ಇಲಾನ್ ಮಸ್ಕ್ ಎಂಬ ಧೀರನ ಸಾಹಸಗಾಥೆ

Posted In : ಅಂಕಣಗಳು, ಸಾಗರೋತ್ತರ

-ಡಾ. ಶಾಂತು ಶಾಂತಾರಾಮ್

ಕಳೆದ ವಾರ ಅಮೆರಿಕದಲ್ಲಿ ಒಂದು  ಸಂಗತಿ ಜರುಗಿತು.  ನಲವತ್ತೆಂಟು ವಯಸ್ಸಿನ ಇಲಾನ್ ಮಸ್ಕ್  ಎಂಬಾತ ಒಂದು ರಾಕೆಟನ್ನು ಮರು-ಉಪಯೋಗಿಸುವಂತಹ ಬೂಸ್ಟರ್ ಜಗಲಿಗಳಿಂದ ತನ್ನ ಖಾಸಗಿ ಕಂಪನಿ SpaceX ತಯಾರಿಸಿ, ತನ್ನದೇ ಮತ್ತೊಂದು ಕಂಪನಿ  Tesla ಎಲೆಕ್ಟ್ರಿಕ್ ಕಾರಿನಲ್ಲಿ ಒಂದು ಬೊಂಬೆಯನ್ನು ಕೂರಿಸಿ ಬಾಹ್ಯಾಕಾಶಕ್ಕೆ ಉಡಾಯಿಸಿ ಗೆದ್ದೇಬಿಟ್ಟ.  ಮೂರು ಬೂಸ್ಟರ್‌ಗಳ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿ ಮತ್ತೆ ಭೂಮಿಗೆ ಬಂದುವು.  ಅದರಲ್ಲಿ ಎರಡು ಬೂಸ್ಟರ್‌ಗಳು ಎಲ್ಲಿಂದ ಹಾರಿದ್ದವೋ ಮತ್ತೆ ಅದೇ ಜಾಗಕ್ಕೆ ಬಂದಿಳಿದವು, ಒಂದು  ಸಮುದ್ರಕ್ಕೆ ಬಿದ್ದು ಹೋಯಿತು.  ಅದನ್ನೂ ಸಹ ಎತ್ತಿ ವಾಪಸ್ ತರಲಾಯಿತು.  ಇದರಿಂದ ಪ್ರಮಾಣೀಕರಿಸಿದ್ದೇನಪ್ಪಾ ಅಂದರೆ ಬೂಸ್ಟರ್ ಜಗುಲಿಗಳನ್ನು ಮರು ಉಪಯೋಗಿಸಬಹುದೆಂದು ಸಾಬೀತುಪಡಿಸಿದ್ದು.ಅದಕ್ಕೆ ಸುಮಾರು 100 ಮಿಲಿಯನ್ ಡಾಲರ್‌ನಷ್ಟು ಹಣ ವಿನಿಯೋಗಿಸಿದ್ದಾನೆ.  ಈ ಸಂಗತಿ ಜಗತ್ತಿನಾದ್ಯಂತ ಬಾಹ್ಯಾಕಾಶದಲ್ಲಿ ಆಸಕ್ತಿ ಉಳ್ಳವರೆಲ್ಲರನ್ನೂ ಚಕಿತಗೊಳಿಸಿದೆ.

