About Us Advertise with us Be a Reporter E-Paper

ಗುರು

ರುದ್ರಾಂಶ ಸಂಭೂತ ಶ್ರೀ ಶ್ರೀ ಸತ್ಯಧರ್ಮತೀರ್ಥರ 188ನೇ ಆರಾಧನೆ

ನಳಿನಿ ಅನಂತ ಕಲ್ಲಾಪುರ

ಪುರಾಣೋಕ್ತ ಪ್ರಸಿದ್ದ ಶ್ರೀ ನರಸಿಂಹ ಕ್ಷೇತ್ರವೇ ಕೂಡಲಿಯಿಂದ ಕೇವಲ ಕಿ.ಮಿ. ಸಾಗಿದರೆ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ ಮೂಲ ಬೃಂದಾವನ ಕ್ಷೇತ್ರ ಶ್ರೀಹೊಳೆಹೊನ್ನೂರು ಕಾಣಸಿಗುತ್ತದೆ. ಮಹಾ ಸಂಸ್ಥಾನ ಶ್ರೀ ಮದುತ್ತರಾಧಿ ಮಠದ ಪರಂಪರೆ ಯಲ್ಲಿ ಶ್ರೀ ಮದಾಚಾರ್ಯರ  ಇಪ್ಪತ್ತೆಂಟನೆಯ ಯತಿ ಶ್ರೇಷ್ಠರೂ, ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯ ಧರ್ಮತೀರ್ಥರು ಹೊಳೆಹೊನ್ನೂರು ಕ್ಷೇತ್ರದಲ್ಲಿ ವೃಂದಾವಸ್ಥ ರಾಗಿದ್ದಾರೆ. 33 ವರ್ಷಗಳು (1797-1830) ಸರ್ವಜ್ಞ ಪೀಠವನ್ನು ಅಲಂಕರಿಸಿದ ವೈಷ್ಣವ ವೇದಾಂತದ ರಸಋಷಿಗಳ ಸಮೂಹದಲ್ಲಿ ಇವರು ಪ್ರಾತಃ ಸ್ಮರಣೀಯರು. ಶ್ರೀಪಾದಂಗಳವರು 19ನೆಯ ಶತಮಾನದ ಅತ್ಯಂತ ಪ್ರಮುಖ ಗ್ರಂಥಕಾರರೆಂದೂ, ತಪಸ್ಸು, ಜ್ಞಾನ, ವೈರಾಗ್ಯಗಳ ತ್ರಿವೇಣಿ ಸಂಗಮ ವಾಗಿದ್ದರೆಂದು, ಅತ್ಯುತ್ತಮ ಚಿತ್ರಕಾರ ರೂ ಆಗಿದ್ದರೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಸತ್ಯಧರ್ಮತೀರ್ಥರ ಪೂರ್ವಾ ಶ್ರಮದ  ಶ್ರೀ ಪುರುಷೋ ತ್ತಮಾಚಾರ್ಯರು. ತಂದೆ ಶ್ರೀ ಮುದ್ಗ ಲಾಚಾರ್ಯ ಮತ್ತು ತಾಯಿ ವಿದುಷಿ ಜೀವೂಬಾಯಿಯರಿಗೆ ಕ್ರಿ.ಶ. 1749ರ ಶುಕ್ಲ ಸಂವತ್ಸರದ ಪುಷ್ಯಮಾಸ ಕೃಷ್ಣ ಪಕ್ಷ ಷಷ್ಠಿ ತಿಥಿಯಲ್ಲಿ ಜ್ಞಾನಿ ಶ್ರೇಷ್ಠರಾದ ಶ್ರೀ ಪುರುಷೋತ್ತಮಾಚಾರ್ಯರು ಅವತರಿಸಿದರು. ಇವರು ಜನಿಸಿದ ಮನೆತನ ನವರತ್ನ. ಇವರ ಪೂರ್ವಿಕರೆಲ್ಲರೂ ಸಕಲ ವೇದಾಂತ ಶಾಸ್ತ್ರ ಪಾರಂಗತರಾಗಿದ್ದು, ವಾದಮಲ್ಲರಾಗಿದ್ದು ದಿಗ್ವಿಜಯ ಸಾಧಿಸುತ್ತಿದ್ದರೆಂದು ಶ್ರೀ ಸತ್ಯಧರ್ಮ ಗುರು ಚಂದ್ರ ಕಲೋದಯ ಮಹಾಕಾವ್ಯಮ್ ಎಂಬ ಮಹಾ ಕಾವ್ಯದಲ್ಲಿ ಉಲ್ಲೇಖ ವಿದೆ.

