ಸಂವಿಧಾನ ಬದಲಿಸಬಾರದಷ್ಟು ಅತಿ ಉತ್ಕ್ರಷ್ಟ ಗ್ರಂಥವೇನಲ್ಲ!

Posted In : ಅಂಕಣಗಳು, ಸಾಗರೋತ್ತರ

ಮೊಟ್ಟ ಮೊದಲನೆಯದಾಗಿ ಭಾರತದ ಸಂವಿಧಾನವನ್ನು ಅಪವಿತ್ರಗೊಳಿಸಿದ ಕೀರ್ತಿ ಕಾಂಗ್ರೆಸ್ ಪಾರ್ಟಿಗೆ ಸಲ್ಲಬೇಕು. ಸಂವಿಧಾನದ ಬದಲಾವಣೆಗೂ ಮತ್ತು ತಿದ್ದುಪಡಿಗೂ ಅಂತಹ ಭಯಂಕರ ವ್ಯತ್ಯಾಸವೇನೂ ಇಲ್ಲ. ಅನಂತಕುಮಾರ್ ಹೆಗಡೆಯವರು ‘ಸಂವಿಧಾನವನ್ನು ಬದಲಾವಣೆ ಮಾಡಬೇಕು, ಮಾಡುವುದಕ್ಕೇ ನಾವು ಬಂದಿರುವುದು’ ಅಂತ ಹೇಳಿದ್ದು ನಿಜವಾಗಿಯೂ ಭಯ ಪಡಬೇಕಾಗಿಯೇ ಇಲ್ಲ. ಹೇಗಿದ್ದರೂ ಸಂವಿಧಾನ ತಿದ್ದುಪಡಿ ಮಾಡಬೇಕಾದವರು ಸಂಸದೀಯರು. ಯಾರೋ ಒಬ್ಬ ಅಥವಾ ನಾಲ್ಕು ಜನ ಸಂವಿಧಾನ ಮಾಡಬೇಕೆಂದು ಇಚ್ಛೆ ವ್ಯಕ್ತಪಡಿಸಿದರೆ, ಅದನ್ನು ಒಂದು ಮಂತ್ರ ದಂಡ ಉಪಯೋಗಿಸಿ ತಟಕ್ಕೆಂದು ಬದಲಾಯಿಸಲಾಗುವುದಿಲ್ಲ. ಅಬ್ಬಬ್ಬಾ ಅಂದರೆ, ಅದರ ಬಗ್ಗೆ ಚರ್ಚೆ ಆರಂಭಿಸಬಹುದಷ್ಟೆ. ಅದೇ ಕಾರಣಕ್ಕೆ ಸಂವಿಧಾನ ಬದಲಿಸಲಿಚ್ಛಿಸದವರು ಕೂಗಾಡುತ್ತಿದ್ದಾರೆ.

