Breaking Newsದೇಶ
ಮತ್ತೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

ಮುಂಬೈ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಡಾಲರ್ ಎದುರು ಮತ್ತೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡು, 73ರ ಸನಿಹಕ್ಕೆ ತಲುಪಿದೆ.
ಸೆಪ್ಟೆಂಬರ್ 12 ರಂದು ಪ್ರಾರಂಭವಾದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 72.91ರಷ್ಟಕ್ಕೆ ಕುಸಿದಿದ್ದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಸೆಪ್ಟೆಂಬರ್11 ರಂದು ಡಾಲರ್ ಎದುರು ರೂಪಾಯಿ ಮೌಲ್ಯ 72.30 ರೂಪಾಯಿಯಷ್ಟು ಆಗಿತ್ತು. ವರ್ಷಾರಂಭದಿಂದ ಈವರೆಗೂ ರೂಪಾಯಿ ಮೌಲ್ಯ ಶೇ.12 ರಷ್ಟು ಕುಸಿತಗೊಂಡಿದ್ದು, ಏಷ್ಯಾದಲ್ಲೇ ಡಾಲರ್ ಎದುರು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿಯಾಗಿದೆ.