ಒಂದು ಪಕ್ಷಕ್ಕೆ ಮತ ನೀಡಬೇಡಿ ಎನ್ನುವವರನ್ನು ಪ್ರಶ್ನಿಸಿಬಾರದೆ?

Posted In : ಸಂಗಮ, ಸಂಪುಟ

 – ದೇ. ವಿ. ಮಹೇಶ್ವರ ಹಂಪಿನಾಯ್ಡು

ಸುವರ್ಣಯುಗ ಕಂಡ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನಿಗೆ ಒಂದು ಅಪರೂಪದ ಬಿರುದು ಒಲಿದುಬಂದಿತ್ತು. ಅದು ಯವನರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬುದು. ಬೀದರ್‌ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಸುಲ್ತಾನನನ್ನು ಸದೆಬಡಿದು ಅದೇ ಗದ್ದುಗೆಗೆ ಸುಲ್ತಾನನನ್ನೇ ಪಟ್ಟಕ್ಕೆ ಕೂರಿಸಿ ಅಧೀನ ರಾಜನನ್ನಾಗಿ ಮಾಡಿದ ಸಹಿಷ್ಣುತೆಯ  ಮುಂದೆ ಸಾಮ್ರಾಜ್ಯದ ಅರವೀಡು ವಂಶದ ಕೊನೆಯ ದೊರೆ ಅಳಿಯ ರಾಮರಾಯನನ್ನು ಮೋಸದಿಂದ ಸೋಲಿಸಿ ರಾಮರಾಯನ ತಲೆಯನ್ನು ಕಡಿದು ಸೈನಿಕರಿಗೆ ಪ್ರದರ್ಶಿಸಿಲು ಕಾರಣವಾಗಿದ್ದು ವಿಜಯನಗರ ಸೈನ್ಯದಲ್ಲೇ ಇದ್ದ ಗಿಲಾನಿ ಬ್ರದರ್ಸ್ ಎಂಬ ಪರಮ ಅಸಹಿಷ್ಣು ಸುಲ್ತಾನ ಸಹೋದರರು.

ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಹೆಚ್ಚು ಅಪಾಯಕಾರಿ. ಹಾಗೆಯೇ ಹೊರದೇಶದ ಅಸಲಿ ಹುಟ್ಟು ಕ್ರಿಶ್ಚಿಯನ್‌ಗಳಿಗಿಂತಲೂ ದೇಶದೊಳಗಿನ ಅವಕಾಶವಾದಿ ಕನ್ವರ್ಟೆಡ್‌ಗಳು ಹೆಚ್ಚು ಅಪಾಯಕಾರಿಗಳು. ಭಾರತೀಯರು, ಅಂದರೆ ಹಿಂದೂಗಳೆನಿಸಿಕೊಂಡವರು ಇತಿಹಾಸದ ಯಾವ ಕಾಲಘಟ್ಟದಲ್ಲೂ ಏಕ  ಅನ್ಯಧರ್ಮಗಳ ಮೇಲೆ ಆಕ್ರಮಣ ಮಾಡಿದವರಲ್ಲ. ಧರ್ಮಾಂಧತೆಯಿಂದ ಭಯೋತ್ಪಾದನೆ ನಡೆಸಿದವರಲ್ಲ. ಅನ್ಯಧರ್ಮದವರನ್ನು ವಂಚಿಸಿ ಮತಾಂತರ ಮಾಡಿದ ಇತಿಹಾಸವಿಲ್ಲ. ದಾಳಿಗಾಗಿ ಬಂದ ಇಸ್ಲಾಂ ಧರ್ಮವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಅವರಿಗಾಗಿ ಎರಡು ದೇಶಗಳನ್ನು ಕಟ್ಟಿಕೊಟ್ಟ ದೇಶ ನಮ್ಮದು. ಇನ್ನು ವ್ಯಾಪಾರದ ಸೋಗಿನಲ್ಲಿ ಬಂದ ಕ್ರಿಶ್ಚಿಯನ್ ಆಕ್ರಮಣದ ಆಂಗ್ಲರಿಗಾಗಿ ಇಲ್ಲಿನ ಕೋಟ್ಯಂತರ ಹಿಂದೂ ನಾಗರಿಕರನ್ನೇ ಮತಾಂತರಗೊಳಿಸಲು ಅವಕಾಶ ನೀಡಿ ಇಬ್ಬರಿಗೂ ಇಲ್ಲಿನ ನೆಲ-ಜಲ-ಬೆಳೆಯನ್ನೂ ಕೊಟ್ಟು ಇಂದಿಗೂ ಸಹ ಹಿಂದೂಧರ್ಮದ ಮೇಲೆಯೇ ನಿರಂತರ ಭಯೋತ್ಪಾದನೆ ಮತ್ತು  ಮತಾಂತರಗಳನ್ನು ನಡೆಸಲು ಅವಕಾಶಮಾಡಿಕೊಟ್ಟು ಕುಳಿತಿರುವ ದೇಶ ನಮ್ಮದು.

