ಅಮೆರಿಕ ಕ್ಷಿಪಣಿ ದಾಳಿ: ಗಂಭೀರ ಪರಿಣಾಮ ಎಚ್ಚರಿಕೆ ನೀಡಿದ ರಷ್ಯಾ

Posted In : ವಿದೇಶ

ಮಾಸ್ಕೋ: ಅಮೆರಿಕ ಹಾಗು ಮಿತ್ರ ಪಡೆಗಳು ಸಿರಿಯಾ ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿದ್ದು , ಅವುಗಳಲ್ಲಿ ಹೆಚ್ಚಿನವನ್ನು ಸಿರಿಯಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಡೆದುರುಳಿಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

“ಸಿರಿಯಾದ ಮಿಲಿಟರಿ ಹಾಗು ನಾಗರಿಕ ಆಸ್ತಿಯನ್ನು ಗುರಿಯಾಗಿಸಿ ಅಮೆರಿಕ, ಬ್ರಿಟನ್‌ ಹಾಗು ಫ್ರಾನ್ಸ್ ನೌಕಾ ಹಾಗು ವಾಯು ದಾಳಿ ನಡೆಸಿವೆ. ಇದರಲ್ಲಿ ಹೆಚ್ಚಿನವನ್ನು ಸಿರಿಯಾ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿವೆ” ಎಂದು ರಷ್ಯಾದ ಹೇಳಕೊಂಡಿದೆ.

ಅಲ್ಲದೇ ಸಿರಿಯಾದಲ್ಲಿರುವ ತನ್ನ ನೌಕಾ ಹಾಗು ವಾಯು ನೆಲೆಗಳನ್ನು ಆವರಿಸಿಕೊಂಡಿರುವ ರಷ್ಯಾದ ವಾಯು ರಕ್ಷಣಾ ಪ್ರದೇಶದ ಮೇಲೆ ಅಮೆರಿಕದ ಯಾವುದೇ ಕ್ಷಿಪಣಿ ಮುಟ್ಟಿಲ್ಲ ಎಂದು ಮಾಸ್ಕೋ ಹೇಳಿದೆ. ಸಿರಿಯಾದ ಟಾರ್ಟಸ್‌ ಹಾಗು ಮೆಯ್‌ಮಿಮ್‌ನಲ್ಲಿ ರಷ್ಯಾದ ಮಿಲಿಟರಿ ನೆಲೆಗಳಿವೆ.

“ಸಿರಿಯಾ ಮೇಲಿನ ಅಮೆರಿಕದ ದಾಳಿಗಳು ಗಂಭೀರ ಪರಿಣಾಮಗಳಿಗೆ ಹಾದಿ ಮಾಡಿಕೊಡಲಿವೆ. ನಮ್ಮನ್ನು ಬೆದರಿಸುವ ಇನ್ನೊಂದು ಯತ್ನ ನಡೆದಿದೆ. ದಾಳಿಗಳು ಗಂಭೀರ ಪರಿಣಾಮಗ

ಳಿಗೆ ಮುನ್ನುಡಿ ಬರೆಯಲಿವೆ ಎಂದು ಹಿಂದೆಯೇ ಎಚ್ಚರಿಕೆ ನೀಡಿದ್ದೆವು. ದಾಳಿಯ ಎಲ್ಲ ಜವಾಬ್ದಾರಿ ವಾಷಿಂಗ್ಟನ್, ಲಂಡನ್‌ ಹಾಗು ಪ್ಯಾರಿಸ್‌ ಹೊರಬೇಕಿದೆ. ರಷ್ಯಾ ಅಧ್ಯಕ್ಷರನ್ನು ಅವಮಾನಿಸುವುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ” ಎಂದು ಅಮೆರಿಕದ ರಷ್ಯಾ ರಾಯಭಾರಿ ಆಂಟೋಲಿ ಆಂಟನೋವ್‌ ತಿಳಿಸಿದ್ದಾರೆ.

ಸಿರಿಯಾ ರಾಜಧಾನಿ ಡಮಾಸ್ಕಸ್‌ ಬಳಿ ಬಂಡುಕೋರರ ಹಿಡಿತದಲ್ಲಿರುವ ಡೌಮಾ ಪ್ರದೇಶದಲ್ಲಿ ನಡೆದ ರಾಸಾಯನಿಕ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಸಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರ ಸಂಗ್ರಹಗಾರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದರು.

ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸದ್ ನಿಯಂತ್ರಣದಲ್ಲಿರುವ ರಾಸಾಯನಿಕ ಶಸ್ತ್ರ ಘಟಕಗಳನ್ನು ಗುರಿಯಾಗಿಸಿ ನಡೆಸಿದ ದಾಳಿ ನಡೆದ ಎರಡು ಗಂಟೆಗಳ ಬಳಿಕ ಡಮಾಸ್ಕಸ್‌ ನಗರದಲ್ಲಿ ಸಾಕಷ್ಟು ಧ್ವಂಸ ಕಂಡುಬಂದು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

Leave a Reply

Your email address will not be published. Required fields are marked *

2 × two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top