ರಾಜಕೀಯದಲ್ಲಿ ಅವರ್ ಬಿಟ್, ಇವರ್ ಬಿಟ್, ಅವರ್ಯಾರು?

Posted In : ಅಂಕಣಗಳು, ಸಾಗರೋತ್ತರ

ರಾಜ್ಯದಲ್ಲಿ ಚುನಾವಣೆಯ ಭರಾಟೆ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಎಲ್ಲೆಲ್ಲೂ ಚುನಾವಣಾ ತಂತ್ರಗಳು, ಕುತಂತ್ರಗಳು, ಭಾಷಣಗಳು, ಕೂಗಾಟಗಳು, ನೌಟಂಕಿಗಳು, ಆರೋಪಗಳು, ಪ್ರತ್ಯಾರೋಪಗಳು.  ಪ್ರಜೆಗಳಿಗೆ ಯಾರು ಸತ್ಯ ನುಡಿಯುತ್ತಿದ್ದಾರೆ, ಯಾರು ಅಸತ್ಯ ಹೇಳುತ್ತಿದ್ದಾರೆ ಎಂದು ತಿಳಿಯುವುದೇ ಕಷ್ಟವಾಗಿದೆ.  ಯಾವ ಆರೋಪ, ಪ್ರತ್ಯಾರೋಪಕ್ಕೂ ಯಾವುದೇ   ಇದ್ದರೂ ಜನಗಳಿಗೆ ತೋರಿಸುವವರ್ಯಾರು? ತೋರಿಸಿದರೂ, ಅದು ಎಷ್ಟು ಅಸಲಿ, ಎಷ್ಟು ನಕಲಿ?  ಅವುಗಳನ್ನು ನಂಬುವುದಾದರೂ ಹೇಗೆ?  ಇದೇ ನಮ್ಮ ದೇಶದ ಚುನವಾಣಾ ಪರಿ.  ಯಾರಿಗೆ, ಯಾರೂ ಲೆಕ್ಕ ಕೊಡಬೇಕಿಲ್ಲ.  ದುಃಖಕರ ಸಂಗತಿ ಅಂದರೆ ಮುಕ್ಕಾಲುಭಾಗ ಮತದಾರರೂ ಅಷ್ಟೆ.  ಯಾವುದೋ ಜಾತಿ, ಯಾವುದೋ ಧರ್ಮದ ಲೆಕ್ಕಾಚಾರದಲ್ಲಿ, ಹೆಂಡಕ್ಕೋ, ಹಣಕ್ಕೋ, ಪಂಚೆಗೋ, ಸೀರೆಗೋ ಅಥವಾ ಬಾಡೂಟಕ್ಕೋ ತಮ್ಮ ಮತ ಮಾರಿಕೊಂಡು ನಾವೆಲ್ಲರೂ ಕಾಣುವಂತಹ ಅಯೋಗ್ಯರನ್ನು ಚುನಾಯಿಸಿ ನಮ್ಮಮೇಲೆ ಅಧಿಕಾರ ಚಲಾಯಿಸುವುದಕ್ಕೆ ಕಳಿಸುತ್ತಾರೆ.   ಮೇಲೆ ಇನ್ನೈದು ವರ್ಷ ಚುನಾಯಿಸಿ ಕಳುಹಿಸಿದ ರಾಜಕಾರಣಿಗಳನ್ನು ದೂಷಿಸುತ್ತಾ ತಮ್ಮ ಹಣೆ ಬರೆಹವನ್ನು ಗೀರುತ್ತಾ ಅನುಭವಿಸುತ್ತಾರೆ.