ಈತನ ಉದ್ದೇಶವೇನಪ್ಪಾ ಅಂದರೆ ಅಮೆರಿಕ ಸರಕಾರ ತನ್ನ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿಬಿಟ್ಟಿದೆ.  ಈ ಕಾರಣದಿಂದಾಗಿ ಅಮೆರಿಕದಿಂದ ಬಾಹ್ಯಾಕಾಶ ಉಡಾವಣೆಯೇ ಆಗುತ್ತಿಲ್ಲ.  ಹಾಗಾಗಿ ತಾನೇ ಖಾಸಗಿಯಾಗಿ  ಬಾಹ್ಯಾಕಾಶ ಉಡಾವಣೆ ಮಾಡಬಾರದು ಎಂದು  Nasa ಎಂಬ ಕಂಪನಿಯನ್ನು ಆರಂಭಿಸಿದ.  ಅಮೆರಿಕ ಸರಕಾರ ಬಾಹ್ಯಾಕಾಶ ಉಡಾವಣೆ ಮಾಡಬೇಕಾದರೆ ಬೇರೆ ದೇಶಗಳನ್ನಾಗಲೀ ಅಥವಾ ಬೇರೆ ದೇಶದ ಕಂಪನಿಗಳನ್ನು ಬೇಡಿಕೊಳ್ಳಬೇಕಾದ ಗತಿ ತಂದಿಟ್ಟುಕೊಂಡಿದೆ.  ಮಸ್ಕ್ ನ ಆಸೆ ಅಂದರೆ, ಘೆ ಸಂಸ್ಥೆಯಿಂದ ಗುತ್ತಿಗೆ ಪಡೆದುಕೊಂಡು ಅತೀ ಕಡಿಮೆ ಖರ್ಚಿನಲ್ಲಿ ಬಾಹ್ಯಾಕಾಶ ಉಡಾವಣೆ ಮಾಡಿ ಹಣ ಸಂಪಾದಿಸುವುದು.  ನಾಸಾ ಮಸ್‌ಕ್ಗೆ ಗುತ್ತಿಗೆ ನೀಡುವುದಕ್ಕೆ ಮುಂದೆ ಬಂದಿದೆ.  ಬಾಹ್ಯಾಕಾಶ ಸಂಶೋಧನೆಯಲ್ಲಿಯೂ ಸಹ ಖಾಸಗಿ ಕಂಪನಿ  ವ್ಯವಹಾರ ಮಾಡಬಹುದೆಂದು ತೋರಿಸಿದ್ದಾನೆ ಧೀರ ಇಲಾನ್ ಮಸ್ಕ್. ಇದಲ್ಲದೆ, ಇಲಾನ್ ಮಸ್ಕ್ Tesla ಎಂಬ ಬ್ಯಾಟರಿ ಎಲೆಕ್ಟ್ರಿಕ್ ಕಾರ್ ಕಂಪನಿಯ ಒಡೆಯ.