ಇದಕ್ಕಿಂತಲೂ ಮಿಗಿಲಾದ ಪರಧರ್ಮ ಸಹಿಷ್ಣುದೇಶ ಜಗತ್ತಿನ ಯಾವ ಮೂಲೆಯಲ್ಲೂ  ಸಿಗದು.     ಇನ್ನು ಮುಖ್ಯ ವಿಚಾರಕ್ಕೆ ಬರೋಣ. ಒಂದು ತೆಲುಗು ಚಲನಚಿತ್ರದಲ್ಲಿ ಖಳನಟ, ಸನ್ನಿವೇಶವೊಂದರಲ್ಲಿ ಪತ್ರಿಕೋದ್ಯಮವನ್ನು ಐಟಂ ಗರ್ಲ್ ಎನ್ನುತ್ತಾನೆ. ಮತ್ತೊಂದು ಪತ್ರಕರ್ತನಾಗಿರುವ ನಾಯಕ ಮತ್ತೊಂದು ಸನ್ನಿವೇಶದಲ್ಲಿ ಆ ಖಳನಟನ ಮುಖವಾಡವನ್ನು ಸಾರ್ವಜನಿಕವಾಗಿ ಕಳಚಿ ಇಂದು ನಮಗೆ ಸಿಕ್ಕಿರುವ ಐಟಂ ಗರ್ಲ್ ನೀನೇ ಕಣೋ ಎಂದು ಹೇಳಿ ಮುಖಕ್ಕೆ ಉಗಿಯುತ್ತಾನೆ. ಈ  ನೆನಪಾಗಲು ಕಾರಣ ಆ ಖಳನಟನ ಪಾತ್ರ ವಹಿಸಿದ್ದು ಕನ್ನಡದ ಪ್ರಕಾಶ್ ರೈ ಅಲಿಯಾಸ್ ಕನ್ನಡೇತರ ಪ್ರಕಾಶ್ ರಾಜ್. ಎಂತಹ ಅದ್ಭುತ ನಟನೆ ಅನಿಸುವಂತೆ ಆ ಪಾತ್ರ ಮಾಡಿರುವ ಪ್ರಕಾಶ್ ರೈ ಅಪ್ರತಿಮ ಕಲಾವಿದ. ಯಾವುದೇ ಪಾತ್ರ ನೀಡಿದರೂ ಅದರ ಪರಕಾಯಪ್ರವೇಶ ಮಾಡುವ ನೈಜ ಕಲಾವಿದ. ಒಂದು ಕಾಲದ ಕನ್ನಡಿಗರ ಹೆಮ್ಮೆಯೂ ಹೌದು.

