ದುಷ್ಟರಲ್ಲಿ ಕಡಿಮೆ ದುಷ್ಟರನ್ನು ಆರಿಸಿ ಕಳುಹಿಸಲು ಚುನಾವಣೆಯೇ?!

Posted In : ಸಂಗಮ, ಸಂಪುಟ

-ಜಗದೀಶ ಮಾನೆ

ಮಹಾನ್ ಚಿಂತಕ ಆಚಾರ್ಯ ಚಾಣಕ್ಯ ಹೇಳುತ್ತಾನೆ, ‘ಯಾವ ದೇಶದಲ್ಲಿ ರಾಜನು ಸಾಮಾನ್ಯ ಮನುಷ್ಯನಂತೆ ವಾಸಿಸುತ್ತಾನೋ ಆ ದೇಶದ ಜನರು ರಾಜನಂತೆ ಬದುಕುತ್ತಾರೆ.  ಎಲ್ಲಿ ರಾಜನು ರಾಜನಂತೆ ಬದುಕುತ್ತಾನೋ ಅಲ್ಲಿಯ  ಭಿಕ್ಷುಕರಂತೆ ಅತ್ಯಂತ ಹೀನವಾಗಿ ಬದುಕುತ್ತಾರೆ.’ ಈ ಮಾತಂತೂ ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಎನಿಸುತ್ತದೆ. ಚುನಾವಣೆಗೂ ಮೊದಲಿಗೆ ರಾಜ ಸಾಮಾನ್ಯ ಮನುಷ್ಯನಾಗುವ, ಸಾಮಾನ್ಯ ಮನುಷ್ಯನೊಬ್ಬ ಈಗ ರಾಜನಂತೆ ವರ್ತಿಸುವ ಕಾಲ ಕರ್ನಾಟಕದಲ್ಲಿ ಸಮೀಪಿಸುತ್ತಿದೆ.  ಆದರೆ ಮತ್ತೆ ಚುನಾವಣೆಗಳ ನಂತರ ರಾಜ, ರಾಜನಾಗಿ ಮುಖವಾಡ ಬದಲಿಸುವ, ಸಾಮಾನ್ಯ ಮನುಷ್ಯನ್ನು ಭಿಕ್ಷುಕನಂತೆ ನಡೆಸಿಕೊಳ್ಳುವ ಪ್ರಸಂಗಗಳನ್ನು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆ ಆರಂಭವಾದಾಗಿನಿಂದ ಕಾಣುತ್ತಲೇ ಇದ್ದೇವೆ.  ಆಚಾರ್ಯ ಚಾಣುಕ್ಯನ ಮಾತು ಪ್ರಸ್ತುತ  ವ್ಯಂಗ್ಯವೂ ಹೌದು, ಹಾಸ್ಯಾಸ್ಪದವೂ ಹೌದು!

ಮೇ 12 ರಂದು ನಡೆಯಲಿರುವ ರಾಜ್ಯವಿಧಾನಸಭಾ ಚುನಾವಣೆ, ಹಲವು ಮಾಧ್ಯಮಗಳಲ್ಲಿ ಕುರುಕ್ಷೇತ್ರ, ರಣಕಣ ಎಂದೇ ಕರೆಸಿಕೊಳ್ಳುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮಾಡಬಾರದನ್ನೆಲ್ಲ ಮಾಡಿ ಹಾಯಾಗಿ ನಿದ್ರಿಸುತ್ತಿದ್ದಂತಹ ಎಲ್ಲ ರಾಜಕಾರಣಿಗಳು ಈಗ ನಿದ್ದೆಯಿಂದೆದ್ದಿದ್ದಾರೆ.  ಬಗೆ ಬಗೆಯ ಆಶ್ವಾಸನೆಗಳು, ಹಣ, ಸೀರೆ, ಮದ್ಯ, ಅಕ್ಕಿ ಎನ್ನುತ್ತ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡಾ ಅಕ್ರಮಗಳು ಬಹುತೇಕ ನಡೆಯುವ ಸಾಧ್ಯತೆ ಇದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಾಕಷ್ಟು  ಬಾಹಿರ ಚಟುವಟಿಕೆಗಳು ಹರಿಯುವ ನೀರಿನಂತೆ ಸಾಗುತ್ತಲೇ ಇವೆ.  ಐದು ವರ್ಷಗಳಿಂದ ತಲೆ ಮರೆಸಿಕೊಂಡು ಹೋಗಬಾರದ ಕಡೆಗೆಲ್ಲ ಹೋಗಿ, ಮಾಡಬಾರದ್ದನ್ನೆಲ್ಲ ಮಾಡಿದ ಶಾಸಕ, ಸಚಿವರುಗಳನ್ನು ರೈಟ್ ಮತ್ತು ಲೆಫ್ಟ್ ಆಗಿ ಎರಡೂ ಬದಿಯಲ್ಲಿ ಜನ ಪ್ರಶ್ನಿಸುವ ಕಾಲ ಅಂತೂ ಇಂತೂ ಕೂಡಿ ಬಂದಿದೆ.

