About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅನಂತ್​ ಕುಮಾರ್​ ಅವರ ಖಾತೆ ವಹಿಸಿಕೊಂಡ ಡಿ.ವಿ. ಸದಾನಂದ ಗೌಡ

ದೆಹಲಿ: ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ  ಮೃತಪಟ್ಟಿದ್ದ ಕೇಂದ್ರ ಸಚಿವ ಅನಂತ್​ ಕುಮಾರ್​ ಅವರಿಂದ ತೆರವಾಗಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವರಾಗಿ ಡಿ.ವಿ. ಸದಾನಂದ ಗೌಡ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನೆಗಳ ಜಾರಿ ಇಲಾಖೆ ಸಚಿವರಾಗಿರುವ ಕರ್ನಾಟಕದ ಡಿ.ವಿ. ಸದಾನಂದ ಗೌಡ ಅವರಿಗೆ ಅನಂತ್​ ಕುಮಾರ್​ ಅವರ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೆ ಮಾಡಿದ್ದರು. ಅನಂತ್​ ಕುಮಾರ್​ ನಿರ್ವಹಿಸುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೇಂದ್ರ ಪಂಚಾಯತ್​ ರಾಜ್​ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್​ ಅವರಿಗೆ ಹಂಚಿಕೆ ಮಾಡಲಾಗಿತ್ತು.

ಇಂದು ಡಿ.ವಿ.ಸದಾನಂದ ಗೌಡ ಅಧಿಕಾರ ಸ್ವೀಕಾರ ಮಾಡಿದ್ದು, ನರೇಂದ್ರ ಸಿಂಗ್​ ತೋಮರ್​ ಕೂಡ ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close