ದುರಂತವೆಂದರೆ ಈ ಖಳನಟ ಇಂದು ನಿಜಕ್ಕೂ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳಿಗೆ ಒಂದು ರೀತಿಯ ಐಟಂ ಗರ್ಲ್  ಹೋದ ಕಡೆಯಲ್ಲೆಲ್ಲಾ ಅರ್ಧ ಬೆಂದ ಮಡಕೆಯಂತೆ ಆಡುವ ಮಾತುಗಳಿಂದ ಪ್ರಜ್ಞಾವಂತರ ವಲಯದಲ್ಲಿ, ಸಾಮಾಜಿಕ ತಾಣಗಳಲ್ಲಿ ಕಾಮಿಡಿ ಕಿಲಾಡಿಯಾಗಿದ್ದಾರೆ. ವಿಶೇಷವೆಂದರೆ ಇಲ್ಲಸಲ್ಲದ ಟೀಕೆಗಳಿಂದಲ್ಲ, ಪ್ರಕಾಶ್  ವರ್ತನೆ-ಧೋರಣೆಯ ಎಡವಟ್ಟುಗಳಿಗೆ ಸಾರ್ವಜನಿಕರು ಸರಿಯಾದ ಪ್ರಶ್ನೆಗಳನ್ನೇ ಕೇಳುವುದರ ಮೂಲಕ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿದ್ದಾರೆ. ಮೊನ್ನೆ ಬೆಳಗಾವಿಯಲ್ಲಿ ಬಿಜೆಪಿ ಕ್ಯಾನ್ಸರ್, ಕ್ರಾಂಗ್ರೆಸ್ ಕೆಮ್ಮು, ಜೆಡಿಎಸ್ ನೆಗಡಿ ಎಂದು ಹೇಳಿದ್ದಾರಲ್ಲ ಇವರೇನು ಆಂಜನೇಯನ ಕೈಲಿರುವ ಸಂಜೀವಿನಿಯೇ? ಅಥವಾ ಸಂತ ಯೇಸು ಪ್ರಭುವೇ? ಸರಿಯಾಗಿ ಹೇಳಬೇಕೆಂದರೆ ಇಂತಹ  ಸಮಾಜದ ತೊಡೆಯ ಮೇಲಿನ ಕುರ ಹಾಗೂ ಮೂಲವ್ಯಾಧಿ ಇದ್ದಂತೆ.

ನಮ್ಮ ದೇಹದ ಭಾಗವನ್ನು ಬಳಸಿಕೊಂಡು ನಮಗೇ ನೋವು ಕೊಡುವ ಪೀಡೆ ರೋಗವಿದ್ದಂತೆ. ಸಹಿಸಿಕೊಳ್ಳಲೂ ಬೇಕು, ಅನುಭವಿಸಲೂ ಬೇಕು. ಮೂವತ್ತು ವರ್ಷಗಳ ಹಿಂದಿನ ಬಿಸಿಲು ಕುದುರೆ ಎಂಬ ಧಾರಾವಾಹಿಯಿಂದ ಪ್ರಕಾಶ್ ರೈ ಅವರಅಭಿನಯ ಜೀವನ ಆರಂಭವಾಗಿ ದೇಶದ ಹಲವಾರು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಹೆಮ್ಮೆಯ ನಟನಾಗಿ ಮೆರೆದು ಮೊನ್ನೆ ಗೌರಿ ಲಂಕೇಶ್ ಹತ್ಯೆಯಾದ ನಂತರ ಶವದ ಮುಂದೆ ನಿಂತು  ಮಾತುಗಳವರೆಗೂ ಇವರು ಯಾವ ಜಾತಿ, ಯಾವ ಧರ್ಮ, ಇವರ ವೈಯಕ್ತಿಕ ವಿಚಾರಗಳ ಕುರಿತು ಯಾವನೂ ತಲೆಕೆಡಿಸಿಕೊಂಡಿರಲಿಲ್ಲ. ಹಾಗೂ ಅದು ಬೇಕಿರಲೂ ಇಲ್ಲ. ಆದರೆ ಹತ್ಯೆಯಾದ ಜೀವದ ಅತೃಪ್ತ ಆತ್ಮ, ತೃಪ್ತಿಯಾಗುವವರೆಗೂ ಮೋಕ್ಷ ಪಡೆಯುವುದಿಲ್ಲ ಎನ್ನುತ್ತಾರಲ್ಲಾ ಹಾಗೆಯೇ ಗೌರಿ ಲಂಕೇಶ್ ಅವರ ಆಲೋಚನೆ, ಧೋರಣೆ, ಕಲ್ಪನೆ, ಭಾವನೆ ಇವುಗಳೆಲ್ಲಾ ಪಕ್ಕದಲ್ಲೇ ನಿಂತ್ತಿದ್ದ ಪ್ರಕಾಶ್ ರೈ ದೇಹವನ್ನು ಪ್ರವೇಶಿಸಿತೇನೋ ಎಂಬಂತೆ ಇವರ ವರ್ತನೆ ಅನಾವರಣಗೊಂಡಿದೆ.