ಜನಸಾಮಾನ್ಯನಂತೂ ಸದ್ಯಕ್ಕೆ ನಿರ್ಣಾಯಕನ ಮಹತ್ವದ ಸ್ಥಾನದಲ್ಲಿ ನಿಂತಿದ್ದಾನೆ.  ಸಿಕ್ಕಿದ್ದೇ ಚಾನ್‌ಸ್  ಎಂದು ಜನಪ್ರತಿನಿಧಿಗಳ ಮೇಲೆ, ಮಂತ್ರಿಗಳ ಮೇಲೆ ವಾಗ್ವಾದ ನಡೆಸುತ್ತಿದ್ದಾನೆ.  ಐದು ವರ್ಷ ಎಲ್ಲಿಗೆ ಹೋಗಿದ್ರಿ?  ಬೇಕಾದಾಗ ಮಾತ್ರ ನಾವು ನೆನಪಾಗ್ತೀವಿ ಅಲ್ವಾ? ಎನ್ನುತ್ತ ರಾಜಕಾರಣಿಗಳನ್ನಂತೂ ಜನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಪ್ರಚಾರದ ಸಂದರ್ಭದಲ್ಲಿ ಮತದಾರರು ಅಂದಿದ್ದನ್ನೆಲ್ಲ ಅನಿಸಿಕೊಂಡು ನಾಚಿಕೆ, ಮಾನ, ಮರ್ಯಾದೆ ಮೂರೂ ಬಿಟ್ಟು ಮರ್ಯಾದೆಯ ಅರಿವೇ ಇಲ್ಲದಂತೆ ಮತದಾರ ಪ್ರಭು ಎನ್ನುತ್ತ ಹಲ್ಕಿರಿಯುವ, ಲಜ್ಜೆ ಮರೆತು ಕಾರ್ಯವಾಸಿ ಎಂದು ಮನೆ ಮನೆ ಅಲೆಯುವ, ಬೀದಿ ಬೀದಿ ಅಲೆಯುವ ನಾಯಕನನ್ನೇ ನಾವು ಆರಿಸಿ ಕಳಿಸುತ್ತೇವೆ. ಸ್ವಾರ್ಥ, ಅಧಿಕಾರ ದಾಹಕ್ಕೆ, ಆತ ನೀಡುವ ಎಂಜಲು ಹಣಕ್ಕೆ  ಸುರಿಸಿಕೊಂಡು ಕೈ ಚಾಚುವ ಪ್ರಜೆಗಳಿಗೆ ನಿಜಕ್ಕೂ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರೆ ಉತ್ತರ ಕಷ್ಟಸಾಧ್ಯ.  ಅಷ್ಟಕ್ಕೂ ಮತದಾರ ಅವರಿಂದ ಎಂಜಲು ಹಣ ಪಡೆದ ನಂತರ ಆ ರಾಜಕಾರಣಿಗಳನ್ನು ದೂರುವ ಯಾವ ನೈತಿಕತೆ ಇರುತ್ತದೆ ಹೇಳಿ? ಅಪ್ರಾಮಾಣಿಕ ರಾಜಕಾರಣಿಯ ಆಮಿಷಕ್ಕೆ ಬಲಿಯಾಗುವವನು ಅಪ್ರಾಮಾಣಿಕನೇ ಅಲ್ಲವೇನು?