  ಪೂರ್ವಾಶ್ರಮದ ವೃತ್ತಾಂತ

ಶ್ರೀ ಪುರುಷೋತ್ತಮಾಚಾರ್ಯರಿಗೆ ಸತ್ಕುಲ ಪ್ರಸೂತೆಯಾದ ವಿದೂಷಿ ನರಸೂಬಾಯಿ ಎಂಬ ಕನ್ಯಾಮಣಿಯೊಂದಿಗೆ ವಿವಾಹವಾಯಿತು. ಇವರ ಸಾಂಸಾರಿಕ ಜೀವನವು ಮಧುರವಾಗಿತ್ತು. ಪಾಠ ಪ್ರವಚನ ಮಾಡಿಕೊಂಡು ಸವಣೂರಿನಲ್ಲಿ ನೆಲೆಸಿದ್ದರು. ಅವರ ಉನ್ನತ ಅಧ್ಯಯನವು ಶ್ರೀ ಸತ್ಯಬೋಧತೀರ್ಥರಲ್ಲಿ ನಡೆಯಿತು. ಸುಪುತ್ರನು ಜನಿಸಿದಾಗ ಆತನಿಗೆ ಶ್ರೀ ಸತ್ಯ ಬೋಧಾಚಾರ್ಯನೆಂದು ಶ್ರೀ ಪಾದಂಗಳವರ ಹೆಸರನ್ನೇ ಇಟ್ಟು ನಾಮಕರಣವನ್ನು ಮಾಡಿದರು.

ಎಷ್ಟೇ ವಿದ್ಯಾವಂತರೂ, ಬುದ್ದಿವಂತ ರಾಗಿದ್ದರೂ, ಆರ್ಥಿಕ ಸ್ಥಿತಿಯು ಅಷ್ಟು ಉತ್ತಮವಾಗಿರಲ್ಲಿಲ್ಲ. ಜೀವನ ನಿರ್ವಹಣೆಯೂ ದುಸ್ತರವಾಗತೊಡಗಿತು.  ಸಲಹೆಯಂತೆ ಕ್ಷೇತ್ರಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಿ ಅವರ ಅನುಗ್ರಹವನ್ನು ಸಂಪಾದಿಸಿದರು. ಮುಂದೆ ಸಕಲ ಕಲ್ಯಾಣ ಪ್ರಾಪ್ತವಾಗು ವುದೆಂದು ಸ್ವಪ್ನ ಸೂಚನೆಯಾಯಿತು. ಅಲ್ಲಿಂದ  ಸೋಂದ ಕ್ಷೇತ್ರಕ್ಕೆ ಹೋಗಿ ಶ್ರೀ ವಾದಿರಾಜ ಸ್ವಾಮಿಗಳ ಸೇವೆಯನ್ನು ಮಾಡಿ ಅವರ ಅನುಗ್ರಹವನ್ನು ಸಹ ಸಂಪಾದಿಸಿಕೊಂಡರು.

ಶ್ರೀಸತ್ಯವರ ತೀರ್ಥರು ಶ್ರೀ ಪುರುಷೋತ್ತಮಾಚಾರ್ಯ ರಿಗೆ ಕ್ರಿ.ಶ. 1797ರ ಪಿಂಗಳ ನಾಮ ಸಂವತ್ಸರದ ಶ್ರಾವಣ ಶುದ್ದ ಸಪ್ತಮಿಯ ದಿನ ಮಂತ್ರೋಪದೇಷ ಮಾಡಿ ಪಟ್ಟಾಭಿ ಷೇಕ  ನೂತನ ಶ್ರೀ ಪಾದಂಗಳವರನ್ನು ಶ್ರೀ ಸತ್ಯ ಧರ್ಮತೀರ್ಥರೆಂದು ನಾಮಕರಣಮಾಡಿದರು. ಶ್ರೀಸತ್ಯ ನಿಧಿತೀರ್ಥರ ಭವಿಷ್ಯದ ನುಡಿಯೂ, ರಾಯರು ಆಚಾರ್ಯರಿಗೆ ಕನಸಿನಲ್ಲಿ ಕೊಟ್ಟ ಸೂಚನೆ ಫಲಪ್ರದ ವಾಯಿತು.