ಪ್ರೀತಿಸುತ್ತಿದ್ದ ಅಭಿಮಾನಿ ವೃಂದವು ಹೋದ ಕಡೆಯಲ್ಲೆಲ್ಲಾ  ಅಜ್ಞಾನದ ಮಾತುಗಳಿಗೆ ಅಸಹನೆ ಪ್ರದರ್ಶಿಸುತ್ತಿದೆ. ಇದು ಅನುಭವಿ ಕಲಾವಿದನೊಬ್ಬನ ದುರಂತವೂ ಹೌದು. ನಮ್ಮ ವರನಟ ಡಾ.ರಾಜಣ್ಣನವರು ಬರಿಯ ನಾಲ್ಕನೇ ತರಗತಿ ಓದಿ ಹಲವಾರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ, ಪಕ್ವತೆ ಪಡೆದದ್ದು ಅವರಲ್ಲೊಬ್ಬ ಸಂತನನ್ನು, ಸಾತ್ವಿಕತೆಯ ವ್ಯಕ್ತಿತ್ವವನ್ನು ತುಂಬಿತ್ತು. ಆದರೆ ಬರಬರುತ್ತಾ ರಾಯರ ಕುದುರೆ ಕತ್ತೆಯಾಗುವಂತೆ ಪ್ರಕಾಶ್ ರೈ ಅವರ ಕಲಾನುಭವವು ಸಾರ್ವಜನಿಕ ನಗೆಪಾಟಲಿಗೆ ಈಡಾಗುತ್ತಿರುವುದು ಶೋಚನೀಯ. ಇವರ ವ್ಯಕ್ತಿತ್ವ ಹೀಗೇ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಕ್ಷೇತ್ರದಲ್ಲೂ  ಮೂಡಿಸಿ ಯಾವ ಚಿತ್ರದಲ್ಲೂ ಇವರಿಗೆ ಅವಕಾಶ ಕೊಡಲು ಹಿಂಜರಿಕೆಯಾಗಿ ಆಗ ನಿಜವಾದ ಅಸಹಿಷ್ಣುತೆಯ ಅನುಭವವಾದರೂ ಆಶ್ಚರ್ಯವಿಲ್ಲ.

ನಾಲ್ಕೈದು ದಶಕಗಳ ಕಾಲ ಅಭಿನಯರಂಗದಲ್ಲಿ ಪಳಗಿದ ಅನೇಕ ಕಲಾವಿದರು ಗಾಂಭೀರ್ಯದ ಗೆರೆ ಹಾಕಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಿದ್ದಾರೆ. ಆದರೆ ಪ್ರಕಾಶ್ ರೈ ಕಳೆದ ಹತ್ತು ತಿಂಗಳಿಂದ ಬಿಂಬಿಸಿಕೊಳ್ಳುವ ರೀತಿ ಮೂವತ್ತು ವರ್ಷಗಳ ಜನಪ್ರಿಯತೆಯನ್ನು ತಿಪ್ಪೆಗೆ ತಳ್ಳುತ್ತಿದೆ. ಒಂದು ಪಕ್ಷಕ್ಕೆ ಮತ ನೀಡಬೇಡಿ ಎಂದು ಸಾರುವ ಇವರ ಸಾಮಾಜಿಕ ಕಳಕಳಿಯನ್ನು ಒಪ್ಪಿಕೊಳ್ಳಬಹುದಾದರೂ ಇವರು  ಬೆಳೆದ ಕರ್ನಾಟಕದಲ್ಲಿ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕುಡಿಯುವ ನೀರಿಗೂ ಪಾಡು ಪಡುವ ದುಸ್ಥಿತಿ ಇದೆ, ಇವರ ಊರಿನ ಭಾಗದಲ್ಲೇ ಸರಣಿ ಹತ್ಯೆಗಳಾಗುತ್ತಿವೆ, ಲೋಕಾಯುಕ್ತವೆಂಬ ಯಂತ್ರ ಕೆಟ್ಟು ನಿಂತಿದೆ, ಇವರಿಗೆ ಆಶ್ರಯ ನೀಡಿದ ಆಂಧ್ರ-ತೆಲಂಗಾಣಗಳಲ್ಲೂ ಹಲವಾರು ಸಮಸ್ಯೆಗಳಿವೆ, ತಮಿಳುನಾಡಿನಲ್ಲಿ ಕಾವೇರಿಗಾಗಿ ನಟನಟಿಯರು ನಿರಶನ ಆರಂಭಿಸಿ ಕುಳಿತಿದ್ದಾರೆ…