ಗದ್ದುಗೆ ಏರಿದ ಮೇಲೆ ಮತದಾರನ ನೆನಪೇ ಇರುವುದಿಲ್ಲ ಎನ್ನುವದಕ್ಕಿಂತ ಮೊದಲು ಅಂಥ ನಾಯಕರನ್ನು ಗದ್ದುಗೆಗೆ ಏರಿಸುವವರಾರೆಂಬುದನ್ನು ಅರ್ಥೈಸಿಕೊಂಡು ಕಾರ್ಯ ಪ್ರವೃತ್ತವಾಗುವುದು ಒಳಿತಲ್ಲವೆ?ಅನಕ್ಷರಸ್ಥ ಮತದಾರ,  ಆಮಿಷಕ್ಕೆ ಬಲಿಯಾಗಿ ಮತ ಮಾರುವುದು ಆಶ್ಚರ್ಯಕರ ಸಂಗತಿಯೇನಲ್ಲ ಅನಿಸುತ್ತದೆ.  ಆದರೆ ಭಾರತದ ಅನೇಕ ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಶೇ.80ಕ್ಕೂ ಹೆಚ್ಚು ಮತದಾನ ಎಂದಿಗೂ ಆಗುವುದೇ ಇಲ್ಲ. ಮತದಾನ ಮಾಡದೇ ಉಳಿದ 20 ರಿಂದ 25 ರಷ್ಟು ಜನರಲ್ಲಿ ಹೆಚ್ಚಿನ ಸಂಖ್ಯೆಯವರು ರಾಜಕೀಯದ ಬಗ್ಗೆ ಸಾಕಷ್ಟು ಜ್ಞಾನವಿರುವವರೇ.

ದೇಶದ ಆಗುಹೋಗುಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವವರೇ. ಯಾವುದೊಂದು ಗೊಡ್ಡು ನೆಪದಿಂದಾಗಿ ಮತದಾನದಿಂದ ದೂರ ಉಳಿದು, ತಪ್ಪಿಸಿಕೊಂಡು ಇರುವ ಇಂಥವರಿಗೆ ರಾಜಕಾರಣದ ಕೊರತೆಗಳನ್ನು  ಯಾವ ಹಕ್ಕು ಇರುತ್ತದೆ? ಸಂವಿಧಾನ ನೀಡಿದ ಅತ್ಯಂತ ಅಮೂಲ್ಯವಾದ ಹಕ್ಕನ್ನು ಬಳಸಿಕೊಳ್ಳದೇ ಇರುವವರು ರಾಜಕೀಯ ಆಗುಹೋಗುಗಳ ಬಗ್ಗೆ ಮಾತನಾಡುವುದಕ್ಕೂ  ಅನರ್ಹರೇ! ಅದಕ್ಷ ಪ್ರತಿನಿಧಿಯನ್ನು ದೂರುವ ಮೊದಲು ಅಂಥವನಿಗೆ ನಮ್ಮನ್ನಾಳಲು ಅವಕಾಶ ಕೊಟ್ಟಿದ್ಯಾರು ಎಂದು ಯೋಚಿಸಿದರೆ ಒಳಿತು. ಐದು ವರ್ಷಕ್ಕೊಮ್ಮೆ ಎದುರಾಗುವ ಚುನಾವಣೆಗಳಲ್ಲಿ ಹಳೆಯ ತಪ್ಪನ್ನು ಸರಿಪಡಿಸಿಕೊಳ್ಳಲು ಇದು ಉತ್ತಮ ಅವಕಾಶ.  ಆದರೆ ನಾವೆಂದಾದರೂ ಆ ತಪ್ಪನ್ನು ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವಾ?

