About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ರಾಹುಲ್‌ ವರ್ತನೆ ಖಂಡಿಸಿದ್ದಕ್ಕೆ ತನ್ನ ವಕ್ತಾರನನ್ನು ಉಚ್ಛಾಟಿಸಿದ ಆರ್‌ಜೆಡಿ

ಪಟನಾ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ, ಸಂಸತ್ತಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯ ಅಪ್ರಬುದ್ಧ ನಡವಳಿಕೆಯನ್ನು ಖಂಡಿಸಿದ ಕಾರಣಕ್ಕೆ ತನ್ನ ರಾಷ್ಟ್ರೀಯ ವಕ್ತಾರ ಶಂಕರ್‌ ಚರಣ್‌ ತ್ರಿಪಾಠಿರನ್ನು ಆರ್‌ಜೆಡಿ ವಜಾಗೊಳಿಸಿದೆ.

“ಪಕ್ಷ ವಿರೋಧಿ” ಕೆಲಸ ಮಾಡಿದ ಕಾರಣಕ್ಕೆ ತ್ರಿಪಾಠಿರನ್ನು ಉಚ್ಛಾಟಿಸಲಾಗಿದೆ ಎಂದು ಆರ್‌ಜೆಡಿ ಹೇಳಿಕೊಂಡಿದೆ. ಈ ವಿಚಾರವಾಗಿ ಪತ್ರ ಬಿಡುಗಡೆ ಮಾಡಿದ ಆರ್‌ಜೆಡಿ ಮಹಾ ಕಾರ್ಯದರ್ಶಿ ಕಮರ್‌ ಆಲಂ ಮಾತನಾಡಿ, “ಶಂಕರ್‌ ಚರಣ್‌ ತ್ರಿಪಾಠಿರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ತೆರವುಗೊಳಿಸಲಾಗಿದೆ. ಅಲ್ಲದೇ ಪಕ್ಷದ ಸದಸ್ಯತ್ವವನ್ನೂ ಕಿತ್ತೊಗೆಯಲಾಗುವುದು” ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಅವಿಶ್ವಾಸ ಮತಯಾಚನೆ ವೇಳೆ ನಡೆದ ಚರ್ಚೆ ವೇಳೆ, ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಅಪ್ಪಿಕೊಂಡು ಬಳಿಕ ಕಣ್ಣು ಮಿಟುಕಿಸಿದ್ದ ರಾಹುಲ್‌ ಗಂಧಿ ವರ್ತನೆಯನ್ನು ತ್ರಿಪಾಠಿ ಖಂಡಿಸಿದ್ದರು. ಗಾಂಧಿ ನಡವಳಿಕೆಯು ಅಪ್ರಬುದ್ಧತೆಯಿಂದ ಕೂಡಿದ್ದು, ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ತನ್ನನ್ನು ತಾನು ಕರೆದುಕೊಳ್ಳುವ ವ್ಯಕ್ತಿಯಿಂದ ನಿರೀಕ್ಷುವಂಥ ವರ್ತನೆ ಅದಲ್ಲ ಎಂದು ಹೇಳಿದ್ದರು.

ಇದೇ ಸಂದರ್ಭ ರಾಹುಲ್‌ ಭಾಷಣವನ್ನು ಅದ್ಭುತ ಎಂದು ಆರ್‌ಜೆಡಿ ನಾಯಕ ಹಾಗು ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್ ಯಾದವ್‌ ಪುತ್ರ ತೇಜಸ್ವಿ ಯಾದವ್‌ ಟ್ವೀಟ್‌ ಮಾಡಿದ್ದರು.

ಈ ಹಿಂದೆ ರಾಹುಲ್‌ ಗಾಂಧಿಗೆ ವಿದೇಶೀ ರಕ್ತವಿದ್ದು, ತನ್ನ ತಂದೆಯ ವರ್ಚಸ್ಸಿರದ ಕಾರಣ ಆತನ ಪ್ರಧಾನಿಯಾಗಲು ಅಸಮರ್ಥ ಎಂದಿದ್ದ ತನ್ನ ಬಿಎಸ್‌ಪಿಯ ವರಿಷ್ಠ ಜೈಶಂಕರ್‌ ಸಿಂಗ್‌ರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಕಿತ್ತೊಗೆದಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close