ಈ ಗುಂಪು ಅನಂತಕುಮಾರ್ ಹೆಗಡೆ ಅವರನ್ನು ನೇಣುಗಂಬಕ್ಕೆ ಏರಿಸಲು ತಯಾರಾಗಿದೆ. ಆದರೆ, ಭಾರತದ ಸಂವಿಧಾನಕ್ಕೆ ಸೆಕ್ಯುಲರ್ ಎಂಬ ಪದವನ್ನು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯಲ್ಲಿ (3-1-1977) ಸಂವಿಧಾನದಲ್ಲಿ ತೋರಿಸಿದ್ದು. ಆಕೆ ಸಂಸತ್ತನ್ನು ಕೇಳಲೇ ಇಲ್ಲ. ಇಂದಿರಾ ಗಾಂಧಿಗೆ ತನ್ನ ಅಧಿಕಾರಕ್ಕೆ ಅಡಚಣೆ ಬಂದರೂ ಕಾನೂನನ್ನು ಮತ್ತು ಸಂವಿಧಾನವನ್ನು ಲೆಕ್ಕಿಸದೆ ಆಡಳಿತ ಮಾಡುತ್ತಿದ್ದ ಮಹಿಳೆ. ತನ್ನ ಕಾಂಗ್ರೆಸ್ ಪಾರ್ಟಿಯಲ್ಲಿ ಪ್ಯಾಂಟನ್ನು ಧರಿಸುತ್ತಿದ್ದ ಒಬ್ಬಳೇ ವ್ಯಕ್ತಿ ಇಂದಿರಾ ಗಾಂಧಿ. ಬಾಕಿ ಎಲ್ಲಾ ಪಾರ್ಟಿ ಸದಸ್ಯರುಗಳೆಲ್ಲರನ್ನು ನಪುಂಸಕರನ್ನಾಗಿ ಇಟ್ಟುಕೊಂಡಿದ್ದ ಮಹಿಳೆ. ಬಾಕಿ ಎಲ್ಲಾ ಸದಸ್ಯರುಗಳಿಗೆ ಬೇಕಾಗಿದ್ದೆಂದರೆ ಅಲ್ಪ, ಸ್ವಲ್ಪ ದುಡ್ಡು ಹೊಡೆಯುವ ಅಧಿಕಾರದ ಸ್ಥಳಗಳು. ಅಷ್ಟಕ್ಕೇ ಅವರು ತಮ್ಮ, ತಮ್ಮ ಸ್ವಾಭಿಮಾನವನ್ನು ಮಾರಿಕೊಂಡು ನಗುಮುಖವಿಟ್ಟುಕೊಂಡು ದಾಸ್ಯಕ್ಕೆ ಬಲಿಯಾದವರು. ಭಾರತ ಇನ್ನೂ ಬೆಳೆಯುತ್ತಿರುವ ದೇಶ. ಈ ಏನೇನೊ, ಎಷ್ಟೋ ಬದಲಾವಣೆಗಳಾಗಬೇಕಾಗಿದೆ. ಭಾರತೀಯ ಸಂಸ್ಕೃತಿ ಪುರಾತನವಾದದ್ದಾದರೂ ಭಾರತ ಒಂದು ಬೆಳೆಯುತ್ತಿರುವ ಕೂಸು. ಭಾರತ ಸಂವಿಧಾನವೂ ಕಾಲಕ್ಕೆ ತಕ್ಕಂತೆ ಬೆಳೆಯಬೇಕಿದೆ.

ಸಂವಿಧಾನವನ್ನು ಬರೆದವರೂ ಸಹ ದೇವ ಮಾನವರಾಗಿರಲಿಲ್ಲ. ಅಂದಿನ ಕಾಲಕ್ಕೆ ತಕ್ಕಂತೆ, ಬೇರೆ, ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದುಕೊಂಡು ಮತ್ತು ಭಾಷಾಂತರ ಮಾಡಿಕೊಂಡು ಭಟ್ಟಿ ಇಳಿಸಿದ ಗ್ರಂಥ. ಪ್ರಕಾಶ್ ರೈನಿಂದ ಹಿಡಿದು ಎಲ್ಲರೂ, ‘ಸಂವಿಧಾನಕ್ಕೆ ಒಂದು ಪ್ರಿಯಾಮ್ಬೆಲ್ ಇದೆ ಅದು ಹೆಗಡೆಯವರಿಗೆ ಗೊತ್ತೇ ಇಲ್ಲ. ಅದನ್ನು ಓದಿದ್ದರೆ ರೀತಿ ಸಂವಿಧಾನವನ್ನು ಬದಲಿಸುವ ಸೊಲ್ಲೆತ್ತುತ್ತಿರಲಿಲ್ಲ ’ಅನ್ನುತ್ತಿದ್ದಾರೆ. ಪ್ರಿಯಾಮ್ಬೆಲ್ಲ್ ಅಂದರೆ ಮುನ್ನುಡಿ ಅಥವಾ ಪೀಠಿಕೆ ಎಂಬರ್ಥ. ಭಾರತದ ಸಂವಿಧಾನದಲ್ಲಿ ಹನ್ನೊಂದು ಸಾಲುಗಳ ಪ್ರಿಯಾಮ್ಬೆಲ್ ಇದೆ. ಅದರಲ್ಲೆಲ್ಲೂ ಅದನ್ನು ಬದಲಿಸುವಂತಿಲ್ಲ ಎಂದು ಹೇಳಿಯೇ ಇಲ್ಲ. ಸಾಧಾರಣವಾಗಿ, ಯಾರೂ ಸಂವಿಧಾನವನ್ನು ಓದುವುದಿಲ್ಲ ಮತ್ತು 99 ಪ್ರತಿಶತದ ಪ್ರಜೆಗಳು ಸಂವಿಧಾನವನ್ನು ಓದುವ ಗೋಜಿಗೆ ಹೋಗಿರುವುದಿಲ್ಲ.

