About Us Advertise with us Be a Reporter E-Paper

ಅಂಕಣಗಳು

ಕೇರಳದಲ್ಲಿ ಆರೆಸ್ಸೆಸ್ ಕೈಗೊಂಡ ಪರಿಹಾರ ಕಾರ್ಯ ಸ್ತುತ್ಯರ್ಹ

ಪ್ರಚಲಿತ: ರಾಹುಲ್ ಹಜಾರೆ

ಕೇರಳ ಸದ್ಯದ ಮಟ್ಟಿಗೆ ತತ್ತರಿಸಿ ಹೋಗಿದೆ.  ದೇವರ  ಎಂದು ಕರೆಸಿಕೊಳ್ಳುವ ಕೇರಳ ಯಾವತ್ತೂ ಶಾಂತವಾಗಿ ಇರಲೇ ಇಲ್ಲ. ದಿನ ಬೆಳಗಾದರೆ ಇ ಮತ್ತು ್ಕಖಖನವರ ಹೊಡೆದಾಟ ಇದ್ದೇ ಇತ್ತು. ಹಲವಾರು  ್ಕಖಖ ಕಾರ್ಯಕರ್ತರನ್ನು ರಾಜಕೀಯ ಪ್ರೇರಿತ ಜನ ಕೊಂದು ಹಾಕಿದರು. ್ಕಖಖ ಹಿಂಸೆಯನ್ನು ಸಹಿಸಿಕೊಳ್ಳುವುದು ಇದೇ ಮೊದಲು ಅಲ್ಲ ಕೊನೆಯೂ ಅಲ್ಲ. ಚಿನ್ನವೂ ಸುಟ್ಟಷ್ಟು ಶುದ್ಧವಾಗುತ್ತದೆ ಎಂಬಂತೆ ಆರೆಸ್ಸೆಸ್ ಅವಮಾನ ಅಪಮಾನಗಳನ್ನು ಸಹಿಸಿದ ಮೇಲೂ ಮೈಕೊಡವಿ ನಿಂತಿತು. ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿ ಎಲ್ಲರಿಗಿಂತ ಮೊದಲು ಬಂದು ಸೇರುವವರು  ಸ್ವಯಂ ಪ್ರೇರಿತರಾಗಿ ಕೆಲಸದಲ್ಲಿ ತೊಡಗಿಕೊಳ್ಳುವವರು ಆರೆಸ್ಸೆಸ್ ಸ್ವಯಂ ಸೇವಕರು. ಭೂಕಂಪ, ಭೂ ಕುಸಿತ, ಪ್ರವಾಹ ಹೀಗೆ ಯಾವ ಪ್ರಾಕೃತಿಕ ವೈಪರೀತ್ಯಗಳು ಕಂಡು ಬಂದರೂ ಘಟನಾ ಸ್ಥಳಕ್ಕೆ ಮೊದಲು ಧಾವಿಸುವವರು ಆರೆಸ್ಸೆಸ್ ಕಾರ್ಯಕರ್ತರು.