ಪ್ರಜೆಗಳಿಗೆ ದೊರಕುವ ಒಂದೇ ಅವಕಾಶವೆಂದರೆ ಐದು ವರ್ಷಗಳಿಗೊಮ್ಮೆ ನೀಡುವ ಮತದಾನದ ಅವಕಾಶ.  ಅದನ್ನು ದುರುಪಯೋಗಿಸಿಬಿಟ್ಟರೆ  ಮತ್ತಿನ್ನು ಐದು ವರ್ಷ ಕಾಯಬೇಕು.  ಈ ಸಂಗತಿ ಎಷ್ಟೇ ಚೆನ್ನಾಗಿ ಗೊತ್ತಿದ್ದರೂ, ತಮ್ಮ ಮತಗಳನ್ನು ಬೇಕಾಬಿಟ್ಟಿ ಚಲಾಯಿಸಿ ತಮ್ಮ ತಲೆಯ ಮೇಲೆ ತಾವೇ ಕಲ್ಲು ಚಪ್ಪಡಿ ಎಳೆದುಕೊಂಡು ಮರುಗುತ್ತಿರುತ್ತಾರೆ.  ದುದೃಷ್ಟವೆಂದರೆ ಮತದಾರರು ಜಾತಿ ಅಥವಾ ಧರ್ಮದ  ಮತ ಹಾಕುತ್ತಾರೆ.  ಅದಕ್ಕೇ ಹೀಗಿದೆ ಈ ದೇಶ.  ಅದೇನೇ ಇರಲಿ, ಪ್ರಸ್ತುತಎದುರಿಸಬೇಕಾದ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಕಾಣ ಸಿಗುವ ಮೂವರು ನಾಯಕರೆಂದರೆ ಅವೇ ಮೂವರು ಸಿದ್ದರಾಮಯ್ಯ, ಯಡಿಯೂರಪ್ಪ, ಮತ್ತು ಕುಮಾರಸ್ವಾಮಿ. ಈ ರಾಜಕಾರಣಿಗಳಿಗೆ ಜನರ ಸೇವೆಗಿಂತ ಅಧಿಕಾರದ ಲಾಲಸೆಯೇ ಅಧಿಕ. ಅಧಿಕಾರವಿಲ್ಲದೆ ಜನಸೇವೆ ಮಾಡಲಾಗುವುದಿಲ್ಲ ಎನ್ನುವ  ದೃಢವಾದ ನಂಬಿಕೆ.

ಇವರುಗಳಿಗೆ ಮುಖ್ಯವಾಗಿ ಬೇಕಾಗಿರುವುದು ಅಧಿಕಾರ, ಅಧಿಕಾರದಿಂದ ಹಣ, ಹಣದಿಂದ ಮತ್ತೆ ಚುನಾವಣೆ, ಚುನಾವಣೆಯಿಂದ ಮತ್ತೆ ಅಧಿಕಾರ.  ಸಾಯುವ ತನಕ  ಚಕ್ರದ ಸುಳಿಯಲ್ಲಿ ಸಿಕ್ಕಿಕೊಂಡಿರುತ್ತಾರೆ.  ಎಲ್ಲರೂ ಮತದಾರರಿಗೆ ಹಳೇ ಗಾಳಗಳನ್ನೇ ಹಾಕಿ, ಮತಬೇಟೆ ಮಾಡುತ್ತಿದ್ದಾರೆ.  ನಮ್ಮ ಜನರೂ ಸಹ ಈ ಹಳೇ ಗಾಳಗಳಿಗೆ ಸಿಕ್ಕಿಕೊಂಡು ನರಳುತ್ತಿರುತ್ತಾರೆ.  ಯಡಿಯೂರಪ್ಪನವರು ಇತ್ತೀಚೆಗೆ ತಾನು ರೈತ ನಾಯಕ ಎಂದು ಬೀಗುತ್ತಿದ್ದಾರೆ.  ದಾವಣಗೆರೆಯಲ್ಲಿ ರೈತರ ಸಂಕೇತವಾದ ಹಸಿರು ಶಾಲು ಹೊದ್ದು, ತಮ್ಮ ಜನ್ಮಾಚರಣೆಯನ್ನು ಪ್ರಧಾನಿ ಮೋದಿಯವರ ಉಪಸ್ಥಿತಿಯಲ್ಲಿ ನೆರವೇರಿಸಿಕೊಂಡರು.  ಅದಲ್ಲದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದೆ ದೊಡ್ಡ ಸಾಧನೆ ಎಂಬಂತೆ ಬೆನ್ನು ತಟ್ಟಿಕೊಳ್ಳುತ್ತಿರುತ್ತಾರೆ.   ಕೃಷಿ ಬಜೆಟ್ ಆದರೇನು, ಅಲ್ಲದೆ ಹೋದರೇನು? ಯಾವುದಕ್ಕಾದರೂ ಹಣ ಸರಕಾರದ ಖಜಾನೆಯಿಂದಲೇ ಬರಬೇಕು.  ಇದರಿಂದ ಯಾವ ರೀತಿ ರೈತರ ಉದ್ಧಾರವಾಯಿತು ಎಂದು ಯಾರಿಗೂ ತಿಳಿಯದ ರಹಸ್ಯವಾಗಿ ಉಳಿದುಬಿಟ್ಟಿದೆ.

