ರಸ್ತೆ ಅಪಘಾತ: ಮೂವರಿಗೆ ಗಾಯ

Posted In : ದಕ್ಷಿಣ ಕನ್ನಡ, ರಾಜ್ಯ

ಮಂಗಳೂರು: ರಾ.ಹೆ. ೬೬ರ ಮುಲ್ಕಿ ಸಮೀಪದ ಕೋಲ್ನಾಡು ಬಳಿ ಲಾರಿ, ಕಂಟೈನರ್ ಮತ್ತು ಟಾಟಾ ಸುಮೋ ನಡುವೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕಂಟೈನರ್ ಚಾಲಕ ತಮಿಳುನಾಡು ನಿವಾಸಿ ವೆಂಕಟೇಶ್ (52) ಹಾಗೂ ಲಾರಿ ಚಾಲಕ ಹಾಗೂ ಸಹಾಯಕ ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಪಡುಬಿದ್ರೆ ಕಂಪನಿಯ ಸರಕುಗಳನ್ನು ಕೊಂಡೊಯ್ಯುತ್ತಿದ್ದ ಕಂಟೈನರ್‌ ಪುಣೆಯಿಂದ ಮಂಗಳೂರು ಕಡೆಗೆ ಈರುಳ್ಳಿ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ೧೦ ಅಡಿ ಗುಂಡಿಗೆ ಬಿದ್ದಿದೆ. ಲಾರಿ ಚಾಲಕ ಬ್ರೇಕ್ ಹಾಕಿದಾಗ ಹಿಂದೆ ಇದ್ದ ಟಾಟಾ ಸುಮೋ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಲಾರಿ ಚಾಲಕ ಸಹಿತ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಅಪಘಾತದಿಂದ ಟಾಟಾ ಸುಮೋ ವಾಹನಕ್ಕೆ ಹಾನಿಯಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.

Leave a Reply

Your email address will not be published. Required fields are marked *

18 − 16 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top