ಕೇರಳದ ಇತಿಹಾಸವನ್ನು ಸ್ವಲ್ಪ ಮೆಲುಕು ಹಾಕಲೇಬೇಕು. ಕೇರಳದ ಕಣ್ಣೂರಿನ ಆರೆಸ್ಸೆಸ್ ಕಾರ್ಯಾಲಯಕ್ಕೊಮ್ಮೆ ಹೋಗಿ ನೋಡಿದರೆ ಸಾಲು ಸಾಲು ಕೊಲೆಯಾದ  ಸ್ವಯಂ ಸೇವಕರ ಫೋಟೋಗಳೆ ಸಿಗುತ್ತವೆ. ಅಬಾಲವೃದ್ಧರಾಗಿ  ಮೀಸೆ ಚಿಗುರದ ಹುಡುಗನಿಂದ ಹಣ್ಣು ಹಣ್ಣು ಮುದುಕರವರೆಗೆ ಕೊಲೆಯಾಗಿದ್ದಾರೆ.  ಅವರು ಸ್ವಯಂ ಸೇವಕರು ಎಂಬುದಷ್ಟೆ. ಎಳೆ ವಯಸ್ಸಿನ ಯುವತಿಯೊಬ್ಬಳು ಅಲ್ಲಿ ವಿಧವೆಯಾಗಿದ್ದಾಳೆ ಎಂದರೆ ಆಕೆಯ ಗಂಡ ಖಾಕಿ ಚಡ್ಡಿ ದಂಡ ಹಿಡಿದು ನಮಸ್ತೆ ಸದಾ ವತ್ಸಲೆ ಹಾಡಿದ್ದಕ್ಕೆ ಸಿಕ್ಕ ಪ್ರತಿಫಲವದು. 1979ರ ಒಂದೇ ವರ್ಷದಲ್ಲಿ 21 ಜನ 1981 ರಲ್ಲಿ 15 ಜನ ಆರೆಸ್ಸೆಸ್ಸಿನವರು ಹತ್ಯೆಗೊಳಗಾಗುತ್ತಾರೆ. 2000 ದಿಂದ 2016 ರ ಮಧ್ಯೆ 69 ಜನ ಹತ್ಯೆಗೊಳಗಾಗುತ್ತಾರೆ. ಚಂದ್ರನ್ ಎಂಬ ಆಗ ತಾನೆ ಕಾಲೇಜು ಸೇರಿದ ಹುಡುಗ, ರಾಮಕೃಷ್ಣನ್  ಆಟೋಚಾಲಕ, ಗಾರೆ ಕೆಲಸದವರು ಕೂಲಿ ಕಾರ್ಮಿಕರು ಇಂಥ ನಿರುಪದ್ರವಿ ವ್ಯಕ್ತಿಗಳನ್ನು ಕೊಂದದ್ದು ಅವರು ಶಾಖೆ ನಡೆಸುತ್ತಿದ್ದರು ಎಂಬ ಏಕೈಕ ಕಾರಣಕ್ಕೆ! 2002 ರಲ್ಲಿ ಒಂದೇ ಮನೆಯ ಇಬ್ಬರೂ ಸಹೋದರರನ್ನು ಆರೆಸ್ಸೆಸ್ಸಿಗರು ಎಂಬ ಕಾರಣಕ್ಕೆ ಚೂರಿ ಇರಿದು ಕೊಲ್ಲಲಾಯ್ತು. ಮಕ್ಕಳನ್ನು ಆರೆಸ್ಸೆಸ್ ಶಾಖೆಗೆ ಕಳಿಸಲು ನಿರ್ಧರಿಸಿದ ತಾಯಿಯೊಬ್ಬಳನ್ನು ಕೊಂದರು. 1996 ರಲ್ಲಿ ಅಆ್ಖ ಹುಡುಗನೊಬ್ಬನನ್ನು ಅವನ ಕ್ಲಾಸಿಗೆ ನುಗ್ಗಿ ಹಲ್ಲೆ ಮಾಡಲಾಯಿತು. ಪ್ರಾಣ ಉಳಿಸಿಕೊಳ್ಳಲು ಓಡಿಹೋಗಿ ಪಂಪಾ ನದಿಗೆ ಹಾರಿದರೆ  ನಿಂತ ಕಮ್ಯುನಿಷ್ಟರು ಮತ್ತೆ ಅವನು ಮೇಲೇಳದಂತೆ ಕಲ್ಲೆಸೆದರು. ನದಿಯ ದಡದ ಮೇಲೆ ಬಟ್ಟೆ ಒಗೆಯುತ್ತಿದ್ದ ಸ್ತ್ರೀಯರನ್ನು ಹೆದರಿಸಿ  ಕಳಿಸಿದರು. ಇಡಿಯ ನೀರು ಕ್ಷಣಮಾತ್ರದಲ್ಲಿ ರಕ್ತಮಯವಾಯ್ತು. ಇಂಥ ಬೀಭತ್ಸಕರ ಘಟನೆ ನಡೆಯಬೇಕಾದರೆ ಸಿದ್ಧಾಂತದ ಅಮಲು ಯಾವ ಮಟ್ಟಿಗೆ ಏರಿರಬಹುದು ನೀವೇ ಊಹಿಸಿ.