ಇವುಗಳನ್ನೆಲ್ಲಾ ಬಿಟ್ಟು ಲೇವಡಿಗಾರನಂತೆ ಕ್ಯಾನ್ಸರ್ರು, ಕೆಮ್ಮು, ನೆಗಡಿ ಎಂದು ಮಾತನಾಡುವ ಇವರಿಗೆ ಆರೋಗ್ಯವಂತ ಪಕ್ಷವನ್ನೂ ತೋರಿಸುವ ಯೋಗ್ಯತೆಯಾದರೂ ಇದೆಯೇ ಎಂದು ನೋಡಿದರೆ  ಇಲ್ಲ. ಬಿಜೆಪಿಗೆ ಬೆಂಬಲಿಸಬೇಡಿ ಎನ್ನಲು ಇವರು ಯಾವ ಊರಿನ ದೊಣೆನಾಯಕ?.     ದೇಶದ ಇಪ್ಪತ್ತೊಂಬತ್ತು ರಾಜ್ಯಗಳಲ್ಲಿ ಇಪ್ಪತ್ತೆರಡರಲ್ಲಿ ಬಿಜೆಪಿ ಸರಕಾರವಿದೆ. ಅಂದರೆ ಅಷ್ಟೂ ರಾಜ್ಯದ ಮತದಾರರು ಮೂರ್ಖರೆ? ಕೋಮುವಾದಿಗಳೆ? ಒಬ್ಬ ದಲಿತ ವರ್ಗದ ರಾಷ್ಟ್ರೀಯ ಸ್ವಯಂ ಸೇವಾಸಂಘದ ಬೆಂಬಲಿತರಾದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ, ದೇಶದ ಪ್ರಥಮ ಪ್ರಜೆಯಾಗಿ  ಸೂಚಿಸಿದ್ದು ಇದೇ ಬಿಜೆಪಿ ಪಕ್ಷ ಎಂಬ ಸಣ್ಣ ಪರಿಜ್ಞಾನವೂ ಇಲ್ಲವೆ? ಇನ್ನು ಆರ್‌ಎಸ್‌ಎಸ್ ಎಂಬ ಸಂಘಟನೆ ವಿಶ್ವಮಟ್ಟದ ಖ್ಯಾತಿಯನ್ನು ಪಡೆದಿದೆ.  ನೆಲವನ್ನು. ನಮಗೆ ಜನ್ಮನೀಡಿದ ಭೂಮಿಯನ್ನು ಹೆತ್ತತಾಯಿಂತೆ ಕಂಡು ಅಭಿಮಾನವಿರಿಸು, ದೇಶದ ಪ್ರತಿ ನಾಗರಿಕರನ್ನು ಜಾತ್ಯತೀತವಾಗಿ, ಧರ್ಮಾತೀತವಾಗಿ ಕಾಣು ಎನ್ನುವುದೇ ಆರ್‌ಎಸ್‌ಎಸ್ ತತ್ವ.