ಯಡಿಯೂರಪ್ಪನವರು ತಮ್ಮ ಸರ್ವಾಧಿಕಾರಿ ಧೋರಣೆ ಕಳಚಿಕೊಂಡಂತೆ ಕಾಣುತ್ತಿಲ್ಲ.  ಇದರಿಂದಾಗಿ ಅದೇ ಹಳೇ ಭಾಷಣಗಳು, ಅದೇ ಖೊಟ್ಟಿ ಆಶ್ವಾಸನೆಗಳು.  ಹೀಗಾಗಿ, ಪಕ್ಷದೊಳಗೇ ಬೇಕಾದಷ್ಟು ಅಸಮಾಧಾನವಿದೆ.  ಅದಕ್ಕೆ ಈಶ್ವರಪ್ಪರೇ ಸಾಕ್ಷಿ.  ಇಂದು ರಾಜ್ಯದ ಜನಗಳಿಗೆ ಯಾವ, ಯಾವ ರೀತಿ ರಾಜ್ಯದ ಆರ್ಥಿಕ ಸ್ಥಿತಿಯನ್ನು  ಸಿದ್ದರಾಮಯ್ಯ ಸರಕಾರ ಲಕ್ಷಾನು ಕೋಟಿ ಸಾಲ ಹೊರಿಸಿ ನಿರ್ಗಮಿಸುತ್ತಿರುವಾಗ, ತಾನು ಅಧಿಕಾರಕ್ಕೆ ಬಂದರೆ ಯಾವ ರೀತಿ ಆ ಸಾಲದ ಭಾರವನ್ನು ಕಡಿತಗೊಳಿಸುವೆ ಮತ್ತೆ ಅದರ ಜತೆ, ಜತೆಗೆ ಯಾವ ರೀತಿ ರಾಜ್ಯದ ಯುವ ಜನತೆಗೆ ಉದ್ಯೋಗ ಸೃಷ್ಠಿ ಮಾಡುವೆ ಎಂದು ಯಡಿಯೂರಪ್ಪನವರು ಹೇಳುವುದೂ ಇಲ್ಲ , ಹಾಗೆಯೇ ಮತದಾರರು ಕೇಳುತ್ತಲೂ ಇಲ್ಲ.  ಈ ಸಂಗತಿ ರಾಜ್ಯದ ದುರ್ದೈವವೇ ಸರಿ.    ನಮ್ಮ ದೇಶದಲ್ಲಿ ರೈತಾಪಿ ಜನಗಳೇ ಅಧಿಕ. ಹಾಗಾಗಿ ರೈತರು  ರಾಜಕೀಯ ಪಕ್ಷಗಳಿಗೆ ದೊಡ್ಡ ಮತದ ಖಜಾನೆ.  ಅವರ ಕಣ್ಣಿಗೆ ಮಂಕು ಬೂದಿ ಎರಚಲು ನಾ ಮುಂದು, ತಾ ಮುಂದು ಎಂದು ಕೆಲಸಕ್ಕೆ ಬಾರದ, ಎಂದೆಂದಿಗೂ ಈಡೇರಿಸದ ಖೊಟ್ಟಿ ಆಶ್ವಾಸನೆ ನೀಡಿ, ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ.