ಇದರಲ್ಲಿ ನಮ್ಮ ಸಂಸದೀಯರು ಮತ್ತು ವಿಧಾನ ಪರಿಷತ್ತಿನ ಸದಸ್ಯರೂ ಸಹ ಸೇರಿದ್ದಾರೆ. ಬೇಕಾದಾಗಷ್ಟೇ ಸಂವಿಧಾನದ ಪೇಜುಗಳನ್ನು ತಿರುವಿ ಹಾಕುತ್ತಾರೆ. ಸಂವಿಧಾನದ ಬಗ್ಗೆ ಚರ್ಚೆಗಳಾಗುತ್ತಿರುವಾಗ ಯಾರು ಏನು ಬಡಿದುಕೊಳ್ಳುತ್ತಿದ್ದಾರೆ ಅಂತ ಸಾಮಾನ್ಯ ಪ್ರಜೆಗಳಿಗೆ ಗೊತ್ತಾಗಿರುವುದೇ ಇಲ್ಲ. ಜನ ತಮ್ಮ ಪಾಡಿಗೆ ತಾವು ತಮ್ಮ, ತಮ್ಮ ಹೊಟ್ಟೆ ಪಾಡನ್ನು ನೋಡಿಕೊಳ್ಳುವುದರಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದಲ್ಲದೆ ಪ್ರಜ್ಞಾವಂತ ಪ್ರಜೆಗಳಿದ್ದಲ್ಲಿ ಸಂಪೂರ್ಣ ಮತ್ತು ಅರ್ಥಪೂರ್ಣವಾದ ಚರ್ಚೆ ಮಾಡಲು ಸಾಧ್ಯ. ಅದಕ್ಕೆ ಪ್ರಜ್ಞಾವಂತರಲ್ಲದೆ, ವಿದ್ಯಾವಂತ ಪ್ರಜೆಗಳೂ ಬೇಕು. ಮತ್ತೆ, ಭಾರತ ದೇಶದಲ್ಲಿ ರೆಫೆರೆಂಡಮ್ ಅನ್ನುವ ಪದ್ಧತಿಯೇ ಇಲ್ಲ. ಸಂವಿಧಾನದಂತಹ ಘನ ವಿಚಾರದಲ್ಲಿ, ನೇರವಾಗಿ ಪ್ರಜೆಗಳಿಂದಲೇ ಮತ ಹಾಕಿಸಿ,ನಿರ್ಧಾರ ಕೆಲವೇ ಕೆಲ ಚುನಾಯಿತ ಮತ್ತು ಬೆರಳೆಣಿಕೆಯಷ್ಟು ಬುದ್ಧಿ ಜೀವಿಗಳು ಮತ್ತು ಚಿಂತಕರು ಅಂತ ಕರೆಸಿಕೊಳ್ಳುವ ಜನಗಳ ಅಭಿಪ್ರಾಯದ ಮೇರೆಗೆ ಇಡೀ ದೇಶಕ್ಕೆ ಪ್ರಭಾವ ಬೀರುವ ನಿರ್ಧಾರಗಳನ್ನು ಖಂಡಿತ ತೆಗೆದುಕೊಳ್ಳಬಾರದು.

