About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ತಲೆಮಾರುಗಳ ತುಲನೆ ಸಲ್ಲ, ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾಗುತ್ತಾರೆ: ಸಚಿನ್‌

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿರನ್ನು ಕೊಂಡಾಡಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಕೊಹ್ಲಿ ಒಬ್ಬರಾಗಲಿದ್ದಾರೆ ಎಂದಿದ್ದಾರೆ.

“ಒಬ್ಬ ಆಟಗಾರನಾಗಿ ವಿರಾಟ್‌ ಸಾಕಷ್ಟು ಅಭೂತಪೂರ್ವ ಬೆಳವಣಿಗೆ ಕಂಡಿದ್ದಾರೆ. ಅವರಲ್ಲಿ ಇರುವ ಅದಮ್ಯ ಉತ್ಸಾಹ ನನಗೆ ಸದಾ ಕಾಣಿಸುತ್ತಿತ್ತು. ಅವರು ಕೇವಲ ಈ ತಲೆಮಾರು ಮಾತ್ರವಲ್ಲ, ಸಾರ್ವಕಾಲಿಕ ಶ್ರೇಷ್ಠರ ಸಾಲಿನಲ್ಲಿ ನಿಲ್ಲಲಿದ್ದಾರೆ”

ಸಚಿನ್‌ ತೆಂಡೂಲ್ಕರ್‌

ವಿವಿಧ ತಲೆಮಾರುಗಳ ಆಟಗಾರರ ನಡುವಿನ ತುಲನೆಯಲ್ಲಿ ಅರ್ಥವಿಲ್ಲ ಎಂದ ಸಚಿನ್‌, “ನನಗೆ ತುಲನೆಗಳನ್ನು ಮಾಡಲು ಇಷ್ಟವಿಲ್ಲ. 1960, 70 ಹಾಗು 80ರ ನಡುವಿನ ವಿವಿಧ ಕಾಲಘಟ್ಟಗಳಲ್ಲಿ ವಿಭಿನ್ನ ರೀತಿಯ ಬೌಲರ್‌ಗಳು ಇದ್ದರು. ನನ್ನ ಕಾಲ ಹಾಗು ಪ್ರಸಕ್ತ ಕಾಲದಲ್ಲೂ ಇದೇ ರೀತಿ ಬದಲಾವಣೆ ಇದೆ. ಪ್ರತಿ ತಲೆಮಾರಿನ ಕಾಲಘಟ್ಟದಲ್ಲೂ ಆಟವನ್ನು ಭಿನ್ನವಾಗಿ ಆಡುತ್ತಾ ಬರಲಾಗಿದೆ, ನಿಯಮಗಳು ಬೇರೆ ಇವೆ, ನಿರ್ಬಂಧಗಳು, ಅಂಕಣಗಳು, ಚೆಂಡುಗಳು ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ಬದಲಾವಣೆಗಳು ಆಗಿವೆ” ಎಂದು ಸಚಿನ್‌ ಪ್ರತಿಪಾದಿಸಿದ್ದಾರೆ.

ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಕುರಿತು ಮಾತನಾಡಿದ ಸಚಿನ್‌, “ಈ ಬಾರಿ ನಮ್ಮ ಮುಂದೆ ಭಾರೀ ದೊಡ್ಡ ಅವಕಾಶವಿದೆ. ಹಿಂದೆ ಇದ್ದ ತಂಡದಂತೆ ಆಸ್ಟ್ರೇಲಿಯಾ ಈಗ ಉಳಿದಿಲ್ಲ. ಸ್ಮಿತ್‌ ಹಾಗು ವಾರ್ನರ್‌ ಇಲ್ಲದೇ ಇರುವ ಕಾರಣ, ಈ ಬಾರಿ ಅತ್ಯುತ್ತಮ ಫಲಿತಾಂಶದೊಂದಿಗೆ ಬರಲು ಸದಾವಕಾಶವಿದೆ” ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತ ತಂಡದಲ್ಲಿ ಈಗ ಅತ್ಯುತ್ತಮ ವೇಗಿಗಳಿದ್ದು, ವಿರಾಟ್‌ ಕೊಹ್ಲಿಗೆ ಆಡುವ ಹನ್ನೊಂದರ ಬಳಗ ರಚಿಸಲು ಅತ್ಯುತ್ತಮ ಸಾಧ್ಯತೆಗಳಿವೆ ಎಂದ ಸಚಿನ್‌, ತಂಡದಲ್ಲಿ ಸ್ಥಾನ ಗಿಟ್ಟಿಸಲು ಅಪಾರವಾದ ಪೈಪೋಟಿ ಇರುವುದು ಆರೋಗ್ಯಕರ ಲಕ್ಷಣ ಎಂದಿದ್ದಾರೆ.

ಸ್ಮಿತ್‌ ಹಾಗು ವಾರ್ನರ್‌ ಮೇಲಿರುವ ನಿಷೇಧ ಹಾಗು ಅದರ ತೆರುವಗೊಳಿಸುವ ಕುರಿತಂತೆ ಪ್ರತಿಕ್ರಿಯೆ ನೀಡಲು ಸಚಿನ್‌ ನಿರಾಕರಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close