ನಿಜವಾಗಿಯೂ ಯಾವುದೇ ರಾಜಕೀಯ ಪಕ್ಷಗಳಿಗೆ ರೈತರ ಬವಣೆ ತೀರಿಸುವ ಯಾವುದೇ ಉಪಾಯ ಗೊತ್ತಿಲ್ಲ.  ಬರೀ ಸಾಲ ಮನ್ನಾ ಮಾಡುವುದೇ ಒಂದು ಕಾಯಕವನ್ನಾಗಿಸಿಕೊಂಡು ಬಿಟ್ಟಿದ್ದಾರೆ.  ಹಿಂದೆ ಎಷ್ಟು ಸಲ ಸಾಲ ಮನ್ನಾ ಮಾಡಿಲ್ಲ?  ಪುನಃ  ಸಾಲ ಮಾಡುತ್ತಾನೆ, ಮತ್ತೆ ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಂಡು ಮತ್ತೆ ಸಾಲ ಮನ್ನಾಮಾಡಬೇಕಾಗುತ್ತದೆ.  ಎಷ್ಟೋ ಸಲ ರೈತರು ನಮ್ಮ ಸಾಲ ಮನ್ನಾ ಮಾಡಬೇಡಿ. ಆದರೆ ನಮಗೆ ಕೃಷಿಗೆ ಬೇಕಾದ ಸವಲತ್ತುಗಳನ್ನು ಕೊಡಿ, ನಾವು ಕೃಷಿ ಮಾಡಿ ನಮ್ಮ ಸಾಲಗಳನ್ನು ನಾವೇ ತೀರಿಸುತ್ತೇವೆ ಎಂದು ಹೇಳಿದ್ದಾರೆ.   ಆದರೆ ಈವರೆಗೂ ಯಾವ ಸರಕಾರಗಳು ಸರಿಯಾಗಿ ಕೃಷಿಗೆ ಬೇಕಾದ ಹಣ ನೀಡುತ್ತಿಲ್ಲ.  ಕಳೆದ ಮೂವತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕೃಷಿಗೆ ನೀಡುವ  ಹೆಚ್ಚಿಸದೆ, ಇನ್ನೂ ಕಡಿತಗೊಳಿಸುತ್ತಾ ಬಂದಿವೆ.   ಅದಲ್ಲದೆ, ಕೃಷಿಗೆ ಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನದ ಅವಿಷ್ಕಾರಗಳನ್ನು ಇನ್ನೂ ರೈತರಿಗೆ ತಲುಪಿಸಿಯೇ ಇಲ್ಲ.  ಈ ಒಂದು ವಿಚಾರದಲ್ಲಿ ಮೋದಿ ಸರಕಾರವನ್ನು ರೈತರೇ ತರಾಟೆಗೆ ತೆಗೆದುಕೊಳ್ಳಬೇಕಾಗಿದೆ.