ಈಗಾಗಲೇ Tesla ಕಾರನ್ನು ಮಾರುಕಟ್ಟೆಗೆ ತಂದಿದ್ದಾನೆ.  ಆದರೆ, ಆ ಕಾರನ್ನು ಕಾರ್ ಡೀಲರ್‌ಗಳ ಮೂಲಕ ಮಾರಾಟ ಮಾಡುತ್ತಿಲ್ಲ.  ಕೊಂಡುಕೊಳ್ಳಬೇಕಾದರೆ, ನೇರವಾಗಿ ಕಂಪನಿಯಿಂದಲೇ ಖರೀದಿಸಿಬೇಕು.  ಬ್ಯಾಟರಿ ಎಲೆಕ್ಟ್ರಿಕ್ ಚಾರ್ಜ್ ಮಾಡುವುದಕ್ಕೆ ಚಾರ್ಜ್ ಮಾಡುವ ಸ್ಟೇಷನ್ ಗಳನ್ನೂ ಎಲ್ಲಾ ಜಾಗಗಳಲ್ಲಿ ನಿರ್ಮಿಸುತ್ತಿದ್ದಾನೆ.  ಮೊದ ಮೊದಲು ಉಚಿತವಾಗಿ ಬ್ಯಾಟರಿ ಚಾರ್ಜ್  ಆದರೆ ಇತ್ತೀಚೆಗೆ ಅದಕ್ಕೂ ದುಡ್ಡು ತೆರಬೇಕಾಗಿದೆಯಂತೆ.  45000 ಡಾಲರ್ ಕೊಟ್ಟು ಪೆಟ್ರೋಲ್‌ಗೆ ಆಗುವ ದುಡ್ಡು ಖರ್ಚು ಉಳಿಸಲು ಹೋದವರಿಗೆ ಇದು ಅಷ್ಟೊಂದು ಇಷ್ಟವಾಗುತ್ತಿಲ್ಲ.  ಇನ್ನೂ ಈ Tesla ಕಾರುಗಳು ಅಷ್ಟು ಬಳಕೆಯಲ್ಲಿಲ್ಲ.  ಆದರೆ ಒಂದಂತೂ ಸತ್ಯದ ಮಾತೆಂದರೆ ಎಲೆಕ್ಟ್ರಿಕ್ ಕಾರುಗಳು ಇನ್ನು ಸುಮಾರು ಹತ್ತು ವರುಷಗಳಲ್ಲಿ ಯಥೇಚ್ಛವಾಗಿ ಮಾರುಕಟ್ಟೆಗೆ ಬರಲಿವೆ ಹಾಗೂ ಪೆಟ್ರೋಲ್ ಕಾರುಗಳು ನಿಧಾನವಾಗಿ ಮಾಸಿ ಹೋಗಲಿವೆ.  Solar city ಎಂಬ ಮತ್ತೊಂದು ಕಂಪನಿಯಿಂದ ಎಲೆಕ್ಟ್ರಿಕ್ ಪವರ್  ಮಾಡುವುದಕ್ಕೆ ಆರಂಭಿಸಿದ್ದಾನೆ.  ಈ Solar city  ಎಂಬ ಕಂಪನಿಗೆ ಒಬಾಮ ಅಧ್ಯಕ್ಷರಾಗಿದ್ದಾಗ ಹಿಂದಿನ ಮಾಲಿಕರಿಗೆ 100 ಮಿಲಿಯನ್ ಡಾಲರ್ ಸರಕಾರೀ ಅನುದಾನ ನೀಡಿದ್ದರೂ ಸಹ ಅದು ದಿವಾಳಿ ಎದ್ದಿತ್ತು.  ಅದೇ ದಿವಾಳಿ ಕಂಪನಿಯನ್ನು ಮ್ಕ್ ಖರೀದಿಸಿ ಅದರಿಂದ ವಿದುಚ್ಛಕ್ತಿಯ ಹೊಸ ಶಕೆಯನ್ನೇ ಆರಂಭಿಸುವ ಕನಸು ಹೊಂದಿದ್ದಾನೆ.

ಮಸ್ಕ್ 1995ರಲ್ಲಿ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೌತ ಶಾಸ್ತ್ರದಲ್ಲಿ ಡಾಕ್ಟರೇಟ್ ಡಿಗ್ರಿ ಓದುತ್ತಿದ್ದುದನ್ನು ತೊರೆದು  zip2 ಎಂಬ ಸಾಫ್ಟ್ವೇರ್ ಕಂಪನಿ ತೆಗೆದ.  ಅದರಿಂದ  ಅದನ್ನು ಕಾಂಪ್ಯಾಕ್ ಕಂಪನಿಗೆ ಮುನ್ನೂರ ನಲವತ್ತು ಮಿಲಿಯನ್ ಡಾಲರಿಗೆ ಮಾರಿದ.  ಅದಾದ ಮೇಲೆ, x.com ಎಂಬ ಮತ್ತೊಂದು ಆನ್ಲೈನ್ ಕಂಪನಿ ತೆಗೆದ.  ಅದು  paypal ಎಂಬ ಪ್ರತಿಷ್ಠಿತ ಕಂಪನಿಯೊಳಗೆ ಲೀನವಾಗಿ ಹೋಯಿತು.  ಮತ್ತೆ ಅದನ್ನು ebay ಕಂಪನಿ 1.5 ಬಿಲಿಯನ್ ಡಾಲರ್‌ಗೆ ಕೊಂಡುಕೊಂಡಿತು.  ಆ ಹಣದಿಂದ ಮೇ 2001 ರಲ್ಲಿ spacex ಎಂಬ ಕಂಪನಿ ಆರಂಭಿಸಿದ.  2003 ರಲ್ಲಿ  Telsa ಕಾರ್ ಕಂಪನಿ  ಆರಂಭಿಸಿದ.