ಪ್ರಕೃತಿಯ ಹೊಡೆತದಲ್ಲಿ ಮನೆ ಮಠ ಜೀವ ಕಳೆದುಕೊಂಡವರಲ್ಲಿ ಎಲ್ಲ ಧರ್ಮದ ಎಲ್ಲ ಸಿದ್ಧಾಂತದ ಎಲ್ಲ ಮನೋಪ್ರವೃತ್ತಿಯ ಜನರೂ ಇದ್ದಾರೆ. ಇಲ್ಲಿ ನಾನು ಹೇಳಲು ಹೊರಟಿರುವುದು ದಿನ ಬೆಳಗಾದರೆ  ಅನುಭವಿಸುತ್ತಿದ್ದ ಇಂದೋ ನಾಳೆಯೋ ಎಂದು ದಿನಗಳನ್ನು ಎನಿಸುತ್ತಿದ್ದ ಆರೆಸ್ಸೆಸ್ನವರೇ ಇವತ್ತು ಕೇರಳದ ಸಂತ್ರಸ್ತರನ್ನು ರಕ್ಷಿಸುತ್ತಿದ್ದಾರೆ. ಆರೆಸ್ಸೆಸ್ನವರು ಕೋಮುವಾದಿಗಳು ಎಂದು ಹೇಳುವ ಜನರಿಗೆ ಇವತ್ತು ಆರೆಸ್ಸೆಸ್ ಯಾವ ವ್ಯಕ್ತಿಯ ಜಾತಿಯನ್ನು ನೋಡದೇ ಕೈ ಹಿಡಿದ ಕಕ್ಕುಲತಿಯನ್ನು ನೋಡಿ ತಲೆತಗ್ಗಿಸುವಂತಾಗಬೇಕು. ಹತ್ತು ಸಾವಿರಕ್ಕೂ ಹೆಚ್ಚಿನ ಆರೆಸ್ಸೆಸ್ ಕಾರ್ಯಕರ್ತರು ದೇಶದ ನಾನಾ ಭಾಗಗಳಿಂದ ಬಂದು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಸೇವೆಗೆ ನಿಂತು ಸಾವನ್ನು ಬಳುವಳಿಯಾಗಿ ಪಡೆದಿದ್ದಾರೆ. ಪ್ರವಾಹ ತಗ್ಗುತ್ತಿದ್ದಂತೆ ಆರೆಸ್ಸೆಸ್  ಮುಳುವಾದ ಇ ಪಕ್ಷದ ಕಾರ್ಯಾಲಯವನ್ನು ಸ್ವಚ್ಛಗೊಳಿಸಿ ಕೊಟ್ಟಿದ್ದಾರೆ. ಮಂದಿರ ಮಾತ್ರವಲ್ಲದೇ ಮಸೀದಿ ಚರ್ಚುಗಳನ್ನು ಸ್ವಚ್ಛಗೊಳಿಸಿದ್ದಾರೆ. ಆದರೆ ಕಮ್ಯುನಿಷ್ಟರ ಕ್ರೌರ್ಯ ಯಾವ ಮಟ್ಟಿಗಿದೆ ಎಂದರೆ ಒಬ್ಬ ಅಂಗವಿಕಲ ಕೃತಕ ಕಾಲು ಜೋಡಿಸಿಕೊಂಡ ಆರೆಸ್ಸೆಸ್ಸಿಗ ಸಂತ್ರಸ್ತರ ಸೇವೆಗೆಂದು ಮುಂದೆ ಬಂದಿದ್ದ.ಅವನ ಮೇಲೆಯೇ ಹಲ್ಲೆ ಮಾಡಿ ಕೃತಕ ಕಾಲನ್ನು ಕಡಿದು ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಅನುಪ್ ಎಂಬ ಆ ವಿಕಲಾಂಗಿಗೆ ಒಂದು ಹಲ್ಲು ಮುರಿದು ಹೋಗಿದ್ದು ತುಟಿಗೆ ಹದಿನೇಳು ಹೊಲಿಗೆ ಬಿದ್ದಿವೆ. ಯಾವ ಮಾಧ್ಯಮದವರು  ತೋರಿಸುವುದಿಲ್ಲ.