ಎಲ್ಲರನ್ನೂ ಸಹೋದರರಂತೆ ಭಾವಿಸುವ ಸನ್ನಡತೆ, ಸದ್ಭಕ್ತಿ, ಸದಾಚಾರ, ದೇಶಾಭಿಮಾನವನ್ನು ಅದು ಬಿತ್ತುತ್ತದೆಯೇ ಹೊರತು, ದೇಶದ್ರೋಹಿಗಳನ್ನು ಬೆಂಬಲಿಸು, ಅವಕಾಶಕ್ಕಾಗಿ ತಾಯಿ ಸಮನಾದ ಧರ್ಮವನ್ನೇ ತೊರೆದು ಅದನ್ನೇ ತೆಗಳು ಎಂದು ಪ್ರಚೋದಿಸುವುದಿಲ್ಲ. ಇದನ್ನೆಲ್ಲಾ ಬರೆಯಲು ಸ್ವಯಂಸೇವಕನೂ ಆಗಿರಬೇಕಿಲ್ಲ. ಇಡೀ ವಿಶ್ವವೇ ನಮ್ಮ ದೇಶದ ಪ್ರಧಾನಿಯನ್ನು ಕೊಂಡಾಡಿ ಅವರನ್ನು ಅನುಸರಿಸುತ್ತಿದೆ.  ಎಲ್ಲಾ  ಕ್ಷೇತ್ರದ ಸಾಧಕರೂ ಪಕ್ಷಭೇದವಿಲ್ಲದೆ ಪ್ರಧಾನಿಗಳನ್ನು ಅಭಿನಂದಿಸಿ ಹಾರೈಸಿ ಹೆಮ್ಮಪಡುತ್ತಿದೆ. ಅಂತಹ ಪದವಿಗೂ ಗೌರವ ತೋರದೆ ಹೀನಾಯವಾಗಿ ನಿಂದಿಸುವ ಪ್ರಕಾಶ್ ಅಂಥವರನ್ನು ಯಾವ ಪ್ರಜ್ಞಾವಂತನೂ, ದೇಶಪ್ರೇಮಿಯೂ ಗಂಭೀರವಾಗಿ ಪರಿಗಣಿಸುವುದಿಲ್ಲ.

ಆದರೆ ಒಂದು ಪಕ್ಷದ ವಿರುದ್ಧ ಸಂದೇಶ ನೀಡುವ ಅವರ ನೈತಿಕತೆಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬನಿಗೂ ಇದೆ.  ಒಂದು ಪಕ್ಷಕ್ಕೆ ಬೆಂಬಲಿಸಬೇಡಿ ಮತ ನೀಡಬೇಡಿ ಎಂದು ಪ್ರಚಾರ ಮಾಡುವ ನಿಮ್ಮ ಮಾತನ್ನು ಕೇಳುವ ಅವಿವೇಕಿಗಳಿದ್ದರೆ ರಾಜಕೀಯ ಪಕ್ಷಗಳಿಗೆ ಹಣ-ಹೆಂಡ-ಆಮಿಷಗಳನ್ನು ಹಂಚುವ  ಇರುತ್ತಿರಲಿಲ್ಲ ಅಲ್ಲವೆ ಪ್ರಕಾಶ್? ಪ್ರಚಾರ ವೇದಿಕೆಗಳಲ್ಲಿ ಇಂತಹವರನ್ನು ನಂಗಾನಾಚ್‌ನಂತೆ ಬಳಸಿಕೊಂಡು ಮತಪಡೆದು ಗೆಲ್ಲಬಹುದಿತ್ತು. ಸಮಾಧಾನದ ಸಂಗತಿ ಎಂದರೆ ಬಿಜೆಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಪಕ್ಷಗಳೂ, ನಾಯಕರುಗಳೂ ಇಂತಹವರಿಗೆ ಕ್ಯಾರೇ ಎನ್ನುತ್ತಿಲ್ಲ. ಏಕೆಂದರೆ ಅವುಗಳಿಗೂ ಸಿದ್ಧಾಂತ-ನೈತಿಕತೆಗಳಿವೆ. ಯಾವುದನ್ನು ಎಲ್ಲೆಲ್ಲಿ ಬಿಡಬೇಕೆಂಬ ಸಾಮಾನ್ಯ ಜ್ಞಾನ ಅವರಿಗೂ ಇದೆ.