ಚುನಾವಣೆಗಳು ಮುಗಿದು ಅದರ ಫಲಿತಾಂಶ ಬರುತ್ತಿದ್ದಂತೆಯೇ  ಜವಾಬ್ದಾರಿಯ ನೆನಪೇ ಇಲ್ಲ ಎಂಬಂತೆ ವರ್ತಿಸುವ ಮತದಾರರನ್ನು, ಕ್ಯಾರೇ ಎನ್ನದ ಪ್ರತಿನಿಧಿಗಳನ್ನೊಮ್ಮೆ ನೆನಪಿಸಿಕೊಳ್ಳಿ. ಸರಕಾರಿ ಕೆಲಸವೊಂದು ಆಗಬೇಕಾದರೆ ಕಚೇರಿಗೆ ಎಷ್ಟು ಸುತ್ತು ಹೊಡೆಯಬೇಕು? ಅದೆಷ್ಟು ಜನರ ಕೈ ಬೆಚ್ಚಗೆ ಮಾಡಬೇಕು!  ನಮ್ಮ ದುಡ್ಡನ್ನೇ ತಿನ್ನುವವರಿಂದ ಏನೆಲ್ಲ ಹೇಳಿಸಿಕೊಳ್ಳಬೇಕು!  ನಾವೇ ಏನೋ ಅಪರಾಧ ಮಾಡಿಬಿಟ್ಟಿದ್ದೇವೇನೋ ಎಂಬಂತೆ ನೂರಾರು ಅಪ್ರಸ್ತುತತೆಗಳನ್ನು ಎದುರಿಸಬೇಕು.  ಈ ಸೌಭಾಗ್ಯಕ್ಕೆ ನಮಗೊಂದು ಸರಕಾರ, ಅದಕ್ಕೊಬ್ಬ ನಾಯಕ! ಬೇಕಾ ಇವೆಲ್ಲ ಎನಿಸುವದಿಲ್ಲವೇ? ಅದರಲ್ಲೂ ಕೆಲ ಜನಪ್ರತಿನಿಧಿಗಳಂತೂ ಚುನಾವಣೆಗೆ ಸ್ಪರ್ಧಿಸುವ  ಸೋತೇ ಇಲ್ಲ. ಹಾಗಂತ ಅವರೇನು ತಮ್ಮ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಅಂತೇನಿಲ್ಲ.

  ಅವರುಗಳು ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದಲೂ ನಮಗೆ ಓದಲಿಕ್ಕೂ ಬಾರದಷ್ಟು ಅಂಕಿಯಷ್ಟು ಆಸ್ತಿಯ ಒಡೆಯರಾಗಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಜನೋಪಯೋಗಿ ಕಾರ್ಯವನ್ನು ಅವರೇನು ಮಾಡಿದ್ದಾರೆ?  ಆ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಸುಳಿದರೆ ಏನಾದರೂ ಕ್ರಾಂತಿಕಾರಕ ಬದಲಾವಣೆ ಸಾಧ್ಯ. ಗುಂಪಿನಲ್ಲಿ ಗೋವಿಂದರಂತೆ, ಹತ್ತರಲ್ಲಿ ಹನ್ನೊಂದಾಗಿ ನಾವು ಎಲ್ಲರಂತೆ ಮತ ಹಾಕಿದ್ದೇವೆ.  ಇದು ತಪ್ಪು. ಇದನ್ನು ನಾವು ಪ್ರಶ್ನಿಸಬೇಕು. ಇದರ ವಿರುದ್ಧ  ಎತ್ತಬೇಕೆಂದು ಎಚ್ಚರಿಸುವ ನಮ್ಮೊಳಗಿನ ರೆಬಲ್ ಸ್ಟಾರ್‌ನನ್ನು ಜೋಪಾನವಾಗಿ ಮಲಗಿಸಿದ್ದೇವೆ… ಆತ ಎದ್ದಾಗಲೆಲ್ಲ ನಾನೊಬ್ಬನೇ ಹೋರಾಡಿ ಏನು ಪ್ರಯೋಜನ ಎಂದು ಸಂಭಾಳಿಸಿ ಕೂರಿಸಿದ್ದೇವೆ!

