About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

‘ನ್ಯಾಷನಲ್‌ ಹೆರಾಲ್ಡ್‌’ ವಿರುದ್ಧ 5,000 ಕೋಟಿ ರೂ. ಮಾನನಷ್ಟ ಮೊಕದ್ದಮೆ

ಅಹಮದಾಬಾದ್‌: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಕಷ್ಟ ಎದುರಾಗಿದೆ. ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಬಗ್ಗೆ ಟೀಕಿಸಿ ವರದಿ ಮಾಡಿದ್ದ ಕಾಂಗ್ರೆಸ್‌ ಒಡೆತನದ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆ ವಿರುದ್ಧ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ 5000 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವ 10 ದಿನಗಳ ಮುನ್ನ, ಅನಿಲ್‌ ಅಂಬಾನಿ ಅವರು ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆ ಸ್ಥಾಪಿಸಿದ್ದರು ಎಂಬ ತಲೆಬರಹದ ಸುದ್ದಿಯನ್ನು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಿಸಿತ್ತು. ಈ ಸುದ್ದಿಯಿಂದಾಗಿ ತಮ್ಮ ಸಂಸ್ಥೆಗೆ ಸರ್ಕಾರದ ಉದ್ಯಮ ಲಾಭ ಮಾಡಿಕೊಟ್ಟಿದೆ ಎಂಬ ತಪ್ಪು ಸಂದೇಶವನ್ನು ಜನರಿಗೆ ರವಾನಿಸಿದಂತೆ ಆಗಿದೆ. ಇದರಿಂದ ತಮ್ಮ ಸಂಸ್ಥೆ ಮೇಲೆ ಋುಣಾತ್ಮಕ ಪರಿಣಾಮವಾಗಲಿದೆ ಎಂದು ರಿಲಯನ್ಸ್‌ ಗ್ರೂಪ್‌ ಆರೋಪಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close