ಪ್ರಕಾಶ್ ರೈ ಅವರಂತಹ ಎಂಬ ಅವಕಾಶವಾದಿ ಮತ್ತು ಅಸಮರ್ಥ ವ್ಯಕ್ತಿಗಳ ಮಾತಿಗೆ, ಮೂರು ಕಾಸಿನ ಮಾನವಂತರಿಗೆ ಮರುಳಾಗಬೇಡಿ, ಜೋಕರ್‌ಗಳ ಮಾತಿಗೆ ಕಿವಿಗೊಡದೆ ಸಮರ್ಥ ಹಾಗೂ  ನೆಲ-ಜಲ-ಜನಮನ ಪರಂಪರೆ, ದೇಶಪ್ರೇಮ ಹೊಂದಿರುವ ಯಾವುದೇ ಪಕ್ಷದ ಯಾವುದೇ ಅಭ್ಯರ್ಥಿಗೆ ಮತನೀಡಿ ಎಂದು ಕರೆ ನೀಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿ ಪ್ರಜೆಗೂ ಇದೆ. ಇಂತಹ ದನಿಗಳೇ ಸಾಮಾಜಿಕ ತಾಣಗಳಲ್ಲಿ ಮೊಳಗುತ್ತಿರುವುದು. ಕನ್ನಡಿಗರು ವಿವೇಕವಂತರು. ಜಿಗ್ನೇಶ್, ತುಕ್ಡೇ ಗ್ಯಾಂಗ್‌ನಂತಹ ದೇಶವಿರೋಧಿ ಮತ್ತು ಸಾಮಾಜಿಕ ಆತಂಕವಾದಿಗಳನ್ನು ಸಿನಿಮಾದ ಐಟಂ ಗರ್ಲ್‌ನಂತೆ ಕಂಡು ಮುನ್ನಡೆಯುತ್ತಾರೆಯೇ ಹೊರತು ಇವರಿಂದ ಪ್ರಚೋದನೆಗೆ ಒಳಗಾಗುವಷ್ಟು ಹೆಡ್ಡರಲ್ಲ. ಆದರೂ ಪುರಂದರದಾಸರು ಹೇಳಿರುವಂತೆ ‘ನಿಂದಕರಿರಬೇಕಯ್ಯಾ ನಿಂದಕರಿರಬೇಕು’.ಇಂತಹ ಆಕೃತಿಗಳ ವಿಕೃತಿಗಳು ಇದ್ದರೇನೇ  ಆಳುವವರು ಎಚ್ಚರದಿಂದ ಇರುತ್ತಾರೆ.

ಹಿಂದೆಲ್ಲಾ ಊರು ಮೈಮರೆತು ನಿದ್ರಿಸುತ್ತಿರುವಾಗ ಮಧ್ಯರಾತ್ರಿಯಲ್ಲಿ ಗೂರ್ಖಾಗಳು ನೆಲ ಬಡಿದು ಎಚ್ಚರಿಸುತ್ತಿದ್ದರು. ಈಗ ಸಮಾಜದಲ್ಲಿ ಮೂರ್ಖರು ತಮ್ಮ ತಲೆ ಬಡಿದುಕೊಂಡು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರು, ಗಾಂಧೀಜಿ, ನೇತಾಜಿ, ಡಾ. ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್, ತಿಲಕರು, ಅಬ್ದುಲ್ ಕಲಾಂ ರಂತಹ ಅನೇಕ ಮಹನೀಯರು ಸಮಾಜದ ಅಭ್ಯುದಯಕ್ಕೆ ಎಂತಹವರು ನಮ್ಮ ದೇಶವನ್ನು ಆಳಿದರೆ ಒಳಿತು ಎಂಬುದನ್ನು ಸಾರಿಹೋಗಿದ್ದಾರೆ. ನಮಗೆ ಅಷ್ಟು ಪ್ರಜ್ಞೆ, ವಿವೇಕವಿದ್ದರೆ ಸಾಕು.  ಅಸಂಬದ್ಧ  ಆಕೃತಿಗಳ ಅವಶ್ಯಕತೆಗಳಿಲ್ಲ.

Leave a Reply

Your email address will not be published. Required fields are marked *

nine + two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top