ಚುನಾವಣೆ ಎಂದರೆ ಕಡಿಮೆ ಅಯೋಗ್ಯನನ್ನು ಆರಿಸುವ ಕೆಲಸ ಎಂದಾದರೆ ಅಂಥ ಅಯೋಗ್ಯರು ನಮಗೆ ಬೇಡವೇ ಬೇಡ ಎಂದು ಮತದಾನವನ್ನು ಎಲ್ಲರೂ ಬಹಿಷ್ಕರಿಸುವ ಒಗ್ಗಟ್ಟಿನ ಮನಸ್ಥಿತಿಯನ್ನು ನಾವೆಂದಾದರೂ ವ್ಯಕ್ತಪಡಿಸಿದ್ದೇವೆಯೆ? ರಾಜ್ಯದಲ್ಲೀಗ ನೋಡಿ, ಏನೇನು ಆಗಬಾರದೋ ಅದೆಲ್ಲವೂ ನಡೆಯುತ್ತಿದೆ.  ಅದನ್ನು ಪ್ರಶ್ನಿಸುವ, ಬೀದಿಗಿಳಿದು ಹೋರಾಡುವಂತಹ ಮನಸ್ಥಿತಿ ಎಷ್ಟು ಜನರಲ್ಲಿದೆ?  ಭಗತ್‌ಸಿಂಗ್ ಹುಟ್ಟಲಿ ಎಂದು ಹೇಳುತ್ತೇವೆ.  ಆದರೆ ನಮ್ಮ ಮನೆಯಲ್ಲಿ ಬೇಡ, ಪಕ್ಕದ ಮನೆಯಲ್ಲಿ ಹುಟ್ಟಲಿ ಎಂದರೆ ಏನಿದರರ್ಥ? ಅದೆಷ್ಟೋ ಮಹಿಳಾ ಅತ್ಯಾಚಾರ ಪ್ರಕರಣಗಳೂ, ದಕ್ಷ ಅಧಿಕಾರಿಗಳ ಕೊಲೆ, ಸಾಹಿತಿಗಳ ಹತ್ಯೆ, ಸಮಾಜ ಸೇವಕರ ಕೊಲೆಗಳು, ದೇಶದ್ರೋಹಿಗಳ ಜಯಂತಿ ಆಚರಣೆಗಳು, ವಿದ್ಯಾರ್ಥಿ ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ಮೂಡಿಸುವಂತಹ ಪ್ರಯತ್ನಗಳು, ಧರ್ಮ ಒಡೆಯುವ ನೀಚ ಪ್ರವೃತ್ತಿಗಳು…

ಹೇಳಲಿಕ್ಕೆ ಕುಳಿತರೆ ಒಂದಾ ಎರಡಾ, ನೂರಾರು ಅವಹೇಳನ ಕೃತ್ಯಗಳು ನಡೆದು ತುಘಲಕ್‌ನ ದರ್ಬಾರ್‌ನಲ್ಲಿ ಗೂಂಡಾ  ಮತದಾರ ಪ್ರಭುಗಳು ಸುಮ್ಮನಿರುವುದನ್ನು ನೋಡಿದರೆ ಆ ನೈತಿಕತೆಯನ್ನು ಕಳೆದುಕೊಂಡಿದ್ದಾರೆನಿಸುತ್ತದೆ. ಒಂದು ಕ್ಷೇತ್ರದಲ್ಲಿ ಯೋಗ್ಯ ಅಭ್ಯರ್ಥಿಯೇ ಇಲ್ಲ ಎಂದಾದರೆ ಒಗ್ಗಟ್ಟಿನಿಂದ ಮತದಾನವನ್ನೇ ಬಹಿಷ್ಕರಿಸಿದರೆ ತಪ್ಪೇನಿದೆ? ಇದು ಪ್ರಜಾಪ್ರಭುತ್ವ. ಜನರ ಆಯ್ಕೆಗೆ ಒಗ್ಗುವಂತಹ ಪ್ರತಿನಿಧಿ ಸಿಕ್ಕಿಲ್ಲವೆಂದರೆ ಅಂಥವರನ್ನು ಆರಿಸಿದ ಪ್ರತಿಫಲವಾಗಿಯೇ ಇಂತಹ ಅನಾಹುತ, ದುರಂತಗಳನ್ನು ನಾವು ಎದುರಿಸಬೇಕಾಗುತ್ತದೆ. ಎಲ್ಲೋ ಒಂದು ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನಪ್ರತಿನಿಧಿ ಸ್ಪಂದಿಸಿಲ್ಲ, ಶಾಲೆ ಇಲ್ಲ, ಮೂಲ ಸೌಕರ್ಯ ಇಲ್ಲ ಎಂದು, ಯಾರೋ ಒಬ್ಬಿಬ್ಬರು ಮತದಾನ  ಬಿಟ್ಟರೆ ಎಂದಾದರೂ ಪೂರ್ತಿ ಒಂದು ಕ್ಷೇತ್ರದ ಜನರೇ ಮತದಾನವನ್ನು ಬಹಿಷ್ಕರಿಸಿದ ಉದಾಹರಣೆ ಇಲ್ಲ.