  ಸಾಲ ಮನ್ನಾವನ್ನೇ ಅಲ್ಲವೇ ಕಾಂಗ್ರೆಸ್ ಪಾರ್ಟಿ ಇಷ್ಟು ಕಾಲ ಮಾಡಿಕೊಂಡು ಬಂದಿರುವುದು?  ಶಾಶ್ವತವಾದ ಯಾವುದೇ ಉಪಯುಕ್ತ ಉಪಾಯಗಳನ್ನು ಮಂಡಿಸುವುದರಲ್ಲಿ ಯಾವ ಪಕ್ಷಗಳಿಗೂ ಆಸಕ್ತಿಯಿಲ್ಲ.  ಯಾಕೆಂದರೆ, ಶಾಶ್ವತ ಅಂದರೆ ಐದು ವರ್ಷ ಮೀರಿದ ಯೋಜನೆಗಳು, ಅವುಗಳನ್ನು ಮಂಡಿಸಿದರೆ  ಬರುವ ಸರಕಾರಕ್ಕೆ ಲಾಭವಾಗುತ್ತದೆಯೇ ಹೊರತು, ತಮ್ಮ ಸರಕಾರಕ್ಕಲ್ಲವಲ್ಲ?  ಸಾಲ ಮನ್ನಾ ಮಾಡುವುದು, ಅಲ್ಲದೆ ಕೆಲಸಕ್ಕೆ ಬಾರದ ಭಾಗ್ಯಗಳ ಯೋಜನೆಗಳನ್ನು  ಜನಗಳ  ಮೇಲೆ ಸಾಲ ಹೊರಿಸಿ ಮಾಡುವುದು ಬಿಟ್ಟರೆ ಯಾವ ರೀತಿ ಜನಗಳಿಗೆ ಸ್ವಾವಲಂಬನೆ ನೀಡುವಂತಹ ಯಾವುದೇ ನೀತಿ, ನಿಯಮಗಳ ಬಗ್ಗೆ ಮಾತನಾಡುವುದೇ ಇಲ್ಲ.  ಎಲ್ಲಾ ಪಾರ್ಟಿಗಳಲ್ಲೂ ನಾಯಕರುಗಳನ್ನು ಬಿಟ್ಟರೆ, ಬೇರೆ ಯಾರು ಏನು ಕಡಿದು ಕಟ್ಟೆ ಹಾಕಬಲ್ಲರು ಎಂದು ಯಾರಿಗೂ ತಿಳಿದಿಲ್ಲ.

ಬರೀ ಕೈ ಎತ್ತುವುದಕ್ಕೆ, ಸಿಕ್ಕ ಯಾವುದೋ  ಪಡೆದುಕೊಂಡು, ಎಷ್ಟು ಹಣ ಕೊಳ್ಳೆ ಹೊಡೆಯಬಹುದೋ ಅಷ್ಟು ಕೊಳ್ಳೆ ಹೊಡೆದುಕೊಳ್ಳುವುದಕ್ಕೆ ಕಾಯುತ್ತಿರುತ್ತಾರೆ.  ಕುಮಾರಸ್ವಾಮಿಯೇ ಹೇಳಿದಂತೆ, ಆತನ ಪಕ್ಷದದವರೆಲ್ಲ ಸಾಲ, ಸೋಲ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದು ಬಂದಿದ್ದರೂ, ಅಧಿಕಾರವಿಲ್ಲದೆ ಅವರುಗಳಿಗೆ ಹಣ ಮಾಡಿಕೊಳ್ಳುವ ಅವಕಾಶಗಳೇ ಸಿಕ್ಕದೆ, ರಾಜಕೀಯಕ್ಕೆ ಬಂದು ಏನು ಪ್ರಯೋಜನ ಅಂತ ಗೋಳಿಡುತ್ತಾರಂತೆ.  ರಾಷ್ಟ್ರೀಯ ಪಕ್ಷಗಳ ನಾಯಕರುಗಳು ಮಾಡುವುದೆಂದರೆ, ಚುನಾವಣೆಯಲ್ಲಿ ಗೆದ್ದು ರಾಜ್ಯವನ್ನು ಪ್ರತಿನಿಧಿಸುವ ಬದಲು, ತಮ್ಮ ಪಾರ್ಟಿ ಹೈ ಕಮಾಂಡ್ ಅನ್ನು ಜನಗಳ ಹತ್ತಿರ ಪ್ರತಿನಿಧಿಸಲು ಶುರುವಿಟ್ಟುಕೊಳ್ಳುತ್ತಾರೆ.   ವರ್ಷಗಳಿಂದ ಯಾವುದೇ ರಾಜ್ಯದ ಸಮಸ್ಯೆಗಳನ್ನು ಶಾಶ್ವತವಾಗಿ ನಿಯಂತ್ರಿಸಲು ಯಾರೂ ಪ್ರಯತ್ನಿಸಿಯೇ ಇಲ್ಲ.  ಅವುಗಳಿಗೆ ಅವು ಬೇಕಾಗೂ ಇಲ್ಲ.