ಹಾಗೆಂದು ಕೇಂದ್ರ ಸರಕಾರವೇನು ಸುಮ್ಮನೇ ಕೂತಿಲ್ಲ. ಕೇರಳದಲ್ಲಿ ಮಳೆಯ ತೀವ್ರತೆ ಜಾಸ್ತಿಯಾಗುತ್ತಿದ್ದಂತೆ ರಾಜನಾಥ ಸಿಂಗ್ 100 ಕೋಟಿ ಪರಿಹಾರ ಘೋಷಿಸಿದರು. ಅಟಲ್ಜಿ ಅಂತ್ಯ ಸಂಸ್ಕಾರ ಮುಗಿಸಿದ ಮೋದಿ ಅದೇ ರಾತ್ರಿ ಕೇರಳಕ್ಕೆ ತೆರಳಿ ಬೆಳಿಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಲ್ಲದೆ 500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದರು. ಆಗಸ್‌ಟ್ 17ರಂದು ಮೋದಿ ಸರಕಾರ ಕೇರಳಕ್ಕೆ 339 ಹಡಗು, 2800 ಜಾಕೆಟ್, 1000 ರೇನ್ ಕೋಟ್, 1 ಲಕ್ಷ ಆಹಾರದ  ರೈಲ್ವೆ ಇಲಾಖೆಯಿಂದ 1.2 ಲಕ್ಷ ನೀರಿನ ಬಾಟಲಿಗಳು, 57 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು, 1300 ಭದ್ರತಾ ಸಿಬ್ಬಂದಿ, 38 ಹೆಲಿಕಾಪ್ಟರ್ ಗಳನ್ನು ನಿಯೋಜಿಸಿದೆ. ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರುಪಾಯಿ, ಮಳೆ ಅವಘಡದಿಂದ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿದೆ. ಕೇಂದ್ರ ಸರ್ಕಾರ ನಿಯೋಜಿಸಿದ 20 ವಿಮಾನಗಳು ಕೇರಳದಲ್ಲಿ ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ಇಷ್ಟೆಲ್ಲಾ ಆದರೂ ಪಿಣರಾಯಿ 2000 ಕೋಟಿ ಬೇಕು  ಬೇಡಿಕೆ ಇಟ್ಟು ಖಿಅಉ ಕೊಡದ 700 ಕೋಟಿ ಕನ್ನಡಿ ಗಂಟನ್ನು ವೈಭವಿಕರಿಸಿದ. ಖಿಅಉಗೆ ಕೃತಜ್ಞತೆ ಸಲ್ಲಿಸುವ ಬ್ಯಾನರ್ಗಳು ಪ್ರತಿ ಗಲ್ಲಿಯಲ್ಲೂ ಕಂಡುಬಂದವು. ಖಿಅಉ ತಾನು ನಯಾಪೈಸೆಯೂ ಕೊಟ್ಟಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿತು.  ಇಲ್ಲಿಯವರೆಗೂ ಕೇರಳದಲ್ಲಿ ಸಂಘದವರಿಗೆ ಬಿಡಿ, ಕೇಂದ್ರ ಸರಕಾರಕ್ಕೂ ಬಿಡಿ, ಸೈನಿಕರಿಗೂ ಕೃತಜ್ಞತೆ ತಿಳಿಸಿದ ಬ್ಯಾನರುಗಳೇ ಕಾಣುತ್ತಿಲ್ಲ.

ಕೊಡಗಿನ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗೇನೂ  ಇಲ್ಲ.