ಅಂದರೆ ಅನೇಕ ಅಯೋಗ್ಯ, ಕಚ್ಚೆ ಹರುಕ ನಾಯಕರನ್ನು ನಾವು ಒಪ್ಪಿಕೊಂಡಿದ್ದೇವೆಂದರ್ಥವಲ್ಲವೆ? ‘ಐದು ವರ್ಷ ನಿನಗೊಂದು ಸುವರ್ಣಾವಕಾಶ ನೀಡಿದ್ದೇವೆ. ಇದು ನಿನಗೆ ಅಗ್ನಿ ಪರೀಕ್ಷೆಯೂ ಹೌದು. ಇದರಲ್ಲಿ ಗೆದ್ದರೆ ಮತ್ತೆ ನಿನ್ನನ್ನೇ ಆರಿಸುತ್ತೇವೆ. ನಿನಗೆ ಮತ್ತೊಮ್ಮೆ ಜನಪ್ರತಿನಿಧಿಯಾಗುವ ಆಸೆ ಇದ್ದರೆ ಪ್ರಾಮಾಣಿಕವಾಗಿ ಜನಸೇವೆ ಮಾಡು. ಇಲ್ಲವೆಂದರೆ ಸೋಲುವುದಕ್ಕೆ ಸಿದ್ಧನಾಗು’ ಎನ್ನುವ ಸಂದೇಶವನ್ನು ಒಬ್ಬ ಜನಪ್ರತಿನಿಧಿಗಾದರೂ ನಾವು  ಟಣಛಿ  ಚಿ ಟಚಿಣ ಡಿಡಿಣ ಜಿಡಿ ಛಿಟಿಜಡಿಟ ಅನ್ನೋದು ನಿಜವೇ ಆಗಿದ್ದರೆ ಅಂಥ, ದುಷ್ಟರಲ್ಲಿ ಕಡಿಮೆ ದುಷ್ಟರನ್ನು ಆರಿಸಿ ಕಳಿಸುವುದಕ್ಕೆ ಈ ಚುನಾವಣೆಗಳು ಒಂದು ಅವಕಾಶವೆ?

ಹೀಗೊಂದು ಪ್ರಶ್ನೆ ಪ್ರಜ್ಞಾವಂತ ಮತದಾರನಲ್ಲಿ ಮೂಡುವುದು ಸಹಜ.  ಇಂತಹ ಪ್ರಶ್ನೆಗಳನ್ನು ಮೂಡಿಸುವ ನಮ್ಮೊಳಗಿನ ರೆಬಲ್‌ನನ್ನು ಮತ್ತಷ್ಟು ಹೆಚ್ಚು ಹೆಚ್ಚು ಹುರಿದುಂಬಿಸೋಣ. ಎಲ್ಲರ ಅಂತರಾಳದಲ್ಲಿಯೂ ಕೂಡಾ ಅಂತಹ ಒಬ್ಬ ಕ್ರಾಂತಿಕಾರಿಯೊಬ್ಬ ಜನ್ಮ ತಾಳಲಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ, ಪ್ರಜೆಗಳ ನೆಮ್ಮದಿಯ ಬದುಕಿಗೆ ಅಂತಹದೊಂದು  ಈಗ ಅನಿವಾರ್ಯವಾಗಿದೆ. ನಾವು ಯಾರಿಗೆ ಮತದಾನ ಮಾಡಬೇಕು? ಏಕೆ ಮತದಾನ ಮಾಡಬೇಕೆಂಬುದರ ಅರಿವನ್ನು ಪ್ರತಿಯೊಬ್ಬರಲ್ಲಿ ಮೂಡಿಸೋಣ.ನಮಗೆ ನೆನಪಿರಬೇಕಾದ ಸಂಗತಿಗಳು*2000ನೇ ಇಸ್ವಿಯಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಕೂಡಾ ಈ ಬಾರಿ ಮತದಾನದ ಹಕ್ಕು ಪ್ರಾಪ್ತಿಯಾಗುತ್ತದೆ. ಅವರೆಲ್ಲರೂ ಕೂಡಾ ಮತದಾನ ಮಾಡುವಂತೆ ನೋಡಿಕೊಳ್ಳುವುದು. ಪ್ರತಿಯೊಬ್ಬ ಪ್ರಜೆಯ ಪ್ರಭುತ್ವವಿರುವುದು ಮತದಾನದ ಹಕ್ಕಿನಲ್ಲಿಯೇ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