ಈ ತರಹದ ಘನ ವಿಚಾರಗಳಿಗೆ ಜನ ಸಾಮಾನ್ಯರ ರೆಫೆರೆಂಡಮ್ ಕರೆಯಲೇಬೇಕೆನ್ನುವ ಸಂವಿಧಾನ ತಿದ್ದುಪಡಿಯನ್ನು ತರುವುದು ಸಮಯೋಚಿತವಾದದ್ದು. ಯಾವ ದೇಶದ ಸಂವಿಧಾನವೂ ಅತ್ಯತ್ಕೃಷ್ಟ ಗ್ರಂಥವಾಗಿರುವುದಿಲ್ಲ. ಭಾರತ ದೇಶದಂತಹ ಗಣರಾಜ್ಯದಲ್ಲೂ ಸಹ ಈ ಮಾತು ನಿಜ. ಪ್ರಸಕ್ತ ಸಂವಿಧಾನ ಬದಲಾವಣೆಯ ಚರ್ಚೆಯಲ್ಲಿ ಅಂತ ಓದಿಕೊಳ್ಳಿ), ಬೆರಳೆಣಿಕೆಯಷ್ಟು ಜನಗಳಿಂದ ಮಾತ್ರ ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯದ ಅಭಿಪ್ರಾಯಗಳನ್ನು ಪಡೆದುಕೊಂಡು, ಅವರುಗಳನ್ನು ದೃಶ್ಯ ಮಾಧ್ಯಮದಲ್ಲಿ ತಂದು ಕೂರಿಸಿಕೊಂಡು ಗಂಟಲು ಹರಿದು ಹೋಗುವಷ್ಟು ಚರ್ಚೆ ಮಾಡಿದರೆ ಯಾವ ಪುರುಷಾರ್ಥ ಸಾಧಿಸಿದಂತಾಯಿತು? ಅದಲ್ಲದೆ ಯೂಟ್ಯೂಬ್ ಗಳಲ್ಲಿ ಕೆಲ ದಲಿತ ಸಂಘಟನೆಯ ವ್ಯಕ್ತಿಗಳು ಅನಂತ್ ಕುಮಾರ್ ಹೆಗಡೆಯವರನ್ನು ಅತ್ಯಂತ ಕೀಳು ಮಟ್ಟದ ಪೋಲಿ ಮಾತುಗಳಲ್ಲಿ ಬೈದಿರುವುದನ್ನು ನೋಡಿದರೆ ಅಸಹ್ಯವಾಗುತ್ತದೆ.

ಈ ವಿಷಯದಲ್ಲಿ ಪ್ರಕಾಶ್ ರೈ ಅವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಈತನ ಅಭಿಪ್ರಾಯ ಮಾಧ್ಯಮಗಳಿಗೆ ಯಾಕೆ ಅಷ್ಟೊಂದು ಇಷ್ಟವೆಂದರೆ, ಆತ ಒಬ್ಬ ಸಿನಿಮಾ ನಟನಾಗಿರುವುದಕ್ಕೆ. ಅಷ್ಟಲ್ಲದೆ ಪ್ರಕಾಶ್ ರೈಗೆ ಮತ್ಯಾವ ಘನಂಧಾರಿ ವಿದ್ಯೆ ಅಥವಾ ಬುದ್ಧಿವಂತಿಕೆ ಇದೆ? ಈತನ ವೈಯಕ್ತಿಕ ಅಭಿಪ್ರಾಯ ಮಾತ್ರ ಯಾವ ಕಾರಣಕ್ಕೆ ಗೌಣವಾಗಿದೆ? ಹಾಗೆ, ಅನಂತ್ ಕುಮಾರ್ ಹೆಗಡೆ ಅವರು ಕ್ಷಮೆಯಾಚಿಸಬೇಕೆಂದೆಲ್ಲಾ ಗಬ್ಬೆಬ್ಬಿಸಿದರು. ಸಂಸತ್ತಿನಲ್ಲಿ ಚಾಣಾಕ್ಷ ಹೆಗಡೆ ಕ್ಷಮಾಪಣೆಯನ್ನು ಕೇಳುವಂತೆ ನಟಿಸಿ ಕೂತುಬಿಟ್ಟರು. ಆದರೆ ಮಾಧ್ಯಮಗಳಲ್ಲೆಲ್ಲಾ ಹೆಗಡೆಯವರು ಸದನದಲ್ಲಿ ಕ್ಷಮೆಯಾಚಿಸಿದ್ದಾರೆ ಅಂತ ಬಂದಿದ್ದರಿಂದ ಸದ್ಯಕ್ಕೆ ಗಲಾಟೆ ಶಮನಗೊಂಡಿದೆ. ಒಳಗೊಳಗೇ ಮುಸಿ, ಮುಸಿ ನಕ್ಕು, ’ಅಯ್ಯೋ ದಡ್ಡ ಮಕ್ಕಳ್ರಾ’ ಎಂದು ಖುಷಿಪಟ್ಟುಕೊಂಡಿದ್ದಾರೆ.