ಹಲವರು ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ತಮ್ಮದೇ ಮನೆ ಕಳೆದುಕೊಂಡ  ಕಾರ್ಯಕರ್ತರು ಗಂಜಿ ಕೇಂದ್ರದಲ್ಲಿ ತಳವೂರದೇ ಇತರರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ದೇಶಕ್ಕೆ ಹೆಚ್ಚು ಹೆಚ್ಚು ಸೈನಿಕರನ್ನು ಒದಗಿಸಿದ ಕೊಡಗಿನ ಸದ್ಯದ ಸ್ಥಿತಿ ಅತ್ಯಂತ ದಾರುಣ. ಇಲ್ಲಿನ ಜನ ಯಾವತ್ತಿಗೂ ಎಸೆದ ಬಿಸ್ಕೆಟ್ನ್ನು ತಿಂದು ಬದುಕುವಷ್ಟು ಸ್ವಾಭಿಮಾನ ಕಳೆದುಕೊಂಡವರಲ್ಲ. ಬದಲಿಗೆ ಹತ್ತಾರು ಎಸ್ಟೇಟಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ವಲಸೆ ಬಂದ ಜನರಿಗೆ ಕೆಲಸ ನೀಡಿ ಸಲಹಿದ ಆಜನ್ಮ ಶ್ರೀಮಂತರು, ಉದಾರಿಗಳು. ಆಶ್ರಯವಿಲ್ಲದವರಿಗೆ ಆಸರೆಯಾಗುವ ಪ್ರೀತ್ಯಾದರವುಳ್ಳವರು. ಅಂಥ ಆಶ್ರಯದಾತರೇ ಆಶ್ರಯ ಕಳೆದುಕೊಂಡು  ಪಾಲಾಗಿರುವುದು ವಿಪರ್ಯಾಸ. ಪ್ರಕೃತಿಯ ಮುನಿಸು ಎರಡೂ ಕಡೆ ಅಷ್ಟಷ್ಟೇ ಪ್ರಮಾಣದಲ್ಲಾಗಿದೆ ಎರಡು ಕಡೆಯಲ್ಲೂ ಆರೆಸ್ಸೆಸ್ ತನ್ನ ಸೇವೆ ಸಲ್ಲಿಸುತ್ತಿದೆ. ಸೇವಾ ಭಾರತಿ ಎಂಬ ಸಂಘದ ಅಂಗ ಸಂಸ್ಥೆ ರಾಜ್ಯದ ನಾನಾ ಭಾಗಗಳಿಂದ ಕೊಡಗು ಮತ್ತು ಕೇರಳ ಜನರಿಗೆ ಬೇಕಾದ ದಿನನಿತ್ಯದ ವಸ್ತುಗಳನ್ನು ಒದಗಿಸುತ್ತಿದ್ದಾರೆ. ಅಷ್ಟೇ ಅಲ್ಲಾ ಯಾವ ತರಬೇತಿಯನ್ನು ಪಡೆಯದೇ ಕೆಸರಿನಿಂದಾವೃತವಾದ ಭೂಮಿಯಲ್ಲಿ, ಆಳವನ್ನು ತೋರಿಸದ ಏಕಪಾತಳಿಯೊಂದಿಗೆ ವಂಚಿಸಿ ಒಳಗೆಳೆದುಕೊಳ್ಳುವ ನೀರಿನಲ್ಲಿ ಹಗ್ಗ ಕಟ್ಟಿಕೊಂಡು ಇಳಿದು ಯಾವುದೋ ಮನೆಯಲ್ಲಿ  ವೃದ್ಧರು ಗರ್ಭಿಣಿ ಸ್ತ್ರೀಯರು ಮಕ್ಕಳನ್ನು ರಕ್ಷಿಸಿ ಕರೆತಂದು ಗಂಜಿ ಕೇಂದ್ರಗಳಿಗೆ ರವಾನಿಸುತ್ತಿದ್ದಾರೆ.

 ಎಲ್ಲ ಜಾತಿ, ಪಂಗಡ, ಸಿದ್ದಾಂತ, ಹಣ, ಆಸ್ತಿ, ಇವೆಲ್ಲವನ್ನೂ ಬಗ್ಗು ಬಡಿದು ಮಾನವತೆ ಎದ್ದು ನಿಂತು ಪ್ರಕೃತಿಗೆ ಸವಾಲು ಹಾಕುತ್ತಿದೆ. ಮಾನವೀಯತೆ ದೇಶದೆಲ್ಲೆಡೆಯಿಂದ ಹರಿದು ಕೊಡಗು ಮತ್ತು ಕೇರಳದೆಡೆಗೆ ಸಾಗುತ್ತಿದೆ. ಇನ್ನು ಮುಂದಾದರೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಕೂತು ಚರ್ಚಿಸಿ ಬಗೆಹರಿಸಿಕೊಳ್ಳೋಣ. ಎದುರುಗಡೆ ಇರುವವನು ಹಿಂದೂ ಮುಸ್ಲಿಂ ಆರೆಸ್ಸೆಸ್ ಇ ಆಒ ಎಂಬುದನ್ನು ಮರೆತು ಅವನಲ್ಲೊಬ್ಬ ಮಾನವನನ್ನು

Tags

Related Articles

Leave a Reply

Your email address will not be published. Required fields are marked *

Language
Close