ರ್ಯಾನ್ ಹತ್ಯೆ ಪ್ರಕರಣ: ಟ್ರಸ್ಟಿಗಳಿಗೆ ಬೇಲ್ ನೀಡಲು ವಿರೋಧ

Posted In : ದೇಶ

ಗುರುಗ್ರಾಮ: ಬಾಲಕ ಪ್ರದ್ಯುಮ್ನ ಠಾಕೂರ್ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ರ್ಯಾನ್್ ಇಂಟರ್ ನ್ಯಾಷನಲ್ ಶಾಲೆಯ ಇಬ್ಬರು ಟ್ರಸ್ಟಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಮೃತ ಬಾಲಕನ ತಂದೆ ಬರುನ್ ಠಾಕೂರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಶೌಚಾಲಯದಲ್ಲಿ ಪುತ್ರನ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಟ್ರಸ್ಟಿಗಳಾದ ಆಗಸ್ಟಿನ್, ಗ್ರೇಸ್ ಮತ್ತು ಅವರ ಪುತ್ರ ರ್ಯಾಣ್ ಪಿಂಟೋ ಅವರನ್ನು ಬಂಧಿಸಲಾಗಿತ್ತು. ಹರ್ಯಾಣ ನ್ಯಾಯಾಲಯ ತಲುಪು ವವರೆಗೂ ಬಂಧನದಿಂದ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣ ಕುರಿತಂತೆ, ಬಂಧಿತರು ಪ್ರಮುಖ ಹೊಣೆಗಾರರು. ಆದ ಕಾರಣ ಅವರಿಗೆ ಜಾಮೀನು ನೀಡಬಾರದೆಂದು ಆಗ್ರಹಿಸಿದ್ದಾರೆ. ಶಾಲೆಯ ಮಂಡಳಿ ನಿರ್ದೇಶ ಕರು, ಅಧಿಕಾರಿಗಳು ಕ್ಷಮೆಗೆ ಅರ್ಹರಲ್ಲ. ಆದ ಕಾರಣ ಜಾಮೀನು ಅರ್ಜಿ ಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಮೊದಲು ಪ್ರಕರಣ ಕುರಿತಂತೆ, ಟ್ರಸ್ಟಿಗಳು ನಾನು ಈ ವಿಷಯದಲ್ಲಿ ಅಮಾಯಕರು. ನಮಗೂ ಈ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದರು.

 

Leave a Reply

Your email address will not be published. Required fields are marked *

five × 2 =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top