ನಿಜವಾಗಿಯೂ ಹೆಗಡೆಯವರು ಸಂಸತ್ತಿನಲ್ಲಿ ಹೇಳಿದ್ದೇನೆಂದರೆ ‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳುವುದರಲ್ಲಿ ಅಭ್ಯಂತರವೇನಿಲ್ಲ ’ಎಂದು ಮಾತ್ರ. ಇದಪ್ಪ ಜಾಣ ಮಾತು ಅಂದರೆ. ಇತ್ತೀಚೆಗೆ ಭಾರತದಲ್ಲಿ ದಿನ ಬೆಳಗಾದರೆ ಒಂದಲ್ಲಾ ಒಂದು ವಿಷಯದಲ್ಲಿ ಸುಖಾ ಸುಮ್ಮನೆ ಚರ್ಚೆ ಶುರುವಾಗುತ್ತದೆ. ಅದನ್ನೆಲ್ಲ ದೇಶಕ್ಕೆ ದುರ್ಗತಿ ಬಂದಿದೆ ಅಂತ ಕೆಲಸಕ್ಕೆ ಬಾರದ ವಿಷಯಗಳನ್ನು ಮುಂದಿಟ್ಟುಕೊಂಡು ಗಂಟಲು ಹರಿದುಕೊಳ್ಳುವುದು ಮಾಧ್ಯಮಗಳು ಘನವೆತ್ತ ವಿಚಾರಗಳನ್ನು ಮತ್ತು ವಿಷಯಗಳನ್ನು ಜನಗಳ ಮನಸ್ಸಿನಲ್ಲಿ ರೂಪಿಸುವಲ್ಲಿ ಪ್ರಯತ್ನ ಪಡಬೇಕು. ಇದಕ್ಕೆ ಮುಖ್ಯ ಜವಾಬ್ದಾರಿ ವಹಿಸಿಕೊಳ್ಳಬೇಕಾದವರು ಮಾಧ್ಯಮದ ಸಂಪಾದಕರುಗಳು. ದೃಶ್ಯ ಮಾಧ್ಯಮದ ಸಂಪಾದಕರುಗಳು ಹಿಂದೆ ಮುದ್ರಣ ಮಾಧ್ಯಮದಲ್ಲಿ ಪಳಗಿದವರು. ದೃಶ್ಯ ಮಾಧ್ಯಮದ ಪ್ರಭಾವದ ಮತ್ತು ಪ್ರಭಾವಳಿಯನ್ನು ಆಳವನ್ನರಿಯದಿರುವವರು.

ಮತ್ತೊಂದು ಪೀಳಿಗೆಯ ದೃಶ್ಯ ಮಾಧ್ಯಮದಲ್ಲೇ ಪರಿಣತಿ ಹೊಂದಿರುವ ಮತ್ತು ದೃಶ್ಯ ಮಾಧ್ಯಮದಲ್ಲಿ ಯಾವ ರೀತಿ ಗಂಭೀರವಾಗಿ ನಡೆದುಕೊಳ್ಳಬೇಕು, ಯಾವ ರೀತಿಯ ಭಾಷೆ ಬಳಸಬೇಕು ಹಾಗೂ ಯಾವ ರೀತಿ ಮತ್ತು ಗಂಭೀರವಾಗಿ ಉಡುಪುಗಳನ್ನು ಧರಿಸಿರಬೇಕು ಎಂದು ಕಲಿತಿರುವವರನ್ನು ಮಾತ್ರ ಕೂರಿಸಿಕೊಂಡು ಚರ್ಚಿಸಬೇಕು. ಪ್ರಮುಖವಾಗಿ ದೃಶ್ಯ ಮಾಧ್ಯಮಗಳು ಭಾರತ ದೇಶದಲ್ಲಿ ಟ್ಯಾಬ್ಲಾಯ್ಡ್ ಮಾಧ್ಯಮ ಗಳಾಗಿಬಿಟ್ಟಿವೆ. ತಲೆ ಚಿಟ್ಟು ಹಿಡಿಸುತ್ತವೆ. ಹೀಗೆಯೇ ಒಂದೊಂದು ದಿನಕ್ಕೆ ಒಂದೊಂದು ಕೆಲಸಕ್ಕೆ ಬಾರದ ವಿಷಯಗಳನ್ನೆತ್ತಿಕೊಂಡು ಆಕಾಶವೇ ಕಳಚಿ ಬಿಟ್ಟಂತೆ ಕೂಗಾಡಿದರೆ ಯಾವ ಪ್ರಯೋಜನವೂ ಆಗುವುದಿಲ್ಲ.