  ಸಮಸ್ಯೆಗಳು ತೀರಿಬಿಟ್ಟರೆ, ಇವರುಗಳು ಯಾವ ಪುರುಷಾರ್ಥಕ್ಕೆ ರಾಜಕೀಯ ಮಾಡಬೇಕು? ರಾಜ್ಯದ ಜನ ಒಂದು ಮಾತನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು.  ಎಲ್ಲಿಯವರೆಗೆ ವಿದ್ಯಾವಂತರನ್ನ, ಬುದ್ಧಿವಂತ ಅಭ್ಯರ್ಥಿಗಳನ್ನು ಚುನಾಯಿಸುವುದಿಲ್ಲವೋ, ಅಲ್ಲಿಯವರೆಗೆ ರಾಜ್ಯ ಉದ್ಧಾರವಾಗುವುದಿಲ್ಲ.  ಸದ್ಯಕ್ಕಂತೂ ಈ ಮೂವರು ನಾಯಕರುಗಳಿಂದ ರಾಜ್ಯಕ್ಕೆ ಯಾವುದೇ ಲಾಭವಾಗುವಂತೆ ಕಾಣುತ್ತಿಲ್ಲ.  ಉದ್ಯೋಗಕ್ಕೆ ಕಾದು ಕುಳಿತಿರುವ ಲಕ್ಷಾಂತರ ಯುವಕ-ಯುವತಿಯರು ಈ ವಿಚಾರದ  ಕೂಲಂಕಶವಾಗಿ ಪರಾಮರ್ಶಿಸಿ ತಮ್ಮ ಮತ ನೀಡಬೇಕು.  ಎಲ್ಲಾ ಪಕ್ಷದ ನಾಯಕರುಗಳನ್ನು ಮುಕ್ತವಾಗಿ ಚರ್ಚೆಗೆ ಬರುವಂತೆ ಒತ್ತಾಯಿಸಬೇಕು.  ಯಡಿಯೂರಪ್ಪನವರಿಗೆ ಎಪ್ಪತ್ತೈದಾಗಿದೆ. ಎಪ್ಪತ್ತೈದಾದವರಿಗೆ  ಮೋದಿ ಆಂಡ್ ಗ್ಯಾಂಗ್ ಮಣೆ ಹಾಕುವುದಿಲ್ಲ.  ಯಡಿಯೂರಪ್ಪನವರನ್ನು ಸುಮಾರು ಒಂದು ವರ್ಷ ಮುಖ್ಯಮಂತ್ರಿಯಾಗಲಿಕ್ಕೆ ಬಿಟ್ಟಾರು, ಆಮೇಲೆ ಅವರನ್ನು ಯಾವುದೋ ರಾಜ್ಯದ ಗವನರ್ ಆಗಿ ಮಾಡಿ, ಬೇರ್ಯಾವುದೋ ಯುವ ಪೀಳಿಗೆಯ ನಾಯಕರನ್ನು ತಂದು ಕೂರಿಸಬಹುದು.