*ಯಾರು ಅಯೋಗ್ಯರಿದ್ದಾದರೋ ಅಂತಹ ಅಭ್ಯರ್ಥಿಗಳನ್ನು ಒಗ್ಗಟ್ಟಿನಿಂದ ಧಿಕ್ಕರಿಸುವುದು. ಯಾರು ದೇಶ ಭಕ್ತರಿದ್ದಾರೋ, ಸಮಾಜದ ಬಗ್ಗೆ  ಹೊಂದಿದ್ದಾರೋ ಅವರಿಗೆ ಮತ ಹಾಕುವುದು.
*ಒಂದು ಕ್ಷೇತ್ರಕ್ಕೆ ಇಂಥದೇ ಅಭ್ಯರ್ಥಿ ಬೇಕೆಂದು ಸೂಚಿಸುವ, ಅವನಿಗೆ ಟಿಕೆಟ್ ನೀಡುವಂತೆ ಸಲಹೆ ನೀಡುವ ಹಕ್ಕು ಜನಸಾಮಾನ್ಯನಿಗೂ ನೀಡಬೇಕೆಂದು ಹೋರಾಡೋಣ.
*ಯಾರು ದೇಶವನ್ನು ಗೌರವಿಸುತ್ತಾರೋ, ಗೋವುಗಳನ್ನು ರಕ್ಷಣೆ ಮಾಡುತ್ತಾರೋ ಅಂಥವರಿಗೆ ಮತ ಹಾಕೋಣ. ರಾಷ್ಟ್ರದ ಐಕ್ಯತೆಗೆ,  ಹಿತಕ್ಕೆ ಎಲ್ಲ ಧರ್ಮ ಜಾತಿಗಳಲ್ಲಿ ಏಕತೆಯನ್ನು ಮೂಡಿಸುತ್ತ, ರಾಷ್ಟ್ರೀಯತೆಯ ವಿಚಾರದ ಆಧಾರದ ಮೇಲೆ ಎಲ್ಲ ಮತ, ಪಂಥಗಳನ್ನು ಒಗ್ಗೂಡಿಸುವಂತಹ ಕೆಲಸವನ್ನು ಯಾರು ಮಾಡುತ್ತಿದ್ದಾರೋ ಅಂಥವರಿಗೆ ಮತ

*ಟಿಕೆಟ್‌ಗಾಗಿ ಹಣ ನೀಡುವ ಅಭ್ಯರ್ಥಿಗಳು ಮುಂದೂ ತಮ್ಮ ಲಾಭಕ್ಕಾಗಿ ಎಂಥ ಕೆಲಸಕ್ಕೂ ಹೇಸಲಾರದ ವ್ಯಕ್ತಿಗಳು. ಅವರಿಗೆ ಮತ ಹಾಕದೆ ಸಮಾಜಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಕೆಲಸ ಮಾಡುವವರಿಗೆ ಮತ ಹಾಕೋಣ.
*ಕ್ಷೇತ್ರದ ಒಟ್ಟಾರೆ ಸಮಸ್ಯೆಯ ಚಿತ್ರಣವೇ ಗೊತ್ತಿಲ್ಲದ ಅಭ್ಯರ್ಥಿಗೆ ಟಿಕೆಟ್ ಕೊಡದಂತೆ ಆಯಾ ಪಕ್ಷದ ವರಿಷ್ಠರಿಗೆ ಸಲಹೆ ನೀಡುವ ಕೆಲಸ ಜನರಿಂದಲೇ ಆಗಲಿ, ಅಂಥ ಅವಕಾಶವನ್ನು ಆಯಾ ಪಕ್ಷಗಳು ಕಲ್ಪಿಸುವಂತೆ ಒತ್ತಾಯಿಸೋಣ.
*ಆಚಾರ್ಯ ಚಾಣಕ್ಯ ಹೇಳಿದಂತೆ, ಯಾವುದೇ ಕೆಲಸಕ್ಕೂ  ನಮ್ಮನ್ನೇ ನಾವು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳೋಣ. ನಾನೇನು ಮಾಡುತ್ತಿದ್ದೇನೆ? ಇದರ ಫಲಿತಾಂಶ ಏನು? ಇದು ಒಳಿತನ್ನುಂಟು ಮಾಡುತ್ತದೆಯೇ?