2015 ರಲ್ಲಿ  openAL ಕೃತಕ ಪ್ರಜ್ಞೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕಂಪನಿ ಶುರು ಮಾಡಿದ್ದಾನೆ.  ಮತ್ತೆ Neuralink ಎಂಬ ನರ ತಂತ್ರಜ್ಞಾನದ ಕಂಪನಿ ಶುರುಮಾಡಿ, ಅದರಿಂದ ಮೆದುಳಿಗೂ ಮತ್ತು ಕಂಪ್ಯೂಟರ್ ಮಧ್ಯೆ ಯಾವ ರೀತಿ ಜೋಡಿಸಿ ಮೆದುಳಿನ ಶಕ್ತಿಯನ್ನು ಹೆಚ್ಚಿಸಬಹುದು ಎಂಬುದನ್ನು 2016 ರಲ್ಲಿ ಶುರು ಮಾಡಿದ್ದಾನೆ.  ಡಿಸೆಂಬರ್ 2016 ರಲ್ಲಿ ಟನಲ್  ಕೊರೆಯುವ The boring company ಎಂಬ ಕಂಪನಿಯನ್ನು ಆರಂಭಿಸಿದ.  Hyperloop ಎಂಬ ಅತ್ಯಂತ ವೇಗವಾಗಿ ಚಲಿಸುವ ಸಾರಿಗೆ ಕಂಪನಿಯನ್ನು ಮತ್ತು  ನೇರವಾಗಿ ಹೆಲಿಕ್ಯಾಪ್ಟರ್ ತರಹ ಭೂಮಿಯಿಂದ ನೇರವಾಗಿ ಮೇಲೆ ಜಿಗಿದು ಫ್ಯಾನ್ ಗಳಿಂದ ಹಾರುವಂತಹ Musk electric jet  ಅನ್ನು ತಯಾರಿಸುವ ಕನಸು ಕಾಣುತ್ತಿದ್ದಾನೆ.  ಆತನ ಜೀವಮಾನದ ಉದ್ದೇಶವೆಂದರೆ ಭೂಮಿಯ ಅಧಿಕ ತಾಪಮಾನವನ್ನು ಕಡಿತಗೊಳಿಸುವುದು ಮತ್ತು ಮಾರ್ಸ್ ಗ್ರಹದ ಮೇಲೆ ಮನುಷ್ಯರು ಜೀವಿಸುವಂತಹ ವಾತಾವರಣ ನಿರ್ಮಿಸುವುದು.  ಇಂದು ಇಲಾನ್ ಮಸ್ಕ್ 20 ಬಿಲಿಯನ್ ಡಾಲರ್ ಒಡೆಯ.   ಇಲಾನ್ ಮಸ್ಕ್ ಇಂದು ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ 53 ನೇ ಸ್ಥಾನದಲ್ಲಿದ್ದಾನೆ.

