹಾಳುಗೆಡವಬಲ್ಲದು.

*********************

ಒಂದು ಸುಂದರವಾದ ಊರಲ್ಲಿ ಒಂದು ವಸ್ತು ಸಂಗ್ರಹಾಲಯವಿತ್ತು ಅಲ್ಲಿ ಅಮೃತ ಶಿಲೆಯಿಂದ ಮಾಡಿದ ನೆಲವಿತ್ತು. ಅಲ್ಲಿ ಅದೇ  ಶಿಲೆಯಿಂದ ಮಾಡಿದ ಒಂದು ಸುಂದರವಾದ ಮೂರ್ತಿಯಿತ್ತು. ಅಲ್ಲಿಗೆ ವಿಶ್ವದಾದ್ಯಂತ ಬಂದ ಜನರು ಆ ಸುಂದರವಾದ ಮೂರ್ತಿಯ ಸೌಂದರ್ಯಕ್ಕೆ ಮಾರು ಹೋಗಿ, ಅದನ್ನು ಹೊಗಳುತ್ತಿದ್ದರು.

ಒಂದು ರಾತ್ರಿ ಅಮೃತಶಿಲೆಯಿಂದ ಮಾಡಿದ ನೆಲವೊಂದು, ಆ ಅಮೃತಶಿಲೆಯ ಮೂರ್ತಿಯೊಂದಿಗೆ ಂಆತನಾಡಿತು. ಸ್ವಲ್ಪ ಅಸಮಾಧಾನದಿಂದಲೇ ಕೇಳಿತು, ‘ಮೂರ್ತಿಯೇ, ಮೂಲತಃ ನಾವಿಬ್ಬರೂ ಒಂದೇ ಊರಿನಿಂದ ಬಂದವರು. ನಮ್ಮಿಬ್ಬರನ್ನೂ ಒಂದೇ ಗಣಿಯಿಂದ ಆಯ್ದುಕೊಳ್ಳಲಾಗಿತ್ತು. ಒಂದೇ ಗಾಡಿಯಲ್ಲಿ ತರಲಾಗಿತ್ತು. ಅಷ್ಟೇ ಏಕೆ? ನಮ್ಮಿಬ್ಬರನ್ನೂ ಒಬ್ಬನೇ ಶಿಲ್ಪಿ ನಿರ್ಮಿಸಿದ್ದು. ಆದರೂ,  ಬಂದವರೆಲ್ಲಾ ನಿನ್ನನ್ನು ಹೊಗಳುತ್ತಾರೆ, ನನ್ನನ್ನು ಮೆಟ್ಟಿಕೊಂಡು ಹೋಗುತ್ತಾರೆ. ಹೀಗೇಕೆ?’ ಅದಕ್ಕೆ ಆ ಮೂರ್ತಿ ಬಹಳ ತಾಳ್ಮೆಯಿಂದ, ‘ಹೌದು. ನೀನು ಹೇಳುವುದೆಲ್ಲಾ ಸರಿ. ಆದರೆ ನಿನಗೆ ನೆನಪಿದೆಯಾ? ಸುಂದರವಾದ ಶಿಲ್ಪವಾಗಿ ಮಾಡಲು ಮೊದಲು ಆಯ್ದುಕೊಂಡದ್ದು ನಿನ್ನನ್ನೇ. ಆದರೆ ನೀನು ಅವನ ಕೆಲಸಕ್ಕೆ ಸ್ಪಂದಿಸಲೇ ಇಲ್ಲ.

ಎಷ್ಟೇ ಪ್ರಯತ್ನಪಟ್ಟರೂ ನೀನು ಬದಲಾಗಲಿಲ್ಲ. ಹಾಗಾಗಿ ನನ್ನನ್ನು ಆಯ್ದುಕೊಂಡ’ ಎಂದಿತು. ಆ ನೆಲ ಉತ್ತರಿಸುತ್ತಾ, ‘ಹೌದು. ನನಗೆ ನೆನಪಿದೆ. ಆದರೆ ಆ ಶಿಲ್ಪಿ ಆಯ್ದುಕೊಂಡ  ನನಗೆ ತುಂಬಾ ನೋಯುತ್ತಿತ್ತು. ಅವನು ಕರುಣೆ ಇಲ್ಲದೆ ನನ್ನೊಂದಿಗೆ ಹೇಗೆ ವರ್ತಿಸುತ್ತಾನೆ? ಹಿಂಸೆಯಾಗುತ್ತೆ’ ಎಂದು ಬೇಸರಿಸಿಕೊಂಡಿತು. ‘ಹೌದು ನಿನಗೆ ಆ ಆಯುಧಗಳ ನೋವನ್ನು ಸಹಿಸುವ ಶಕ್ತಿಯೇ ಇಲ್ಲ. ಆದರೆ ನಾನು, ನನಗೆ ಸುಂದರ ರೂಪ ಪಡೆಯಬೇಕಾದರೆ, ನೋವನ್ನು ಸಹಿಸುವ ಶಕ್ತಿಯೂ ಇರಬೇಕೆಂದು ಯೋಚಿಸಿ, ಎಲ್ಲಾ ನೋವುಗಳನ್ನು ಸಹಿಸಿದೆ. ಗೆಳೆಯಾ, ಪ್ರತಿಯೊಂದಕ್ಕೂ ಒಂದು ಬೆಲೆ ತೇರಬೇಕಾಗುತ್ತದೆ. ನೀನು ಅರ್ಧದಾರಿಯಲ್ಲೇ ಕೈಬಿಟ್ಟಿದ್ದರಿಂದ, ಜನರು ನಿನ್ನನ್ನು ತುಳಿಯುತ್ತಿದ್ದಾರೆಂದು ದೂರುವುದು ತಪ್ಪಾಗುತ್ತದೆ’ ಎಂದಿತು.

ನಮ್ಮ  ಹಾಗೆ. ಜೀವನವೆಂದರೆ ಒಂದು ರೀತಿಯ ಶಿಲ್ಪಿ ಇದ್ದಂತೆ ನಮಗೆ ಸುಂದರವಾದ ರೂಪ ಕೊಡುವ ಸಲುವಾಗಿ ಕಷ್ಟಗಳನ್ನು ಕೊಡುತ್ತದೆ. ಪ್ರಶ್ನೆಯೇನೆಂದರೆ, ಆ ಪ್ರಕ್ರಿಯೆಯಲ್ಲಿ ನೀವು ಅನುಭವಿಸಬೇಕಾದ ನೋವನ್ನು ಸಹಿಸುವ ಶಕ್ತಿ ಇದೆಯಾ ಎಂಬುವುದು. ನಿಮ್ಮ ಉತ್ತರ ಹೌದಾದರೆ, ನೀವು ಅದ್ಭುತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಯೋಗ್ಯವಾಗಿದ್ದೀರ ಎಂದರ್ಥ. ಇಲ್ಲವಾದಲ್ಲಿ ನೀವು ಕಾಲ್ತುಳಿತಕ್ಕೊಳಗಲು ಮಾತ್ರ ಯೋಗ್ಯರಾಗಿದ್ದೀರ ಎಂದರ್ಥ. ಹೀಗಾಗಿ ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ. ಸರಿಯಾಗಿ ಯೋಚಿಸಿ ನಿರ್ಧರಿಸಿ.

Tags

Related Articles

Leave a Reply

Your email address will not be published. Required fields are marked *

Language
Close