ಇನ್ನು ಮುಂದೆ ಸೇವಾ ಶುಲ್ಕಕ್ಕೂ ತೆರಿಗೆ

Posted In : ದೇಶ

ದೆಹಲಿ: ಆಹಾರ ವಸ್ತುಗಳ ಬಿಲ್ ಗಳ ಮೇಲೆ ಸೇವಾ ತೆರಿಗೆ ಕಡ್ಡಾಯವಲ್ಲ ಎಂದು ವರ್ಷಾರಂಭದಲ್ಲಿ ಹೇಳಿದ್ದ ಕೇಂದ್ರ ಸರಕಾರವು, ಇನ್ನು ಮುಂದೆ ಹೋಟೆಲುಗಳು ಸೇವಾ ಶುಲ್ಕಕ್ಕೂ ತೆರಿಗೆ ಪಾವತಿಸಬೇಕೆಂದು ಹೇಳಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು, ನೇರ ತೆರಿಗೆ ಕೇಂದ್ರ ಮಂಡಳಿಗೆ ಹೊಟೆಲುಗಳು ಗ್ರಾಹಕರಿಗೆ ವಿಧಿಸುವ ಸೇವಾ ಶುಲ್ಕವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದೆ.  ಮೂಲಗಳ ಪ್ರಕಾರ, ಹೊಟೆಲ್ ಉದ್ಯಮಿಗಳು ಸೇವಾ ಶುಲ್ಕವನ್ನು ಗ್ರಾಹಕರಿಂದಲೇ ಪಡೆದು, ಸಿಬ್ಬಂದಿ ವರ್ಗಕ್ಕೆ ಟಿಪ್ಸ್ ರೂಪ ದಲ್ಲಿ ನೀಡುತ್ತಿದ್ದು, ಇದನ್ನು ಬಿಳಿ ಕಾಗದದಲ್ಲಿ ನಮೂದಿಸಿ, ಆದಾಯದ ಮೂಲವನ್ನಾಗಿ ಪರಿಗಣಿಸಬೇಕೆಂದು ಸೂಚಿಸಿದೆ.

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಹೊಟೇಲ್ ಮತ್ತು ರೆಸ್ಟೋರೆಂಟ್ ಗಳು ತಾವು ವಿಧಿಸುವ ಬಿಲ್ ಗಳಲ್ಲಿ ಸೇವಾ ಶುಲ್ಕಕ್ಕಾಗಿ ಖಾಲಿ ಜಾಗವನ್ನು ಆಯ್ಕೆ ಎಂಬಂತೆ ಬಿಡಬೇಕು ಎಂದು ಟ್ವೀಟ್ ಮಾಡಿದ್ದಾರೆ. ಕಳೆದ ಏಪ್ರಿಲ್ 2017ರಲ್ಲಿ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳು ಗ್ರಾಹಕರಿಂದ ಸೇವಾ ಶುಲ್ಕ ಪಡೆಯಬಾರದೆಂದು ಸುತ್ತೋಲೆ ಹೊರಡಿಸಿತ್ತು.

 

One thought on “ಇನ್ನು ಮುಂದೆ ಸೇವಾ ಶುಲ್ಕಕ್ಕೂ ತೆರಿಗೆ

Leave a Reply

Your email address will not be published. Required fields are marked *

four + 13 =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top