 ಮೋದಿಗೋಸ್ಕರ ಜನ ಭಾಜಪಕ್ಕೆ ಮತ ನೀಡಬೇಕೆ ವಿನಃ, ಭಾಜಪದ ಪರವಾಗಿ ಯಾವ ಅಲೆಯೂ  ಬರುತ್ತಿಲ್ಲ.  ಹಾಗೆ ನೋಡಿದರೆ, ಯಾವ ಪಕ್ಷದ ಪರವಾಗಿಯೂ ಅಲೆ ಇದ್ದಂತೆ ಕಾಣುತ್ತಿಲ್ಲ.  ಆದರೂ ಭಾಜಪ ಬಿಟ್ಟರೆ ರಾಜ್ಯದ ಶ್ರೇಯೋಭಿವೃದ್ಧಿಗೆ ಬೇರೆ ಯಾವ ಪಕ್ಷವೂ ಕರ್ನಾಟಕದ ಜನತೆಯ ಆಯ್ಕೆಗೆ ಸೂಕ್ತವಾಗಿ ಕಾಣುತ್ತಿಲ್ಲ.  ಚುನಾವಣೆಗೆ ಇನ್ನೂ ತಿಂಗಳು ಇರುವುದರಿಂದ ಯಾವ, ಯಾವ ರೀತಿ ಚುನಾವಣಾ ವಾತಾವರಣ ಬದಲಾಗುತ್ತದೋ ಕಾದು ನೋಡಬೇಕು. ಹದಿನೈದು ದಿನಗಳ ಮೊದಲು  ಜನರ ಒಲವು ಯಾರ ಕಡೆ ಇದೆ ಎಂಬುದು ಸ್ಪಷ್ಟವಾಗುತ್ತ ಹೋಗುತ್ತದೆ. ಕುಮಾರಸ್ವಾಮಿ ತಾನು ಅಧಿಕಾರಕ್ಕೆ ಬಂದ  ಘಂಟೆಯೊಳಗೆ ರೈತರ ಎಲ್ಲಾ ಸಾಲವನ್ನು ಮಾಫಿ ಮಾಡುತ್ತೇನೆಂದು ಆಶ್ವಾಸನೆ ನೀಡುತ್ತಿದ್ದಾರೆ.  ಈ ಪಕ್ಷ ತಾನು ಎಷ್ಟೇ ಜಾತ್ಯತೀತ ಎಂದು ಎದೆ ಬಡಕೊಂಡರೂ, ಒಕ್ಕಲಿಗ ಸಮುದಾಯಕ್ಕೆ ಸೀಮಿತವಾದ ಪಕ್ಷ ಎಂದೇ ಖ್ಯಾತಿ ಪಡೆದಿರುವ ಪಕ್ಷ.  ಇವರ ಪಕ್ಷದಲ್ಲಿ ಇರುವ ಒಂದೇ ಒಂದು ಅಭಿಲಾಷೆ ಎಂದರೆ ಮತ್ತೊಮ್ಮೆ ಹೇಗಾದರೂ ಮಾಡಿ ಅಧಿಕಾರ ಗದ್ದುಗೆ ಹಿಡಿಯುವುದು.