 2001 ರಲ್ಲಿ  Mars ಓಯಸಿಸ್ ಎಂಬ ಯೋಜನೆಯನ್ನು ಕಲ್ಪಿಸಿಕೊಂಡು  Mars ಮೇಲೆ ಒಂದು ಸಣ್ಣ ಹಸಿರು ಮನೆಯನ್ನು ನಿರ್ಮಿಸಿ ಅಲ್ಲಿ ಹಸಿರು ಗಿಡಗಳನ್ನು ಬೆಳೆಸಿ ಆಮ್ಲಜನಕವನ್ನು ಉತ್ಪಾದಿಸಿ ಮನುಷ್ಯರು  ವಾಸ ಮಾಡುವುದಕ್ಕೆ ಮತ್ತೊಂದು ಗ್ರಹವನ್ನು ತಯಾರು ಮಾಡಲು  ರಷ್ಯಾದಿಂದ ಒಂದು ನವೀಕರಿಸಿದ ಹಳೇ ಇಂಟರ್ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್‌ಅನ್ನು ಕೊಳ್ಳಲು ಹೋಗಿದ್ದ.  ರಷ್ಯಾದವರು ಅದಕ್ಕೆ 10 ಮಿಲಿಯನ್ ಡಾಲರ್ ಕೇಳಿದಾಗ ಬೇಸರಗೊಂಡು ಬರೀ ಕೈಯಲ್ಲಿ ಅಮೆರಿಕಕ್ಕೆ ವಾಪಸ್ಸಾದ.   ಹಿಂದಿರುಗುವಾಗ ತಾನೇ  ಒಂದು ಬಾಹ್ಯಾಕಾಶಕ್ಕೆ ಉಡಾಯಿಸುವ ಜನ ಸಾಮಾನ್ಯರಿಗೆ ಎಟಕುವ ರಾಕೆಟ್ ಅನ್ನು ತಯಾರಿಸಬಾರದು ಎಂದು ಯೋಚಿಸತೊಡಗಿದ.

ಆ ಯೋಚನೆಯಿಂದ ಆರಂಭವಾದ ಕಂಪನಿಯೇ SpaceX.  ಇದರ ಮುಖ್ಯ ಉದ್ದೇಶವೆಂದರೆ ನಿಜವಾಗಿಯೂ ಸಾಮಾನ್ಯ ಜನರು ಬಾಹ್ಯಾಕಾಶಕ್ಕೆ ಹೋಗಿ-ಬಂದು ಮಾಡುವಂತಹ ಸಾರಿಗೆ ಸಂಸ್ಥೆಯನ್ನು ಸ್ಥಾಪಿಸುವುದು.  ತಾನೇ ತನ್ನ ಸ್ವಂತ 100 ಮಿಲಿಯನ್ ಡಾಲರ್ ಹಣವನ್ನು ಹೂಡಿದ.   ಬಾಹ್ಯಾಕಾಶ ನೌಕೆಗಳನ್ನು ತಯಾರಿಸಿ Falcon1 ಮತ್ತು Falcon9 ಎಂಬ ರಾಕೆಟ್‌ಗಳನ್ನು ಉಡಾಯಿಸಿತು.  2012ರಲ್ಲಿ SpaceX ಡ್ರ್ಯಾಗನ್  ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿ, ಪ್ರಪಂಚದಲ್ಲಿಯೇ ಪ್ರಥಮ ವಾಣಿಜ್ಯ ಉಡಾವಣ ವ್ಯವಹಾರವನ್ನು ಆರಂಭಿಸಿತು. ಇದರಿಂದ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್‌ಗೆ ಒಂದು ತಂಗುದಾಣವನ್ನು ತಲುಪಿಸಿತು.  ಇದರಿಂದಾಗಿ ಅಮೆರಿಕದ SpaceX ಸಂಸ್ಥೆ ಕಂಪನಿಗೆ ಉಡಾವಣ ಗುತ್ತಿಗೆಯನ್ನು ನೀಡಿತು. SpaceX 2017ರಲ್ಲಿ ಹದಿನೆಂಟು ರಾಕೆಟ್‌ಗಳನ್ನು ಉಡಾಯಿಸಿದೆ.  ಮಸ್ಕ್ Mars ಗ್ರಹದಲ್ಲಿ ಹತ್ತಿಪ್ಪತ್ತು ವರುಷಗಳಲ್ಲಿ ಮನುಷ್ಯರ ಕಾಲೋನಿ ಸ್ಥಾಪಿಸುವ ಕನಸು ಹೊತ್ತಿದೆ.  ಐಸಾಕ್ ಅಸಿಮೋವ್ ಫೌಂಡೇಶನ್ ನವರು ಹೇಳುವಂತೆ, ಇಲಾನ್ ಮಸ್ಕ್ ಹಲವಾರು  ಮೇಲೆ ಮನುಷ್ಯನು ಬದುಕುವಂತೆ ಮಾಡುವುದು ಯಾಕೆಂದರೆ ಒಂದಲ್ಲಾ ಒಂದು ದಿನ ಈ ಭೂಗ್ರಹದಲ್ಲಿ ಜನಗಳು ಬದುಕಲಾರದಷ್ಟು ಜನಸಂಖ್ಯೆ ಉಂಟಾದರೆ ಬೇರೆ, ಬೇರೆ ಗ್ರಹಗಳಲ್ಲಿ ಹೋಗಿ ವಾಸಿಸುವ ವ್ಯವಸ್ಥೆ ಮಾಡುವ ಕನಸು ಕಾಣುತ್ತಿದ್ದಾನೆ.