*ನಮ್ಮ ಮನೆಗೊಂದು ಟಿವಿಯೋ, ಮೊಬೈಲೋ ಬರುತ್ತದೆಂದು ಬಾಯಿ ಬಿಡುವ ಸ್ವಾರ್ಥ ಬಿಟ್ಟು ಒಟ್ಟಾರೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಪ್ರತಿನಿಧಿಯನ್ನು ಆರಿಸೋಣ.
*ತಮಗೆ ಅಗತ್ಯವಿರುವ ವ್ಯಕ್ತಿಗೆ ಆಯಾ ಪಕ್ಷವೇ ಟಿಕೇಟ್ ನೀಡುತ್ತದೆ ಎಂದಾದರೆ ಪ್ರಜಾಪ್ರಭುತ್ವಕ್ಕೆ ಯಾವ ಅರ್ಥವಿದೆ? ಮೂರು ಅಯೋಗ್ಯರನ್ನು ನಿಮ್ಮ ಮುಂದೆ ನಿಲ್ಲಿಸಿದ್ದೇನೆ. ಇದರಲ್ಲಿ ಒಬ್ಬ ಅಯೋಗ್ಯನನ್ನು ಆರಿಸಿ  ಅದಕ್ಕೆ ಯಾವ ಅರ್ಥವಿದೆ? ಎಂಬ ಸಂದಿಗ್ಧ ಪರಿಸ್ಥಿತಿ ಇನ್ನು ಮುಂದಾದರೂ ಕೊನೆಯಾಗಲಿ.

*ನಮ್ಮ ನಮ್ಮ ಕ್ಷೇತ್ರದಲ್ಲಿ ಪ್ರಚಾರಕ್ಕೆ ನಮ್ಮ ಶಾಸಕರು, ಮಂತ್ರಿಗಳು ಬರುತ್ತಾರೆಂದರೆ ಇಂದೇ ಅವರ ಬೆವರಿಳಿಸುವುದಕ್ಕೆ ಸಿದ್ಧರಾಗೋಣ. ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೆ ಮಾತ್ರ ಮತ ಇಲ್ಲವೆಂದರೆ ಮತ ಇಲ್ಲ ಎನ್ನೋಣ. ಆಶ್ವಾಸನೆಗೆ ಅವಕಾಶವೇ ಇಲ್ಲ. ಈ ಐದು ವರ್ಷದಲ್ಲಿ ಸಾಧಿಸಲಾಗದ್ದು ಮುಂಚಿನ ವರ್ಷಗಳಲ್ಲೂ ಸಾಧಿಸಲಾಗದ್ದೇ ಎಂಬುದು ನಮ್ಮಲ್ಲಿ ಅರಿವಿರಲಿ.
*ಈ ಹಿಂದೆ ಸಾಧಿಸಲಾಗದ್ದನ್ನು, ನಾಳೆ ಸಾಧಿಸುತ್ತೇನೆನ್ನುವ  ಮಾತು ಬರಿ ಕಟ್ಟುಕಥೆ. ನೈಜ ಸಾಧಕ ಸಾಧಿಸಿದ್ದನ್ನು ನೆನಪಿಸಲಾರ. ಸಾಧಿಸಬೇಕಾದದ್ದನ್ನು ಹೇಳಿಕೊಳ್ಳಲಾರ. ಅವನ ಮಾತಲ್ಲೇ ಅವನ ವ್ಯಕ್ತಿತ್ವವನ್ನು ಅಳೆಯುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳೋಣ.

Leave a Reply

Your email address will not be published. Required fields are marked *

1 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top