ಈ ಪಕ್ಷಕ್ಕೂ ಯಾವುದೇ ಆರ್ಥಿಕ ಮತ್ತು ಸಾಮಾಜಿಕ ಯೋಜನೆ, ಉದ್ಯೋಗ ಸೃಷ್ಟಿ ನೀತಿಗಳು, ಆರೋಗ್ಯ ಮತ್ತು  ಕ್ಷೇತ್ರದಲ್ಲಿ ತಾವು ತರುವ ಯಾವುದೇ ಯೋಜನೆಗಳ ಬಗ್ಗೆ ಚಕಾರವೆತ್ತುವುದಿಲ್ಲ.  ಎಲ್ಲಾ ಚುನಾವಣೆಗೂ ಎಲ್ಲಾ ಪಕ್ಷಗಳು ಸಿದ್ಧಪಡಿಸುವಂತೆ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಚುನಾವಣೆಯ ಮೂರನೇ ದಿನವೇ ಕಸದ ಬುಟ್ಟಿಗೆ ಎಸೆದು ಕುಳಿತುಕೊಳ್ಳುವ ಸಾಧ್ಯತೆಯೇ ಹೆಚ್ಚು.    ಕರ್ನಾಟಕ ಜನತೆ ಪುಣ್ಯವೆಂಬಂತೆ ಕಮ್ಯುನಿಸ್ಟ್ ಪಕ್ಷಕ್ಕೆ ಎಂದಿಗೂ ಮಣೆ ಹಾಕದ ಕಾರಣ ವಾಮಪಂಥೀಯ ಪಕ್ಷಗಳಿಗೆ ನೆಲೆಯಿಲ್ಲ.  ಇದು ಬೇಡಿಯೋ ಅಥವಾ ಬೇಡದೆಯೋ ಪಡೆದ ವರಪ್ರಸಾದ ಎಂದು ಖುಷಿ ಪಟ್ಟುಕೊಳ್ಳಬೇಕು.  ಈ  ನಾಯಕರುಗಳು ಬದಲಾಗುವ ತನಕ, ಇವರುಗಳ ಕಾರ್ಯ ವೈಖರಿ ಪಾಳೆಗಾರನ ತರಹವೇ ಇರುತ್ತದೆ.  ಇವರುಗಳಿಗೆ ನಿಜವಾದ ಗಣತಂತ್ರದ ಅರ್ಥವೇ ಗೊತ್ತಿಲ್ಲ.

ಗಣತಂತ್ರವೆಂದರೆ ಐದು ವರ್ಷಕ್ಕೊಮ್ಮೆ ಚುನಾವಣೆ ಆಟ ಆಡಿ ಅಧಿಕಾರಕ್ಕೆ ಬರುವುದೇ ಕಾಯಕವೆಂದು ನಂಬಿರುವವರು.  ನಿಜವಾಗಿ ಕರ್ನಾಟಕ ರಾಜ್ಯದ ಬವಣೆಗಳನ್ನು ತೀರಿಸಬೇಕಾದರೆ, ನರೇಂದ್ರ ಮೋದಿಯವರು ಗುಜರಾತಿನಲ್ಲಿ ಯಾವ ರೀತಿ ಆಡಳಿತ ನಡೆಸಿದರೋ ಅದೇ ರೀತಿ, ಕಾಲ ಕಾಲಕ್ಕೆ ಪೂರ್ಣಗೊಳಿಸುವ ಯೋಜನೆಗಳನ್ನು ಹಾಕಿಕೊಂಡು, ಹಗಲೂ ರಾತ್ರಿ ಏಕ ಚಿತ್ತದಿಂದ ದುಡಿದರೆ ಸಾಧ್ಯವಾಗುವುದರಲ್ಲಿ  ಇಲ್ಲ.   ಇಂದು ಕರ್ನಾಟಕದಲ್ಲಿ ಹೊಸ ಪೀಳಿಗೆ ಮತದಾರರು ಎದ್ದು ನಿಂತಿದ್ದಾರೆ.  ಅದಕ್ಕೋಸ್ಕರ ಅವರ ಆಶಯಗಳಿಗೆ ಸ್ಪಂದಿಸುವ ರಾಜಕೀಯ ನಾಯಕರುಗಳು ಬೇಕಾಗಿದ್ದಾರೆ.  ಪಿಂಜರಪೋಲಿಗೆ ಸಿದ್ದವಾಗಿರುವ ನಾಯಕರು ಇಂದಿನ ಯುವ ಪೀಳಿಗೆಯನ್ನು ಅರ್ಥ ಮಾಡಿಕೊಳ್ಳುವುದೇ ದುಸ್ತರವಾಗುತ್ತದೆ.   ಯಾರು ಹಿತವರು ಈ ಮೂವರೊಳಗೆ? ರಾಜ್ಯದ ಜನತೆ ಮತಪೆಟ್ಟಿಗೆಯಲ್ಲಿ ನಿರ್ಧರಿಸಬೇಕು.

Leave a Reply

Your email address will not be published. Required fields are marked *

ten + fifteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top