ಯಾವ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ತೊಡುತ್ತಾರೋ ಅಂತಹವರು ಎಂದಿಗೂ ಸಂವಿಧಾನವನ್ನು ದುರುಪಯೋಗಿಸಿಕೊಳ್ಳುವುದಾಗಲೀ ಅಥವಾ ಮನ ಬಂದಂತೆ ಬದಲಿಸುವುದಾಗಲೀ ಇಲ್ಲ. ವಿನಾ ಕಾರಣ ಈ ವಿಷಯದ ಬಗ್ಗೆ ಅನವಶ್ಯಕ ಚರ್ಚೆ ಸಲ್ಲ. ನಮ್ಮ ದೇಶದ ಗಣರಾಜ್ಯ ಅರ್ಥಗರ್ಭಿತವಾಗಿ ಪ್ರಜೆಗಳ ಸತ್ಕಾರ್ಯಕ್ಕೆ ಬಳಕೆಯಾಗಬೇಕಾದರೆ, ಸಮಯಕ್ಕೆ ತಕ್ಕಂತೆ ಸಂವಿಧಾನದ ಆಗು, ಹೋಗುಗಳ ಬಗ್ಗೆ, ಸಕಾರ ನಕಾರಗಳ ಬಗ್ಗೆ ಮತ್ತು ಸಾಧಕ ಬಾಧಕಗಳ ಬಗ್ಗೆ ಚರ್ಚೆ ಆಗಲೇ ಬೇಕು. ಅದು ಸಂವಿಧಾನವನ್ನು ಬುಡಮೇಲು ಮಾಡಬೇಕಾದರೂ ಸರಿ. ಭಾರತದ ಸಂವಿಧಾನ ಒಂದು ಜೀವಂತ ಸಂವಿಧಾನ ಎಂದು ಕರೆಸಿಕೊಳ್ಳುತ್ತದೆ. ಒಂದು ಸಂವಿಧಾನ ಜೀವಂತವಾಗಿರಬೇಕೆಂದರೆ ಕಾಲದಿಂದ ಕಾಲಕ್ಕೆ ಮತ್ತು ಬೆಳೆಯುತ್ತಿರಬೇಕು.

5 thoughts on “ಸಂವಿಧಾನ ಬದಲಿಸಬಾರದಷ್ಟು ಅತಿ ಉತ್ಕ್ರಷ್ಟ ಗ್ರಂಥವೇನಲ್ಲ!

  1. r u read full constituion book man? may be u r reservation quota? dat’s why u r support … just sit think and other categories peoples problems k.

  2. Dear shanta kumar,
   Better you come and join BJP.
   People like you channged mahabharata , ramayana and Manushastra and it looks constitutional change not far away.
   Its shame.
   Stupid article.

 1. ನಿಜಕ್ಕೂ ಅರ್ಹ ಪೂರ್ಣವಾದ ಬರಹ . ರೂಹಿತ್ ಚಕ್ರ ತೀರ್ಥ ಅವರು ಕೂಡ ಬಿಡಿಸಿ ಹೇಳಿದ್ದಾರೆ. ಆನಂತ್ ಕುಮಾರ್ ಹೆಗಡೆ ಯವರು ತರ ಪಕ್ಷದ ರಾಜಕಾರ್ನಿಗಳು ಇದ್ದರೆ ನಿಜವಾಲು ನಮ್ಮ ದೇಶ ಉದ್ದಾರ ಆಗುತ್ತೆ. ಈ ಮೀಸಲಾತಿ ಯನ್ನು ತೆಗೆದು ಬಿಟ್ಟರೆ ಗೊತ್ತುಗುತ್ತೆ ?

 2. ಅದೇನು ನಿಮ್ಮ ಅಸಮಾನತಯ ಅಸ್ತ್ರ ಮನುಶಾಸ್ತ್ರವೇ ಬಸಲಾಯಿಸಲು , ಮೊದಲು ತಿದ್ದುಪಡಿಗೂ ಬದಲಾವಣೆಗೂ ವ್ಯತ್ಯಾಸ ತಿಳಿದುಕೊಳ್ಳಿ ಮಾನ್ಯರೇ…… ಆಮೇಲೆ ಅಂಕಣ ಬರೆಯಿರಿ ಈ ಥರಹದ ವಿವಾದಾತ್ನಕ ಹೇಳಿಕೆ, ಬರಹಗಳು ನಿಮ್ಮ ಜ್ಞಾನಕ್ಕೆ ಹಿಡಿದ ಕೈಗನ್ನಡಿ .

Leave a Reply

Your email address will not be published. Required fields are marked *

2 × 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top