 ಪ್ರಾಣದೇವರ ಪೂಜೆ

ಶ್ರೀ ಗುರುಭಕ್ತ ವಿಠಲ ಎಂಬ ಭಕ್ತ ನೊಬ್ಬ ಸಮರ್ಪಿಸಿದ ಪ್ರಾಣದೇವರನ್ನು ಇವರು ಪೂಜಿಸಿದರು. ಶ್ರೀ ಶ್ರೀ ಸತ್ಯ ಧರ್ಮತೀರ್ಥರು ನೂರಾರು ಶಿಷ್ಯರಿಗೆ ಪಾಠ ಪ್ರವಚನವನ್ನು ಮಾಡುತ್ತಾ ದಕ್ಷಿಣ ಭಾರತದ ಅನೇಕ ಮುಖ್ಯಸ್ಥಳಗಳನ್ನು ಸಂದರ್ಶಿಸಿದರು. ಹೊಳೆನರಸೀಪುರ ಇವರ ಮುಖ್ಯಕಾರ್ಯ ಕ್ಷೇತ್ರವಾಗಿತ್ತು. ಶ್ರೀ  ಸತ್ಯಧರ್ಮತೀರ್ಥರು ಕ್ರಿ.ಶಿ. 1830ರಲ್ಲಿ ಶ್ರಾವಣ ಬಹುಳ ತ್ರಯೋದಶಿ ಅಂದು ಹೊಳೆ ಹೊನ್ನೂರಿನಲ್ಲಿ ವೃಂದಾವಸ್ಥರಾದರು. ಶ್ರೀ ಪಾದಂಗಳವರ ವೃಂದಾವನದ ಕೂರ್ಮ ಪೀಠದ ಮುಂದೆ ಸ್ವಯಂ ವ್ಯಕ್ತವಾದ 2 ಉದ್ಭವ ಶಿವಲಿಂಗಗಳಿವೆ.

 ವೃಂದಾವನ ಮಹಿಮೆ

ಶ್ರೀ ಶ್ರೀ ಸತ್ಯಧರ್ಮತೀರ್ಥರ ವೃಂದಾವನದ ಸೇವೆ ಯನ್ನು ಶ್ರದ್ದಾ ಭಕ್ತಿಯಿಂದ ಮಾಡುವವರಿಗೆ ಉತ್ಕೃಷ್ಟವಾದ ಫಲ ದೊರೆಯುವುದು. ಒಮ್ಮೆ ಹೊಳೆಹೊನ್ನೂರು ಗ್ರಾಮ ವನ್ನು ದೋಚುವ ಉದ್ದೇಶದಿಂದ ದರೋಡೆಕೋರರ ಗುಂಪು ಧಾವಿಸಿ ಬಂದಾಗ ಅವರ ಕಣ್ಣಿಗೆ ಆಯುಧ ಪಾಣಿಗಳಾದ  ಗುಂಪು ಎಲ್ಲಾ ಕಡೆ ಕಂಡು, ಭಯಭೀತರಾದ ದರೋಡೆಕೋರರು ಆ ಗ್ರಾಮದಿಂದ ಪಲಾಯನಗೊಂಡ ವಿಚಾರವನ್ನು ಕಲ್ಲಾಪುರದ ಶ್ರೀ ರಾಮ ಚಂದ್ರಾಚಾರ್ಯರು ತಮ್ಮ ಮಹಾಕಾವ್ಯದಲ್ಲಿ ಬಣ್ಣಿಸಿದ್ದಾರೆ.

ಇಂತಹ ಮಹಿಮೋಪೇತರ 188ನೇ ಆರಾಧನೆ ಸೆಪ್ಟೆಂಬರ್ 5, 7 ಮತ್ತು 8ರಂದು ಹೊಳೆಹೊನ್ನೂರಿನ ಶ್ರೀ ಶ್ರೀ ಸತ್ಯ ಧರ್ಮತೀರ್ಥರ ಮೂಲ ಬೃಂದಾವನ ಸನ್ನಿಧಿಯಲ್ಲಿ ನಡೆಯುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close