ಲೋಕಾಯುಕ್ತ ನೇಮಕಕ್ಕೆ ಸಭೆ, ಮತ್ತೆ ನಾಯಕ್

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ನ್ಯಾ. ಎಸ್.ಆರ್. ನಾಯಕ್ ಅವರನ್ನು ನೇಮಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಶಿಫಾರಸು ಮಾಡಿ, ಸೋಮವಾರ ಸಭೆ ನಡೆಸಲಿದ್ದಾರೆ. ನ್ಯಾ.ವಿಶ್ವನಾಥ ಶೆಟ್ಟಿ ನೇಮಕಕ್ಕೆ ವಿರೋಧ ವ್ಯಕ್ತಗೊಂಡ ಮರುದಿನ ಬೆಳವಣಿಗೆ ನಡೆದಿದ್ದು, ಉನ್ನತ ಮಟ್ಟದ ಸಭೆಯಲ್ಲಿ ನ್ಯಾ. ನಾಯಕ್ ಅವರ ಹೆಸರನ್ನು ಸರಕಾರ ಶಿಫಾರಸು ಮಾಡಲಿದೆ. ಆದರೆ, ನಾಯಕ್ ಹೆಸರು ಮತ್ತೆ ಪ್ರಸ್ತಾಪವಾದರೆ ಮತ್ತೆ ಸಂಘರ್ಷ ಎದುರಾಗಲಿದೆ.

ಸೋಮವಾರ ಮಧ್ಯಾಹ್ನ 1:30 ಕುಮಾರ ಕೃಪಾ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ನಡೆಸಲಿದ್ಧಾರೆ. ಈ ಹಿಂದೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ರಾಜ್ಯಪಾಲರು ಎರಡು ಬಾರಿ ಶಿಫಾರಸು ಅನೂರ್ಜಿತಗೊಳಿಸಿದ್ದರು.

ನ್ಯಾಯಮೂರ್ತಿ ಭಾಸ್ಕರ್ ರಾವ್ ರಾಜೀನಾಮೆ ಬಳಿಕ ಕಳೆದ 13 ತಿಂಗಳಿಂದ ಖಾಲಿ ಇರುವ ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ವಿಕ್ರಂಜಿತ್ ಸೇನ್, ನಾಯಕ್ ಹಾಗೂ ವಿಶ್ವನಾಥ ಶೆಟ್ಟಿ ಹೆಸರು ಕೇಳಿ ಬಂದಿದ್ದು, ವಿರೊಧ ವ್ಯಕ್ತವಾಗಿತ್ತು. ಈಗ ಮತ್ತೆ ನ್ಯಾ.ನಾಯಕ್ ಹೆಸರು ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

two × four =

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top