      ಇಲಾನ್ ಮಸ್ಕ್ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜೂನ್ 28, 1971 ರಲ್ಲಿ ಜನ್ಮ ತಾಳಿದ.  ಪ್ರಸ್ತುತ ಅಮೆರಿಕ ಮತ್ತು ಕೆನಡಾದ ಪ್ರಜೆ.  ಕೆನಡಾದ ಕ್ವೀನ್ಸ್ ವಿಶ್ವವಿದ್ಯಾಲಯದಲ್ಲಿ ಮತ್ತು ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಭೌತ ಶಾಸ್ತ್ರದಲ್ಲಿ ಪದವಿ  ಆಮೇಲೆ ಪ್ರತಿಷ್ಠಿತ ವಾರ್ಟನ್ ಬಿಸಿನೆಸ್ ಸ್ಕೂಲಿನಿಂದ MBA ಪದವಿ ಪಡೆದ.  ಚಿಕ್ಕ ವಯಸ್ಸಿನಲ್ಲಿ ಓದುವುದರಲ್ಲಿ ಅತಿ ಆಸಕ್ತಿ ಉಳ್ಳವನಾಗಿದ್ದನಂತೆ.  ತನ್ನ ಬ್ಯಾಚುಲರ್ ಡಿಗ್ರಿ ಓದುವ ಸಮಯದಲ್ಲಿ ತನ್ನ ಸಹಪಾಠಿ ಅಡಿ ರೆಸ್ಸಿ ಎನ್ನುವನ ಜತೆಗೂಡಿ, ಒಂದು ಹತ್ತು ರೂಮಿನ ಬಂಗಲೆಯನ್ನು ಬಾಡಿಗೆಗೆ ಪಡೆದು ಒಂದು ನೈಟ್ ಕ್ಲಬ್ಬನ್ನು ಶುರು ಮಾಡಿದ್ದ.  ಇಲಾನ್ ಮಸ್‌ಕ್ ತಾನು ಅರ್ಧ ಡೆಮಾಕ್ರೆಟಿಕ್, ಅರ್ಧ ರಿಪಬ್ಲಿಕನ್ ಅಂತ ಹೇಳಿಕೊಳ್ಳುತ್ತಾನೆ.  ಹಾಗೆಂದರೆ ಯಾವುದೇ ಪಕ್ಷ ಅಧಿಕಾರಕ್ಕೆ  ತನಗೆ ಯಾವ ತೊಂದರೆಯಾಗದಿರಲಿ ಅಂತ.  ಸಾಮಾಜಿಕವಾಗಿ ಪ್ರಗತಿಶೀಲ, ಆದರೆ ಹಣಕಾಸಿನ ವಿಚಾರದಲ್ಲಿ ಕಟು ಸಾಂಪ್ರದಾಯಿಕ ಮನುಷ್ಯ ಅಂತ ಬಣ್ಣಿಸಿಕೊಳ್ಳುತ್ತಾನೆ.  ಅಂದರೆ ಜಿಪುಣ ಎಂದರ್ಥವಾದಂತಾಯಿತು.

ಇಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಸರಕಾರದಲ್ಲಿ ಕೌಶಲ್ಯ ನೀತಿ-ನಿಯಮ ಕಮಿಟಿಗೆ ಸದಸ್ಯನಾಗಿ ಸೇರಿಕೊಂಡಿದ್ದ.  ಆದರೆ ಯಾವಾಗ ಟ್ರಂಪ್ ಪ್ಯಾರಿಸ್ ಪರ್ಯಾವರಣ ಒಪ್ಪಂದದಿಂದ ಅಮೆರಿಕದ ಸದಸ್ಯತ್ವವನ್ನು ಹಿಂದೆಗೆದುಕೊಂಡನೋ ತಕ್ಷಣ ಮಸ್ಕ್ ಕಮಿಟಿಗೆ ರಾಜಿನಾಮೆ ಕೊಟ್ಟುಬಿಟ್ಟ.  ಕಾರಣ ಮಸ್ಕ್ ಪರ್ಯಾವರಣದ ಮೇಲೆ ಅತ್ಯಂತ ಕಾಳಜಿ ಉಳ್ಳವನು.  ಮಸ್ಕ್ ಅಮೆರಿಕ ದೇಶ ಜಗತ್ತಿನಲ್ಲಿ ಹಿಂದೆಂದೂ ಯಾರೂ ಕಾಣದ ಅತ್ಯದ್ಭುತ ದೇಶ ಎಂದು ನಂಬುತ್ತಾನೆ.  ಸ್ವಯಂ ಚಲಾಯಿತ ಕಾರನ್ನು ಮಾರುಕಟ್ಟೆಗೆ ತರುವ ಕನಸನ್ನು ಹೊಂದಿದ್ದಾನೆ.  ಆದರೆ ಬೇರೆ, ಬೇರೆ ಕಾರು ತಯಾರಕರು ಮ್ಕ್ುಗಿಂತ ಸ್ವಯಂ ಚಲಾಯಿತ ಕಾರನ್ನು ತಯಾರಿಸುವುದರಲ್ಲಿ ಬಹಳ ಮುಂದಿದ್ದಾರೆ.

ಇಲಾನ್ ಮಸ್ಕ್ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಸರಕಾರದ ಬಹು ಪ್ರತಿಭಾನ್ವಿತ ಲಾಬಿ ಮಾಡುವ ಕಚೇರಿ ತೆಗೆದಿದ್ದಾನೆ ಮತ್ತು ಅತ್ಯಂತ ದಾನಿಯಾಗಿ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್ ಪಕ್ಷಕ್ಕೆ ಸಾವಿರಾರು  ದೇಣಿಗೆಯನ್ನು ನೀಡುತ್ತಿರುತ್ತಾನೆ.  ಏನೇ ಆಗಲಿ , ಇಲಾನ್ ನಿಜವಾಗಿಯೂ ಒಬ್ಬ ಅದ್ಭುತ ಕನಸುಗಾರ ಮತ್ತು ಧೀರ.  ಯಾರು ಮಸ್ಕ್ ಕಾಣುವ ಕನಸುಗಳನ್ನು ಕಾಣಲೂ ಹೆದರುತ್ತಾರೋ, ಅದೇ ಕನಸುಗಳನ್ನು ಬಹಿರಂಗವಾಗಿ ಹೇಳಿ, ಆ ಕನಸುಗಳನ್ನು ನನಸಾಗುವುದಕ್ಕೆ ಧೈರ್ಯದಿಂದ ಹಣ ಹೂಡಿ ಮುನ್ನುಗ್ಗುತ್ತಾನೆ.  ಈ ತರಹದ ಕನಸು ಕಾಣುವ ಕನಸುಗಾರರಿಗೆ ಜಗತ್ತಿನಲ್ಲಿ ಉತ್ತೇಜನ ಕೊಡುವ ದೇಶವೆಂದರೆ ಇಂದಿಗೂ ಅಮೆರಿಕ ದೇಶವೇ ಸರಿ.

Leave a Reply

Your email address will not be published. Required fields are marked *

eight + 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top